LIVE NOW
Published : Mar 03, 2026, 06:44 AM ISTUpdated : Mar 03, 2026, 10:43 PM IST

India Latest News Live: ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನೂತನ ರಕ್ಷಣಾ ಸಚಿವ ಸಯ್ಯೆದ್ ಮಜೀದ್ ಹತ್ಯೆ ವರದಿ

ಸಾರಾಂಶ

ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ಪರಿಣಾಮವು ಅಮೂಲ್ಯ ಲೋಹಗಳ ಮೇಲೆ ಜಾಗತಿಕವಾಗಿ ಬಿದ್ದಿದೆ. ಬೆಂಗಳೂರಿನಲ್ಲಿ 1 ಕೆ.ಜಿ. ಬೆಳ್ಳಿ ಬೆಲೆಯಲ್ಲಿ ಒಮ್ಮೆಲೆ 20,000 ರು. ಏರಿಕೆಯಾಗಿ 3,15,000 ರು. ಆಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 2350 ರು. ತಗ್ಗಿ, 15,630 ರು. ಆಗಿದೆ. 25 ಕ್ಯಾರಟ್‌ನ ಹೊನ್ನಿನ ದರದಲ್ಲೂ 2,580 ರು. ಇಳಿಕೆಯಾಗಿ 17,051 ರು ಆಗಿದೆ.

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬೆಳ್ಳಿಯ ಬೆಲೆಯೂ 3,15,000 ರು. ಆಗಿದೆ. 22 ಮತ್ತು 24 ಕ್ಯಾರಟ್‌ನ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 2350 ರು. ಮತ್ತು 2570 ರು. ಕಡಿಮೆಯಾಗಿ 15,645 ರು. ಮತ್ತು 17,066 ರು. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.

ರುಪಾಯಿ ಮೌಲ್ಯ 41 ಪೈಸೆ ಕುಸಿದು 91.49ಕ್ಕೆ ಅಂತ್ಯ

ಮುಂಬೈ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ಕರೆನ್ಸಿಗೆ ಬೇಡಿಕೆ ಹೆಚ್ಚಾಗಿದ್ದು, ಸೋಮವಾರ ಡಾಲರ್‌ ಎದುರು ರುಪಾಯಿ ಮೌಲ್ಯ 41 ಪೈಸೆಗಳಷ್ಟು ಕುಸಿತವಾಗಿ 91.49ಕ್ಕೆ ಅಂತ್ಯವಾಗಿದೆ. ದಿನದ ಆರಂಭದಲ್ಲಿ ರುಪಾಯಿ ಮೌಲ್ಯ 91.23 ಇತ್ತು. ದಿನದ ಮಧ್ಯಕ್ಕೆ ಮತ್ತಷ್ಟು ಕುಸಿದು 91.65ಕ್ಕೆ ತಲುಪಿತು. ಆದರೆ ದಿನದಂತ್ಯಕ್ಕೆ 91.49ರಲ್ಲಿ ನೆಲೆಗೊಂಡಿತು

10:43 PM (IST) Mar 03

ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನೂತನ ರಕ್ಷಣಾ ಸಚಿವ ಸಯ್ಯೆದ್ ಮಜೀದ್ ಹತ್ಯೆ ವರದಿ

ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನೂತನ ರಕ್ಷಣಾ ಸಚಿವ ಸಯ್ಯೆದ್ ಮಜೀದ್ ಹತ್ಯೆ ವರದಿಯಾಗಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ದಾಳಿ ನಡೆಸಿದೆ. ಈ ವೇಳೆ ಪ್ರಯಾಣಿಕರ ವಿಮಾನವೂ ಧ್ವಂಸಗೊಂಡಿದೆ.

 

Read Full Story

10:03 PM (IST) Mar 03

ಅರ್ಜುನ್ ತೆಂಡೂಲ್ಕರ್ ಸಾನಿಯಾ ಮೆಹಂದಿ ಸೆರಮನಿ ಮೊದಲ ವಿಡಿಯೋ ಬಹಿರಂಗ

ಅರ್ಜುನ್ ತೆಂಡೂಲ್ಕರ್ ಸಾನಿಯಾ ಮೆಹಂದಿ ಸೆರಮನಿ ಮೊದಲ ವಿಡಿಯೋ ಬಹಿರಂಗ, ಸಚಿನ್ ತೆಂಡೂಲ್ಕರ್ ಕುಟುಂಬ, ಆಪ್ತರು, ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅದ್ಧೂರಿ ಕಾರ್ಯಕ್ರಮದ ವಿಡಿಯೋ ಇಲ್ಲಿದೆ.

