ಉಪ ರಾಷ್ಟ್ರಪತಿ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಗೆಲುವಿನ ಸಾಧ್ಯತೆಗಳು ಹೆಚ್ಚಾಗಿದೆ. ಇತ್ತ ಕಣದಲ್ಲಿ ಇಂಡಿಯಾ ಮೈತ್ರಿ ಅಭ್ಯರ್ಥಿ ಸುದರ್ಶನ ರೆಡ್ಡಿ ಹೊಸ ಇತಿಹಾಸದ ವಿಶ್ವಾಸದಲ್ಲಿದ್ದಾರೆ. ಫಲಿತಾಂಶ ಯಾವಾಗ, ಗೆಲುವಿನ ಸಾಧ್ಯತೆ ಯಾರಿಗೆ?

ನವದೆಹಲಿ (ಸೆ.08) ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಳೆ (ಸೆ.09) ಚುನಾವಣೆ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗ ನಾಳೆ ಉಪ ರಾಷ್ಟ್ರಪತಿ ಸ್ಥಾನಕ್ಕೆ ಮತದಾನ ನಡೆಸಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಹಾಗೂ ಇಂಡಿಯಾ ಮೈತ್ರಿ ಕೂಟ ಉಪ ರಾಷ್ಟ್ರಪತಿ ಚುನಾವಣೆಗ ಭಾರಿ ತಯಾರಿ ನಡೆಸಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸಿಪಿ ರಾಧಾಕೃಷ್ಣನ್ ಕಣದಲ್ಲಿದ್ದರೆ, ಇಂಡಿಯಾ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಅಖಾಡದಲ್ಲಿದ್ದಾರೆ.

ಸಿಪಿ ರಾಧಾಕೃಷ್ಣನ್ ಸಿಗುತ್ತಾ ಗೆಲುವು?

ಸಂಖ್ಯೆ, ಬಲಾಬಲದ ಲೆಕ್ಕಾಚಾರದಲ್ಲಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವಿನ ಸಾಧ್ಯತೆ ಹೆಚ್ಚು. ಜಗದೀಪ್ ಧನ್ಕರ್ ಆಯ್ಕೆ ವೇಳೆ ನಡೆಸಿದ ರಣತಂತ್ರವನ್ನೇ ಬಿಜೆಪಿ ಮತ್ತೆ ಪ್ರಯೋಗಿಸುತ್ತಿದೆ. ಈಗಾಗಲೇ ದೆಹಲಿಯಲ್ಲಿ ಎನ್‌ಡಿಎ ಸಂಸದರ 2 ದಿನದ ಕಾರ್ಯಾಗಾರದಲ್ಲೂ ಉಪ ರಾಷ್ಟ್ರಪತಿ ಚುನಾವಣೆ ಕುರಿತು ಚರ್ಚಿಸಲಾಗಿದೆ. ಅಣುಕು ಮತದಾನ ಸೇರಿದಂತೆ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಇಂಡಿಯಾ ಒಕ್ಕೂಟಕ್ಕೆ ಬಿ ಸುದರ್ಶನ ರೆಡ್ಡಿಯನ್ನು ಗೆಲ್ಲಿಸಿಕೊಡುವ ಸಂಖ್ಯಾಬಲವಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಮ್ಯಾಜಿಕ್ ನಡೆದರೆ ಫಲಿತಾಂಶ ಬೇರೆಯಾಗಲಿದೆ. ಆದರೆ ಈ ಸಾಧ್ಯತೆಗಳು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವಿರಳ. ಸಿಪಿ ರಾಧಾಕೃಷ್ಣನ್ ಗೆಲುವು ಬಹುತೇಕ ಖಚಿತ. ಆದರೆ ಅಂತರ ಹೆಚ್ಚಿರುವುದಿಲ್ಲ.

ಸರ್ಕಾರಿ ನಿವಾಸ ಬಿಟ್ಟು ಚೌಟಾಲಾರ ತೋಟದ ಮನೆಗೆ ಧನಕರ್‌ ಶಿಫ್ಟ್‌

ಸೆಪ್ಟೆಂಬರ್ 9ಕ್ಕೆ ಫಲಿತಾಂಶ, ಎನ್‌ಡಿಎ ಸಂಖ್ಯಾಬಲ ಎಷ್ಟು?

ಉಪರಾಷ್ಟ್ರಪತಿ ಚುನಾವಣೆ ದಿನವೇ ಫಲಿತಾಂಶವೂ ಹೊರಬೀಳಲಿದೆ. ಸಂಜೆ ವೇಳೆಗೆ ಭಾರತದ ನೂತನ ಉಪರಾಷ್ಟ್ರಪತಿ ಯಾರು ಅನ್ನೋದು ಬಹಿರಂಗವಾಗಲಿದೆ. ಗೆಲುವಿಗೆ ಕನಿಷ್ಠ 386 ಮತಗಳನ್ನು ಪಡೆಯಬೇಕು. ಲೋಕಸಭೆಯಲ್ಲಿ ಒಟ್ಟು 542 ಹಾಗೂ ರಾಜ್ಯಸಭೆಯಲ್ಲಿ 39 ಸದಸ್ಯರಿದ್ದಾರೆ. ಬಿಜೆಪಿ ಬಳಿ ಆನ್ ಪೇಪರ್‌ನಲ್ಲಿ 425 ಸದಸ್ಯರಿದ್ದಾರೆ. ಇತ್ತ ಇಂಡಿಯಾ ಒಕ್ಕೂಟದ ಬಳಿ ಲೋಕಸಭೆ, ರಾಜ್ಯಸಭೆಯಲ್ಲಿ ಒಟ್ಟು 313 ಹಾಗೂ ಆಪ್ ಸದಸ್ಯರು ಸೇರಿದರೆ ಒಟ್ಟು325 ಮತಗಳಿವೆ.

ಉಪ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಸೀಕ್ರೆಟ್ ಬ್ಯಾಲೆಟ್ ಮೂಲಕ ನಡೆಯಲಿದೆ. ಹೀಗಾಗಿ ಸಂಸದರು ರಹಸ್ಯವಾಗಿ ತಮ್ಮ ಮತದಾನ ನಡೆಸಲು ಸಾಧ್ಯವಿದೆ. ಆದರೆ ಎಲ್ಲಾ ಸಂಸದರಿಗೆ ಆಯಾ ಪಾರ್ಟಿ ಸೂಚನೆ ನೀಡಿರುತ್ತದೆ. ಇನ್ನು ಕ್ರಾಸ್ ವೋಟಿಂಗ್ ಕೂಡ ನಡೆಯುತ್ತದೆ. ಕಳೆದ ಬಾರಿ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ವೈಎಸ್ಆರ್, ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷ ಬಿಜೆಪಿ ಬೆಂಬಲಿಸಿತ್ತು.