ಲೂಧಿಯಾನ: ಕಮಿಡಿಯನ್ ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ 3 ಬಾರಿ ಗುಂಡಿನ ದಾಳಿ ನಡೆಸಿದ್ದ ಭೂಗತ ಪಾತಕಿಗಳು, ಒಂದು ವೇಳೆ ಕಪಿಲ್ ಹಣ ಕೊಡದೇ ಹೋದಲ್ಲಿ ಅವರ ಹತ್ಯೆಗೂ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಗುಂಡಿನ ದಾಳಿ ಪ್ರಕರಣ ಸಂಬಂಧ ಬಂಧಿತ ಬಂದು ಮಾನ್ ಸಿಂಗ್ ವಿಚಾರಣೆ ವೇಳೆ ಇಂಥದ್ದೊಂದು ವಿಷಯ ಬಾಯಿಬಿಟ್ಟಿದ್ದಾನೆ. ಈತ ಭೂಗತ ಪಾತಕಿ ಗೋಲ್ಡಿ ಧಿಲ್ಲೋನ್ ಗ್ಯಾಂಗ್‌ನ ಆಪ್ತ. ಜುಲೈನಲ್ಲಿ ಕೆಫೆ ಆರಂಭವಾದ ಬಳಿಕ 3 ಬಾರಿ ದಾಳಿ ನಡೆದಿದೆ.

11:54 PM (IST) Nov 30
ಪಾಕಿಸ್ತಾನದ ಕುಖ್ಯಾತ ದರೋಡೆಕೋರ ಶೆಹಜಾದ್ ಭಟ್ಟಿ ಗ್ಯಾಂಗ್‌ನ ಮೂವರು ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಭಟ್ಟಿ ಸಿರ್ಸಾ ಮತ್ತು ಗುರುದಾಸ್‌ಪುರ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿದ್ದಾನೆ. ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಮತ್ತು ಆತನ ಕುಟುಂಬಕ್ಕೆ ಭಟ್ಟಿ ಜೀವ ಬೆದರಿಕೆ ಹಾಕಿದ್ದಾನೆ.
11:49 PM (IST) Nov 30
Dangerous Chinese kite string: ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಎಲ್ಲಿಂದಲೋ ಬಂದ ಚೈನೀಸ್ ಮಾಂಜಾ(ಗಾಳಿಪಟದ ದಾರ) ಕತ್ತಿಗೆ ಸಿಲುಕಿ 16ರ ಹರೆಯದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
09:32 PM (IST) Nov 30
Cyclone Ditwah:ಶ್ರೀಲಂಕಾದಲ್ಲಿ ವಿನಾಶ ಸೃಷ್ಟಿಸಿದ ದಿತ್ವಾ ಚಂಡಮಾರುತವು ತಮಿಳುನಾಡಿಗೆ ಅಪ್ಪಳಿಸಿದ್ದು, ಮೂವರ ಸಾವಿಗೆ ಕಾರಣವಾಗಿದೆ ಮತ್ತು ಅಪಾರ ಹಾನಿಯನ್ನುಂಟುಮಾಡಿದೆ. ಹವಾಮಾನ ಇಲಾಖೆಯು ತಮಿಳುನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಆಂಧ್ರಪ್ರದೇಶಕ್ಕೂ ಭಾರೀ ಮಳೆಯ ಎಚ್ಚರಿಕೆ ನೀಡಿದೆ.
08:13 PM (IST) Nov 30
07:55 PM (IST) Nov 30
Nanded honor killing: ಮಹಾರಾಷ್ಟ್ರದ ನಾಂದೇಡ್‌ನಲ್ಲಿ, ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ಕುಟುಂಬದವರೇ ಆತನನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಯುವತಿ, ತನ್ನ ಪ್ರಿಯಕರನ ಶವವನ್ನೇ ಮದುವೆಯಾಗಿದ್ದಾಳೆ.
06:33 PM (IST) Nov 30
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್‌ಐಆರ್ ದಾಖಲು. ಇದನ್ನು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಖಂಡಿಸಿದ್ದು, ಈ ಬೆಳವಣಿಗೆಯು ಸಂಸತ್ತಿನಲ್ಲಿ ವಿಪಕ್ಷಗಳ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
06:32 PM (IST) Nov 30
ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳ ಅಂಕಗಳ ಮೇಲಿನ ಒತ್ತಡದಿಂದ ಯುವಕರು ಖಿನ್ನತೆಗೆ ಜಾರುತ್ತಿದ್ದಾರೆ. ಆದರೆ, ಕಡಿಮೆ ಓದಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮ್ಮ ಪರಿಶ್ರಮದಿಂದ ಯಶಸ್ಸಿನ ಶಿಖರವೇರಿದ್ದಾರೆ. ಇದು ಯಶಸ್ಸಿಗೆ ಅಂಕಗಳೇ ಅಂತಿಮವಲ್ಲ, ಬದಲಾಗಿ ಗುರಿ ಮತ್ತು ಛಲ ಮುಖ್ಯ ಎಂಬುದನ್ನು ಸಾರುತ್ತದೆ.
