ಹೇಳದೇ ಕೇಳದೇ ಸಾಮೂಹಿಕ ರಜೆ ಹಾಕಿದ ಸಿಬ್ಬಂದಿಗೆ ಪರ್ಮನೆಂಟ್ ರಜೆ ನೀಡಿದ ಏರ್ ಇಂಡಿಯಾ..!

By Anusha KbFirst Published May 9, 2024, 12:51 PM IST
Highlights

ಹೇಳದೇ ಕೇಳದೇ ಸಾಮೂಹಿಕ ಸಿಖ್ ಲೀವ್ ಹಾಕಿದ ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಶಿಸ್ತು ಕ್ರಮ ಕೈಗೊಂಡಿದ್ದು, ಅಂತಹ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ. 

ನವದೆಹಲಿ: ಹೇಳದೇ ಕೇಳದೇ ಸಾಮೂಹಿಕ ಸಿಖ್ ಲೀವ್ ಹಾಕಿದ ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಶಿಸ್ತು ಕ್ರಮ ಕೈಗೊಂಡಿದ್ದು, ಅಂತಹ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ.  ನಿನ್ನೆ ಏರ್ ಇಂಡಿಯಾದ 300ಕ್ಕೂ ಹೆಚ್ಚು ಸಿಬ್ಬಂದಿ ಸಾಮೂಹಿಕ ಅನಾರೋಗ್ಯದ ರಜೆ ಹಾಕಿ ಫೋನ್ ಸ್ವಿಚ್ಆಫ್ ಮಾಡಿ ಕುಳಿತಿದ್ದರು. ಇದರಿಂದ 70ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ದೇಶಿಯ ವಿಮಾನಗಳ ಪ್ರಯಾಣ ರದ್ದಾಗಿದ್ದು, ಮತ್ತೆ ಕೆಲವು ವಿಮಾನಗಳ ಪ್ರಯಾಣ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನ ಬುಕ್ ಮಾಡಿದ್ದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು, ಇದರಿಂದ ಏರ್‌ಲೈನ್ಸ್ ದೊಡ್ಡಮಟ್ಟದಲ್ಲಿ ಮುಜುಗರಕ್ಕೊಳಗಾಗಿತ್ತು. ಹೀಗಾಗಿ ನಿನ್ನೆ ಸಂಜೆ 4 ಗಂಟೆಯೊಳಗೆ ಕೆಲಸದ ಸ್ಥಳಕ್ಕೆ ಹಾಜರಾಗುವಂತೆ ಏರ್‌ಲೈನ್ಸ್ ಸೂಚನೆ ನೀಡಿತ್ತು. ಆದರೆ ಈ ಸೂಚನೆಗೂ ತಲೆಕೆಡಿಸಿಕೊಳ್ಳದ ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಏರ್ ಇಂಡಿಯಾ ಸಂಸ್ಥೆ ಮುಂದಾಗಿದೆ. 

ಈ ಹಿನ್ನೆಲೆಯಲ್ಲಿ ಈಗ ಏರ್ ಇಂಡಿಯಾ ಬೇಜವಾಬ್ದಾರಿ ತೋರಿದ ತನ್ನ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ. ಏರ್ ಇಂಡಿಯಾ ನೌಕರರ ಈ ಸಾಮೂಹಿಕ ರಜೆಯಿಂದಾಗಿ ಇಂದೂ ಕೂಡ 74 ವಿಮಾನಗಳ ಪ್ರಯಾಣ ಸ್ಥಗಿತಗೊಂಡಿದೆ.  ಟಾಟಾ ಮಾಲೀಕತ್ವದಲ್ಲಿರುವ ಏರ್ ಇಂಡಿಯಾದ ಉದ್ಯೋಗಿಗಳು ವೇತನ ಪರಿಷ್ಕರಣೆ, ಹಾಗೂ ಇನ್ಸೆಂಟಿವ್ ಹೊಸ ಉದ್ಯೋಗ ನೀತಿ  ಮುಂತಾದ ವಿಚಾರಗಳ ಕಾರಣಕ್ಕೆ ಪ್ರತಿಭಟನೆಯ ರೂಪವಾಗಿ ಈ ಸಾಮೂಹಿಕ ರಜೆ ಹಾಕಿದ್ದಾರೆ ಎಂದು ವರದಿ ಆಗಿದೆ.

