ಮೆಕ್ಲೆರೆನ್ ಒಕೆ ಮಗಾ ಎಂದ ಅಜ್ಜಿ, ಮರುದಿನ ₹12 ಕೋಟಿ ಕೊಟ್ಟು ಕಾರು ಮನೆಗೆ ತಂದ ಮೊಮ್ಮಗ!

By Chethan Kumar  |  First Published Nov 21, 2024, 5:41 PM IST

ಪೊರ್ಶೆ ಒಳ್ಳೆ ಗಾಡಿ ಮಗಾ, ಆದರೆ ಡೋರ್ ಮೇಲಕ್ಕೆ ತೆರೆದುಕೊಳ್ಳುವುದಿಲ್ಲ. ನೀನು ತಗೊಂಡ್ರೆ ಮೆಕ್ಲರೆನ್ ತಗೋ ಎಂದು ಅಜ್ಜಿ ಹೇಳಿದ್ದಾರೆ. ಇಷ್ಟೇ ಅಲ್ಲ ತಮಾಷೆನೋ, ಸೀರಿಯಸ್ ಆಗಿ ಹೇಳಿದ್ರೋ ಗೊತ್ತಿಲ್ಲ. ಆದರೆ ಮೊಮ್ಮಗ ಮಾತ್ರ ಫುಲ್ ಸೀರಿಯಸ್ ಆಗಿಬಿಟ್ಟ. ಮರು ದಿನವೇ ಬರೋಬ್ಬರಿ 12 ಕೋಟಿ ರೂಪಾಯಿ ಕೊಟ್ಟ ಕಾರು ಮನೆಗೆ ತಂದಿದ್ದಾರೆ. ಇದರ ಜೊತೆಗೆ ವಿಶೇಷ ದಾಖಲೆ ಬರೆದಿದ್ದಾನೆ.
 


ಲ್ಯಾಂಬೋರ್ಗಿನಿ ಒಕೆ ಕಣಪ್ಪ, ಚೆನ್ನಾಗಿದೆ. ಆದರೆ ವಾವ್ ತರ ಇಲ್ಲ. ಏನೋ ಪರ್ವಾಗಿಲ್ಲ. ಪೊರ್ಶೆ ಒಳ್ಳೆ ಗಾಡಿ. ಆದರೆ ಅದರ ಡೋರ್ ಸಾಮಾನ್ಯ ಕಾರಿನಂತೆ ತೆರೆದುಕೊಳ್ಳುತ್ತದೆ. ಹೀಗಾಗಿ ನೀನು ಮೆಕ್ಲರೆನ್ ಕಾರು ತಗೋ. ಅದರ ಡೋರ್ ಮೇಲಕ್ಕೆ ತೆರೆದುಕೊಳ್ಳುತ್ತೆ ಎಂದು ಅಜ್ಜಿ ತನ್ನ ಮೊಮ್ಮಗನಿಗೆ ಹೇಳಿದ್ದಾರೆ. ಇಂತ ಮಾತುಗಳನ್ನು ಹಲವರು ಪ್ರತಿನಿತ್ಯ ಕೇಳುತ್ತಾರೆ. ಸಾಧ್ಯವಾಗದ ಮಾತುಗಳನ್ನು ತಮಾಷೆಯಾಗಿ ಬಳಸುತ್ತಾರೆ. ಆದರೆ ಇಲ್ಲಿ ಅಜ್ಜಿ ಒಂದು ಸಲಹೆ ಕೊಟ್ಟಿದ್ದಾರೆ. ಅಷ್ಟೇ ನೋಡಿ, ಮೊಮ್ಮಗ ಸೀರಿಯಸ್ ಆಗಿ ತೆಗೆದುಕೊಂಡಿದ್ದಾನೆ. ಅಜ್ಜಿ ಸಲಹೆ ನೀಡಿದ ಮರುದಿನವೇ ಬರೋಬ್ಬರಿ 12 ಕೋಟಿ ರೂಪಾಯಿ ನೀಡಿ ಹೊಚ್ಚ ಹೊಸ, ಸ್ಪೆಷಲ್ ಎಡಿಶನ್ ಮೆಕ್ಲೆರೆನ್ ಖರೀದಿಸಿದ್ದಾನೆ. ಈ ಮೊಮ್ಮಗ ಮೆಕ್ಲೆರೆನ್ 765LT ಕಾರು ಖರೀದಿಸಿದ ಅತೀ ಕಿರಿಯ ಭಾರತೀಯ ಅನ್ನೋ ದಾಖಲೆ ಬರೆದಿದ್ದಾನೆ.

