10 ಲಕ್ಷ ರೂಪಾಯಿ ಬೇಡಿಕೆ ಇಟ್ಟು, ಬೇಡಿಕೆ ಈಡೇರದ ಕಾರಣ 27ರ ಹರದೆಯ ಭಾರತೀಯ ನೌಕಾಪಡೆ ಅಧಿಕಾರಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಘಟನೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಮುಂಬೈ(ಫೆ.06): ಕೊರೋನಾ ಬಳಿ ಹಣಕ್ಕಾಗಿ ಕಿಡ್ನಾಪ್ ಪ್ರಕರಣಗಳು ಹೆಚ್ಚಾಗುತ್ತಿದೆ ಅನ್ನೋ ಮಾತುಗಳಿವೆ. ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ತಮಿಳುನಾಡಿನ INS ಕೊಬಂತ್ತೂರಿನಲ್ಲಿ ನೌಕಾಪಡೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ 27 ವರ್ಥದ ಸೂರಜ್ ಕುಮಾರ್‌ನ್ನು ದರೋಡೆಕೋರರು ಹತ್ಯೆ ಮಾಡಿದ್ದಾರೆ.
ಕಾರವಾರದಲ್ಲಿ ಸಮುದ್ರಕ್ಕೆ ಬಿದ್ದ ಪ್ಯಾರಾ ಮೋಟರ್, ನೌಕಾನೆಲೆಯ ಕ್ಯಾಪ್ಟನ್ ಸಾವು
undefined
ರಾಂಚಿ ಮೂಲದ ಸೂರಜ್ ಕುಮಾರ್‌ನ್ನು ಚೆನ್ನೈ ಏರಪೋರ್ಟ್‌ನಿಂದ ಕಿಡ್ನಾಪ್ ಮಾಡಲಾಗಿತ್ತು. ಮಹಾರಾಷ್ಟ್ರದ ಪಾಲ್ಗಾರ್‌ನಲ್ಲಿರುವ ವೇವಾಜಿ ಕಾಡಿಗೆ ಕರೆದೊಯ್ದು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ತಕ್ಷಣವೇ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಈಡೇರಡ ಕಾರಣ ನೌಕಾ ಪಡೆ ಅಧಿಕಾರಿ ಮೇಲೆ ಹಲ್ಲೆ ನಡೆಸಿ ಸಜೀವ ಬೆಂಕಿ ಹಚ್ಚಿ, ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪೊಲೀಸರು ಕುಟುಂಬಸ್ಥರ ದೂರಿನ ಮೇಲೆ ಕಿಡ್ನಾಪರ್ಸ್ ಟವರ್ ಲೊಕೇಶನ್ ಪತ್ತೆ ಹಚ್ಚಿ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ತೀವ್ರ ಸುಟ್ಟಗಾಯಗಳಿದ್ದ ಸೂರಜ್ ಕುಮಾರ್‌ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸೂರಜ್ ಕುಮಾರ್ ದುಬೆ ಪ್ರಾಣ ಪಕ್ಷಿ ಹಾರಿಹೋಗಿದೆ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.