 ಹೇಳ್ದೆ ಕೇಳ್ದೆ ಮಾಸ್ ಸಿಕ್ ಲೀವ್ ಹಾಕಿದ ಏರ್ ಇಂಡಿಯಾ ಸಿಬ್ಬಂದಿ: 70ಕ್ಕೂ ಹೆಚ್ಚು ಫ್ಲೈಟ್ ಕ್ಯಾನ್ಸಲ್

ಸಿಬ್ಬಂದಿಗಳನ್ನು ನಡೆಸಿಕೊಳ್ಳುವುದರಲ್ಲಿ ಸಮಾನತೆ ಇಲ್ಲ, ಕೆಲವು ಸಿಬ್ಬಂದಿಗೆ ಉನ್ನತ ಹುದ್ದೆಗೆ ಸಂದರ್ಶನ ನಡೆಸಿದ್ದು ಅದರಲ್ಲಿ ಅವರು ತೇಗರ್ಡೆ ಹೊಂದಿದ ನಂತರವೂ ಅವರಿಗೆ ಕೆಳ ಹಂತದ ಹುದ್ದೆಯಲ್ಲೇ ಮುಂದುವರೆಸಲಾಗಿದೆ. ಅಲ್ಲದೇ ಅವರಿಗೆ ಸಿಗುವ ಪರಿಹಾರ ಪ್ಯಾಕೇಜ್‌ನಲ್ಲಿ ಕೂಡ ಸ್ವಲ್ಪ ಬದಲಾವಣೆ ಮಾಡಬೇಕು ಎಂಬುದು ಉದ್ಯೋಗಿಗಳ ಆಗ್ರಹವಾಗಿದೆ. ಏರ್ ಏಷ್ಯಾ ಇಂಡಿಯಾವನ್ನು ಏರ್ ಇಂಡಿಯಾ ಜೊತೆ ವಿಲೀನ ಮಾಡಿದ ನಂತರ ಇದೆಲ್ಲಾ ಸಮಸ್ಯೆಗಳು ಪ್ರಾರಂಭವಾಗಿವೆ ಎಂದು ಹೆಸರು ಹೇಳಲಿಚ್ಚಿಸದ ಉದ್ಯೋಗಿಯೊಬ್ಬರು ಆಂಗ್ಲ ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ. 

ತಮ್ಮ ಡ್ಯೂಟಿ ವೇಳಾಪಟ್ಟಿ ಹಾಗೂ ವೇತನದ ಪ್ಯಾಕೇಜ್‌ನಲ್ಲಿಯೂ ಬದಲಾವಣೆ ಕಾಣಿಸಿಕೊಂಡ ನಂತರ ಕಳೆದ ತಿಂಗಳಷ್ಟೇ ಟಾಟಾ ಮಾಲೀಕತ್ವದ ವಿಸ್ತಾರ ಏರ್‌ಲೈನ್ಸ್‌ನಲ್ಲಿ ಪೈಲಟ್‌ಗಳು ಹಾಗೂ ಕ್ಯಾಬಿನ್ ಸಿಬ್ಬಂದಿಯ ಪ್ರತಿಭಟನೆ ನಡೆಸಿದ್ದರು. ಇದಾಗಿ ತಿಂಗಳು ಮಾಸುವ ಮೊದಲು ಏರ್ ಇಂಡಿಯಾ ಏಕ್ಸ್‌ಪ್ರೆಸ್‌ ಉದ್ಯೋಗಿಗಳ ಪ್ರತಿಭಟನೆ ಈಗ ಟಾಟಾಗ್ರೂಪ್‌ಗೆ ಹೊಸ ಸಮಸ್ಯೆಯಾಗಿದೆ. 

