Published : May 10, 2025, 09:46 AM ISTUpdated : May 10, 2025, 08:25 PM IST

Operation Sindoor Live Updates: ಈ ನಟಿಯ ತಂದೆ ಸೇನಾಧಿಕಾರಿಯಾಗಿದ್ದರು, ಭಯೋತ್ಪಾದಕರು ಅಪಹರಿಸಿ ಕ್ರೂರವಾಗಿ ಕೊಂದರು!

ಸಾರಾಂಶ

ನವದೆಹಲಿ (ಮ.10): ಇಸ್ಲಾಮಾಬಾದ್‌ನಿಂದ 10 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿರುವ ಪ್ರಮುಖ ತಾಣವಾದ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ ಸೇರಿದಂತೆ ಮೂರು ಏರ್‌ಬೇಸ್‌ಗಳಲ್ಲಿ ಭಾರೀ ಸ್ಪೋಟ ಸಂಭವಿಸಿವೆ ಎಂದು ಪಾಕಿಸ್ತಾನಿ ಸೇನೆ ಹೇಳಿಕೊಂಡಿದೆ. ಇನ್ನೊಂದೆಡೆ, ಪಾಕಿಸ್ತಾನ ಭಾರತದ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಶೆಲ್‌ ಹಾಗೂ ಡ್ರೋನ್‌ ದಾಳಿ ನಡೆಸಿದೆ. ಭಾರತದಲ್ಲಿ ಒಟ್ಟು 5 ಮಂದಿ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ.

Operation Sindoor Live Updates: ಈ ನಟಿಯ ತಂದೆ ಸೇನಾಧಿಕಾರಿಯಾಗಿದ್ದರು, ಭಯೋತ್ಪಾದಕರು ಅಪಹರಿಸಿ ಕ್ರೂರವಾಗಿ ಕೊಂದರು!

12:00 AM (IST) May 11

ಈ ನಟಿಯ ತಂದೆ ಸೇನಾಧಿಕಾರಿಯಾಗಿದ್ದರು, ಭಯೋತ್ಪಾದಕರು ಅಪಹರಿಸಿ ಕ್ರೂರವಾಗಿ ಕೊಂದರು!

ನಟಿ ನಿಮ್ರತ್ ಕೌರ್ ಅವರ ತಂದೆ ಮೇಜರ್ ಭೂಪೇಂದ್ರ ಸಿಂಗ್, 1994 ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹತ್ಯೆಯಾದರು. ಈ ದುರಂತ ಘಟನೆಯ ಬಗ್ಗೆ ನಿಮ್ರತ್ ಕೌರ್ ಅವರ ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಂದೆಯ ಸಾವಿನ ನಂತರವೂ ಧೈರ್ಯದಿಂದ ಜೀವನ ನಡೆಸುತ್ತಿರುವ ನಿಮ್ರತ್, ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಪೂರ್ತಿ ಓದಿ

11:13 PM (IST) May 10

Fact Check: ನಕಲಿ ಮಿಲಿಟರಿ ಖಾತೆಗಳ ಬಗ್ಗೆ ಎಚ್ಚರ, ವ್ಯೋಮಿಕಾ ಸಿಂಗ್, ಸೋಫಿಯಾ ಖುರೇಷಿ ಎಕ್ಸ್‌ ಖಾತೆ ಹೊಂದಿದ್ದಾರೆಯೇ?

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಹೆಸರಿನಲ್ಲಿ ನಕಲಿ 'ಎಕ್ಸ್' ಖಾತೆಗಳು ಪತ್ತೆಯಾಗಿವೆ. ಸಾರ್ವಜನಿಕರು ಈ ಖಾತೆಗಳಿಂದ ಬರುವ ಪೋಸ್ಟ್‌ಗಳೊಂದಿಗೆ ತೊಡಗಿಸಿಕೊಳ್ಳದಂತೆ ಸರ್ಕಾರ ಎಚ್ಚರಿಕೆ ನೀಡಿದೆ.

ಪೂರ್ತಿ ಓದಿ

11:10 PM (IST) May 10

ಪಾಕಿಸ್ತಾನದಿಂದಲೇ ಕದನ ವಿರಾಮ ಉಲ್ಲಂಘನೆ, ಸೇನೆಗೆ ಸಂಪೂರ್ಣ ಫ್ರೀ ಹ್ಯಾಂಡ್: ವಿಕ್ರಂ ಮಿಸ್ರಿ

ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದಿಂದ ಡ್ರೋನ್ ದಾಳಿ ಹಿನ್ನೆಲೆ ಗಡಿ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸೇನೆಗೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ನೀಡಿದೆ.

ಪೂರ್ತಿ ಓದಿ

10:51 PM (IST) May 10

Bigg Boss ಹನುಮಂತನ ಅಣ್ಣನ ಬಳಿ ಇರೋ ಇಂಡಿಯನ್‌ ಕ್ರಿಕೆಟ್‌ ಟೀಂ ಆಟೋಗ್ರಾಫ್‌ ಇರೋ ಬ್ಯಾಟ್!‌ 70 ಕೋಟಿ ಕೊಟ್ರೂ ಕೊಡಲ್ವಂತೆ!