ಹೌದು, ಈ ಮೊಮ್ಮಗನ ಹೆಸರು ಆನಂದ್. ಉದ್ಯಮಿ ಕುಟುಂಬದ ಕುಡಿ. ಆನಂದ್ ಕೂಡ ಉದ್ಯಮ ಕ್ಷೇತ್ರದಲ್ಲೇ ತೊಡಗಿಸಿಕೊಂಡಿದ್ದಾನೆ. ಈ ಉದ್ಯಮ ಸಾಮ್ರಾಜ್ಯ ದುಬೈನಲ್ಲಿ ಹೆಮ್ಮರವಾಗಿದೆ. 5 ತಿಂಗಳ ಹಿಂದೆ ಆನಂದ್ ಲ್ಯಾಂಬೋರ್ಗಿನಿ ಉರುಸ್ ಖರೀದಿಸಿದ್ದಾನೆ. ಈ ಕಾರಿನಲ್ಲಿ ಕುಳಿತು ಮೊಮ್ಮಗ, ಇಬ್ಬರು ಅಜ್ಜಿಯರು ಪ್ರಯಾಣಿಸಿದ್ದಾರೆ. ಈ ವೇಳೆ ಮೊಮ್ಮಗ ಮುಂದಿನ ಕಾರು ಪೊರ್ಶೆ ಎಂದಿದ್ದಾನೆ. ಇದಕ್ಕೆ ಇಬ್ಬರು ಅಜ್ಜಿಯರು ತಮ್ಮ ಅಭಿಪ್ರಾಯ ಹೇಳಿದ್ದಾರೆ.

Tap to resize

Latest Videos

undefined

ಇಲಿಯಿಂದ ಕಾರ್ತಿಕ್ ಆರ್ಯನ್‌ಗೆ ಲಕ್ಷ ರೂ ನಷ್ಟ, ಗ್ಯಾರೇಜ್ ಸೇರಿದ 4.7 ಕೋಟಿ ರೂ ಮೆಕ್ಲರೆನ್ ಕಾರು!

ಒಬ್ಬರು ಪೊರ್ಶೆ ಚೆನ್ನಾಗಿದೆ. ಆದರ ಎಲ್ಲರ ಬಳಿಯೂ ಪೊರ್ಶೆ ಕಾರಿದೆ. ಇದೀಗ ಪೊರ್ಶೆ ಕಾಮನ್ ಆಗಿದೆ ಎಂದಿದ್ದಾರೆ. ಮತ್ತೊಬ್ಬರು ಪೊರ್ಶೆ ಒಳ್ಳೆ ಕಾರು, ಆದರೆ ಪೊರ್ಶೆ ಕಾರಿನ ಡೋರ್ ಮೇಲಕ್ಕೆ ತೆರೆದುಕೊಳ್ಳುವುದಿಲ್ಲ. ಹೀಗಾಗಿ ನೀನು ತಗೋಳುವುದಾದರೆ ಮೆಕ್ಲರೆನ್ ಕಾರು ತಗೋ ಎಂದು ಅಜ್ಜಿ ಹೇಳಿದ್ದಾರೆ. ಮೊಮ್ಮಗ ಮತ್ತೊಮ್ಮೆ ಅಜ್ಜಿ ಬಳಿ ನೀವು ಹೇಳಿದ್ದು ಯಾವ ಕಾರು ಎಂದು ಖಚಿತಪಡಿಸಿಕೊಂಡಿದ್ದಾನೆ. ಅಜ್ಜಿ ಯಾವುದೇ ಹಿಂಜರಿಕೆಯಿಲ್ಲದೆ ಮೆಕ್ಲರೆನ್ ಎಂದು ಉತ್ತರಿಸಿದ್ದಾರೆ.