ಅನಿರೀಕ್ಷಿತವಾಗಿ ನಮ್ಮ ಅತಿಥಿಗಳಿಗೆ ಎದುರಾದ ಈ ತೊಂದರೆಯನ್ನು ಪರಿಹರಿಸಲು ನಾವು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇವತ್ತು ನಾವು 292 ವಿಮಾನಗಳನ್ನು ಹಾರಾಟ ನಡೆಸಲಿದ್ದೇವೆ. ನಾವು ನಮ್ಮ ಎಲ್ಲಾ ಸಂಪನ್ಮೂಲಗಳನ್ನು ಸಂಗ್ರಹಿಸಿದ್ದು 20 ಮಾರ್ಗಗಳಲ್ಲಿ ಏರ್ ಇಂಡಿಯಾ ನಮಗೆ ಬೆಂಬಲಿಸಲಿದೆ. ಆದರೂ ನಮ್ಮ 74 ವಿಮಾನಗಳ ಸಂಚಾರವೂ ಸ್ಥಗಿತಗೊಂಡಿದೆ. ಆದರೂ ನಮ್ಮ ಫ್ಲೈಟ್ ಬುಕ್ ಮಾಡಿದ ಗ್ರಾಹಕರಿಗೆ ನಾವು ಈ ಸಮಸ್ಯೆಯಿಂದ ತಾವು ಬುಕ್ ಮಾಡಿದ ವಿಮಾನ ಪ್ರಯಾಣವೂ ಸ್ಥಗಿತಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೇಳುತ್ತೇವೆ. ಒಂದು ವೇಳೆ ವಿಮಾನ ಪ್ರಯಾಣ ರದ್ದಾದರೆ ಅಥವಾ ಮೂರು ಗಂಟೆಗಿಂತ ಹೆಚ್ಚು ವಿಳಂವಾದರೆ ನಾವು ಸಂಪೂರ್ಣ ಹಣವನ್ನು ವಾಪಸ್ ಮಾಡುತ್ತೇವೆ. ಅಥವಾ ಉಚಿತವಾಗಿ ಮುಂದಿನ ಪ್ರಯಾಣಕ್ಕೆ ಅವಕಾಶ ನೀಡುತ್ತೇವೆ ಎಂದು ಏರ್‌ ಇಂಡಿಯಾ  ಎಕ್ಸ್‌ಪ್ರೆಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಜೊತೆಗೆ WhatsApp (+91 6360012345) ಹಾಗೂ airindiaexpress.com ನ್ನು ಸಂಪರ್ಕಿಸುವಂತೆ ಕೇಳಿದೆ.

ನೂರಾರು ವಿಸ್ತಾರ ವಿಮಾನಗಳ ಸಂಚಾರ ಏಕಾಏಕಿ ರದ್ದು, ಪ್ರಯಾಣಿಕರು ಕಂಗಾಲು

ಇದರ ಜೊತೆಗೆ 30 ಉದ್ಯೋಗಿಗಳನ್ನು ಸಂಸ್ಥೆ ಸೇವೆಯಿಂದ ವಜಾಗೊಳಿಸಿದೆ. ಉದ್ಯೋಗಿಗಳು ಹಾಕಿದ ಸಾಮೂಹಿಕ ರಜೆಯೂ ಯಾವುದೇ ಸಮರ್ಥನೀಯ ಕಾರಣವಿಲ್ಲದ್ದಾಗಿದ್ದು, ಪೂರ್ವ ನಿರ್ಧಾರಿತವಾಗಿದ್ದು, ಸಂಘಟಿತವಾಗಿ ಕೆಲಸದಿಂದ ದೂರವಿರುವುದನ್ನು ಸ್ಟಷ್ಟವಾಗಿ ಸೂಚಿಸುತ್ತಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೂರಿದೆ. 

click me!