06:24 PM (IST) Nov 30
ಜೈಪುರದಲ್ಲಿ, ಟ್ರಾಫಿಕ್ ಚಲನ್ ನೀಡದೆ ವಾಹನ ಸವಾರರಿಂದ ಲಂಚ ವಸೂಲಿ ಮಾಡಲು ಸ್ವಂತ ಕ್ಯೂಆರ್ ಕೋಡ್ ಬಳಸುತ್ತಿದ್ದ ಟ್ರಾಫಿಕ್ ಕಾನ್ಸ್‌ಟೇಬಲ್‌ನನ್ನು ಬಂಧಿಸಲಾಗಿದೆ. ಈತನ ಜೊತೆ ಇನ್ನಿಬ್ಬರನ್ನು ಬಂಧಿಸಿದ್ದು ಇವರು ಸಿಕ್ಕಿಬಿದ್ದಿದ್ದು ಹೇಗೆ ಎಂಬ ಡಿಟೇಲ್ ಸ್ಟೋರಿ ಇಲ್ಲಿದೆ…
05:52 PM (IST) Nov 30
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ವೈಟ್‌ವಾಶ್ ಆಗಿದೆ. ತಂಡದಲ್ಲಿ ಸ್ಪೆಷಲಿಸ್ಟ್ ಆಫ್-ಸ್ಪಿನ್ನರ್ ಇಲ್ಲದಿರುವ ಬಗ್ಗೆ ಹರ್ಭಜನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಅವರನ್ನು ಹೆಚ್ಚು ಬಳಸಿಕೊಳ್ಳಬೇಕು ಎಂದಿದ್ದಾರೆ.
05:33 PM (IST) Nov 30
ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿಯವರ ಭರ್ಜರಿ ಶತಕ (135) ಹಾಗೂ ರೋಹಿತ್ ಶರ್ಮಾ (57) ಮತ್ತು ನಾಯಕ ಕೆಎಲ್ ರಾಹುಲ್ (60) ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ 8 ವಿಕೆಟ್‌ಗೆ 349 ರನ್ ಗಳಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ 350 ರನ್‌ಗಳ ಕಠಿಣ ಗುರಿ ನೀಡಿದೆ.
05:17 PM (IST) Nov 30
05:08 PM (IST) Nov 30
ಶಾಲಾ ಶಿಕ್ಷಣದಲ್ಲಿ ದಡ್ಡನಾಗಿದ್ದ 15 ವರ್ಷದ ಅಜ್ಸಲ್, ಕೃತಕ ಬುದ್ಧಿಮತ್ತೆ (AI) ಬಳಸಿ ಜ್ಞಾನ ಪಡೆದು ತ್ಯಾಜ್ಯ ವಸ್ತುಗಳಿಂದ ಅದ್ಭುತ ವರ್ಕಿಂಗ್ ಮಾಡೆಲ್‌ಗಳನ್ನು ನಿರ್ಮಿಸುತ್ತಿದ್ದಾನೆ. ಯೂಟ್ಯೂಬ್ ಮತ್ತು AI ಸಹಾಯದಿಂದ ಸ್ವಯಂ-ಕಲಿತು, ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸು ಕಾಣುತ್ತಿದ್ದಾನೆ.
04:53 PM (IST) Nov 30
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದ ರೋಹಿತ್ ಶರ್ಮಾ, ಪಾಕಿಸ್ತಾನದ ಶಾಹಿದ್ ಅಫ್ರಿದಿ ದಾಖಲೆಯನ್ನು ಮುರಿದಿದ್ದಾರೆ.
04:25 PM (IST) Nov 30
04:08 PM (IST) Nov 30
ಮಧ್ಯಪ್ರದೇಶದಲ್ಲಿ, ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಆಟಗಾರನಾದ 8ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಕೃತ್ಯವೆಸಗುವ ಮೊದಲು ಆತ 52 ಬಾರಿ ಕ್ಷಮೆ ಕೇಳಿದ್ದಾನೆ ಎಂದು ವರದಿಯಾಗಿದೆ.