ಬಿಗ್ ಬಾಸ್ ಖ್ಯಾತಿಯ ಹನುಮಂತ ಅವರ ಅಣ್ಣ ಮಾರುತಿ ಕೂಡ ರಿಯಾಲಿಟಿ ಶೋ ಸ್ಪರ್ಧಿ ಎಂಬುದು ಬಹಿರಂಗವಾಗಿದೆ. 2015ರ 'ಹಳ್ಳಿ ಹೈದ ಪ್ಯಾಟೇಗ್ ಬಂದ' ಶೋನಲ್ಲಿ ಮಾರುತಿ ಭಾಗವಹಿಸಿದ್ದರು ಮತ್ತು ಡಾ. ರಾಯ್ ಅವರಿಂದ ವಿಶೇಷ ಕ್ರಿಕೆಟ್ ಬ್ಯಾಟ್ ಉಡುಗೊರೆಯಾಗಿ ಪಡೆದಿದ್ದಾರೆ.

ಪೂರ್ತಿ ಓದಿ

10:32 PM (IST) May 10

'ಇಷ್ಟೆಲ್ಲ ಆದ್ಮೇಲೂ ಭಾರತ...' ಕದನ ವಿರಾಮದ ಬಗ್ಗೆ ಅಜ್ಮೀರ್ ದರ್ಗಾದ ದಿವಾನ ಸೈಯದ್ ನಾಸಿರುದ್ದೀನ್ ಚಿಶ್ತಿ ಸ್ಫೋಟಕ ಹೇಳಿಕೆ!

ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆಯ ಕುರಿತು ಅಜ್ಮೀರ್ ಷರೀಫ್ ದರ್ಗಾದ ದಿವಾನ್ ಸೈಯದ್ ನಾಸಿರುದ್ದೀನ್ ಚಿಶ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಶಾಂತಿಪ್ರಿಯ ರಾಷ್ಟ್ರ, ಆದರೆ ದೇಶದ ಹೆಮ್ಮೆ ಮತ್ತು ಭದ್ರತೆಯ ವಿಷಯಕ್ಕೆ ಬಂದಾಗ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಪಾಕಿಸ್ತಾನದ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

10:01 PM (IST) May 10

'ಕದನ ವಿರಾಮ ಜಾರಿಯಲ್ಲಿರಲಿ ಅಥವಾ ಇಲ್ಲದಿರಲಿ ಏನೂ ವ್ಯತ್ಯಾಸವಾಗದು, ಪ್ರಧಾನಿ ಮೋದಿಗೆ ಓವೈಸಿ ಪ್ರಶ್ನೆಗಳ ಸುರಿಮಳೆ!

ಪಾಕಿಸ್ತಾನ ಭಯೋತ್ಪಾದನೆಗೆ ತನ್ನ ನೆಲವನ್ನು ಬಳಸುವುದನ್ನು ನಿಲ್ಲಿಸುವವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಶ್ವತ ಶಾಂತಿ ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಕದನ ವಿರಾಮ ಘೋಷಣೆಯ ಬಗ್ಗೆಯೂ ಅವರು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೂರ್ತಿ ಓದಿ

09:56 PM (IST) May 10

ಪಾಕ್‌ನಿಂದ ಸಾಲು ಸಾಲು ಡ್ರೋನ್‌ಗಳು; ಜಮ್ಮು, ಶ್ರೀನಗರ, ಪಠಾಣ್‌ಕೋಟ್, ಜೈಸ್ಲ್ಮೇರ್ ಮತ್ತೆ ಬ್ಲ್ಯಾಕ್‌ಔಟ್‌

ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ನಡೆಸಿದೆ. ಶ್ರೀನಗರದಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಹಲವು ಜಿಲ್ಲೆಗಳಲ್ಲಿ ಗುಂಡಿನ ಚಕಮಕಿ ಮತ್ತು ವೈಮಾನಿಕ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ.

ಪೂರ್ತಿ ಓದಿ

09:41 PM (IST) May 10

ಪುಣ್ಯಕೋಟಿ ಯೋಜನೆಗೆ ಅನುದಾನ ನೀಡುವಂತೆ ಕೇಂದ್ರದ ಮೊರೆ ಹೋದ ಗೋಶಾಲೆಗಳು

ರಾಜ್ಯ ಸರ್ಕಾರದ ಪುಣ್ಯಕೋಟಿ ಯೋಜನೆಗೆ ಅನುದಾನ ಬಾರದೆ ಗೋಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ದಾನಿಗಳ ನೆರವಿನಿಂದ ನಡೆಯುತ್ತಿರುವ ಗೋಶಾಲೆಗಳಿಗೆ ಸರ್ಕಾರದಿಂದ ಸಹಾಯ ಸಿಗದ ಕಾರಣ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ಸಿಎಸ್‌ಆರ್ ಫಂಡ್‌ನಿಂದ ಗೋಶಾಲೆಗಳಿಗೆ 2000 ಕೋಟಿ ರೂ. ಮೀಸಲಿಡುವಂತೆ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ.

