ಮಾಜಿ ಗಂಡನ ಕುಟುಂಬಕ್ಕೆ ವಿಷ ಬೆರೆಸಿದ ಊಟ ನೀಡಿ ಕೊಂದ ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಯೋಜಿತ ಕೊಲೆಯಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.
ಸಿಡ್ನಿ: ವಿಷ ಬೆರೆಸಿದ ಊಟ ತಿನ್ನಿಸಿ ಮಾಜಿ ಗಂಡನ ಕುಟುಂಬವನ್ನೇ ಕೊಂದ ಆಸ್ಟ್ರೇಲಿಯಾದ ಮಹಿಳೆಗೆ ಜೀವಾವಧಿ ಶಿಕ್ಷೆ ನೀಡಿ ನ್ಯಾಯಾಲಯ ತೀರ್ಪು ನೀಡಿದೆ. ಇದೊಂದು ಯೋಜಿತ ಕೊಲೆ (Pre Planned Murder) ಎಂದು ಆಸ್ಟ್ರೇಲಿಯಾ ಸುಪ್ರೀಂ ಕೋರ್ಟ್ (Australia Supreme Court) ತನ್ನ ತೀರ್ಪಿನಲ್ಲಿ ಹೇಳಿದೆ. 50 ವರ್ಷದ ಎರಿನ್ ಪ್ಯಾಟರ್ಸನ್ 33 ವರ್ಷ ಪೆರೋಲ್ ಇಲ್ಲದೆ ಜೈಲುವಾಸ ಅನುಭವಿಸಬೇಕು. 2056ರಲ್ಲಿ ಎರಿನ್ ಜೈಲಿನಿಂದ ಹೊರಬರಲಿದ್ದಾರೆ. 2023 ಜುಲೈ 29ರಂದು ಎರಿನ್ ಮಾಜಿ ಗಂಡನ ಕುಟುಂಬಸ್ಥರು ಸೇವಿಸುವ ಆಹಾರಕ್ಕೆ ವಿಷ ಬೆರಸಿದ್ದಳು. ವಿಷ ಮಿಶ್ರಿತ ಆಹಾರ ಸೇವಿಸಿದ ಪರಿಣಾಮ ಮೂವರು ಮೃತಪಟ್ಟಿದ್ದರು. ಎರಿನ್ ಪ್ರಾಣಾಪಾಯದಿಂದ ಪಾರಾಗಿದ್ದರು. ಇದೇ ಆಹಾರ ಸೇವಿಸಿದ ಮತ್ತೊಬ್ಬರು ದೀರ್ಘಕಾಲದ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ.
ಅಪರಾಧಿ ಎರಿನ್ ಒಟ್ಟು ಮೂರು ಬಾರಿ ಮಾಜಿ ಗಂಡನನ್ನು ಕೊಲ್ಲಲು ಪ್ರಯತ್ನಿಸಿದ್ದಳು ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಲದಲ್ಲಿ ತಾನು ನಿರಪರಾಧಿ ಎಂದು ಎರಿನ್ ವಾದಿಸಿದ್ದಳು. ಆರಂಭದಲ್ಲಿ ಈ ಪ್ರಕರಣವನ್ನು ಫುಡ್ ಪಾಯಿಸನ್ ಎಂದೇ ಪರಿಗಣಿಸಲಾಗಿತ್ತು. ಎರಿನ್ ಮೇಲೆ ಅನುಮಾನದಿಂದ ತನಿಖೆ ಆರಂಭಿಸಿದ ಪೊಲೀಸರಿಗೆ ಇದೊಂದು ಷಡ್ಯಂತ್ರ ಎಂದು ಗೊತ್ತಾಗಿತ್ತು. ಆನಂತರ ಪೊಲೀಸರು ಎರಿನ್‌ಳನ್ನು ಬಂಧಿಸಿದ್ದರು. ಈ ಪ್ರಕರಣ ಜಾಗತಿಕ ಮಟ್ಟದಲ್ಲಿ ಸುದ್ದಿ ಆಗಿತ್ತು.
