ನವದೆಹಲಿ: ಅಮೆರಿಕದ ವ್ಯಾಪಾರ ಒಪ್ಪಂದ ಗೊಂದಲ ಮುಂದುವರೆದಿರುವ ನಡುವೆಯೇ ಚಿನ್ನದ ಬೆಲೆ ಸತತ 7ನೇ ದಿನವಾದ ಮಂಗಳವಾರ ಕೂಡಾ ಏರಿಕೆ ಕಂಡಿದೆ. ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 400 ರು. ಏರಿಕೆಯಾಗಿ 1,06,070 ರು.ಗೆ ತಲುಪಿದೆ. 99.5 ಶುದ್ದತೆಯ ಚಿನ್ನ ಸಹ 400 ರು. ಏರಿ 1,05,200 ರು.ಗೆ ಮುಟ್ಟಿದೆ. ಬೆಂಗಳೂರಿನಲ್ಲಿ 99.5 ಶುದ್ಧತೆಯ ಬಂಗಾರದ ಬೆಲೆ 10 ಗ್ರಾಂಗೆ 100 ರು. ಏರಿಕೆಯಾಗಿ 1,10,100 ರು.ಗೆ ಜಿಗಿದಿದೆ. ಕಳೆದ ಡಿಸೆಂಬರ್‌ನಲ್ಲಿ 10 ಗ್ರಾಂಗೆ 78,950 ರು. ಇದ್ದ ಬೆಲೆಯು ಈ ವರ್ಷ ಬರೋಬ್ಬರಿ 34ರಷ್ಟು ಏರಿದೆ. ಇನ್ನು ಬೆಳ್ಳಿಯು ದೆಹಲಿಯಲ್ಲಿ 100 ರು. ಏರಿಕೆಯಾಗಿ ಕೇಜಿಗೆ ದಾಖಲೆಯ 1,26,100 ರು.ಗೆ ತಲುಪಿದೆ. ಆದರೆ ಬೆಂಗಳೂರಿನಲ್ಲಿ 1000 ರು. ಕುಸಿದು 1,31,000 ರು.ಗೆ ತಲುಪಿದೆ.

10:41 PM (IST) Sep 03
ದಸರಾಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆ ಇಳಿಕೆ ಮಾಡಲಾಗಿದೆ. ಇನ್ನು ಮುಂದೆ ಎರಡು ಸ್ಲ್ಯಾಬ್ ಇರಲಿದೆ. ಕೇವಲ ಶೇಕಡಾ 5 ಹಾಗೂ 18 ಮಾತ್ರ. ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಲಿದೆ.
09:58 PM (IST) Sep 03
09:13 PM (IST) Sep 03
08:19 PM (IST) Sep 03
07:32 PM (IST) Sep 03
ಐಟಿ ಕಂಪನಿಯ ಸಿಇಒ, ಉದ್ಯೋಗಿಯೊಬ್ಬರ ಮೇಲೆ ಹೂಕುಂಡ ಎಸೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಿಇಒ ಸ್ಪಷ್ಟನೆ ನೀಡಿದ್ದು, ಕೋಪದ ಕ್ಷಣದಲ್ಲಿ ಹೂಕುಂಡವಲ್ಲ, ಹೂವಿನ ಗಿಡವನ್ನು ಕಿತ್ತು ಎಸೆದಿದ್ದಾಗಿ ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
06:27 PM (IST) Sep 03
ಉದ್ಯಮಿ ನಿಖಿಲ್ ಕಾಮತ್ ಹಾಗೂ ನಟಿ ರೇಹಾ ಚಕ್ರಬೊರ್ತಿ ಡೇಟಿಂಗ್‌ನಲ್ಲಿದ್ದಾರಾ? ಇವರಿಬ್ಬರದ್ದೂ ಎನ್ನಲಾದ ರೆಸ್ಟೋರೆಂಟ್ ಫೋಟೋ ಒಂದು ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗಿದೆ.