ಪೂರ್ತಿ ಓದಿ

09:29 PM (IST) May 10

ಕದನ ವಿರಾಮ ಉಲ್ಲಂಘಿಸಿದ ಪಾಕ್; ಶ್ರೀನಗರದಲ್ಲಿ ಭಾರೀ ಸ್ಪೋಟಕ ಸದ್ದು, ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್!

ಜಾಗತಿಕ ಒತ್ತಡದ ನಡುವೆ ಪಾಕಿಸ್ತಾನ ಕದನ ವಿರಾಮ ಒಪ್ಪಿಕೊಂಡ ಕೆಲವೇ ಗಂಟೆಗಳಲ್ಲಿ ಡ್ರೋನ್ ದಾಳಿ ನಡೆಸಿದೆ. ಭಾರತ ಸೇನಾ ಕಾರ್ಯಾಚರಣೆಗಳ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ದಾಳಿಗಳು ನಡೆದಿವೆ. ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಡ್ರೋನ್ ದಾಳಿಗಳು ವರದಿಯಾಗಿವೆ.

ಪೂರ್ತಿ ಓದಿ

08:47 PM (IST) May 10

ಪತ್ರಿಕೆ ನೋಡಿಯೇ ನನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ತಿಳಿಯಿತು: ನಟ ಹರೀಶ್ ಕನಾರನ್!

ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ವಿಶೇಷವಾಗಿ ಒಬ್ಬ ವ್ಯಕ್ತಿಯ ಆರೋಗ್ಯದಂತಹ ಸೂಕ್ಷ್ಮ ವಿಷಯಗಳಲ್ಲಿ ಬೇಜವಾಬ್ದಾರಿತನದಿಂದ ವರ್ತಿಸುವುದು ಸರಿಯಲ್ಲ. ಇಂತಹ ವದಂತಿಗಳು ಸಂಬಂಧಪಟ್ಟ ವ್ಯಕ್ತಿಗೆ ಮಾತ್ರವಲ್ಲದೆ, ಅವರ ಇಡೀ ಕುಟುಂಬಕ್ಕೆ..

ಪೂರ್ತಿ ಓದಿ

08:46 PM (IST) May 10

'ಪ್ರಧಾನಿಗಳೇ ಅಮೆರಿಕವನ್ನು ತಂದೆಯಾಗಲು ಬಿಡಬೇಡಿ' ಕದನ ವಿರಾಮ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಯಾರು? ಪಪ್ಪು ಯಾದವ್ ಕಿಡಿ!

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಅಮೆರಿಕದ ಮಧ್ಯಸ್ಥಿಕೆ ವಹಿಸಿದೆ. ಆದರೆ ಟ್ರಂಪ್ ಘೋಷಣೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ಪಪ್ಪು ಯಾದವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದವು ಭಾರತದ ಷರತ್ತುಗಳಿಗೆ ಒಳಪಟ್ಟಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪೂರ್ತಿ ಓದಿ

08:42 PM (IST) May 10

ಭಾರತ-ಪಾಕ್ ಕದನ ವಿರಾಮ; ವಿಶ್ವದ ಪ್ರತಿಷ್ಠಿತ ಮಾಧ್ಯಮಗಳ ಹೆಡ್‌ಲೈನ್ ಏನು ಗೊತ್ತಾ?

ಆಪರೇಷನ್ ಸಿಂದೂರದ ನಂತರ ಪಾಕಿಸ್ತಾನ ಭಾರತದ ಮುಂದೆ ತನ್ನ ಸೋಲನ್ನು ಒಪ್ಪಿಕೊಂಡಿದೆ. ಎರಡೂ ದೇಶಗಳ ನಡುವೆ ಯುದ್ಧವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹಾಗಾದರೆ, ವಿಶ್ವದ ಪ್ರಮುಖ ಸುದ್ದಿ ಸಂಸ್ಥೆಗಳು ಏನು ವರದಿ ಮಾಡಿವೆ ಎಂಬುದನ್ನು ನೋಡೋಣ.

 

ಪೂರ್ತಿ ಓದಿ

08:40 PM (IST) May 10

ಅಯೋಧ್ಯೆಯಲ್ಲಿ ರವಿ ದಾಸರ ಮಂದಿರ ಉದ್ಘಾಟಿಸಿದ ಸಿಎಂ ಯೋಗಿ ಆದಿತ್ಯನಾಥ್

ಸಿಎಂ ಯೋಗಿ ಅಯೋಧ್ಯೆಯಲ್ಲಿ ಸಂತ ರವಿ ದಾಸರ ಮಂದಿರದ ಸುಂದರೀಕರಣ ಮತ್ತು ಹೊಸ ಸತ್ಸಂಗ ಭವನ ಉದ್ಘಾಟಿಸಿದರು. ಪಿಎಂ ಮೋದಿಯವರ ವಿಕಸಿತ ಭಾರತದ ಕನಸು ಸಂತ ರವಿ ದಾಸರಿಂದ ಪ್ರೇರಣೆ ಪಡೆದಿದೆ ಎಂದರು.

