ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮೈಲಾಡುತುರೈನ ಡಿಎಂಕೆ ನಾಯಕರೊಬ್ಬರು ಹಿಮಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾದುಗಳಿಗೆ ದಾನ ನೀಡುವ ಮೂಲಕ ಹುಟ್ಟು ಹಬ್ಬ ಆಚರಿಸಿದ್ದಾರೆ.
ಚೆನ್ನೈ (ನ.28): ಸನಾತನ ಧರ್ಮ ಡೆಂಗ್ಯೂ ಮಲೇರಿಯಾ ಇದ್ದಂತೆ, ಇದನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಎಂದು ಕರೆಕೊಟ್ಟು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದ ತಮಿಳನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಹಿಂದೂ ಧರ್ಮದ ಬಗ್ಗೆ ಮತ್ತೇನಾದ್ರೂ ಅವಹೇಳನ ಮಾಡಿದ್ರಾ? ಇಲ್ಲ, ಈ ಬಾರಿ ಉದಯನಿಧಿ ಸ್ಟಾಲಿನ್ ತಮ್ಮ 47ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಜನ್ಮದಿನದಂದು ಮೈಲಾಡುತುರೈನ ಡಿಎಂಕೆ ನಾಯಕರೊಬ್ಬರು ಹಿಮಾಲಯದ ಮುರುಗನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ದಾನ ಮಾಡಿದ್ದಾರೆ.
ಸನಾತನ ಧರ್ಮ ಅಳಿಸಲಾಗದು ಎಂದ ಪವನ್ ಕಲ್ಯಾಣ್: ಕಾದು ನೋಡಿ ಎಂದ ಉದಯನಿಧಿ ಸ್ಟಾಲಿನ್
ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ 47ನೇ ಹುಟ್ಟುಹಬ್ಬವನ್ನು ನಿನ್ನೆ ಡಿಎಂಕೆ ಆಚರಿಸಿತು. ಹುಟ್ಟುಹಬ್ಬದ ನಂತರ ಉದಯನಿಧಿ ಸ್ಟಾಲಿನ್ ಅವರು ಪೆರಿಯಾರ್, ಅಣ್ಣಾ ಮತ್ತು ಕರುಣಾನಿಧಿ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಿದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಚಿವರು ಹಾಗೂ ಮೈತ್ರಿ ಪಕ್ಷದ ಮುಖಂಡರು ಕೂಡ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಇತ್ತ ಮೈಲಾಡುತುರೈನ ಡಿಎಂಕೆ ನಾಯಕರೊಬ್ಬರು ಹಿಮಾಲಯದ ಮುರುಗನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ದಾನ ಮಾಡಿದ್ದಾರೆ.
ಹಿಮಾಲಯದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ. ಅಲ್ಲಿನ ಸಾಧುಗಳು ಮತ್ತು ಬಡವರಿಗೆ ಅನ್ನ ಮತ್ತು ಬಟ್ಟೆಗಳನ್ನು ದಾನ ಮಾಡುವ ಮೂಲಕ ಉದಯನಿಧಿ ಸ್ಟಾಲಿನ್ ಹುಟ್ಟು ಹಬ್ಬ ಆಚರಿಸಿದ್ದಾರೆ.