ಪೇಪರ್ ಲೀಕ್‌ನಿಂದ ರದ್ದಾಗಿದ್ದ ನೀಟ್ ಪರೀಕ್ಷೆ ಇಂದು ನಡೆಯುತ್ತಿದೆ. 22 ಲಕ್ಷ ನೀಟ್ (NEET) ಮೆಡಿಕಲ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮೇ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ರದ್ದಾಗಿತ್ತು. ಇತ್ತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಮತ್ತೊಂದೆಡೆ ಯಾವುದೇ ಅಡ್ಡಿ ಆತಂಕವಿಲ್ಲದೆ ಪ್ರಶ್ನೆ ಪತ್ರಿಕೆ ನಡೆಸಲು ಎಲ್ಲಾ ತಯಾರಿ ನಡೆಸಲಾಗಿದೆ. ನೀಟ್ ಪರೀಕ್ಷೆ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮೋದಿ ಭಾಷಣ, ಹೊರ್ಮುಜ್ ಜಲಸಂಧಿ ಆತಂಕ ಸೇರಿದಂತೆ ಇಂದಿನ ಕ್ಷಣ ಕ್ಷಣದ ನ್ಯೂಸ್ ಅಪ್‌ಡೇಟ್ ಇಲ್ಲಿದೆ.
10:31 PM (IST) Jun 21
Cocktail 2 ಚಿತ್ರದಲ್ಲಿ ದಿಯಾ ಪಾತ್ರದ ಮೂಲಕ ರಶ್ಮಿಕಾ ಮಂದಣ್ಣ ಪ್ರೇಕ್ಷಕರ ಮನಗೆದ್ದಿದ್ದಾರೆ. ಅವರ ಸಹಜ ನಗು, ಭಾವನಾತ್ಮಕ ಅಭಿನಯ ಮತ್ತು ಲವಲವಿಕೆಯ ಪಾತ್ರ ಚಿತ್ರಕ್ಕೆ ದೊಡ್ಡ ಪ್ಲಸ್ ಆಗಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
07:21 PM (IST) Jun 21
ನಟಿ ಜಾನ್ವಿ ಕಪೂರ್ ಧರಿಸಿದ್ದ ನೈಟ್‌ಸೂಟ್ ಮೇಲಿನ "If Lost, Please Return to Shikhar Pahariya" ಎಂಬ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಇದನ್ನು ಮುದ್ದಾದ ನಡೆ ಎಂದರೆ, ಇನ್ನು ಕೆಲವರು ಟೀಕಿಸಿದ್ದಾರೆ.
06:45 PM (IST) Jun 21
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅವರ ಹೆಸರು ಕೇಳಿದರೆ ಸಾಕು, ಅಭಿಮಾನಿಗಳಲ್ಲಿ ಒಂದು ರೀತಿಯ ಮಿಂಚಿನ ಸಂಚಲನ ಆರಂಭವಾಗುತ್ತದೆ. 'ಬಾಹುಬಲಿ'ಯಿಂದ ಹಿಡಿದು ಇತ್ತೀಚಿನ 'ಕಲ್ಕಿ'ಯವರೆಗೆ ಪ್ರಭಾಸ್ ಅವರ ಕ್ರೇಜ್ ಬೆಟ್ಟದಷ್ಟಿದೆ. ಆದರೆ ಈಗ ಈ ನಟ ಜೈಲು ಪಾಲಾಗಿದ್ದು ಏಕೆ?
06:36 PM (IST) Jun 21
Dhanush Dating History: ನಟ ಧನುಷ್ ಅವರ ವೃತ್ತಿ ಜೀವನದಷ್ಟೇ ವೈಯಕ್ತಿಕ ಜೀವನವೂ ಸದಾ ಸುದ್ದಿಯಲ್ಲಿರುತ್ತದೆ. ಹಲವು ವರ್ಷಗಳಿಂದ ಚಿತ್ರರಂಗದ ಜನಪ್ರಿಯ ನಟಿಯರೊಂದಿಗೆ ಅವರ ಹೆಸರು ತಳುಕು ಹಾಕಿಕೊಂಡಿದೆ.
04:13 PM (IST) Jun 21
Dhanush ಮತ್ತು ಮೃಣಾಲ್ ಠಾಕೂರ್ ಬ್ರೇಕಪ್ ಆಗಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ನಡುವೆ ಧನುಷ್ ಮತ್ತು ಮೃಣಾಲ್..
04:09 PM (IST) Jun 21
03:22 PM (IST) Jun 21
02:46 PM (IST) Jun 21
ವಿಜಯ್ ಅವರ ವ್ಯಾಪ್ತಿ ಕೇವಲ ತಮಿಳುನಾಡಿಗೆ ಸೀಮಿತವಾಗಿರಲಿಲ್ಲ. 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ದೆಹಲಿಯಲ್ಲಿ ನಡೆಸಿದ ಹೋರಾಟಕ್ಕೆ ವಿಜಯ್ ಖುದ್ದಾಗಿ ಹೋಗಿ ಬೆಂಬಲ ನೀಡಿದ್ದರು. ಇಷ್ಟೇ ಅಲ್ಲ, ಇನ್ನೂ ಏನೇನೋ ಇದೆ, ನೋಡಿ..
