ಜೆರುಸಲೇಂ: ‘ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಮುಗಿದ ನಂತರವೇ ಇರಾನ್ ವಿರುದ್ಧ ದಾಳಿಯ ನಿರ್ಧಾರ ತೆಗೆದುಕೊಳ್ಳಲಾಯಿತು. ಹಾಗಾಗಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಲಿಲ್ಲ’ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಶುಕ್ರವಾರ ಹೇಳಿದ್ದಾರೆ. ಮೋದಿ ಅವರಿಗೆ ದಾಳಿಯ ಬಗ್ಗೆ ಮಾಹಿತಿ ಇತ್ತು ಆರೋಪಗಳ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಚಿವ ಸಾರ್, ‘ಇಸ್ರೇಲ್ ಮೋದಿ ಮತ್ತು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಅದು ಇತ್ತೀಚಿನ ವರ್ಷಗಳಲ್ಲಿ ಗಾಢವಾಗಿದೆ. ಆದರೆ ಯುದ್ಧದ ನಿರ್ಧಾರವನ್ನು ಫೆ.28ರ ಮುಂಜಾನೆ ತೆಗೆದುಕೊಳ್ಳಲಾಗಿದ್ದರಿಂದ ಪ್ರಧಾನಿ ಮೋದಿಯವರಿಗೆ ಇದರ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ’ ಎಂದರು. ಮೋದಿಯವರ 2 ದಿನಗಳ ಇಸ್ರೇಲ್ ಭೇಟಿ ಫೆ.26ಕ್ಕೆ ಮುಗಿದಿತ್ತು. ಫೆ.28ರಂದು ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ಮಾಡಿದ್ದವು

10:19 PM (IST) Mar 08
ದೇವಸ್ಥಾನದ ವಾಶ್‌ರೂಂನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆ, ಚಾಟ್‌ಜಿಪಿ ನೀಡಿದ ಸುಳಿವು, ಯುವತಿಯರ ಮೊಬೈಲ್ ಫೋನ್ ಪರಿಶೀಲಿಸಿದಾಗ ಚಾಟ್‌ಜಿಪಿಟಿ ಯುವತಿಯರ ಸಾವಿನ ಸುಳಿವು ನೀಡಿದೆ.
09:47 PM (IST) Mar 08
ಅಮೆರಿಕದಲ್ಲಿ ರೀಲ್ಸ್‌ಗಾಗಿ ಡ್ಯಾನ್ಸ್ ಮಾಡಿದ ಭಾರತೀಯನಿಗೆ ಗಡೀಪಾರು ಭೀತಿ, ಏನಿದು ನಿಯಮ?, ಮಧು ರಾಜು ಅನ್ನೋ ಯುವಕ ಅಮೆರಿಕದಲ್ಲಿ ಡ್ಯಾನ್ಸ್ ಮಾಡಿದ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ.
09:42 PM (IST) Mar 08
ವೈಯಕ್ತಿಕ ವಿಚಾರಗಳನ್ನು ನಾಲ್ಕು ಗೋಡೆಗಳ ಮಧ್ಯೆ ಇಟ್ಟುಕೊಳ್ಳಬೇಕು, ಹೀಗೆ ಸಾರ್ವಜನಿಕವಾಗಿ ತರುವುದು ಸರಿಯಲ್ಲ. ನೀವು ಯಾರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದೀರಿ? ಎಂದು ನಟ ಹಾಗೂ ನಿರ್ದೇಶಕ ಸಮುದ್ರಕನಿ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ.
07:50 PM (IST) Mar 08
ಪದೇ ಪದೇ ಮೂಗು ತೂರಿಸುತ್ತಿದ್ದ ಅತ್ತೆಯ ಮೂಗನ್ನೇ ಕತ್ತರಿಸಿ ಪರಾರಿಯಾದ ಅಳಿಯ, ಹುಡುಕಾಟ ಶುರುವಾಗಿದೆ. ಅತ್ತೆಯ ಮಧ್ಯಪ್ರವೇಶದಿಂದ ಗಂಡ ಹೆಂಡತಿ ದೂರವಾಗಿದ್ದರು. ಅತ್ತೆಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
07:06 PM (IST) Mar 08
ದುಡ್ಡಿಲ್ಲ ಅಂದ್ರೂ ಒತ್ತಾಯಕ್ಕೆ ಲಾಟರಿ ಟಿಕೆಟ್ ಖರೀದಿ, ಡ್ರೈವರಿಗೆ ಬಂತು 10 ಕೋಟಿ ರೂ ಜಾಕ್‌ಪಾಟ್, ಸಂಬಂಧಿ ಹಾಗೂ ಗೆಳೆಯನ ಒತ್ತಾಯಕ್ಕೆ ಮಣಿದು ಖರೀದಿಸಿದ ಲಾಟರಿ ಟಿಕೆಟ್‌ನಲ್ಲಿ ಬಹುಮಾನ ಬಂದಿದೆ.
