1 ಕೋಟಿ ರೂ ಫೋರ್ಡ್ ಮಸ್ತಾಂಗ್ ಕಾರು ಖರೀದಿಸಿದ್ರಾ ವಡಾ ಪಾವ್ ಹುಡುಗಿ? ವಿಡಿಯೋ ವೈರಲ್!

By Chethan Kumar  |  First Published May 9, 2024, 1:10 PM IST

ವಡಾ ಪಾವ್ ಗರ್ಲ್ ಎಂದೇ ಜನಪ್ರಿಯಗೊಂಡಿರುವ ಚಂದ್ರಿಕಾ ಗೆರಾ ದೀಕ್ಷಿತ್ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಫೋರ್ಡ್ ಮಸ್ತಾಂಗ್ ಕಾರು ಖರೀದಿಸಿದ್ರಾ? ಹೊಸ ಕಾರಿನಲ್ಲಿ ಚಂದ್ರಿಕಾ ಕಾಣಿಸಿಕೊಂಡಿದ್ದು ತೀವ್ರ ಕುತೂಹಲ ಕೆರಳಿಸಿದೆ. ವಡಾ ಪಾವ್ ಮಾರಾಟ ಮಾಡಿ ದುಬಾರಿ ಕಾರು ಖರೀದಿಸಲು ಸಾಧ್ಯವೇ?
 


ದೆಹಲಿ(ಮೇ.09) ವಡಾ ಪಾವ್ ಗರ್ಲ್ ಚಂದ್ರಿಕಾ ಗೆರಾ ದೀಕ್ಷೀತ್ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇತ್ತೀಚೆಗೆ ಈಕೆಯ ವಡಾ ಪಾವ್ ಸ್ಟಾಲ್ ತೆರವುಗೊಳಿಸಲು ಬಂದ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳ ಜೊತೆಗಿನ ವಾಗ್ವಾದ ಭಾರಿ ಸುದ್ದಿಯಾಗಿದೆ. ಇದೀಗ ವಡಾ ಪಾವ್ ಗರ್ಲ್ ಫೋರ್ಡ್ ಮಸ್ತಾಂಗ್ ಕಾರಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಬರೋಬ್ಬರಿ 1 ಕೋಟಿ ರೂಪಾಯಿ ಮಸ್ತಾಂಗ್ ಕಾರಿನಲ್ಲಿ ಬಂದಿಳಿಯುುವ ವಿಡಿಯೋ ವೈರಲ್ ಆಗಿದೆ. ಇದರ ಜೊತೆಗೆ ಕೆಲ ಕುತೂಹಲವನ್ನು ಹಿಡಿದಿಟ್ಟುಕೊಂಡಿದ್ದಾರೆ.

ಚಂದ್ರಿಕಾ ಗೆರಾ ದೀಕ್ಷಿತ್ ತಮ್ಮ ಇನ್‌ಸ್ಟಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.  ಹೊಚ್ಚ ಹೊಸ ಫೋರ್ಡ್ ಮಸ್ತಾಂಗ್ ಕಾರಿನ ಮೂಲಕ ಮಳಿಗೆಗೆ ಆಗಮಿಸುವ ಚಂದ್ರಿಕಾ ಇದೀಗ ಹಲವರ ಕುತೂಹಲ ಹೆಚ್ಚಿಸಿದ್ದಾರೆ. ಫೋರ್ಡ್ ಮಸ್ತಾಂಗ್ ಕಾರಿನ ಕೋ ಡ್ರೈವರ್ ಸೀಟಿನಿಂದ ಇಳಿದ ಚಂದ್ರಿಕಾ ನೇರವಾಗಿ ಸ್ಟೋರ್‌ಗೆ ತೆರಳಿದ್ದಾರೆ. ಬಳಿಕ ಐಫೋನ್ 15 ಪ್ರೋ , ಆ್ಯಪಲ್ ವಾಚ್ ಹಾಗೂ ಏರ್‌ಪಾಡ್ ಅನ್‌ಬಾಕ್ಸ್ ಮಾಡುತ್ತಿರುವ ದೃಶ್ಯಗಳಿವೆ.