02:38 PM (IST) Jun 21
01:28 PM (IST) Jun 21
12:39 PM (IST) Jun 21
Agnisakshi Kannada Serial Romantic Song: ವಿಶ್ವ ಸಂಗೀತ ದಿನದ (World Music Day) ವಿಶೇಷ ಸಂದರ್ಭದಲ್ಲಿ, ಕರ್ನಾಟಕದ ಹೆಮ್ಮೆಯ ಮತ್ತು ಅತ್ಯಂತ ಜನಪ್ರಿಯ ಮನರಂಜನಾ ವಾಹಿನಿ ‘ಕಲರ್ಸ್ ಕನ್ನಡ’ ತನ್ನ ಯಶಸ್ವಿ ಹೊಸ ಫಿಕ್ಷನ್ ಶೋ ‘ಅಗ್ನಿಸಾಕ್ಷಿ’ಯ ಆಕರ್ಷಕ ರೋಮ್ಯಾಂಟಿಕ್ ಶೀರ್ಷಿಕೆ ಗೀತೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
12:30 PM (IST) Jun 21
'ಟಾಕ್ಸಿಕ್' ಕೇವಲ ಸಿನಿಮಾ ಅಲ್ಲ, ಇದು ಕನ್ನಡ ಚಿತ್ರರಂಗದ ಮತ್ತೊಂದು ಹೆಮ್ಮೆಯ ಮೈಲಿಗಲ್ಲು. ಯಶ್ ತಮ್ಮದೇ ಆದ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಮತ್ತು 'ಕೆವಿಎನ್ ಪ್ರೊಡಕ್ಷನ್ಸ್' ಮೂಲಕ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಸಿದ್ಧಪಡಿಸುತ್ತಿದ್ದಾರೆ. ಇದೀಗ ರಿಲೀಸ್ ಡೇಟ್ ಘೋಷಣೆ ಆಗಿದೆ.
12:06 PM (IST) Jun 21
Top 100 most visited websites in India: ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೋಟ್ಯಂತರ ಜನರು ಪ್ರತಿದಿನ ಆನ್‌ಲೈನ್‌ನಲ್ಲಿ ಸಮಯ ಕಳೆಯುತ್ತಾರೆ. ಭಾರತೀಯರು ಇಂಟರ್ನೆಟ್‌ನಲ್ಲಿ ಅತಿ ಹೆಚ್ಚು ಏನು ನೋಡುತ್ತಾರೆ, ಏನು ಹುಡುಕುತ್ತಾರೆ?
10:44 AM (IST) Jun 21
Usha Nadkarni: ಖ್ಯಾತ ಧಾರಾವಾಹಿ ನಟಿಯೋರ್ವರು ಒಂಟಿಯಾಗಿ ಬದುಕು ಸಾಗಿಸುತ್ತಿದ್ದಾರೆ. 1987ರಿಂದ ಇಲ್ಲಿಯವರೆಗೆ ಅವರು ಏಕಾಂಗಿಯಾಗಿ ಬದುಕುತ್ತಿದ್ದಾರೆ. ಅವರೇ ಉಷಾ ನಾಡಕರ್ಣಿ. ಇದಕ್ಕೆ ಕಾರಣ ಏನು? ಏನಾಯಿತು?
08:39 AM (IST) Jun 21
08:21 AM (IST) Jun 21
07:36 AM (IST) Jun 21
ಪೇಪರ್ ಲೀಕ್‌ನಿಂದ ನೀಟ್ ಪರೀಕ್ಷೆಗೆ ಸೇನೆಯ ನೆರವು ಬಳಲಾಗಿದೆ. ಇಂದು ಮಧ್ಯಾಹ್ನ 2.25 ರಿಂದ 5.15ರ ವೇಳೆ ಪರೀಕ್ಷೆ ನಡೆಯಲಿದೆ. ಅಡ್ಮಿಟ್ ಕಾರ್ಡ್, ಫೋಟೋ ಐಡಿ, ಪಾಸ್‌ಪೋರ್ಟ್ ಸೈಜ್ ಫೋಟೋಗ್ರಾಫ್ ಹಿಡಿದು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಅಭ್ಯರ್ಥಿಗಳು ಬೆಳಗ್ಗೆ 11 ರಿಂದ 1.30ರೊಳಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ವೆರಿಫಿಕೇಶನ್ ಮಾಡಲು ಸೂಚನೆ ನೀಡಲಾಗಿದೆ.