ಮಾಜಿ ಗಂಡನಿಗೂ ಊಟಕ್ಕೆ ಆಹ್ವಾನ ನೀಡಿದ್ದಳು ಎರಿಕ್
ಎರಿನ್ ನೀಡಿದ ವಿಷ ಮಿಶ್ರಿತ ಆಹಾರ ಸೇವನೆಯಿಂದಾಗಿ ಮಾಜಿ ಗಂಡನ ತಂದೆ-ತಾಯಿ ಮತ್ತು ಸಹೋದರಿ ಸಾವನ್ನಪ್ಪಿದ್ದರು. ಎರಿನ್ ಮಾಜಿ ಗಂಡನಿಗೂ ಊಟಕ್ಕೆ ಆಹ್ವಾನವಿತ್ತಾದರೂ, ಕೊನೆ ಗಳಿಗೆಯಲ್ಲಿ ಅವರಿಗೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಹಾಗಾಗಿ ವಿಷಾಹಾರ ಸೇವನೆ ಮಾಡಿದ ನಾಲ್ವರ ಪೈಕಿ ಮೂವರು ಸಾವನ್ನಪ್ಪಿದ್ದರು. ಊಟ ಮಾಡಿದ ಕೆಲವೇ ಗಂಟೆಗಳಲ್ಲಿ ಎಲ್ಲರೂ ಅಸ್ವಸ್ಥರಾಗಿದ್ದರು. ಒಬ್ಬರು ಮೂರು ತಿಂಗಳು ಆಸ್ಪತ್ರೆಯಲ್ಲಿದ್ದು ಗುಣಮುಖರಾಗಿದ್ದಾರೆ. ಡೆತ್ ಕ್ಯಾಪ್ ಎಂಬ ವಿಷಕೂಣನ್ನು ಬಳಸಿದ್ದಳು. 70 ವರ್ಷದ ಮಾಜಿ ಅತ್ತೆ ಗೇಲ್, 70 ವರ್ಷದ ಮಾಜಿ ಮಾವ ಡಾನ್, 66 ವರ್ಷದ ಚಿಕ್ಕಮ್ಮ ಹೆದರ್ ಸಾವನ್ನಪ್ಪಿದ್ದಾರೆ. ಹೆದರ್ ಗಂಡನಿಗೂ ಅಸ್ವಸ್ಥತೆ ಕಾಣಿಸಿಕೊಂಡಿದ್ದರೂ, ಲಿವರ್ ಕಸಿ ಮಾಡಿಸಿಕೊಂಡು ಗುಣಮುಖರಾಗಿದ್ದಾರೆ.
ಇದನ್ನೂ ಓದಿ: ಡಾಕ್ಟರ್ ಗಂಡನ ಕೊಲೆ ಮಾಡಿ ಸಾವಿಗೆ ವೈಜ್ಞಾನಿಕ ವಿಶ್ಲೇಷಣೆ ನೀಡಿದ ಕೆಮಿಸ್ಟ್ರಿ ಪ್ರೊಫೆಸರ್‌ಗೆ ಜೀವಾವಧಿ ಶಿಕ್ಷೆ
ಮಾಜಿ ಗಂಡನ ಕೊಲ್ಲಲು ಪದೇ ಪದೇ ಪ್ರಯತ್ನ
ಎರಿನ್ ಎರಡು ಬಾರಿ ಮಾಜಿ ಗಂಡನನ್ನು ಕೊಲ್ಲಲು ಪ್ರಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 2021 ನವೆಂಬರ್‌ನಲ್ಲಿ ಮೊದಲ ಪ್ರಯತ್ನ ನಡೆದಿತ್ತು. 2022 ಮೇ ಮತ್ತು ಸೆಪ್ಟೆಂಬರ್‌ನಲ್ಲೂ ಕೊಲೆ ಯತ್ನ ವಿಫಲವಾಗಿತ್ತು. ಜುಲೈ 29ರಂದು ಮಾಜಿ ಗಂಡ, ಅವರ ತಂದೆ-ತಾಯಿ ಮತ್ತು ಚಿಕ್ಕಮ್ಮನಿಗೆ ವಿಷಕೂಣು ಬೆರೆಸಿದ್ದಳು. ಮೂರನೇ ಬಾರಿ ಪ್ರಯತ್ನದಲ್ಲಿಯೂ ಎರಿನ್ ವಿಫಲವಾಗಿದ್ದಳು.
ಇದನ್ನೂ ಓದಿ: ಇಂತಹ ಹೆಂಡ್ತಿರು ಇದ್ದಾರೆ: ಗಂಡನಿಗೆ ಕನಸಿನ ಬೈಕ್ ಗಿಫ್ಟ್ ಮಾಡಿ ಸರ್‌ಫ್ರೈಸ್ ನೀಡಿದ ಪತ್ನಿ ವೀಡಿಯೋ ವೈರಲ್
ದಂಪತಿಗಳ ಜಗಳ: ಗಂಡನ ಕೊಲೆಯಲ್ಲಿ ಅಂತ್ಯ
ಚಳ್ಳಕೆರೆ ತಾಲೂಕಿನ ತಳಕು ಠಾಣಾ ವ್ಯಾಪ್ತಿಯ ಕಾಲುವೆಹಳ್ಳಿಯ ಹೊರವಲಯದಲ್ಲಿ ಇದ್ದಿಲು ಸುಡಲು ಮಹಾರಾಷ್ಟ್ರದಿಂದ ಆಗಮಿಸಿದ್ದ ವಲಸೆ ಕಾರ್ಮಿಕರು ಅಲ್ಲೇ ಟೆಂಟ್ ಹಾಕಿಕೊಂಡು ಇದ್ದಿಲು ಸುಡುವ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಹರಿಶ್ಚಂದ್ರಪ್ಪ ಮತ್ತು ಯಶೋಧಮ್ಮರ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕುಮುಕಿ ಆರಂಭವಾಗಿ ಜಗಳ ವಿಕೋಪಕ್ಕೆ ಹೋಗಿ ಇಬ್ಬರು ಪರಸ್ವರ ಹೊಡೆದಾಡಿಕೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದ ಕೆಲವೆ ಗಂಟೆಗಳಲ್ಲಿ ಹರಿಶ್ಚಂದ್ರಪ್ಪ ಮೃತಪಟ್ಟಿದ್ದರು.