ಪೂರ್ತಿ ಓದಿ

08:23 PM (IST) May 10

ಐಪಿಎಲ್ 2025 ಪುನರಾರಂಭಕ್ಕೆ ಬಿಸಿಸಿಐ ಸಿದ್ಧತೆ, 3 ನಗರಗಳು ಶಾರ್ಟ್ ಲಿಸ್ಟ್

ಭಾರತ-ಪಾಕಿಸ್ತಾನ ಕದನ ವಿರಾಮದ ಹಿನ್ನೆಲೆಯಲ್ಲಿ ಐಪಿಎಲ್ 2025 ಅನ್ನು ಪುನರಾರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಪಂದ್ಯಾವಳಿ ನಡೆಸುವ ಸಾಧ್ಯತೆಗಳಿವೆ.

ಪೂರ್ತಿ ಓದಿ

08:03 PM (IST) May 10

ಕದನ ವಿರಾಮದಿಂದ ಉಗ್ರರ ದಾಳಿ ನಿಲ್ಲುತ್ತಾ? ಅಮೆರಿಕ ಮೂಗು ತೂರಿಸಿದ್ದೇಕೆ? ಭಾರತೀಯರ ಅಸಮಾಧಾನ?

ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದೆ. ಈ ಕ್ರಮವು ಭಯೋತ್ಪಾದನೆಯನ್ನು ನಿಲ್ಲಿಸುತ್ತದೆಯೇ ಅಥವಾ ಪಾಕಿಸ್ತಾನಕ್ಕೆ ಲಾಭವಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಭಾರತೀಯರಲ್ಲಿ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೂರ್ತಿ ಓದಿ

08:02 PM (IST) May 10

ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಂ ಮುನೀರ್ ಯಾರು? ಈ ಸ್ಥಾನಕ್ಕೆ ಬಂದಿದ್ದು ಹೇಗೆ?

ಪಾಕಿಸ್ತಾನದಲ್ಲಿ ಸೇನಾ ಮುಖ್ಯಸ್ಥರೇ ನಿಜವಾದ ಅಧಿಕಾರ ಕೇಂದ್ರ. ಜನರಲ್ ಅಸಿಮ್ ಮುನೀರ್, ಸೇನೆಯ ಮೇಲೆ ಬಿಗಿ ಹಿಡಿತ ಹೊಂದಿದ್ದು, ನ್ಯಾಯಾಂಗ ಮತ್ತು ರಾಜಕೀಯದ ಮೇಲೂ ಪ್ರಭಾವ ಬೀರುತ್ತಿದ್ದಾರೆ. 100ಕ್ಕೂ ಹೆಚ್ಚು ಕಂಪನಿಗಳನ್ನು ನಡೆಸುವ ಮೂಲಕ ಸೇನೆ ಆರ್ಥಿಕವಾಗಿಯೂ ಪ್ರಬಲವಾಗಿದೆ.

ಪೂರ್ತಿ ಓದಿ

07:43 PM (IST) May 10

ಈಗ್ಯಾಕೆ ಈ ಮ್ಯಾಟರ್?.. ವಿಜಯ್ ದೇವರಕೊಂಡ ಪರ ಬ್ಯಾಟ್ ಬೀಸಿದ ನಿರ್ಮಾಪಕ ನಾಗ ವಂಶಿ!

"ವಿಜಯ್ ತುಂಬಾ ಸರಳ ವ್ಯಕ್ತಿ ಮತ್ತು ತಮ್ಮ ಕೆಲಸದ ಬಗ್ಗೆ ಅತ್ಯಂತ ಬದ್ಧತೆ ಉಳ್ಳವರು. ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ಧರಿರುತ್ತಾರೆ. ಅಗತ್ಯಬಿದ್ದರೆ, ಚಿತ್ರದ ಗುಣಮಟ್ಟಕ್ಕಾಗಿ ಮರು-ಚಿತ್ರೀಕರಣಕ್ಕೂ ಅವರು ಸಂತೋಷದಿಂದ ಸಹಕರಿಸುತ್ತಾರೆ. ಅವರೊಂದಿಗೆ ಕೆಲಸ ಮಾಡುವುದು..

ಪೂರ್ತಿ ಓದಿ

07:12 PM (IST) May 10

ಸಿಂದೂರ ಕದನದಲ್ಲಿ ಹುತಾತ್ಮನಾದ ಅಗ್ನೀವೀರ ಮುರಳಿ ನಾಯ್ಕ್ ಮರಳಿ ಮನೆಗೆ!

ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನದ ವಿರುದ್ಧದ ಕಾಳಗದಲ್ಲಿ ಹುತಾತ್ಮರಾದ ಆಂಧ್ರಪ್ರದೇಶದ ಮುರಳಿ ನಾಯ್ಕ್. ರೈಲ್ವೆ ಕೆಲಸ ಬಿಟ್ಟು ಸೇನೆ ಸೇರಿದ್ದ ಮುರಳಿಗೆ ಸ್ವಗ್ರಾಮದಲ್ಲಿ ಅಂತಿಮ ನಮನ.

