ಸ್ವೀಟಿ, ಬೇಬಿ ಎಂದು ಬಾಸ್‌ ಕರೆದಿದ್ದಕ್ಕೆ ಕೇಸ್‌ ಹಾಕಿದ ಮಹಿಳೆ, ಕೋರ್ಟ್‌ ಹೇಳಿದ್ದೇನು?

Published : May 10, 2024, 11:29 PM IST
ಸ್ವೀಟಿ, ಬೇಬಿ ಎಂದು ಬಾಸ್‌ ಕರೆದಿದ್ದಕ್ಕೆ ಕೇಸ್‌ ಹಾಕಿದ ಮಹಿಳೆ, ಕೋರ್ಟ್‌ ಹೇಳಿದ್ದೇನು?

ಸಾರಾಂಶ

ಕಚೇರಿಯಲ್ಲಿ ನನ್ನ ಬಾಸ್‌ ಯಾವಾಗಲೂ ನನ್ನನ್ನು ಸ್ವೀಟಿ, ಬೇಬಿ ಎಂದು ಕರೆಯುತ್ತಾರೆ ಎಂದು ಕೇಸ್‌ ಹಾಕಿದ ಮಹಿಳೆಗೆ ಕೋಲ್ಕತ್ತಾ ಹೈಕೋರ್ಟ್‌ ವಿಚಾರಣೆಯ ವೇಳೆ ಹೇಳಿದ್ದೇನು?  

ನವದೆಹಲಿ (ಮೇ.10): ಕಮಾಂಡಿಂಗ್ ಆಫೀಸರ್ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ದೂರನ್ನು ವಜಾ ಮಾಡಿದ್ದ ಆಂತರಿಕ ದೂರು ಸಮಿತಿಯ (ಐಸಿಸಿ) ನಿರ್ಧಾರವನ್ನು ಪ್ರಶ್ನಿಸಿ ಕೋಸ್ಟ್ ಗಾರ್ಡ್‌ನ ಮುಂಬೈನ ನಿವೃತ್ತ ಉಪ ಕಮಾಂಡೆಂಟ್ ಸಲ್ಲಿಸಿದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿತು. ಅರ್ಜಿದಾರರ ಕಮಾಂಡಿಂಗ್ ಆಫೀಸರ್ ಬಳಸಿದ "ಬೇಬಿ" ಮತ್ತು "ಸ್ವೀಟಿ" ಪದಗಳು ಲೈಂಗಿಕ ಉದ್ದೇಶವನ್ನು ಹೊಂದಿಲ್ಲ ಎಂಬ ಐಸಿಸಿಯ ತೀರ್ಮಾನವನ್ನು ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರ ಪೀಠವು ಎತ್ತಿಹಿಡಿದಿದೆ. ಇಂದು ಸಾಮಾಜಿಕ ವಲಯದಲ್ಲ ಸ್ವೀಟಿ, ಬೇಬಿ ಎನ್ನುವ ಪದಗಳು ಹೆಚ್ಚು ಪ್ರಚಲಿತದಲ್ಲಿವೆ. ಸ್ವೀಟಿ, ಬೇಬಿ ಎಂದು ಕರೆದಿದ್ದಾರೆ ಎನ್ನುವ ಮಾತ್ರಕ್ಕೆ ಅವರಲ್ಲಿ ಕಾಮನೆಯ ದೃಷ್ಟಿಕೋನವೇ ಇದೆ. ಇದು ಲೈಂಗಿಕ ಕಿರುಕುಳ ಎಂದು ವರ್ಗೀಕರಣ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ತಿಳಿಸಿದೆ. ಸಂಹವನಕ್ಕಾಗಿ ಮಹಿಳಾ ಅಧಿಕಾರಿಯನ್ನು ಬೇಬಿ, ಸ್ವೀಟಿ ಎಂದು ಕರೆಯುವುದು ಸರಿಯಲ್ಲ ಎಂದು ಐಸಿಸಿ ಹೇಳಿದ ಬಳಿಕ, ಕಮಾಂಡಿಂಗ್‌ ಆಫೀಸರ್‌ ಕೂಡ ಇದನ್ನು ಹೇಳುವುದನ್ನು ನಿಲ್ಲಿದ್ದಾರೆ. ಅದನ್ನೂ ಕೂಡ ನಾವು ಪರಿಗಣಿಸಬೇಕಾಗುತ್ತದೆ ಎಂದು ಕೋರ್ಟ್‌ ಹೇಳಿದೆ.

