Published : Sep 08, 2025, 07:09 AM ISTUpdated : Sep 08, 2025, 11:39 PM IST

India Latest News Live: ಅಮೆರಿಕಾದಲ್ಲಿ ಚಿಲ್ಲರೆ ಸಾಮಾನು ಕದ್ದ ಗುಜರಾತಿ ಯುವತಿ; ಕೈಮುಗಿದರೂ ಬಿಡದೇ, ಆಕೆಗೆ ಮಾಡಿದ್ದೇನು?

ಸಾರಾಂಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ 17ರಂದು 75ನೇ ಜನ್ಮದಿನ ಆಚರಿಸಿಕೊಳ್ಳಲಿದ್ದು, ಈ ನಿಮಿತ್ತ ಸೆ.21ರಂದು ಬಿಜೆಪಿ ಯುವಮೋರ್ಚಾ ದೇಶಾದ್ಯಂತ 75 ನಗರಗಳಲ್ಲಿ ‘ನಶಾ ಮುಕ್ತ ಭಾರತಕ್ಕೆ ನಮೋ ಯುವ ರನ್‌’ ಎಂಬ ಅಭಿಯಾನ ಹಮ್ಮಿಕೊಂಡಿದೆ. ಈ ಓಟಕ್ಕೆ ನಟ ಮಿಲಿಂದ್‌ ಸೋಮನ್‌ ಅವರನ್ನು ರಾಯಭಾರಿಯನ್ನಾಗಿಸಲಾಗಿದೆ. ಯುವ ಸಂಸದ ತೇಜಸ್ವಿ ಸೂರ್ಯ ಮತ್ತು ನಟ ಮಿಲಿಂದ್‌ ಅವರು ಪುಷ್‌ಅಪ್‌ಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಸುಮಾರು 3 ನಿಮಿಷಗಳ ಕಾಲ ಯಾವುದೇ ವಿರಾಮವಿಲ್ಲದೇ ಇಬ್ಬರು ಮುಖಾಮುಖಿಯಾಗಿ ಪುಷ್‌ಅಪ್‌ಗಳನ್ನು ಮಾಡಿದ್ದು, ನೆರೆದಿರುವವರನ್ನು ನಿಬ್ಬೆರಗಾಗಿಸಿತು.

Gujarat Lady stolen in America

11:39 PM (IST) Sep 08

ಅಮೆರಿಕಾದಲ್ಲಿ ಚಿಲ್ಲರೆ ಸಾಮಾನು ಕದ್ದ ಗುಜರಾತಿ ಯುವತಿ; ಕೈಮುಗಿದರೂ ಬಿಡದೇ, ಆಕೆಗೆ ಮಾಡಿದ್ದೇನು?

ಅಮೆರಿಕದ ಟಾರ್ಗೆಟ್ ಅಂಗಡಿಯಲ್ಲಿ ಕಳ್ಳತನ ಮಾಡಲು ಯತ್ನಿಸಿದ ಭಾರತೀಯ ಮಹಿಳೆಯ ಬಂಧನದ ಬಗ್ಗೆ ಈ ವರದಿ ವಿವರಿಸುತ್ತದೆ. ಪೊಲೀಸರ ವಿಚಾರಣೆ ವೇಳೆ ಮಹಿಳೆ ಭಾವುಕಳಾಗಿದ್ದು, ತನ್ನ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದಾಳೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
Read Full Story

10:02 PM (IST) Sep 08

ಅಳುತ್ತಿದ್ದ ಹೆಂಡತಿ ಕಣ್ಣೀರನ್ನು ಮೈಕ್ರೋಸ್ಕೋಪ್‌ನಲ್ಲಿ ಪರೀಕ್ಷಿಸಿ ಮೂರ್ಛೆ ಹೋದ ಗಂಡ; ವಿಡಿಯೋ ವೈರಲ್

ಮನೆಯ ಕೋಣೆಯಲ್ಲಿ ಅಳುತ್ತಾ ಕುಳಿತಿದ್ದ ಹೆಂಡತಿಯ ಕಣ್ಣೀರನ್ನು ಮೈಕ್ರೋಸ್ಕೋಪ್‌ನಲ್ಲಿ ಪರೀಕ್ಷಿಸಿದ ಗಂಡ ಕೆಲವೇ ಕ್ಷಣಗಳಲ್ಲಿ ಮೂರ್ಛೆ ಹೋಗಿದ್ದಾನೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಮೈಕ್ರೋಸ್ಕೋಪ್‌ನಲ್ಲಿ ಕಂಡುಬಂದ ಕಣ್ಣೀರಿನ ರಹಸ್ಯವೇನು? ವೈರಲ್ ವಿಡಿಯೋ ನೋಡಿ..