ಪೂರ್ತಿ ಓದಿ

07:06 PM (IST) May 10

ಕದನ ವಿರಾಮ ಘೋಷಣೆ ಬೆನ್ನಲ್ಲೇ ರಕ್ಷಣಾ ಪಡೆಗಳಿಂದ ಮಾಹಿತಿ; ಪಾಕ್ ಸುಳ್ಳಿನ ಮುಖವಾಡ ಬಿಚ್ಚಿಟ್ಟ ಅಧಿಕಾರಿಗಳು

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಈ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಿಂದ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಪೂರ್ತಿ ಓದಿ

06:47 PM (IST) May 10

ಪಾಕ್ ಜೊತೆ ಕದನ ವಿರಾಮವಷ್ಟೇ ಆದರೆ.... ಜೈ ಶಂಕರ್‌ ಖಡಕ್ ಟ್ವೀಟ್‌

ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ. ಉಗ್ರವಾದದ ವಿರುದ್ಧ ಭಾರತದ ಹೋರಾಟ ಮುಂದುವರಿಯಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಮೇ 12 ರಂದು ಉಭಯ ದೇಶಗಳ ಡಿಜಿಎಂಒಗಳ ನಡುವೆ ಮಾತುಕತೆ ನಡೆಯಲಿದೆ.

ಪೂರ್ತಿ ಓದಿ

06:45 PM (IST) May 10

ಪಾದಗಳಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಚ್ಚರ; ಅದು ಹೃದಯಾಘಾತದ ಸೂಚನೆಯಾಗಿರಬಹುದು!

ಪಾದಗಳಲ್ಲಿನ ಊತ, ಬಣ್ಣ ಮಾಸುವಿಕೆ, ಶೀತ, ನೋವು, ಉಗುರುಗಳ ಬದಲಾವಣೆಗಳು ಹಾಗೂ ಜುಮ್ಮೆನಿಸುವಿಕೆ ಹೃದಯಾಘಾತದ ಆರಂಭಿಕ ಲಕ್ಷಣಗಳಾಗಿರಬಹುದು. ಈ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.

ಪೂರ್ತಿ ಓದಿ

06:17 PM (IST) May 10

ಸ್ಟಾರ್‌ ನಟ-ನಟಿಯರ 'ಪಟಾಲಂ' ಬಗ್ಗೆ ಎಚ್ಚರಿಕೆ ಕೊಟ್ಟ ಇಶಾನ್ ಖಟ್ಟರ್; ಶುರುವಾಯ್ತು ವಿವಾದ!

ಕೆಲವೊಮ್ಮೆ ಈ ಪರಿವಾರವು ಅನಗತ್ಯವಾಗಿ ತೀರಾ ದೊಡ್ಡದಾಗಿರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲ ನಟರು ತಮ್ಮೊಂದಿಗೆ ಹತ್ತಾರು ಜನರನ್ನು ಕರೆತರುತ್ತಾರೆ, ಅದರಲ್ಲಿ ಕೆಲವರ ಪಾತ್ರವೇನು ಎಂಬುದು ಸ್ಪಷ್ಟವಾಗಿರುವುದಿಲ್ಲ. ಇದು ವಿಶೇಷವಾಗಿ ಸಣ್ಣ ಕಾರ್ಯಕ್ರಮಗಳಿಗೆ ಅಥವಾ ನಿರ್ಮಾಪಕರ ಮೇಲೆ ಅನಗತ್ಯವಾಗಿ...

ಪೂರ್ತಿ ಓದಿ

06:17 PM (IST) May 10

ನಿಮ್ಮ ಸಾಕು ನಾಯಿಗೆ ಗೂಡು ಸಿದ್ಧಪಡಿಸುವಾಗ ಈ ವಿಷಯ ನೆನಪಿನಲ್ಲಿಟ್ಕೊಳ್ಳಿ!

ಪ್ರತಿಯೊಂದು ನಾಯಿಗೂ ಬೇರೆ ಬೇರೆ ರೀತಿಯ ಆರೈಕೆ ಬೇಕು. ಗೂಡು ಕಟ್ಟುವಾಗಲೂ ಜಾಗ್ರತೆ ಇರಲಿ. ಮನೆಯಲ್ಲಿ ನಾಯಿ ಸಾಕಿದ್ದರೆ ಗೂಡು ಕಟ್ಟುವಾಗ ಈ ವಿಷಯ ಗೊತ್ತಿರಲಿ.

ಪೂರ್ತಿ ಓದಿ

06:14 PM (IST) May 10

ಭಾರತದ ದಾಳಿಗೆ ಬೆದರಿ ಕದನ ವಿರಾಮಕ್ಕೆ ಅಂಗಲಾಚಿದ ಪಾಕ್!

ಭಾರತ ಮತ್ತು ಪಾಕಿಸ್ತಾನ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನದ ಡಿಜಿಎಂಒ ಫೋನ್ ಕರೆ ಮಾಡುವ ಮೂಲಕ ಉಪಕ್ರಮವನ್ನು ತೆಗೆದುಕೊಂಡ ನಂತರ ಚರ್ಚೆಗಳು ನಡೆದು ಒಮ್ಮತಕ್ಕೆ ಬರಲಾಯಿತು.

