Kartarpur: ಹುಟ್ಟಿದ ಬಳಿಕ ಮೊದಲ ಬಾರಿಗೆ ಭಾರತೀಯ ಸಿಖ್‌ ಸಹೋದರನ ಭೇಟಿಯಾದ 65 ವರ್ಷದ ಮುಸ್ಲಿಂ ಸಹೋದರಿ

By BK AshwinFirst Published Sep 10, 2022, 6:36 PM IST
Highlights

ಪಾಕಿಸ್ತಾನದಲ್ಲಿದ್ದ ತನ್ನ ಮುಸ್ಲಿಂ ಸಹೋದರಿಯನ್ನು ಭಾರತದಲ್ಲಿದ್ದ ಸಿಖ್‌ ಸಹೋದರ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಈ ಭೇಟಿ ನಡೆದಿದೆ. 

ದೇಶದ ವಿಭಜನೆಯ ಸಮಯದಲ್ಲಿ ತನ್ನ ಕುಟುಂಬದಿಂದ ಬೇರ್ಪಟ್ಟ 75 ವರ್ಷಗಳ ನಂತರ ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹಿಬ್‌ನಲ್ಲಿ ಪಾಕಿಸ್ತಾನದ ತನ್ನ ಮುಸ್ಲಿಂ ಸಹೋದರಿಯನ್ನು ಭಾರತದ ಪಂಜಾಬ್‌ನ ಜಲಂಧರ್ ಮೂಲದ ಸಿಖ್ ವ್ಯಕ್ತಿ ಅಮರ್‌ಜಿತ್‌ ಸಿಂಗ್ ಭೇಟಿಯಾಗಿದ್ದಾರೆ. ಇಷ್ಟು ದೀರ್ಘ ಅವಧಿಯ ಬಳಿಕ ಭೇಟಿಯಾದ ಹಿನ್ನೆಲೆ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ವಿಭಜನೆಯ ಸಮಯದಲ್ಲಿ ಅವರ ಮುಸ್ಲಿಂ ಪೋಷಕರು ಪಾಕಿಸ್ತಾನಕ್ಕೆ ವಲಸೆ ಹೋದಾಗ ಅಮರ್ಜಿತ್ ಸಿಂಗ್, ತನ್ನ ಸಹೋದರಿಯೊಂದಿಗೆ ಭಾರತದಲ್ಲೇ ಉಳಿದರು. ಬುಧವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹಿಬ್‌ನಲ್ಲಿ ಗಾಲಿಕುರ್ಚಿಯಲ್ಲಿದ್ದ ಅಮರ್‌ಜಿತ್‌ ಸಿಂಗ್ ಅವರು ತಮ್ಮ ಸಹೋದರಿ ಕುಲ್ಸೂಮ್ ಅಖ್ತರ್ ಅವರನ್ನು ಭೇಟಿಯಾದಾಗ ಎಲ್ಲರ ಕಣ್ಣುಗಳು ತೇವವಾಗಿದ್ದವು. ತನ್ನ ಸಹೋದರಿಯನ್ನು ಭೇಟಿಯಾಗಲು ವೀಸಾದೊಂದಿಗೆ ಅಟ್ಟಾರಿ-ವಾಘಾ ಗಡಿಯ ಮೂಲಕ ಅಮರ್‌ಜಿತ್‌ ಸಿಂಗ್ ಪಾಕಿಸ್ತಾನಕ್ಕೆ ತೆರಳಿದ್ದಾರೆ. 

ಈ ವೇಳೆ 65ರ ಹರೆಯದ ಕುಲ್ಸೂಮ್ ಅವರು ಅಣ್ಣನನ್ನು ನೋಡಿದ ನಂತರ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಳುತ್ತಲೇ ಇದ್ದರು. ಆಕೆ ತನ್ನ ಸಹೋದರನನ್ನು ಭೇಟಿಯಾಗಲು ತನ್ನ ಮಗ ಶಹಜಾದ್ ಅಹ್ಮದ್ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಫೈಸಲಾಬಾದ್‌ನ ತನ್ನ ತವರು ಮನೆಯಿಂದ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ.

25 ವರ್ಷಗಳಿಂದ ಬೇರ್ಪಟ್ಟಿದ್ದ ಮಗನನ್ನು ಸೇರಿಕೊಂಡ ತಾಯಿಯ ಆನಂದಭಾಷ್ಪ..!

ಈ ಸಂಬಂಧ ಪಾಕಿಸ್ತಾನದ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನೊಂದಿಗೆ ಮಾತನಾಡಿದ ಕುಲ್ಸೂಮ್, 1947 ರಲ್ಲಿ ಜಲಂಧರ್‌ನ ಉಪನಗರದಿಂದ ತನ್ನ ಸಹೋದರ ಮತ್ತು ಸಹೋದರಿಯನ್ನು ಬಿಟ್ಟು ತನ್ನ ಪೋಷಕರು ಪಾಕಿಸ್ತಾನಕ್ಕೆ ವಲಸೆ ಬಂದರು ಎಂದು ಹೇಳಿದರು. ಕುಲ್ಸೂಮ್ ಅವರು ಪಾಕಿಸ್ತಾನದಲ್ಲಿ ಜನಿಸಿದರು ಮತ್ತು ಕಳೆದುಹೋದ ಸಹೋದರ ಮತ್ತು ಸಹೋದರಿಯ ಬಗ್ಗೆ ತಾಯಿಯ ಬಗ್ಗೆ ಕೇಳುತ್ತಿದ್ದರು. ಕಾಣೆಯಾದ ಮಕ್ಕಳನ್ನು ನೆನಪಿಸಿಕೊಂಡಾಗಲೆಲ್ಲ ತಾಯಿ ಅಳುತ್ತಿದ್ದರು ಎಂದು ಹೇಳಿದರು. ತನ್ನ ಸಹೋದರ ಮತ್ತು ಸಹೋದರಿಯನ್ನು ಭೇಟಿಯಾಗಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೆ, ಕೆಲವು ವರ್ಷಗಳ ಹಿಂದೆ, ಆಕೆಯ ತಂದೆ ಸರ್ದಾರ್ ದಾರಾ ಸಿಂಗ್ ಅವರ ಸ್ನೇಹಿತ ಭಾರತದಿಂದ ಪಾಕಿಸ್ತಾನಕ್ಕೆ ಬಂದು ತನ್ನನ್ನು ಭೇಟಿಯಾದರು.