06:54 PM (IST) Mar 08
ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಮುದ್ದಿನ ಅಡ್ಡಹೆಸರುಗಳಿಂದ ಕರೆಯುವುದು ಸಹಜ. ಇದೇ ರೀತಿ, ಬಾಲಿವುಡ್‌ನ ಜನಪ್ರಿಯ ನಟಿಯರಾದ ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಮತ್ತು ಕಪೂರ್ ಸಹೋದರಿಯರಿಗೂ ವಿಚಿತ್ರ ಹಾಗೂ ತಮಾಷೆಯ ಅಡ್ಡಹೆಸರುಗಳಿವೆ.
05:37 PM (IST) Mar 08
ಕಮಲ್ ಹಾಸನ್ ಭಾರತದ 70 ವರ್ಷ ದಾಟಿದ ಕೆಲವೇ ನಟರಲ್ಲಿ ಒಬ್ಬರು. ಆದರೂ ಈಗಲೂ ಅದ್ಭುತ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅವರು ಕೇವಲ 10 ದಿನಗಳ ಶೂಟಿಂಗ್‌ಗೆ 'ಗದರ್ 2' ನಂತಹ ಎರಡು ಚಿತ್ರಗಳನ್ನು ನಿರ್ಮಿಸುವಷ್ಟು ಸಂಭಾವನೆ ಪಡೆದಿದ್ದಾರೆ.
05:11 PM (IST) Mar 08
ಇತ್ತೀಚೆಗೆ ಸಲ್ಮಾನ್ ಖಾನ್ 1-2 ಹೊಸ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಒಂದು ಆ್ಯಕ್ಷನ್ ಚಿತ್ರಕ್ಕೆ ಸೌತ್ ಹೀರೋಯಿನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಿರ್ಮಾಪಕರು ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
05:05 PM (IST) Mar 08
ಮದುವೆಯಾಗುವಂತೆ ಕುಟುಂಬ ಮತ್ತು ಸಮಾಜದಿಂದ ಬರುತ್ತಿದ್ದ ನಿರಂತರ ಒತ್ತಡದಿಂದ ಪಾರಾಗಲು ಯುವತಿಯೊಬ್ಬಳು ತನ್ನ ತಲೆ ಕೂದಲನ್ನೇ ಬೋಳಿಸಿಕೊಂಡಿದ್ದಾಳೆ. ತನ್ನ ಬೋಳು ತಲೆಯ ವೀಡಿಯೋವನ್ನು ಹಂಚಿಕೊಂಡ ಆಕೆ ತನಗೆ ಮದುವೆಯ ಒತ್ತಡ ಹೇರುತ್ತಿರುವ ಕುಟುಂಬ ಹಾಗೂ ಸಮಾಜದ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ.
04:55 PM (IST) Mar 08
ಕಿಂಗ್‌ಫಿಶರ್ ಬಿಯರ್‌ನ ಸೀಲ್ ಮಾಡಿದ ಬಾಟಲಿಯೊಳಗೆ ಜೀವಂತ ಮೀನಿನ ಮರಿ ಪತ್ತೆಯಾಗಿದೆ. ಇದನ್ನು ನೋಡಿ ಬಿಯರ್ ಖರೀದಿಸಿದ್ದ ವ್ಯಕ್ತಿ ಶಾಕ್ ಆಗಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
04:25 PM (IST) Mar 08
ಸಾವು ಬದುಕಿನ ಹೋರಾಟದಲ್ಲಿ ಬಿಗ್ ಬಾಸ್ ಸ್ಪರ್ಧಿ, ಲಾಸ್ಟ್ ರೈಡ್‌ನಲ್ಲಿ ಭೀಕರ ಅಪಘಾತ, ಪ್ರೀತಿಸಿ ಮದುವೆಯಾದ ಹುಡುಗಿ, ಪ್ರೀತಿಗಾಗಿ ಪೋಷಕರು ದೂರ ದೂರ ಸೇರಿದಂತೆ ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಇದೀಗ ಐಸಿಯುವಿನಲ್ಲಿ ಹೋರಾಡುತ್ತಿದ್ದಾರೆ.
