ಕದ್ದುಮುಚ್ಚಿ 2ನೇ ಮದುವೆಗೆ ರೆಡಿಯಾಗ್ತಿದ್ದ ಮಗ, ದರದರನೆ ಎಳೆದು ಪೊಲೀಸರಿಗೆ ಒಪ್ಪಿಸಿದ ತಂದೆ!

By Santosh Naik  |  First Published May 10, 2024, 8:28 PM IST


ಕದ್ದುಮುಚ್ಚಿ ಮಗ 2ನೇ ಮದುವೆಯಾಗ್ತಿದ್ದ ಈ ಸುದ್ದಿ ತಿಳಿದ ತಕ್ಷಣವೇ ಆತನಿದ್ದ ಸ್ಥಳಕ್ಕೆ ಬಂದ ಆತನ ತಂದೆ, ಅವನನ್ನು ದರದರನೆ ಎಳೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಒಡಿಶಾದ ಭದ್ರಕ್‌ ಜಿಲ್ಲೆಯಲ್ಲಿ ನಡೆದಿದೆ.
 


ನವದೆಹಲಿ (ಮೇ.10): ಒಡಿಶಾ ರಾಜ್ಯದ ಭದ್ರಕ್‌ ಜಿಲ್ಲೆಯಲ್ಲಿ ತಂದೆಯೊಬ್ಬ ಮಾಡಿದ ಕೆಲಸಕ್ಕೆ ಇಡೀ ರಾಜ್ಯವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಇಡೀ ಮನೆಯವರ ಕಣ್ಣುತಪ್ಪಿಸಿ 2ನೇ ಮದುವೆಗೆ ರೆಡಿಯಾಗ್ತಿದ್ದ ಮಗನನ್ನು ಆತನ ತಂದೆಯೇ ಪೊಲೀಸರಿಗೆ ಹಿಡಿದು ಒಪ್ಪಿಸಿದ ಘಟನೆ ನಡೆದಿದೆ. ಭದ್ರಕ್‌ ಜಿಲ್ಲೆಯ ಬಿಷ್ಣುಮೋಹನ್‌ ಜೆನಾ ಅವರ ಪುತ್ರ ಅಜಯ್‌, ಮೊದಲ ಪತ್ನಿ ಜೀವಂತವಾಗಿದ್ದರೂ ಗುಟ್ಟುಗುಟ್ಟಾಗಿ ರಿಜಿಸ್ಟ್ರಾರ್‌ ಆಫೀಸ್‌ನಲ್ಲಿ 2ನೇ ಮದುವೆಗೆ ರೆಡಿಯಾಗಲು ಸಿದ್ಧವಾಗುತ್ತಿದ್ದ. ಯಾವಾಗ ಈ ವಿಚಾರ ಬಿಷ್ಣು ಮೋಹನ್‌ ಜೆನಾ ಅವರಿಗೆ ಗೊತ್ತಾಯಿತೋ, ರಿಜಿಸ್ಟ್ರಾರ್‌ ಆಫೀಸ್‌ನಲ್ಲಿ ಮದುವೆಗಾಗಿ ರೆಡಿಯಾಗಿ ನಿಂತಿದ್ದ ಮಗನ ಕೊರಳಿಗೆ ಕೈಹಾಕಿ ದರದರನೆ ರಸ್ತೆಗೆ ಎಳೆದುಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಿಷ್ಣುಮೋಹನ್‌ ಅವರ ಈ ವರ್ತನೆ ಇಡೀ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗಿದೆ. 10 ವರ್ಷಗಳ ಹಿಂದೆ ಮದುವೆಯಾಗಿದ್ದ ಅಜಯ್‌ಗೆ ಈಗ ಎಂಟು ವರ್ಷದ ಒಬ್ಬ ಪುತ್ರನಿದ್ದಾನೆ.