ಪೂರ್ತಿ ಓದಿ

06:10 PM (IST) May 10

ಭಾರತದ 'ಡ್ರೋನ್ ಬೇಟೆಗಾರ': ಪಾಕ್‌ಗೆ ಸವಾಲು

ಭಾರತೀಯ ರಕ್ಷಣಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ 'ಡ್ರೋನ್, ಪತ್ತೆ, ತಡೆ ಮತ್ತು ನಾಶಮಾಡುವ' (D4) ವ್ಯವಸ್ಥೆಯು ಪಾಕಿಸ್ತಾನದ ಡ್ರೋನ್ ದಾಳಿಗಳನ್ನು ವಿಫಲಗೊಳಿಸುತ್ತಿದೆ. ಈ ವ್ಯವಸ್ಥೆಯು ರಾಡಾರ್, RF ಪತ್ತೆ, ಎಲೆಕ್ಟ್ರೋ-ಆಪ್ಟಿಕ್ ಗುರುತಿಸುವಿಕೆ ಮತ್ತು ಸಾಫ್ಟ್/ಹಾರ್ಡ್ ಕಿಲ್ ಕಾರ್ಯವಿಧಾನಗಳನ್ನು ಬಳಸಿಕೊಂಡು ಡ್ರೋನ್‌ಗಳನ್ನು ಪತ್ತೆಹಚ್ಚುತ್ತದೆ, ತಡೆಯುತ್ತದೆ ಮತ್ತು ನಾಶಪಡಿಸುತ್ತದೆ.

ಪೂರ್ತಿ ಓದಿ

06:03 PM (IST) May 10

ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಿರೋದನ್ನು ಖಚಿತಪಡಿಸಿದ ಭಾರತ

ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹೇಳಿದ್ದಾರೆ. ಮೇ 12ರಂದು ಮಾತುಕತೆಗೆ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಪೂರ್ತಿ ಓದಿ

05:40 PM (IST) May 10

BREAKING: ಕದನ ವಿರಾಮಕ್ಕೆ ಒಪ್ಪಿದ ಭಾರತ-ಪಾಕಿಸ್ತಾನ: ಅಮೆರಿಕ ಅಧ್ಯಕ್ಷ ಟ್ರಂಪ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಎಎನ್ಐ ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿ ವರದಿ ಮಾಡಿದೆ.

ಪೂರ್ತಿ ಓದಿ

05:36 PM (IST) May 10

ವಾಯುಸೇನೆ ಹೊಡೆದುರುಳಿಸಿದ ಪಾಕಿಸ್ತಾನದ ಕ್ಷಿಪಣಿಯ ಅವಶೇಷ ಪತ್ತೆ: ವಿಡಿಯೋ

ಹರಿಯಾಣದ ಸಿರ್ಸಾ ಪ್ರದೇಶದಲ್ಲಿ ಪಾಕಿಸ್ತಾನದ ಕ್ಷಿಪಣಿಯನ್ನು ಭಾರತೀಯ ವಾಯುಪಡೆ ನಾಶಪಡಿಸಿದೆ. ಕ್ಷಿಪಣಿಯ ಅವಶೇಷಗಳು ರಾನಿಯನ್ ಮತ್ತು ಖಾಜಖೇಡ ಗ್ರಾಮಗಳಲ್ಲಿ ಪತ್ತೆಯಾಗಿವೆ.

ಪೂರ್ತಿ ಓದಿ

05:30 PM (IST) May 10

ನಾನು ವಾಪಸ್​ ಬರ್ತೇನೋ ಗೊತ್ತಿಲ್ಲ, ಆದರೆ... ಯೋಧನ ಮಾತಿಗೆ ಜನರ ಕಂಬನಿ

ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ಹಿನ್ನೆಲೆಯಲ್ಲಿ, ರಜೆ ರದ್ದಾಗಿದ್ದರಿಂದ ಭಾರತದ ಯೋಧನೊಬ್ಬ  ವಾಪಸ್​ ಕರ್ತವ್ಯಕ್ಕೆ ಹಾಜರಾಗುವ ವೇಳೆ ಆಡಿದ ಮಾತುಗಳು ಎಲ್ಲರ ಕಂಬನಿಗಳನ್ನು ತೇವಗೊಳಿಸುತ್ತಿದೆ

ಪೂರ್ತಿ ಓದಿ

05:24 PM (IST) May 10

ನವಜಾತ ಶಿಶುವಿಗೆ ಸಿಂದೂರಿ ಎಂದು ನಾಮಕರಣ ಮಾಡಿದ ಕಾನ್ಪುರ ದಂಪತಿ

ಕಾನ್ಪುರದ ದಂಪತಿಗಳು ತಮ್ಮ ನವಜಾತ ಶಿಶುವಿಗೆ 'ಸಿಂದೂರಿ' ಎಂದು ಹೆಸರಿಟ್ಟಿದ್ದಾರೆ, ಆಪರೇಷನ್ ಸಿಂದೂರ್ ನಿಂದ ಸ್ಫೂರ್ತಿ ಪಡೆದು. ಈ ಹೆಸರು ಈಗ ದೇಶಭಕ್ತಿ ಮತ್ತು ಸೇನೆಯ ಗೌರವದ ಸಂಕೇತವಾಗಿದೆ.