"ಇಂತಹ ಅಭಿವ್ಯಕ್ತಿಗಳು ಕೆಲವು ಸಾಮಾಜಿಕ ವಲಯಗಳಲ್ಲಿ ಪ್ರಚಲಿತದಲ್ಲಿರಬಹುದು ಮತ್ತು ಯಾವಾಗಲೂ ಲೈಂಗಿಕವಾಗಿ ಬಣ್ಣಿಸಬೇಕಾಗಿಲ್ಲ" ಎಂದು ನ್ಯಾಯಾಲಯ ಹೇಳಿದೆ. ಹೈಕೋರ್ಟ್‌ನ ಮುಂದೆ, ಅರ್ಜಿದಾರರ ವಕೀಲರು ಆರೋಪಿ ಕಮಾಂಡಿಂಗ್ ಆಫೀಸರ್‌ನಿಂದ ಹಲವಾರು ರೀತಿಯ ಕಿರುಕುಳವನ್ನು ತಳಿಸಿದ್ದಾರೆ.  ಅನುಚಿತ ನೋಟ, ಆಕೆಯ ಕೋಣೆಗೆ ನುಗ್ಗುವ ಪ್ರಯತ್ನ ಮತ್ತು ಇಷ್ಟವಿಲ್ಲದ ದೈಹಿಕ ಸಂಪರ್ಕ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಲೈಂಗಿಕ ಅರ್ಥಗಳೊಂದಿಗೆ "ಬೇಬಿ" ಮತ್ತು "ಸ್ವೀಟಿ" ನಂತಹ ಪದಗಳೊಂದಿಗೆ ಅಧಿಕಾರಿಯು ಅನುಚಿತವಾಗಿ ಅವಳನ್ನು ಸಂಬೋಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಅರ್ಜಿದಾರರ ಪರ ವಕೀಲರು, ನನ್ನ ಕಕ್ಷಿದಾರರ ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವದ ದಿನದಂದೇ ಆಕೆಯನ್ನು ರಜೆಯಿಂದ ವಾಪಾಸ್‌ ಕರೆಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಈ ಪ್ರಯತ್ನಗಳು ಉದ್ದೇಶಪೂರ್ವಕ ಕಿರುಕುಳದ ಕೃತ್ಯಗಳು ಎಂದು ಆರೋಪ ಮಾಡಿದ್ದಾರೆ. ಲೈಂಗಿಕ ಕಿರುಕುಳದ ಪ್ರಯತ್ನಕ್ಕೆ ಆಕೆಯ ಪ್ರತಿರೋಧದ ನಂತರ ಕಮಾಂಡಿಂಗ್ ಅಧಿಕಾರಿಯ ಕ್ರಮಗಳು ಉದ್ದೇಶಪೂರ್ವಕವಾಗಿ ಅರ್ಜಿದಾರರ ವೃತ್ತಿಪರ ಪ್ರಗತಿಗೆ ಅಡ್ಡಿಪಡಿಸುವ ಗುರಿಯನ್ನು ಹೊಂದಿದ್ದವು ಎಂದು ಹೇಳಿದ್ದಾರೆ.

ಇದು ರಿಯಲ್‌, ವೈರಲ್‌ ಮಾಡೋ ಧೈರ್ಯ ನಿಮ್ಮಲಿದ್ಯಾ? ಅಶ್ಲೀಲ ವಿಡಿಯೋ ಬೆನ್ನಲ್ಲೇ ಜ್ಯೋತಿ ರೈ ಚಾಲೆಂಜ್‌!

ಕಮಾಂಡಿಂಗ್‌ ಆಫೀಸರ್‌ ಬೇಬಿ ಹಾಗೂ ಸ್ವೀಟಿ ಎನ್ನುವ ಪದವನ್ನು ಇನ್ನೆಂದು ಬಳಸೋದಿಲ್ಲ ಎಂದು ಹೇಳಿದ ಬಳಿಕ, ಆಕೆಯ ಆರೋಪಗಳನ್ನು ಸಂಪೂರ್ಣವಾಗಿ ಐಸಿಸಿ ತೀರ್ಪಿನಲ್ಲಿ ಕಡೆಗಣಿಸಲಾಗಿದೆ ಎಂದು ವಕೀಲರು ವಾದ ಮಾಡಿದ್ದಾರೆ. ಇನ್ನೊಂದೆಡೆ ಕಮಾಂಡಿಂಗ್ ಆಫೀಸರ್ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು,  ಅವು ಅರ್ಜಿದಾರರ ಕಲ್ಪನೆಗಳು ಎಂದಿದ್ದಾರೆ.

ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್‌ ಮಾಡಿದ್ಯಾರು? ಉದ್ದೇಶವೇನು..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?