Read Full Story

07:36 PM (IST) Sep 08

ಸ್ವಿಗ್ಗಿಯಲ್ಲಿ ಶೇ. 80ರಷ್ಟು ಹೆಚ್ಚು ದರ - ಆನ್‌ಲೈನ್ vs ಆಫ್‌ಲೈನ್ ಬಿಲ್ ವೈರಲ್, ಗ್ರಾಹಕರು ಗರಂ!

ಸ್ವಿಗ್ಗಿಯಲ್ಲಿ ಆಹಾರ ಆರ್ಡರ್ ಮಾಡಿದ ಗ್ರಾಹಕರೊಬ್ಬರು, ರೆಸ್ಟೋರೆಂಟ್‌ನಿಂದ ನೇರವಾಗಿ ಖರೀದಿಸುವುದಕ್ಕಿಂತ ಶೇ.80 ರಷ್ಟು ಹೆಚ್ಚು ವೆಚ್ಚವಾಗುತ್ತದೆ ಎಂದು ಆರೋಪಿಸಿದ್ದಾರೆ. ಆನ್‌ಲೈನ್ ಮತ್ತು ಆಫ್‌ಲೈನ್ ಬೆಲೆಗಳ ನಡುವಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟಿಕೊಂಡಿದೆ.
Read Full Story

06:47 PM (IST) Sep 08

ಕೇರಳದ ನರ್ಸಿಂಗ್ ದಂಪತಿಗಳ ಜೀವನವನ್ನು ಬದಲಿಸಿದ ಆಹಾರ ಬಂಡಿ, ಸ್ವಂತ ದುಡಿಮೆಯ ಸುಖದ ಜೀವನ

ಕಡಿಮೆ ಆಸ್ಪತ್ರೆ ಸಂಬಳದಿಂದ ಬೇಸತ್ತ ದಂಪತಿಗಳು ನರ್ಸಿಂಗ್ ವೃತ್ತಿ ತ್ಯಜಿಸಿ ಚೆರ್ತಲಾದಲ್ಲಿ ಆಹಾರ ಬಂಡಿ ಆರಂಭಿಸಿದ್ದಾರೆ. ಸ್ಥಳೀಯರ ಬೆಂಬಲದೊಂದಿಗೆ ಯಶಸ್ವಿಯಾಗಿ ವ್ಯಾಪಾರ ನಡೆಸುತ್ತಿರುವ ಇವರು, ಕಷ್ಟದಿಂದ ಯಶಸ್ಸಿನತ್ತ ಸಾಗುತ್ತಿರುವ ಒಂದು ಸ್ಪೂರ್ತಿದಾಯಕ ಕಥೆ.
Read Full Story

06:33 PM (IST) Sep 08

ನಾಳೆ ಉಪ ರಾಷ್ಟ್ರಪತಿ ಚುನಾವಣೆ, ಸಿಪಿ ರಾಧಾಕೃಷ್ಣನ್ vs ಸುದರ್ಶನ ರೆಡ್ಡಿ ಪೈಕಿ ಯಾರಿಗೆ ಗೆಲುವು?

ಉಪ ರಾಷ್ಟ್ರಪತಿ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಗೆಲುವಿನ ಸಾಧ್ಯತೆಗಳು ಹೆಚ್ಚಾಗಿದೆ. ಇತ್ತ ಕಣದಲ್ಲಿ ಇಂಡಿಯಾ ಮೈತ್ರಿ ಅಭ್ಯರ್ಥಿ ಸುದರ್ಶನ ರೆಡ್ಡಿ ಹೊಸ ಇತಿಹಾಸದ ವಿಶ್ವಾಸದಲ್ಲಿದ್ದಾರೆ. ಫಲಿತಾಂಶ ಯಾವಾಗ, ಗೆಲುವಿನ ಸಾಧ್ಯತೆ ಯಾರಿಗೆ?