04:25 PM (IST) Mar 08
ಒಂದು ಕಾಲದಲ್ಲಿ ಪ್ರಾದೇಶಿಕ ಚಿತ್ರರಂಗ ಅಂತ ಕರೆಸಿಕೊಳ್ಳುತ್ತಿದ್ದ ಟಾಲಿವುಡ್, ಈಗ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಾಲಿವುಡ್‌ಗೆ ಸಖತ್ ಪೈಪೋಟಿ ನೀಡುತ್ತಿದೆ. 2026ರಲ್ಲಿ ತೆಲುಗಿನ ಅತಿ ದುಬಾರಿ ನಟ-ನಟಿ ಯಾರು ಗೊತ್ತಾ? ಇಲ್ಲಿದೆ ಮಾಹಿತಿ...
03:55 PM (IST) Mar 08
ಬೇಸಿಗೆ ಬಿಸಿಲು ಹೆಚ್ಚಾದಂತೆ ಹಾವುಗಳು ತಮ್ಮ ಹುತ್ತಗಳನ್ನು ಬಿಟ್ಟು ತಂಪಾದ ಜಾಗ ಹುಡುಕಿಕೊಂಡು ಓಡಾಡುತ್ತವೆ. ಈ ಸಮಯದಲ್ಲಿ ಮನೆಗಳಿಗೂ ಹಾವುಗಳು ಬರುವ ಸಾಧ್ಯತೆ ಇರುತ್ತದೆ. ಆದರೆ ಹಾವುಗಳನ್ನು ಓಡಿಸಲು ಕೆಲವು ನೈಸರ್ಗಿಕ ಉಪಾಯಗಳಿವೆ, ಅವುಗಳ ಬಗ್ಗೆ ನಿಮಗೆ ಗೊತ್ತಾ?
03:45 PM (IST) Mar 08
ದುಬೈ ದಾಳಿ, ಪೆಹಲ್ಗಾಂ ಆ್ಯಟಾಕ್, ಸಂಕಷ್ಟದಲ್ಲಿ 2 ದೇಶ ಮಾಡಿದ್ದೇನು, ಖಾನ್ ಸರ್ ಮಾತು ವೈರಲ್, ಎರಡೂ ಕೂಡ ಯುದ್ಧದ ಸನ್ನಿವೇಶವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಭಾರತ ಕೆಲ ವಿಚಾರಗಳನ್ನು ದುಬೈನಿಂದ ಕಲಿಯಬೇಕಿದೆ ಎಂದಿದ್ದಾರೆ.
03:44 PM (IST) Mar 08
ಅಸ್ಸಾಂನಲ್ಲಿ ನಡೆದ ಸುಖೋಯ್ ಯುದ್ಧ ವಿಮಾನ ದುರಂತದಲ್ಲಿ ಮಡಿದ ಸ್ಕ್ವಾಡ್ರನ್ ಲೀಡರ್ ಅನುಜ್ ವಶಿಷ್ಠ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಮದುವೆಗೆ ಸಿದ್ಧರಾಗಿದ್ದ ಅನುಜ್ ಅವರ ಅಂತ್ಯಸಂಸ್ಕಾರದಲ್ಲಿ ಅವರ ಭಾವಿ ಪತ್ನಿ ಕೂಡ ಭಾಗವಹಿಸಿದ್ದರು.
03:08 PM (IST) Mar 08
ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಿದ ಹೆಮ್ಮೆಯ ಟಾಟಾ, ಫೆಬ್ರವರಿಯ ಗರಿಷ್ಠ ಸೇಲ್ ಕಾರು ಲಿಸ್ಟ್, ಮಾರುತಿ ಡಿಸೈರ್, ಹ್ಯುಂಡೈ ಕ್ರೆಟಾ, ಮಾರುತಿ ಬ್ರೆಜಾ ಸೇರಿದಂತೆ ಎಲ್ಲಾ ಕಾರುಗಳನ್ನು ಹಿಂದಿಕ್ಕಿದ ಟಾಟಾದ ಕಾರು ಯಾವುದು?