06:01 PM (IST) Sep 03
ಇಂಡೋನೇಷ್ಯಾದಿಂದ ಆಸ್ಟ್ರೇಲಿಯಾಗೆ ಹೊರಟಿದ್ದ ವಿಮಾನದಲ್ಲಿ ಶೌಚಾಲಯಗಳು ಮಧ್ಯಆಗಸದಲ್ಲಿ ಕೆಟ್ಟುಹೋಗಿ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾದ ಘಟನೆ ನಡೆದಿದೆ.
05:06 PM (IST) Sep 03
ಭಾರೀ ಮಳೆಯಿಂದಾಗಿ ದುಬಾರಿ ಬೆಲೆ ಹೇಳ್ತಿದ್ದ ಆಟೋ ಹಾಗೂ ಕ್ಯಾಬ್‌ಗಳು ನಡೆಯಿಂದ ಬೇಸತ್ತ ಉದ್ಯೋಗಿಗಳು ಮಿನಿ ಟ್ರಕ್ ಬಾಡಿಗೆಗೆ ಪಡೆದು ಮನೆಗೆ ತೆರಳಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
04:13 PM (IST) Sep 03
04:04 PM (IST) Sep 03
60 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಈಗ 9 ವರ್ಷಗಳ ಹಿಂದೆ ಶಿಲ್ಪಾಶೆಟ್ಟಿ ಮುಂಬೈನ ಪ್ರತಿಷ್ಠಿತ ಬಾಂದ್ರಾದಲ್ಲಿ ಸ್ಥಾಪಿಸಿದ್ದ ರೆಸ್ಟೋರೆಂಟ್‌ನ್ನು ಮುಚ್ಚುವಂತೆ ಆದೇಶವಾಗಿದ್ದು, ನಾಳೆ ಕೊನೆಯ ದಿನ ಬಾಸ್ಟಿಯನ್ ಬಾಂದ್ರಾ ಎಂಬ ಐಷಾರಾಮಿ ರೆಸ್ಟೋರೆಂಟ್ ಕೆಲಸ ಮಾಡಲಿದೆ.
03:41 PM (IST) Sep 03
02:48 PM (IST) Sep 03
ಬೆಂಗಳೂರಿನಲ್ಲಿ ವಾಸಿಸುವ ಅನೇಕರ ಗೋಳು ಎಷ್ಟು ಸ್ಯಾಲರಿ ಸಿಕ್ರು ಸಾಕಾಗಲ್ಲ ಎಂಬುದು. ಬೆಂಗಳೂರಿನ ಜೀವನವೆಚ್ಚ(Living cost) ದಿನೇ ದಿನೇ ಏರಿಕೆಯಾಗುತ್ತಿರುವುದು ಇದಕ್ಕೆ ಕಾರಣ. ಹೀಗಿರುವಾಗ ಬೆಂಗಳೂರಿನಲ್ಲಿ ವಾಸ ಮಾಡ್ತಿರುವ ದಂಪತಿಗಳು ತಮ್ಮ ತಿಂಗಳ ವೆಚ್ಚದ ಬಗ್ಗೆ ಹೇಳಿದ್ದು ಕೇಳಿ ಜನ ಶಾಕ್ ಆಗಿದ್ದಾರೆ.
02:43 PM (IST) Sep 03
25 ವರ್ಷದ ಸುಹಾನಾ ಖಾನ್ ಅವರು ಅಪ್ಪ ಶಾರುಖ್ ಖಾನ್ ಜೊತೆ ಕಿಂಗ್ ಚಿತ್ರದ ಖುಷಿಯಲ್ಲಿ ಇರುವ ನಡುವೆಯೇ, ಅವರಿಗೆ ಅಕ್ರಮ ಭೂಕಬಳಿಕೆ ಆರೋಪ ಕೇಳಿಬಂದಿದೆ. ಏನಿದು ವಿಷ್ಯ? ಏನಿದೂ ಕಾನೂನು ಸಂಕಷ್ಟ?
