ಕೇರಳ ಬಿಜೆಪಿ ಒಬಿಸಿ ಮೋರ್ಚಾದ ನಾಯಕ ರಂಜಿತ್ ಹತ್ಯೆ ಪ್ರಕರಣ: 15 ಪಿಎಫ್ಐ, ಎಸ್‌ಡಿಪಿಐ ಸದಸ್ಯರಿಗೆ ಮರಣದಂಡನೆ

By Anusha KbFirst Published Jan 30, 2024, 5:00 PM IST
Highlights

ಕೇರಳ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದ ರಂಜಿತ್ ಶ್ರೀನಿವಾಸ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಪಿಎಫ್ಐ ಹಾಗೂ ಎಸ್‌ಪಿಐ ಕಾರ್ಯಕರ್ತರನ್ನು ದೋಷಿ ಎಂದು ಘೋಷಿಸಿರುವ ನ್ಯಾಯಾಲಯ ಅವರಿಗೆ ಮರಣದಂಡನೆ ಶಿಕ್ಷೆ ಘೋಷಣೆ ಮಾಡಿದೆ.

ಕೇರಳ: ಕೇರಳ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದ ರಂಜಿತ್ ಶ್ರೀನಿವಾಸ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಪಿಎಫ್ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರನ್ನು ದೋಷಿ ಎಂದು ಘೋಷಿಸಿರುವ ನ್ಯಾಯಾಲಯ ಅವರಿಗೆ ಮರಣದಂಡನೆ ಶಿಕ್ಷೆ ಘೋಷಣೆ ಮಾಡಿದೆ. ಡಿಸೆಂಬರ್ 19, 2021 ರಂದು ಆಲಪ್ಪುಜ ಪಟ್ಟಣದಲ್ಲಿ ರಂಜಿತ್ ಶ್ರೀನಿವಾಸನ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 15 ಪಿಎಫ್ಐ ಹಾಗೂ ಎಸ್‌ಪಿಐ ಕಾರ್ಯಕರ್ತರನ್ನು ದೋಷಿಗಳು ಎಂದು ನ್ಯಾಯಾಲಯ ಘೋಷಣೆ ಮಾಡಿದೆ.

ಈ 15 ಅಪರಾಧಿಗಳು ಈಗಾಗಲೇ ದೇಶದಲ್ಲಿ ನಿಷೇಧಿಸಲ್ಪಟ್ಟಿರುವ ಪಿಎಫ್ಐ ಸಂಘಟನೆ ಹಾಗೂ ಇದರ ರಾಜಕೀಯ ವಿಂಗ್ ಆಗಿರುವ ಸೋಶಿಯಲ್ ಡಿಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜೊತೆ ಗುರುತಿಸಿಕೊಂಡಿದ್ದರು. ಇತ್ತ ರಂಜಿತ್ ಶ್ರೀನಿವಾಸ್ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಅಲಪುಜದಲ್ಲಿ ರಂಜಿತ್ ಶ್ರೀನಿವಾಸ್ ಕುಟುಂಬದ ಎದುರೇ ದುಷ್ಕರ್ಮಿಗಳು  ಅವರನ್ನು  ಬರ್ಬರವಾಗಿ ಹತ್ಯೆಗೈದಿದ್ದರು.

ಅಲಪ್ಪುಳದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಾಯಕ ಕೆಎಸ್ ಶಾನ್ ಅವರಕೊಲೆ ನಡೆದು 24 ಗಂಟೆಯ ಒಳಗೆ ದುಷ್ಕರ್ಮಿಗಳು ಬಿಜೆಪಿ ನಾಯಕನನ್ನು ಕೊಚ್ಚಿ ಕೊಲೆ ಮಾಡಿದ್ದರು.  ಜನವರಿ 20 ರಂದು ನಡೆದ ವಿಚಾರಣೆಯಲ್ಲಿ ಮವೆಲಿಕರದ ಹೆಚ್ಚುವರಿ ಸೆಷನ್ ಕೋರ್ಟ್ 15 ಜನರನ್ನು ಈ ಪ್ರಕರಣದಲ್ಲಿ ದೋಷಿಗಳು ಎಂದು ಘೋಷಿಸಿದೆ. ನೈಸಾಮ್, ಅಜ್ಮಲ್, ಅನೂಪ್, ಮೊಹಮ್ಮದ್ ಅಸ್ಲಾಂ, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಸಫರುದ್ದೀನ್, ಮನ್ಶಾದ್, ಜಸೀಬ್ ರಾಜಾ, ನವಾಸ್, ಸಮೀರ್, ನಜೀರ್, ಅಬ್ದುಲ್ ಕಲಾಂ, ಜಾಕೀರ್ ಹುಸೇನ್, ಶಾಜಿ ಮತ್ತು ಶೆರ್ನಾಸ್ ಅಶ್ರಫ್ ಕೊಲೆ ಕೃತ್ಯವೆಸಗಿದ ಅಪರಾಧಿಗಳಾಗಿದ್ದು ಇವರಿಗೆ ನ್ಯಾಯಾಲಯ ಈಗ ಶಿಕ್ಷೆ ವಿಧಿಸಿದೆ.

'ಕೇರಳ ತಾಲಿಬಾನ್‌ ಆಗೋಕೆ ಬಿಡೋದಿಲ್ಲ..' ಕೆಎಸ್‌ ಚಿತ್ರಾ ಬೆಂಬಲಿಸಿದ ಕೇಂದ್ರ ಸಚಿವ

ಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ರಂಜಿತ್ ಶ್ರೀನಿವಾಸನ್ ಪತ್ನಿ ಲೀಸಾ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೋರ್ಟ್ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನು ಬರೀ ಕೊಲೆ ಎನ್ನಲು ಸಾಧ್ಯವಿಲ್ಲ, ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ. ನಮ್ಮ ಎದುರೇ ನನ್ನ ಪತಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.  ಆರೋಪಿಗಳಿಗೆ ಶಿಕ್ಷೆಯಾದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಪರಾಧಿಗಳಿಗೆ  ಶಿಕ್ಷೆಯಾಗಿರುವುದು  ರಾಜ್ಯದಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ದೊಡ್ಡ ಹೊಡೆತ ನೀಡಿದೆ ಎಂದು ಹೇಳಿದ್ದಾರೆ ಎಂದು ಅಂಗ್ಲ ಮಾಧ್ಯಮ ದಿ ಹಿಂದೂ ವರದಿ ಮಾಡಿದೆ.

ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವುದೆ? ನಟಿ ಶೋಭನಾರನ್ನು ರುಬ್ಬುತ್ತಿರೋ ನೆಟ್ಟಿಗರು!

click me!