ಪೂರ್ತಿ ಓದಿ

05:05 PM (IST) May 10

ನವಜಾತ ಶಿಶುವಿಗೆ ಸಿಂದೂರಿ ಎಂದು ನಾಮಕರಣ ಮಾಡಿದ ಕಾನ್ಪುರ ದಂಪತಿ

ಕಾನ್ಪುರದ ದಂಪತಿಗಳು ತಮ್ಮ ನವಜಾತ ಶಿಶುವಿಗೆ 'ಸಿಂದೂರಿ' ಎಂದು ಹೆಸರಿಟ್ಟಿದ್ದಾರೆ, ಆಪರೇಷನ್ ಸಿಂದೂರ್ ನಿಂದ ಸ್ಫೂರ್ತಿ ಪಡೆದು. ಈ ಹೆಸರು ಈಗ ದೇಶಭಕ್ತಿ ಮತ್ತು ಸೇನೆಯ ಗೌರವದ ಸಂಕೇತವಾಗಿದೆ.

ಪೂರ್ತಿ ಓದಿ

04:42 PM (IST) May 10

ಯಾವುದೇ ಭಯೋತ್ಪಾದಕ ದಾಳಿ ನಡೆದರೆ, ಅದನ್ನು ಯುದ್ಧವೆಂದು ಪರಿಗಣಿಸಲು ಭಾರತ ಸರ್ಕಾರದಿಂದ ಮಹತ್ವದ ನಿರ್ಧಾರ

ಭಯೋತ್ಪಾದಕ ದಾಳಿಗಳನ್ನು ಯುದ್ಧವೆಂದು ಪರಿಗಣಿಸುವ ಮಹತ್ವದ ನಿರ್ಧಾರವನ್ನು ಭಾರತ ಸರ್ಕಾರ ಕೈಗೊಂಡಿದೆ. ಪಾಕಿಸ್ತಾನದಿಂದ ಉಂಟಾಗುತ್ತಿರುವ ಆತಂಕದ ವಾತಾವರಣವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಗಡಿ ಗ್ರಾಮಗಳಲ್ಲಿ ಆತಂಕದ ವಾತಾವರಣವಿದ್ದರೂ, ಭಾರತೀಯ ಸೇನೆಯ ಮೇಲೆ ನಂಬಿಕೆ ಇದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪೂರ್ತಿ ಓದಿ

04:27 PM (IST) May 10

ಪಾಕಿಸ್ತಾನಕ್ಕೆ IMFನಿಂದ 1 ಬಿಲಿಯನ್ ಡಾಲರ್ ಆರ್ಥಿಕ ನೆರವು; ಓವೈಸಿ ಪ್ರತಿಕ್ರಿಯೆ ಹೀಗಿತ್ತು

ಪಾಕಿಸ್ತಾನಕ್ಕೆ ಐಎಂಎಫ್ 1 ಬಿಲಿಯನ್ ಡಾಲರ್ ಸಾಲ ನೀಡಿರುವುದನ್ನು ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ. ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಕ್ಕೆ ಹಣ ನೀಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಭಾರತದ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಹಣ ನೀಡುವುದು ಅನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ

04:20 PM (IST) May 10

'ಪಾಕ್‌ ನೌಕಾಪಡೆಯಿಂದ ಬೆಂಗಳೂರು ಬಂದರು ಧ್ವಂಸ..' ಫುಲ್‌ ಟ್ರೋಲ್‌ ಆದ ಪಾಕ್‌ ಪ್ರಜೆಯ ಟ್ವೀಟ್‌

ಪಾಕಿಸ್ತಾನಿ ನೆಟ್ಟಿಗರೊಬ್ಬರು ಬೆಂಗಳೂರು ಬಂದರನ್ನು ನಾಶಪಡಿಸಿದ್ದಾಗಿ ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿಗರು ಈ ಸುಳ್ಳು ಸುದ್ದಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಪೂರ್ತಿ ಓದಿ

04:02 PM (IST) May 10

ಭಾರತ-ಪಾಕ್ ಸಂಘರ್ಷ; ಕರ್ನಾಟಕ ಗಡಿ ಭಾಗದ ಯೋಧ ಹುತಾತ್ಮ, ಬೆಂಗಳೂರು ಏರ್ಪೋರ್ಟ್‌ಗೆ ಬಂದ ಮೊದಲ ಶರೀರ

ಜಮ್ಮುವಿನಲ್ಲಿ ಪಾಕ್ ದಾಳಿಯಲ್ಲಿ ಹುತಾತ್ಮನಾಗಿದ್ದ ಆಂಧ್ರಪ್ರದೇಶ ಮೂಲದ ಯೋಧ ಮುರುಳಿ ನಾಯಕ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಂತಿಮ ನಮನ ಸಲ್ಲಿಸಿದ ಬಳಿಕ ಮೃತದೇಹವನ್ನು ಆಂಧ್ರಪ್ರದೇಶದ ಸ್ವಗ್ರಾಮಕ್ಕೆ ರವಾನಿಸಲಾಯಿತು.