01:56 PM (IST) Mar 08
12:50 PM (IST) Mar 08
12:44 PM (IST) Mar 08
12:21 PM (IST) Mar 08
US Iran Tensions ಜಾಗತಿಕ ಸಂಘರ್ಷಗಳ ಮಧ್ಯೆ, ಭಾರತದೊಂದಿಗೆ ಸಹಕರಿಸಲು ಚೀನಾ ಕರೆ ನೀಡಿದೆ. ಇದೇ ವೇಳೆ, ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದರೆ, ಅಮೆರಿಕ ಇರಾನ್ ಸೇನೆಯನ್ನು ನಾಶ ಮಾಡಿರುವುದಾಗಿ ಹೇಳಿಕೊಂಡಿದೆ.
11:54 AM (IST) Mar 08
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ, ಇಸ್ರೇಲ್ ರಕ್ಷಣಾ ಪಡೆಯಾದ ಐಡಿಎಫ್ ಶನಿವಾರ ಇರಾನ್‌ನ ಟೆಹ್ರಾನ್‌ನಲ್ಲಿರುವ ಹಲವಾರು ಇರಾನಿನ ಇಂಧನ ಡಿಪೋಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.
11:19 AM (IST) Mar 08
10:01 AM (IST) Mar 08
09:18 AM (IST) Mar 08
ವ್ಯಕ್ತಿಯೊಬ್ಬರು ಖರೀದಿಸಿದ ಕಿಂಗ್‌ಫಿಶರ್ ಬಿಯರ್ ಬಾಟಲಿಯೊಳಗೆ ಜೀವಂತ ಮೀನಿನ ಮರಿ ಪತ್ತೆಯಾಗಿದೆ. ಸೀಲ್ ತೆಗೆಯದ ಬಾಟಲಿಯೊಳಗೆ ಮೀನು ಕಂಡು ಗ್ರಾಹಕ ದಂಗಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗುತ್ತಿದೆ.
08:59 AM (IST) Mar 08
2024-25ರ ಹಣಕಾಸು ವರ್ಷದಲ್ಲಿ ಆಂಧ್ರಪ್ರದೇಶ ಸರ್ಕಾರವು ಬಹುತೇಕ ಪೂರ್ತಿ ವರ್ಷವನ್ನು 1.72 ಲಕ್ಷ ಕೋಟಿ ರೂ. ಸಾಲ ಮತ್ತು ಮುಂಗಡಗಳ ಮೇಲೆ ನಡೆಸಿದೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ವಿತ್ತೀಯ ಕೊರತೆಯು ಮಿತಿ ಮೀರಿದ್ದರಿಂದ ರಾಜ್ಯವು ದೈನಂದಿನ ಕಾರ್ಯನಿರ್ವಹಣೆಗೂ ಸಾಲ ಪಡೆಯುವಂತಾಗಿದೆ.
08:41 AM (IST) Mar 08
08:24 AM (IST) Mar 08
ಇರಾನ್‌ನಿಂದ ಸೌದಿ ಅರೇಬಿಯಾ ಮೇಲೆ ನಿರಂತರ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನವು ಸೌದಿಗೆ ಸಂಪೂರ್ಣ ಸೇನಾ ಮತ್ತು ವ್ಯೂಹಾತ್ಮಕ ನೆರವು ನೀಡುವುದಾಗಿ ಭರವಸೆ ನೀಡಿದೆ. ಆದರೆ ಈ ಭರವಸೆಯು ಇರಾನ್‌ನೊಂದಿಗೆ ಗಡಿ ಹಂಚಿಕೊಂಡಿರುವ ಪಾಕಿಸ್ತಾನವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.
07:28 AM (IST) Mar 08
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ನಟ ವಿಜಯ್, ಮಹಿಳೆಯರಿಗೆ ಮಾಸಿಕ ಸಹಾಯಧನ ಮತ್ತು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳಂತಹ ಭರವಸೆಗಳನ್ನು ಘೋಷಿಸಿದ್ದಾರೆ. ಇದೇ ಸಮಯದಲ್ಲಿ, ಪತ್ನಿ ಸಂಗೀತಾ ಅವರು ವಿವಾಹೇತರ ಸಂಬಂಧದ ಆರೋಪದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.