
ಸಂದೇಶ್‌ಖಾಲಿ(ಮೇ.09) ಮಹಿಳೆ ಮೇಲೆ ಅತ್ಯಾಚಾರ ಹಾಗೂ ಭೂಕಬಳಿಕೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇತ್ತ ಮಮತಾ ಬ್ಯಾನರ್ಜಿ ಸರ್ಕಾರ ಕಾನೂನು ಹೋರಾಟವನ್ನೂ ತೀವ್ರಗೊಳಿಸಿದೆ. ಈ ಬೆಳವಣಿಗೆ ನಡುವೆ ಅತ್ಯಾಚಾರ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಟಿಎಂಸಿ ಸದ್ಯಸನ ವಿರುದ್ದ ಮಹಿಳೆ ನೀಡಿದ್ದ ಅತ್ಯಾಚಾರ ದೂರನ್ನು ಹಿಂಪಡೆಯಲಾಗಿದೆ. ಇಷ್ಟೇ ಅಲ್ಲ ಬಿಜೆಪಿ ಒತ್ತಾಯಪೂರ್ವಕವಾಗಿ ನನ್ನಿಂದ ದೂರು ಕೊಡಿಸಿದೆ. ಟಿಎಂಸಿ ಕಚೇರಿಯಲ್ಲಿ ನನ್ನ ಮೇಲೆ ಯಾವುದೇ ಲೈಂಗಿಕ ಅತ್ಯಾಚಾರ ನಡೆದಿಲ್ಲ ಎಂದು ಮಹಿಳೆ ಹೇಳಿರುವುದು ಇದೀಗ ಕೋಲಾಹಲ ಸೃಷ್ಟಿಸಿದೆ.
ಬಿಜೆಪಿ ನಾಯಕರು ನನ್ನ ಬಳಿ ಬಂದು ಪ್ರಧಾನ ಮಂತ್ರಿ ಅವಾಸ್ ಯೋಜನೆ ಸೌಲಭ್ಯಕ್ಕಾಗಿ ಕಾಲಿ ಪುಟದಲ್ಲಿ ಸಹಿ ಮಾಡಿಸಿಕೊಂಡು ಹೋಗಿದ್ದರು. ಬಳಿಕ ರಾತ್ರೋರಾತ್ರಿ ಪೊಲೀಸ್ ಠಾಣೆಗೆ ಕರೆಯಿಸಿ ನನ್ನ ಸಹಿ ಇರುವ ಪುಟದಲ್ಲಿ ಟಿಎಂಸಿ ಸದಸ್ಯನ ವಿರುದ್ದ ಅತ್ಯಾಚಾರ ದೂರು ಕೊಡಿಸಿದ್ದಾರೆ. ಟಿಎಂಸಿ ಕಚೇರಿಗೆ ನಾನು ತಡ ರಾತ್ರಿ ಹೋಗಿಲ್ಲ, ಆ ರೀತಿಯ ಅನಿವಾರ್ಯತೆ ಎದುರಾಗಿಲ್ಲ. ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಮಹಿಳೆ ದೂರು ಹಿಂಪಡು ಹೇಳಿದ್ದಾಳೆ.
ಸಂದೇಶ್‌ಖಾಲಿ: ಶೇಖ್ ಆಪ್ತನ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ
ಸಂದೇಶ್‌ಖಾಲಿ ಪ್ರಕರಣದ ಕುರಿತು ವಿಡಿಯೋ ಕುಟುಕು ಕಾರ್ಯಾಚರಣೆ ಬಹಿರಂಗವಾದ ಬೆನ್ನಲ್ಲೇ ಇದೀಗ ಮಹಿಳೆ ದೂರು ವಾಪಸ್ ಪಡೆದಿರುವುದು ಟಿಎಂಸಿ ಹೋರಾಟಕ್ಕೆ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ. ವಿಡಿಯೋ ಸ್ಟಿಂಗ್‌ನಲ್ಲಿ ಬಿಜೆಪಿ ಮಂಡಲ ನಾಯಕ ಗಂಗಾಧರ್ ಕೋಯಲ್ ಸಂದೇಶ್‌ಖಾಲಿ ಪ್ರಕರಣದ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದರು. ಮಹಿಳೆಯರ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ. ಇದು ಕಪೋಕಲ್ಪಿತ, ಅತ್ಯಾಚಾರ ಎಂದು ಬಿಂಬಿಸಲಾಗಿದೆ. ಬಂಗಾಳ ವಿಧಾನಸಭೆ ವಿಪಕ್ಷ ನಾಯಕ ಸುವೆಂಧು ಅಧಿಕಾರಿ ಇದರ ರೂವಾರಿ ಎಂದು ಗಂಗಾಧರ್ ಕೋಯಲ್ ಹೇಳಿದ್ದಾರೆ. ಈ ವಿಡಿಯೋ ಸ್ಟಿಂಗ್ ಬಯಲಾಗುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ಈ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಇದೀಗ ಅತ್ಯಾಚಾರ ಸಂತ್ರಸ್ತೆ ನೀಡಿದ್ದ ದೂರು ಕೂಡ ವಾಪಸ್ ಪಡೆಯಲಾಗಿದೆ. ಇದೀಗ ಟಿಎಂಸಿ ನಾಯಕರು ಬಿಜೆಪಿ ವಿರುದ್ದ ಮುಗಿಬಿದ್ದಿದ್ದಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ಟಿಎಂಸಿ ಹೆಸರು ಕೆಡಿಸಲು ಈ ಷಡ್ಯಂತ್ರ ಮಾಡಲಾಗಿದೆ. ಬಿಜೆಪಿ ನಾಯಕರು ಸುಳ್ಳು ಹೇಳಿಕೆಗಳನ್ನು ದಾಖಲಿಸಿ ಪ್ರಕರಣ ಸೃಷ್ಟಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹೆಂಡ್ತಿ ಮಗಳನ್ನು ನೋಡಿ ಮಗುವಿನಂತೆ ಅತ್ತ ಸಂದೇಶ್‌ಖಾಲಿ ಗಲಭೆ ಪ್ರಕರಣದ ಆರೋಪಿ ಶೇಖ್ ಶಹಜಾಹಾನ್
ಸಂದೇಶ್‌ಖಾಲಿ ಪ್ರಕರಣ ಇದೀಗ ದೇಶ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಒಂದೆಡೆ ಪ್ರಕರಣದ ಪ್ರಮುಖ ಆರೋಪಿ ಟಿಎಂಸಿ ನಾಯಕ ಶಾಜಹಾನ್ ಶೇಖ್ ವಿರುದ್ಧ ಹಲಲವು ಆರೋಪಗಳು ಕೇಳಿಬಂದಿದೆ. ಇತ್ತ ಶಾಜಹಾನ್ ಶೇಖ್ ಆಪ್ತ ಸಂಬಂಧಿ ಮೇಲೆ ಸಿಬಿಐ ದಾಳಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