ಘಟನೆ ಏನು: ಮೊದಲ ಪತ್ನಿ ಜೀವಂತವಾಗಿರುವಾಗಲೇ ಇನ್ನೊಂದು ಮದುವೆಯಾಗಲು ಅಜಯ್‌ ರೆಡಿಯಾಗಿದದ್ದ ಅದಕ್ಕಾಗಿ ರಿಜಿಸ್ಟ್ರಾರ್‌ ಕಚೇರಿಗೂ ಹೋಗಿದ್ದ. ಈ ವಿಚಾರ ಆತನ ತಂದೆಗೆ ಹೇಗೋ ಗೊತ್ತಾಗಿದೆ. ತಂದೆ ತಡಮಾಡದೆ ರಿಜಿಸ್ಟ್ರಾರ್‌ ಕಚೇರಿಗೆ ತೆರಳಿ ಮಗನನ್ನು ಅಲ್ಲಿಂದ ಹೊರಗೆಳೆದಿದ್ದಲ್ಲದೆ, ಠಾಣೆಗೆ ಎಳೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಒಡಿಶಾದ ಭದ್ರಕ್ ಜಿಲ್ಲೆಯ ಬಸುದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಬಿಷ್ಣುಮೋಹನ್ ಜೆನಾ ಅವರ ಮಗ ಅಜಯ್ 10 ವರ್ಷಗಳ ಹಿಂದೆ ತುಳಸಿ ಜೆನಾ ಅವರನ್ನು ಮದುವೆಯಾಗಿದ್ದರು. ಅವರಿಗೆ 8 ವರ್ಷದ ಮಗನೂ ಇದ್ದಾನೆ. ಇದರ ಹೊರತಾಗಿಯೂ ಅಜಯ್ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಸಿದ್ಧವಾಗಿದ್ದ. ಅಜಯ್ ತಂದೆ ಬಿಷ್ಣೋಮೋಹನ್ ಅವರು ಸೊಸೆ ಮತ್ತು ಮೊಮ್ಮಗನೊಂದಿಗೆ ಬಸುದೇವಪುರದ ಆಸ್ಪತ್ರೆಗೆ ಬಂದಿದ್ದಾಗ ಈ ಘಟನೆ ನಡೆದಿದೆ.

Tap to resize

Latest Videos

ಬೆಂಗಳೂರು ಒಂಟಿ ಮಹಿಳೆಯರೇ ಎಚ್ಚರ; ಕೊರಳಲ್ಲಿರುವ ಗೋಲ್ಡ್ ಚೈನ್ ಕದಿಯಲು, ಮಹಿಳೆ ಕತ್ತನ್ನೇ ಹಿಸುಕಿ ಕೊಂದರು!

ನಗರದಲ್ಲಿ ಏನೋ ಕೆಲಸವಿದೆ ಎನ್ನುವ ಕಾರಣ ನೀಡಿ ಬೆಳಗ್ಗಯೇ ಅಜಯ್‌ ಮನೆಯಿಂದ ಹೊರಹೋಗಿದ್ದ ಎಂದು ಕುಟುಂಬ ತಿಳಿದಿದೆ. ಇನ್ನು ಬಿಷ್ಣುಮೋಹನ್‌, ತಮ್ಮ ಸೊಸೆ ಹಾಗೂ ಮೊಮ್ಮಗನೊಂದಿಗೆ ಬಸುದೇವರಪುರದ ಆಸ್ಪತ್ರೆಗೆ ಆರೋಗ್ಯ ಪರೀಕ್ಷೆಗಾಗಿ ಬಂದಿದ್ದರು. ಈ ವೇಳೆ ಅಜಯ್‌ 2ನೇ ಮದುವೆಯಾಗುತ್ತಿರುವುದು ಅವರ ಗಮನಕ್ಕೆ ಬಂದಿದೆ. ಈ ಹಂತದಲ್ಲಿ ತಮ್ಮ ಸೊಸೆ ಹಾಗೂ ಮೊಮ್ಮಗನನ್ನು ಮರಳಿ ಮನೆಗೆ ಹೋಗುವಂತೆ ತಿಳಿಸಿದ ವಿಷ್ಣುಮೋಹನ್‌, ನೇರವಾಗಿ ರಿಜಿಸ್ಟ್ರಾರ್‌ ಕಚೇರಿಗೆ ತೆರಳಿದ್ದಾರೆ. ಅಲ್ಲಿ ಮದುವೆಯಾಗುವ ಸಲುವಾಗಿ ನಿಂತಿದ್ದ ಮಗನ ಕೊರಳಿಗೆ ಕೈಹಾಕಿ ದರದರಣೆ ಎಳೆದಿದ್ದಾರೆ. ರಸ್ತೆಯಲ್ಲಿಯೇ ಮೆರವಣಿಗೆ ಮಾಡಿಕೊಂಡು ಪೊಲೀಸ್‌ ಸ್ಟೇಷನ್‌ವರೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ, ಆತನ ವಿರುದ್ಧ ತಾವೇ ದೂರು ದಾಖಲಿಸಿದ್ದಾರೆ. ಅಜಯ್‌ನನ್ನು ಮದುವೆಯಾಗಬೇಕಿದ್ದ ಹುಡುಗಿ ಕೂಡ ಆತನೊಂದಿಗೆ ಪೊಲೀಸ್‌ ಠಾಣೆಗೆ ಬಂದಿದ್ದವು. ಅಜಯ್‌ನಲ್ಲಿ ಕಸ್ಟಡಿಗೆ ತೆಗೆದುಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಪಾಪ ಪ್ರಜ್ವಲ್, ಎಲ್ರೂ ನೋಡ್ಲಿ ಅಂತ ಅಶ್ಲೀಲ ವಿಡಿಯೋ ಹಂಚಿಕೊಂಡ; ಪೊಲೀಸರು ಬಂದ್ರು, ಎತ್ತಾಕೊಂಡ್ ಹೋದ್ರು!

click me!