02:16 PM (IST) Sep 03
Train running status online and offline: ರೈಲಿನಲ್ಲಿ ಪ್ರಯಾಣ ಸುಲಭ ಮತ್ತು ಬಜೆಟ್‌ಗೆ ಸ್ನೇಹಿ. ಆದರೆ ಕೆಲವೊಮ್ಮೆ ರೈಲು ತಡವಾಗಿ ಬಂದ್ರೆ ತೊಂದರೆಯಾಗುತ್ತde. ಹಾಗಾಗಿ ರೈಲು ಈಗ ಎಲ್ಲಿದೆ, ಯಾವಾಗ ಬರುತ್ತೆ ಅಂತ ತಿಳ್ಕೊಳ್ಳೋ ಸಿಂಪಲ್ ಟ್ರಿಕ್ಸ್ ಇಲ್ಲಿವೆ
12:55 PM (IST) Sep 03
ವೈರಲ್ ಆಗಿದ್ದ ನಾಯಿಯ ಆಧಾರ್ ಕಾರ್ಡ್‌ನ ಪೋಟೋದ ಬೆನ್ನು ಬಿದ್ದ ಮಾಧ್ಯಮವೊಂದಕ್ಕೆ ಅದರಲ್ಲಿನ ವಿಳಾಸವನ್ನು ಬೆನ್ನತ್ತಿ ಹೋದಾಗ ಅವರು ಮನಕಲುಕುವ ಕತೆ ಕೇಳುವಂತಹ ಸ್ಥಿತಿ ನಿರ್ಮಾಣವಾಗಿತ್ತು.
11:44 AM (IST) Sep 03
ಪ್ರವಾಹ ಪೀಡಿತ ಪಂಜಾಬ್‌ನಲ್ಲಿ ಸಿಲುಕಿದ್ದ ನವಜಾತ ಶಿಶು ಮತ್ತು ತಾಯಿಯನ್ನು ಭಾರತೀಯ ಸೇನೆ ರಕ್ಷಿಸಿದೆ. ತಾಯಿ ಮತ್ತು 15 ದಿನಗಳ ಮಗು, ನಾಲ್ಕು ದಿನಗಳಿಂದ ನೀರಿನಿಂದ ಮುಳುಗಿದ್ದ ಮನೆಯ ಮೊದಲ ಮಹಡಿಯಲ್ಲಿ ಸಿಲುಕಿಕೊಂಡಿದ್ದರು.
10:39 AM (IST) Sep 03
Gold And Silver Price: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಚಿನ್ನದ ಬೆಲೆ 9 ದಿನಗಳಿಂದ ಏರಿಕೆಯಾಗುತ್ತಿದೆ. ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ದರಗಳ ವಿವರ ಇಲ್ಲಿದೆ.
09:53 AM (IST) Sep 03
09:00 AM (IST) Sep 03
08:49 AM (IST) Sep 03
International News: ಮೋದಿ-ಪುಟಿನ್ ಭೇಟಿಯ ಬಳಿಕ ಈ ಬೆಳವಣಿಗೆ ನಡೆದಿದ್ದು, ಟ್ರಂಪ್‌ಗೆ ಪರೋಕ್ಷ ತಿರುಗೇಟು ನೀಡಿದಂತಾಗಿದೆ. ಈ ರಿಯಾಯ್ತಿ ಭಾರತೀಯ ತೈಲ ಕಂಪನಿಗಳಿಗೆ ಭಾರಿ ಲಾಭ ತರುವ ನಿರೀಕ್ಷೆಯಿದೆ.
08:11 AM (IST) Sep 03
07:59 AM (IST) Sep 03
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಲೆಟ್‌ಪ್ರೂಫ್ ರೈಲಿನಲ್ಲಿ ಆಗಮಿಸಿದ್ದಾರೆ.