ಆಕೆಯ ತಾಯಿ ಸರ್ದಾರ್ ದಾರಾ ಸಿಂಗ್‌ಗೆ ಭಾರತದಲ್ಲಿ ಬಿಟ್ಟುಹೋದ ತನ್ನ ಮಗ ಮತ್ತು ಮಗಳ ಬಗ್ಗೆ ಹೇಳಿದರು. ಹಾಗೂ, ಅವರ ಹಳ್ಳಿಯ ಹೆಸರು ಮತ್ತು ಅವರ ಮನೆಯ ಸ್ಥಳವನ್ನು ಸಹ ಅವರಿಗೆ ತಿಳಿಸಿದಳು. ಸರ್ದಾರ್ ದಾರಾ ಸಿಂಗ್ ನಂತರ ಪಡವಾನ್ ಗ್ರಾಮದಲ್ಲಿರುವ ಆಕೆಯ ಮನೆಗೆ ಭೇಟಿ ನೀಡಿ ತನ್ನ ಮಗ ಜೀವಂತವಾಗಿದ್ದಾರೆ, ಆದರೆ ಮಗಳು ಸತ್ತಿದ್ದಾಳೆ ಎಂದು ತಿಳಿಸಿದರು. ಹಾಗೆ, 1947 ರಲ್ಲಿ ಸಿಖ್ ಕುಟುಂಬದಿಂದ ದತ್ತು ಪಡೆದ ಆಕೆಯ ಮಗನಿಗೆ ಅಮರ್‌ಜಿತ್‌ ಎಂದು ಹೆಸರಿಸಲಾಯಿತು.

ಸಹೋದರನ ಮಾಹಿತಿಯನ್ನು ಪಡೆದ ನಂತರ, ಕುಲ್ಸೂಮ್ ಅವರು ವಾಟ್ಸಾಪ್‌ನಲ್ಲಿ ಅಮರ್‌ಜಿತ್‌ ಸಿಂಗ್‌ ಅವರೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಭೇಟಿಯಾಗಲು ನಿರ್ಧರಿಸಿದರು. ಇನ್ನೊಂದೆಡೆ, ತನ್ನ ನಿಜವಾದ ಪೋಷಕರು ಪಾಕಿಸ್ತಾನದಲ್ಲಿದ್ದಾರೆ ಮತ್ತು ಅವರು ಮುಸ್ಲಿಮರು ಎಂದು ಮೊದಲು ತಿಳಿದಾಗ, ತನಗೆ ಆಘಾತವಾಗಿತ್ತು ಎಂದು ಅಮರ್‌ಜಿತ್ ಸಿಂಗ್ ಹೇಳಿದರು.  ತಾನು ಯಾವಾಗಲೂ ತಮ್ಮ ನಿಜವಾದ ಸಹೋದರಿ ಮತ್ತು ಸಹೋದರರನ್ನು ಭೇಟಿಯಾಗಲು ಬಯಸುತ್ತೇನೆ. ತನ್ನ ಮೂವರು ಸಹೋದರರು ಬದುಕಿದ್ದಾರೆಂದು ತಿಳಿದು ಸಂತಸವಾಗುತ್ತಿದೆ ಎಂದರು.  ಇದೀಗ ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಪಾಕಿಸ್ತಾನಕ್ಕೆ ಬರುವುದಾಗಿಯೂ ಅಮರ್‌ಜಿತ್ ಸಿಂಗ್ ಹೇಳಿದ್ದಾರೆ.  

ಇದನ್ನು ಓದಿ: ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಒಟ್ಟಿಗೆ ಪಾಸಾದ ತಾಯಿ - ಮಗ

ಕರ್ತಾರ್‌ಪುರ ಕಾರಿಡಾರ್ ಕುಟುಂಬವೊಂದನ್ನು ಮತ್ತೆ ಒಂದುಗೂಡಿಸಿರುವುದು ಇದು ಎರಡನೇ ಬಾರಿ. ಮೇ ತಿಂಗಳಲ್ಲಿ, ಮುಸ್ಲಿಂ ದಂಪತಿಗಳಿಂದ ದತ್ತು ಪಡೆದು ಬೆಳೆದ ಸಿಖ್ ಕುಟುಂಬದಲ್ಲಿ ಜನಿಸಿದ ಮಹಿಳೆಯೊಬ್ಬರು ಕರ್ತಾರ್‌ಪುರದಲ್ಲಿ ಭಾರತದ ಸಹೋದರರನ್ನು ಭೇಟಿಯಾಗಿದ್ದರು. 

click me!