ಅಜ್ಜಿಯ ಈ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಆನಂದ್, ಹೊಚ್ಚ ಹೊಸ ಮೆಕ್ಲರೆನ್ 765LT ಸ್ಪೆಷಲ್ ಎಡಿಶನ್ ಕಾರು ಖರೀದಿಸಿದ್ದಾರೆ. ಇದರ ಭಾರತದ ಬೆಲೆ 12 ಕೋಟಿ ರೂಪಾಯಿ. ಇದೀಗ ಆನಂದ್ ಮೆಕ್ಲರೆನ್ 765LT ಕಾರು ಖರೀದಿಸಿದ ಅತ್ಯಂತ ಕಿರಿಯ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ಇಷ್ಟೇ ಅಲ್ಲ ಮೆಕ್ಲರೆನ್ 765LT ಕಾರನ್ನು ಭಾರತದಲ್ಲಿ ಖರೀದಿಸಿದ ಮೂರನೇ ವ್ಯಕ್ತಿ ಅನ್ನೋ ದಾಖಲೆ ಬರೆದಿದ್ದಾನೆ. ಆನಂದ್ ಕೇರಳ ಮೂಲದವನು. ಹೀಗಾಗಿ ಮೆಕ್ಲರೆನ್ 765LT ಖರೀದಿಸಿದ ಮೊದಲ ಕೇರಳಿಗ ಅನ್ನೋ ದಾಖಲೆಯನ್ನೂ ಬರೆದಿದ್ದಾನೆ. ಆನಂದ್ ಈ ಕಾರನ್ನು ದುಬೈನಲ್ಲಿ ಖರೀದಿಸಿದ್ದಾನೆ. ಭಾರತಕ್ಕೆ ಕಾರು ತರಲು ಮುಂದಾಗಿದ್ದಾನೆ. 

 

 
 
 
 
 
 
 
 
 
 
 
 
 
 
 

A post shared by ᴀɴᴀɴᴅ (@_anand912)

 

ಮೆಕ್ಲೆರೆನ್ 765LT ಕಾರು ಹೊಂದಿರುವ ಮೂವರು ಮಾಲೀಕರ ಪೈಕಿ ಒಬ್ಬ ಆನಂದ್. ಇದಕ್ಕಿಂತ ಮೊದಲು ಈ ದುಬಾರಿ ಕಾರು ಖರೀದಿಸಿದ ಇನ್ನಿಬ್ಬರಲ್ಲಿ ಒರ್ವ ಬೆಂಗಳೂರಿಗ. ಬೆಂಗಳೂರಿನ ಉದ್ಯಮಿ ರಂಜಿತ್ ಸಂದರಮೂರ್ತಿ ಈ ಕಾರು ಹೊಂದಿದ್ದಾರೆ. ರಂಜಿತ್ ದುಬೈನಲ್ಲಿ ಕಾರು ಖರೀದಿಸಿ ಬಳಿಕ ಭಾರತಕ್ಕೆ ದುಬಾರಿ ಸುಂಕ ನೀಡಿ ತಂದಿದ್ದಾರೆ. ಮೂರನೇ ಮಾಲೀಕ ಹೈದರಾಬಾದ್ ಉದ್ಯಮಿ ನಾಸೀರ್ ಖಾನ್. 

4.0 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದೆ. ಪವರ್‌ಫುಲ್ ಎಂಜಿನ್ 765ಪಿಎಸ್ ಪವರ್ ಹಾಗೂ 800 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 7 ಸ್ಪೀಡ್ ಟ್ರಾನ್ಸ್‌ಮಿಶನ್ ಹೊಂದಿದೆ.

ಅದಾನಿ, ಅಂಬಾನಿ ಬಳಿಯೂ ಇಲ್ಲ; ಈ ಉದ್ಯಮಿ ಬಳಿ ಇದೆ ಭಾರತದ ಏಕೈಕ 12 ಕೋಟಿ ರೂ ಮೆಕ್ಲರೆನ್ ಕಾರು !

click me!