Tap to resize

Latest Videos

undefined

Street Food: ದೆಹಲಿಯ ವಡಾ ಪಾವ್ ಹುಡುಗಿ; ಯಾರೀಕೆ ಚಂದ್ರಿಕಾ ದೀಕ್ಷಿತ್?

ವಡಾ ಪಾವ್ ಹುಡುಗಿ ಐಫೋನ್ 15 ಪ್ರೋ ಖರೀದಿಸಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಕಾರು ಖರೀದಿಸಿದ್ದಾರಾ? ಅನ್ನೋ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಮತ್ತೊಂದು ವಿಡಿಯೋದಲ್ಲಿ ಮಸ್ತಾಂಗ್ ಕಾರಿನ ಸುತ್ತ ಜನ ಸೇರಿದ್ದಾರೆ. ಕುತೂಹಲದಿಂದ ಕಾರನ್ನು ನೋಡುತ್ತಿದ್ದಾರೆ. ಇದೇ ವೇಳೆ ನಿರೂಪಕನೊಬ್ಬ, ಈ ಕಾರಿನ ಸುತ್ತ ಇಷ್ಟೊಂದು ಜನ ಸೇರಿದ್ದಾರೆ. ಈ ಕಾರಿನಲ್ಲಿ ಏನಿದೆ? ಎಂದು ಕೇಳುತ್ತಿದ್ದಂತೆ, ಕಾರಿನ ಬೂಟ್ ತೆರೆಯಲಾಗುತ್ತದೆ. ಈ ವೇಳೆ ವಡಾ ಪಾವ್ ಗರ್ಲ್ ಚಂದ್ರಿಕಾ ವಡಾ ಪಾವ್ ಹಿಡಿದು ಬೂಟ್‌ನಿಂದ ಹೊರಬರುತ್ತಿರುವ ದೃಶ್ಯವಿದೆ. 

 

 

ಇಲ್ಲೇನು ಮಾಡುತ್ತೀದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಚಂದ್ರಿಕಾ, ವಡಾ ಪಾವ್ ಎಂದಿದ್ದಾರೆ. ಇಷ್ಟೇ ಅಲ್ಲ ಕಾಯುತ್ತಿರಿ ಇದಕ್ಕಿಂತ ದೊಡ್ಡ ಅಚ್ಚರಿಗಳು ನಿಮಗಾಗಿ ಕಾದಿದೆ ಅನ್ನೋ ಸೂಚನೆಯನ್ನು ನೀಡಿದ್ದಾರೆ. ಈ ಎರಡು ವಿಡಿಯೋಗಳು ಭಾರಿ ವೈರಲ್ ಆಗಿದೆ. 

 

 

ಅಮ್ಮನಿಗೆ ಮನೆ ಕಟ್ಟಿ ಕೊಡಲು ವಡಾ ಪಾವ್ ಮಾರೋ ಅಕ್ಕ-ತಂಗಿ, ಟರ್ನ್ ಓವರ್ ಕೇಳಿದ್ರಾ?

ಇದೇ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ವಡಾ ಪಾವ್ ಮೂಲಕ 1 ಕೋಟಿ ರೂಪಾಯಿ ಕಾರು ಖರೀದಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಮತ್ತೆ ಕೆಲವರು ಇದು ವಡಾ ಪಾವ್ ಗರ್ಲ್ ಖರೀದಿಸಿದ ಕಾರಲ್ಲ, ಈಗಾಗಲೇ ಆಕೆಹಲವು ದುಬಾರಿ ಕಾರುಗಳಲ್ಲಿ ಪ್ರಮೋಶನ್ ಮಾಡಿದ್ದಾಳೆ. ಇದು ಕೂಡ ಅದೇ ರೀತಿಯ ಪ್ರಮೋಶನ್ ಎಂದಿದ್ದಾರೆ. 

click me!