Read Full Story

06:18 PM (IST) Sep 08

ರುಚಿರುಚಿಯಾಗಿ ತಿಂದ್ರು 61ರಲ್ಲೂ ಫಿಟ್ & ಫೈನ್ ಆಗಿರುವುದು ಹೇಗೆ? - ಸೀಕ್ರೆಟ್ ಬಿಟ್ಟುಕೊಟ್ಟ ಖ್ಯಾತ ಬಾಣಸಿಗ

ಸಂಜೀವ್‌ ಕಪೂರ್ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ಭಾರತದ ಪ್ರಸಿದ್ಧ ಬಾಣಸಿಗರಲ್ಲಿ ಒಬ್ಬರು. ಅಡಿಗೆಯನ್ನು ಚೆನ್ನಾಗಿ ಮಾಡುವ ಜೊತೆಗೆ ಅಷ್ಟೇ ಚೆನ್ನಾಗಿ ತಿಂದು ರುಚಿ ನೋಡುವ ಕಪೂರ್ ತಮ್ಮ 61ರ ಹರೆಯದಲ್ಲೂ ಫಿಟ್ & ಫೈನ್ ಆಗಿದ್ದಾರೆ. ಅವರ ಫಿಟ್‌ನೆಸ್ ಸೀಕ್ರೇಟ್ ಏನು ಎಂಬ ಬಗ್ಗೆ ಈಗ ಅವರೇ ಹೇಳಿದ್ದಾರೆ ನೋಡಿ

Read Full Story

05:45 PM (IST) Sep 08

ಬಿದಿರಿನ ಟ್ರೈಪಾಡ್ ಬಳಸಿ ಗ್ರಾಮೀಣ ಕ್ರೀಡೆಗಳ ಟೆಲಿಕಾಸ್ಟ್ ಮಾಡ್ತಿದ್ದವನಿಗೆ ಬಂತು ಬ್ಯಾಕಾಂಕ್‌ಗೆ ಆಹ್ವಾನ

ಪ್ರತಿಭೆ ಹಾಗೂ ಮಾಡುವ ಕೆಲಸದಲ್ಲಿ ಆಸಕ್ತಿಯೊಂದಿದ್ದರೆ ಏನು ಯಾವ ಎತ್ತರಕ್ಕೂ ಏರಬಹುದು ಎಂಬುದಕ್ಕೆ ಅಸ್ಸಾಂನ ಈ ಹುಡುಗ ಸಾಕ್ಷಿಯಾಗಿದ್ದಾನೆ. ಈತನ ಕನಸು ಹಾಗೂ ಶ್ರಮವೇ ಈಗ ಈತನನ್ನು ಬ್ರಹ್ಮಪುತ್ರದ ನದಿ ದಂಡೆಯಿಂದ ಥೈಲ್ಯಾಂಡ್‌ನ ಬ್ಯಾಕಾಂಕ್‌ಗೆ ಪಯಣಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

Read Full Story

04:49 PM (IST) Sep 08

ಬಿಗ್‌ಬಾಸ್‌ ಮನೆಯಲ್ಲಿ ತಪ್ಪಿದ ಭಾರೀ ದುರಂತ!

ಬಿಗ್‌ಬಾಸ್‌ 19ರ ಮನೆಯಲ್ಲಿ ಗ್ಯಾಸ್‌ ಸೋರಿಕೆಯಾಗಿ ಭಾರೀ ಅನಾಹುತ ತಪ್ಪಿದೆ. ಸ್ಪರ್ಧಿಗಳ ನಿರ್ಲಕ್ಷ್ಯದಿಂದ ರಾತ್ರಿಯಿಡೀ ಗ್ಯಾಸ್‌ ಸೋರಿಕೆಯಾಗಿದ್ದು, ಕ್ಯಾಪ್ಟನ್‌ ಬಸೀರ್‌ ಅಲಿ ಕೋಪಗೊಂಡಿದ್ದಾರೆ. ಹಿಂದಿನ ಸೀಸನ್‌ಗಳಲ್ಲೂ ಇದೇ ರೀತಿಯ ಅಪಾಯಕಾರಿ ಘಟನೆಗಳು ನಡೆದಿವೆ.