ಪೂರ್ತಿ ಓದಿ

03:57 PM (IST) May 10

ದೆಹಲಿ ವಿಮಾನ ನಿಲ್ದಾಣದಲ್ಲಿ 138 ವಿಮಾನ ರದ್ದು, ಪ್ರಯಾಣಿಕರಿಗೆ ಹಲವು ಸೂಚನೆ

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ 138 ವಿಮಾನಗಳು ರದ್ದಾಗಿವೆ. ಪುಣೆ ಮತ್ತು ನಾಸಿಕ್ ವಿಮಾನ ನಿಲ್ದಾಣಗಳಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿವೆ. ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಪೂರ್ತಿ ಓದಿ

03:44 PM (IST) May 10

ಈ ಸಾರಿಯಾದ್ರೂ ಆರ್‌ಸಿಬಿ ಕಪ್ ಗೆಲ್ಲುತ್ತೆ ಅಂದುಕೊಂಡ್ರೆ ಐಪಿಎಲ್ಲೇ ಕ್ಯಾನ್ಸಲ್ ಆಗೋದಾ?

ಭಾರತ-ಪಾಕಿಸ್ತಾನ ಯುದ್ಧ ಭೀತಿಯಿಂದಾಗಿ 2025ರ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆರ್‌ಸಿಬಿ ಅಭಿಮಾನಿಗಳಿಗೆ ಕಪ್ ಗೆಲ್ಲುವ ಕನಸು ಕಮರಿಹೋಗುವ ಸಾಧ್ಯತೆ ಇದೆ. ಕೋವಿಡ್ ಸಂದರ್ಭದಲ್ಲೂ ಐಪಿಎಲ್ ಟೂರ್ನಿ ಸ್ಥಗಿತಗೊಂಡಿತ್ತು.

ಪೂರ್ತಿ ಓದಿ

03:42 PM (IST) May 10

ಭಯೋತ್ಪಾದಕನ ಮಗ ಪಾಕ್ ಸೇನೆಯಲ್ಲಿ! ಜಗತ್ತಿಗೆ ಸುಳ್ಳು ಹೇಳುತ್ತಿರುವ ಚೌಧರಿ

ಭಾರತದ ಭಯೋತ್ಪಾದನಾ ವಿರೋಧಿ ಹೋರಾಟದ ವಿರುದ್ಧ ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನದ ನೇತೃತ್ವವನ್ನು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ವಹಿಸಿದ್ದಾರೆ. ಚೌಧರಿ ಪರಮಾಣು ವಿಜ್ಞಾನಿ ಸುಲ್ತಾನ್ ಬಶೀರುದ್ದೀನ್ ಮಹಮದ್‌ನ ಪುತ್ರ. ಆತ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನ  ಭೇಟಿ ಮಾಡಿ ಭಯೋತ್ಪಾದಕರಿಗೆ ಪರಮಾಣು ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಹಸ್ತಾಂತರಿಸಲು ಪ್ರಯತ್ನಿಸಿದ್ದ. ಆ ಬಳಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್-ಖೈದಾ ನಿರ್ಬಂಧ ಸಮಿತಿಯ ಭಯೋತ್ಪಾದಕರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ.

ಪೂರ್ತಿ ಓದಿ

03:14 PM (IST) May 10

ಆಪರೇಷನ್ ಸಿಂದೂರ್‌ಗಾಗಿ 5 ವರ್ಷದ ಸಂಬಳ ನೀಡಿದ ಪಂಚಾಯ್ತಿ ಸದಸ್ಯೆ

ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆಗೆ ಬೆಂಬಲವಾಗಿ  ಪಂಚಾಯ್ತಿ ಸದಸ್ಯೆ ತಮ್ಮ ಐದು ವರ್ಷಗಳ ವೇತನವನ್ನು ದೇಣಿಗೆ ನೀಡಿದ್ದಾರೆ. ಈ ಮೂಲಕ ಸೇನೆಯ ಶೌರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಪೂರ್ತಿ ಓದಿ

02:50 PM (IST) May 10

ಪಾಕಿಸ್ತಾನ ಪರಮಾಣು ಬಾಂಬ್ ಹಾಕಿದರೆ, ಭಾರತದ ಪ್ರತ್ಯುತ್ತರವೇನು? ಸಾವು-ನೋವು ತಡೆಗೆ ಅಸ್ತ್ರವೇನು?

ಪಾಕಿಸ್ತಾನದ NCA ಸಭೆಯ ನಂತರ ಪರಮಾಣು ಯುದ್ಧದ ಚರ್ಚೆಗಳು ಹೆಚ್ಚಾಗಿವೆ. ಭಾರತದ 'ಮೊದಲ ಬಳಕೆ ಇಲ್ಲ' ಎಂಬ ನೀತಿಯಿದ್ದರೂ, ಪ್ರತಿದಾಳಿ ವಿನಾಶಕಾರಿ ಎಂದಿದೆ. ಹಾಗಾದರೆ, ಪರಮಾಣು ಬಾಂಬ್ ದಾಳಿ ನಡೆದರೆ ಭಾರತದ ಪ್ರತ್ಯುತ್ತರ ಮತ್ತು ನಾಗರಿಕರ ರಕ್ಷಣೆ ಹೇಗೆ ಮಾಡುತ್ತದೆ? ಇಲ್ಲಿದೆ ನೋಡಿ..

ಪೂರ್ತಿ ಓದಿ

More Trending News