03:25 PM (IST) Nov 30
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಅಚ್ಚರಿಯ ತೀರ್ಮಾನಗಳು ಹೊರಬರುತ್ತಿವೆ. ಫಾಫ್ ಡು ಪ್ಲೆಸಿಸ್ ಐಪಿಎಲ್‌ನಿಂದ ಹಿಂದೆ ಸರಿದ ಬೆನ್ನಲ್ಲೇ ಇದೀಗ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಅಚ್ಚರಿಯ ರೀತಿಯಲ್ಲಿ ಐಪಿಎಲ್‌ಗೆ ಗುಡ್ ಬೈ ಹೇಳಿದ್ದಾರೆ.
01:17 PM (IST) Nov 30
ಸೋಷಿಯಲ್ ಮೀಡಿಯಾದಲ್ಲಿ 19 ನಿಮಿಷದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿರುವ ಯುವತಿ ತಾನೇ ಎಂದು ತಪ್ಪಾಗಿ ಭಾವಿಸಿದ್ದರಿಂದ 'ಸ್ವೀಟ್ ಜನ್ನತ್' ಎಂಬ ಡಿಜಿಟಲ್ ಕ್ರಿಯೇಟರ್ನ ಫಾಲೋವರ್ಸ್ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಲೈವ್ಗೆ ಬಂದು ಸ್ಪಷ್ಟನೆ ನೀಡಿರುವ ಆಕೆ, ಅದು ತಾನಲ್ಲ ಎಂದಿದ್ದಾಳೆ.
01:16 PM (IST) Nov 30
ರಾಂಚಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಋತುರಾಜ್ ಗಾಯಕ್ವಾಡ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿದೆ.
12:28 PM (IST) Nov 30
10:57 AM (IST) Nov 30
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮತ್ತೊಂದು ಅದ್ಭುತ ನಡೆದಿದೆ. ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸಿ ಯುವ ಆಟಗಾರ ಅಭಿಷೇಕ್ ಶರ್ಮಾ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ.
10:35 AM (IST) Nov 30
₹200 ಹಿಂಬಾಕಿ ಕಾರಣಕ್ಕೆ ನಾಮಪತ್ರ ತಿರಸ್ಕೃತಗೊಂಡಿದ್ದ ಪತ್ರಕರ್ತ ಕೆ.ಎನ್.ಶಾಂತಕುಮಾರ್ ಅವರಿಗೆ ಕೆಎಸ್‌ಸಿಎ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಹೈಕೋರ್ಟ್ ಅನುಮತಿ ನೀಡಿದೆ. ಇದರಿಂದಾಗಿ ಅವಿರೋಧ ಆಯ್ಕೆಯ ಕನಸು ಭಗ್ನಗೊಂಡಿದೆ.
09:28 AM (IST) Nov 30
Bigg Boss Kannada 12 Updates: ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಸೀಸನ್ 11 ಸ್ಪರ್ಧಿಗಳು ಬಂದಿದ್ದೇ ಬಂದಿದ್ದು, ಆಟದ ವೈಖರಿ ಬದಲಾಗಿದೆ. ಗಿಲ್ಲಿ ನಟ ಅವರೇ ಇನ್ನಷ್ಟು ಹೈಲೈಟ್ ಆಗಿದೆ. ಸಂಡೇ ವಿಥ್ ಸುದೀಪ ಶೋನಲ್ಲಿ ಗಿಲ್ಲಿ v/s ರಜತ್ ಎನ್ನುವ ಹಾಗೆ ಆಗಿದೆ. ಹಾಗಾದರೆ ಈ ವಾರ ಏನಾಯ್ತು?
09:03 AM (IST) Nov 30
Kannada Actor Umesh: ಇತ್ತೀಚೆಗೆ ಆಸ್ಪತ್ರೆ ಬೆಡ್ ಮೇಲಿದ್ದಾಗಲೂ ಕಾಮಿಡಿ ಮಾಡಿದ್ದ ಹಿರಿಯ ನಟ ಉಮೇಶ್ ಅವರು ವಿಧಿವಶರಾಗಿದ್ದಾರೆ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಕಾಲನ ಕರೆಗೆ ಓಗುಟ್ಟಿದ್ದಾರೆ. ಚಿತ್ರರಂಗದ ಗಣ್ಯರು ಉಮೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
08:04 AM (IST) Nov 30
Shrirasthu Shubhamasthu Kannada Serial: ‘ಶ್ರೀರಸ್ತು ಶುಭಮಸ್ತು’, ‘ಇಷ್ಟದೇವತೆ’ ಮುಂತಾದ ಧಾರಾವಾಹಿ ಖ್ಯಾತಿಯ ನಟ ಶ್ರೀರಾಮ್ ಅವರು ಇಂದು ಮದುವೆ ಆಗಲಿದ್ದಾರೆ. ಈಗಾಗಲೇ ಅವರು ಕನ್ನಡ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಿದ್ದಾರೆ.