Read Full Story

03:45 PM (IST) Sep 08

ಬೀಚ್‌ ಸ್ವಚ್ಛತೆ ವೇಳೆ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಧರಿಸಿದ ಬಟ್ಟೆಗೆ ಕೊಂಕಾಡಿದ ಜನ - ವೀಡಿಯೋ ವೈರಲ್

ಗಣೇಶ ನಿಮಜ್ಜನದ ನಂತರ ಜುಹು ಬೀಚ್‌ನಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಫಡ್ನವಿಸ್ ಭಾಗವಹಿಸಿದ್ದರು. ಆದರೆ, ಅವರ ಉಡುಗೆಯೇ ಈಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story

02:41 PM (IST) Sep 08

ದೀಪಾವಳಿ ಸಮಯಕ್ಕೆ ಭಾರತದ ಮೊಟ್ಟಮೊದಲ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲು ಪ್ರಯಾಣ ಆರಂಭ!

ಸೆಪ್ಟೆಂಬರ್ 2025 ರಲ್ಲಿ ದೆಹಲಿ-ಪಾಟ್ನಾ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ಪ್ರಾರಂಭವಾಗಲಿದೆ. ರಾಜಧಾನಿಗಿಂತ ವೇಗವಾಗಿ ಓಡಲಿದೆ. ವಿಮಾನ ಪ್ರಯಾಣದ ಅನುಭವ ನೀಡಲಿದೆ.
Read Full Story

02:36 PM (IST) Sep 08

ನೀರಿಗೆ ಬಿಟ್ಟ ಗಣೇಶನ ಸ್ವಾಗತಿಸಿದ ಬಾತುಕೋಳಿಗಳು - ಮಿಂಚಿನ ವೇಗದಲ್ಲಿ ಬೆಕ್ಕಿನ ಮೀನು ಬೇಟೆ - ವೀಡಿಯೋ

ಲಂಡನ್‌ನಲ್ಲಿ ಭಾರತೀಯ ಸಮುದಾಯವು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಗಣೇಶನನ್ನು ನೀರಲ್ಲಿ ಬಿಟ್ಟಿದ್ದು, ನಿಮಜ್ಜನದ ವೇಳೆ ರಾಜಹಂಸಗಳು ಗಣೇಶನನ್ನು ಸುತ್ತುವರೆದ ಅದ್ಭುತ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಕ್ಕೊಂದು ನದಿಯಿಂದ ಮೀನು ಹಿಡಿದ ವೀಡಿಯೋ ಕೂಡ ವೈರಲ್ ಆಗಿದೆ.
Read Full Story

12:25 PM (IST) Sep 08

ಚುನಾವಣೆಗೂ ಮೊದಲೇ ಮಿತ್ರ ಪಕ್ಷಕ್ಕೆ ಶಾಕ್ ಕೊಟ್ಟ ನಿತೀಶ್ ಕುಮಾರ್; ಮೋದಿಗಿಂತ ಒಂದು ಹೆಜ್ಜೆ ಮುಂದಿಟ್ಟ ಜೆಡಿಯು

ಬಿಹಾರ ಸಿಎಂ ನಿತೀಶ್ ಕುಮಾರ್, ಮಿತ್ರಪಕ್ಷ ಬಿಜೆಪಿಗೆ ಸಣ್ಣದೊಂದು ಶಾಕ್ ನೀಡಿದ್ದಾರೆ. ಔಪಚಾರಿಕ ಮಾತುಕತೆಗೂ ಮುನ್ನವೇ ಈ ಘೋಷಣೆಯಾಗಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಸಂತೋಷ್ ಕುಮಾರ್ ನಿರಾಲಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

Read Full Story

11:53 AM (IST) Sep 08

45 ಲಕ್ಷ ರೂ. ವೆಚ್ಚ ಮಾಡಿ ಅಮೆರಿಕಾಗೆ ಹೋಗಿದ್ದ ರೈತನ ಏಕೈಕ ಪುತ್ರ ದುಷ್ಕರ್ಮಿಯ ಗುಂಡೇಟಿಗೆ ಬಲಿ

ಅಮೆರಿಕದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಭಾರತೀಯ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಪ್ರಶ್ನಿಸಿದ್ದಕ್ಕೆ ಈ ದುರ್ಘಟನೆ ಸಂಭವಿಸಿದೆ. ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡು ಕುಟುಂಬ ಈಗ ಕಣ್ಣೀರಿಡುತ್ತಿದೆ

Read Full Story

10:38 AM (IST) Sep 08

ಧರ ಧರನೇ ಅಂತ ಇಳಿಕೆಯಾದ ಚಿನ್ನದ ಬೆಲೆ; ಖರೀದಿ ಮಾಡೋರಿಗೆ ಇಂದೇ ಒಳ್ಳೆಯ ದಿನ

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ನಡುವೆಯೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಜಿಎಸ್‌ಟಿ ಕಡಿತದ ನಂತರ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗಳಾಗಿವೆ. ಚಿನ್ನದ ಜೊತೆಗೆ ಬೆಳ್ಳಿ ದರದಲ್ಲೂ ಇಳಿಕೆಯಾಗಿದೆ.
Read Full Story

10:07 AM (IST) Sep 08

ಜಮ್ಮುಕಾಶ್ಮೀರದಲ್ಲಿ ಮತ್ತೆ ಬಾಲ ಬಿಚ್ಚಿದ್ದ ಉಗ್ರರು - ಭಾರತೀಯ ಸೇನೆಯಿಂದ ಓರ್ವ ಉಗ್ರನ ಮಟಾಶ್

ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಈ ಎನ್‌ಕೌಂಟರ್‌ನಲ್ಲಿ ಓರ್ವ ಭಾರತೀಯ ಸೇನಾಧಿಕಾರಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
Read Full Story

09:40 AM (IST) Sep 08

ಮಾಜಿ ಗಂಡನ ಕುಟುಂಬವನ್ನೇ ಕೊಂದ ಆಸ್ಟ್ರೇಲಿಯಾದ ಮಹಿಳೆಗೆ ಜೀವಾವಧಿ ಶಿಕ್ಷೆ

ಮಾಜಿ ಗಂಡನ ಕುಟುಂಬಕ್ಕೆ ವಿಷ ಬೆರೆಸಿದ ಊಟ ನೀಡಿ ಕೊಂದ ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಯೋಜಿತ ಕೊಲೆಯಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.

Read Full Story

08:06 AM (IST) Sep 08

2200 ರೂ.ಯ ಮದ್ಯದ ಬಾಟೆಲ್ ಕದಿಯೋದು ನನ್ನ ಆಸೆಯಾಗಿತ್ತೆಂದ ಕಳ್ಳ

ಮದ್ಯದಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪಿ ಕೇವಲ ಅರ್ಧ ಲೀಟರ್ ಬಾಟಲಿಗಳನ್ನು ಕದ್ದಿದ್ದಾನೆ. ಹಬ್ಬದಂದು ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. 

Read Full Story

07:30 AM (IST) Sep 08

ಸಾಮಾಜಿಕ ಜಾಲತಾಣ ‍'X'ನಲ್ಲಿ ಹಣ ಗಳಿಸೋದು ಹೇಗೆ? ಇಲ್ಲಿದೆ ಸಿಂಪಲ್ ಐಡಿಯಾ!

Money Earning Tips: ಎಕ್ಸ್ (X) ನಲ್ಲಿ ಹಣ ಗಳಿಸಬೇಕಾ? ಪ್ರತಿದಿನ ಒಂದು ಪೋಸ್ಟ್ ಹಾಕಿದ್ರೆ ಸಾಕು ಅಂತ ಅದರ ಪ್ರಾಡಕ್ಟ್ ಹೆಡ್ ಹೇಳ್ತಾರೆ. ಹಣ ಗಳಿಸೋ ಸುಲಭ ದಾರಿ ಇಲ್ಲಿದೆ.

Read Full Story

More Trending News