ಧರ ಧರನೇ ಅಂತ ಇಳಿಕೆಯಾದ ಚಿನ್ನದ ಬೆಲೆ; ಖರೀದಿ ಮಾಡೋರಿಗೆ ಇಂದೇ ಒಳ್ಳೆಯ ದಿನ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ನಡುವೆಯೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಜಿಎಸ್‌ಟಿ ಕಡಿತದ ನಂತರ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗಳಾಗಿವೆ. ಚಿನ್ನದ ಜೊತೆಗೆ ಬೆಳ್ಳಿ ದರದಲ್ಲೂ ಇಳಿಕೆಯಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ನಡುವೆಯೂ ಭಾರತದಲ್ಲಿಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಜಿಎಸ್‌ಟಿ ಕಡಿತದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗಳು ಕಂಡ ಬರುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಇಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕುಸಿತವಾಗಿದೆ. ನಿನ್ನೆ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ. ಚಿನ್ನದ ಜೊತೆ 1 ಕೆಜಿ ಬೆಳ್ಳಿ ದರದಲ್ಲಿ ಬರೋಬ್ಬರಿ 1,000 ರೂ.ಗಳಷ್ಟು ಕಡಿಮೆಯಾಗಿದೆ. ಈ ಲೇಖನ ಇಂದಿನ ಚಿನ್ನ ಮತ್ತು ಬೆಳ್ಳಿ ದರದ ಮಾಹಿತಿಯನ್ನು ಒಳಗೊಂಡಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,935 ರೂಪಾಯಿ
8 ಗ್ರಾಂ: 79,480 ರೂಪಾಯಿ
10 ಗ್ರಾಂ: 99,350 ರೂಪಾಯಿ
100 ಗ್ರಾಂ: 9,93,500 ರೂಪಾಯಿ
ಇದನ್ನೂ ಓದಿ: ಮನೆಯಿಂದಲೇ ತಿಂಗಳಿಗೆ 50,000 ಗಳಿಸಿ: ಅತಿ ಹೆಚ್ಚು ಲಾಭ ತಂದುಕೊಡುವ ಮೈಕ್ರೋ ಕೃಷಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,838 ರೂಪಾಯಿ
8 ಗ್ರಾಂ: 86,704 ರೂಪಾಯಿ
10 ಗ್ರಾಂ: 1,08,380 ರೂಪಾಯಿ
100 ಗ್ರಾಂ: 10,83,800 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 99, 970 ರೂಪಾಯಿ, ಮುಂಬೈ: 99,350 ರೂಪಾಯಿ, ದೆಹಲಿ: 99,950 ರೂಪಾಯಿ, ಕೋಲ್ಕತ್ತಾ: 99,350 ರೂಪಾಯಿ, ಬೆಂಗಳೂರು: 99,350 ರೂಪಾಯಿ, ಹೈದರಾಬಾದ್: 99,350 ರೂಪಾಯಿ, ವಡೋದರ: 99,400 ರೂಪಾಯಿ
ಇದನ್ನೂ ಓದಿ: 9 to 5 ಜಾಬ್ ಬಿಟ್ಟು ಬ್ಯುಸಿನೆಸ್ ಆರಂಭಿಸೋ ಮುನ್ನ 5 ಪ್ರಶ್ನೆಗೆ ಉತ್ತರ ಕಂಡುಕೊಳ್ಳಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚಾದ ಹಿನ್ನೆಲೆ ಈ ಲೋಹಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ.
10 ಗ್ರಾಂ: 1270 ರೂಪಾಯಿ
100 ಗ್ರಾಂ: 12,700 ರೂಪಾಯಿ
1000 ಗ್ರಾಂ: 1,27,000 ರೂಪಾಯಿ
ಎಷ್ಟು ಇಳಿಕೆ?
- 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಕಡಿಮೆಯಾಗಿದೆ.
- 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಕಡಿಮೆಯಾಗಿದೆ.
- 1 ಕೆಜಿ ಬೆಳ್ಳಿ ಬೆಲೆಯಲ್ಲಿ 1,000 ರೂ.ಗಳಷ್ಟು ಇಳಿಕೆ ಕಂಡು ಬಂದಿದೆ.
ಇದನ್ನೂ ಓದಿ: ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ: ರಿಲಯನ್ಸ್ ಕಂಪನಿ ವಿರುದ್ಧ ಬ್ಯಾಂಕ್ ಆಫ್ ಬರೋಡಾದಿಂದ ವಂಚನೆ ಆರೋಪ