 

Read Full Story

09:03 PM (IST) Mar 03

ವಿಧಾನಸಭೆ ಚುನಾವಣೆಗೆ 42 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್, ರಂಗೇರಿದ ಅಸ್ಸಾಂ ಎಲೆಕ್ಷನ್

ವಿಧಾನಸಭೆ ಚುನಾವಣೆಗೆ 42 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್, ಅಧಿಕಾರಕ್ಕೇರಲೇಬೇಕು ಎಂದು ಪಣತೊಟ್ಟಿರುವ ಅಸ್ಸಾಂ ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

Read Full Story

08:38 PM (IST) Mar 03

ಮಗನ ಆಸೆ ಈಡೇರಿಸಲು ಅವನಿಂದ್ಲೇ ತಾಯಿಯಾದಳು ಖ್ಯಾತ ಕಿರುತೆರೆ ನಟಿ! ಅಷ್ಟಕ್ಕೂ ಆಗಿದ್ದೇನು?

ಸ್ಪ್ಯಾನಿಷ್ ನಟಿ ಆನಾ ಓಬ್ರೀಗಾನ್, ಕ್ಯಾನ್ಸರ್‌ನಿಂದ ಮೃತಪಟ್ಟ ತನ್ನ 27 ವರ್ಷದ ಮಗನ ಕೊನೆಯ ಆಸೆಯನ್ನು ಈಡೇರಿಸಲು   ಮಗುವನ್ನು ಪಡೆದಿದ್ದಾರೆ. ಮಗನ ವೀರ್ಯಾಣು ಬಳಸಿ ಜನಿಸಿದ ಈ ಮಗು, ವಾಸ್ತವದಲ್ಲಿ ಆಕೆಗೆ ಮೊಮ್ಮಗಳಾಗಿದ್ದು, ಕಾನೂನುಬದ್ಧವಾಗಿ ಮಗಳಾಗಿದ್ದಾಳೆ. 

Read Full Story

08:32 PM (IST) Mar 03

ದಾಳಿ ಬೆನ್ನಲ್ಲೇ 750 ಕೋಟಿ ರೂ ಖಾಸಗಿ ಜೆಟ್‌ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡ್

ದಾಳಿ ಬೆನ್ನಲ್ಲೇ 750 ಕೋಟಿ ರೂ ಖಾಸಗಿ ಜೆಟ್‌ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡ್, ಇರಾನ್ ಡ್ರೋನ್ ನೇರವಾಗಿ ರಿಯಾದ್ ಎಂಬಸಿ ಮೇಲೆ ದಾಳಿ ಮಾಡಿದೆ. ಇದರ ಪರಿಣಾಮ ರೋನಾಲ್ಡೋ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾಳೆ.

 

Read Full Story

08:10 PM (IST) Mar 03

ಯುದ್ಧದಿಂದಾಗಿ ಭಾರತಕ್ಕೆ ರಷ್ಯಾದಿಂದ ಕಚ್ಚಾತೈಲ ಖರೀದಿ ಹೆಚ್ಚಿಸುವ ಅನಿವಾರ್ಯತೆ - ಮತ್ತೆ ಸುಂಕ ಹೇರಲಿದೆಯಾ ಅಮೆರಿಕಾ

ಅಮೆರಿಕಾ-ಇಸ್ರೇಲ್ ದಾಳಿಯ ನಂತರ ಇರಾನ್, ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು, ಭಾರತವು ಅಮೆರಿಕಾದೊಂದಿಗಿನ ರಾಜತಾಂತ್ರಿಕ ಒತ್ತಡದ ನಡುವೆಯೂ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ. 

Read Full Story

07:18 PM (IST) Mar 03

West Asia Conflict - ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ - 48 ಗಂಟೆಯಲ್ಲಿ 8 ನಾಯಕರೊಂದಿಗೆ ಮೋದಿ ಮಾತುಕತೆ!

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ 48 ಗಂಟೆಗಳಲ್ಲಿ 8 ದೇಶಗಳ ನಾಯಕರೊಂದಿಗೆ ಮಾತನಾಡಿದ್ದಾರೆ. ಕತಾರ್, ಒಮಾನ್, ಸೌದಿ ಮೇಲಿನ ದಾಳಿಯನ್ನು ಖಂಡಿಸಿ, ಶಾಂತಿಗೆ ಕರೆ ನೀಡಿದ್ದಾರೆ.
Read Full Story

07:17 PM (IST) Mar 03

ತಿರುಪತಿ ತಿಮ್ಮಪ್ಪನ ದರ್ಶನ ಕ್ಯೂನಲ್ಲಿ ಭಕ್ತರ ಜಟಾಪಟಿ, ಬೆಲ್ಟ್ ಬಿಚ್ಚಿ ಹೊಡೆದು ರಂಪಾಟ

ತಿರುಪತಿ ತಿಮ್ಮಪ್ಪನ ದರ್ಶನ ಕ್ಯೂನಲ್ಲಿ ಭಕ್ತರ ಜಟಾಪಟಿ, ಬೆಲ್ಟ್ ಬಿಚ್ಚಿ ಹೊಡೆದು ರಂಪಾಟ ಮಾಡಲಾಗಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಭಕ್ತರು ಇದ್ದ ದರ್ಶನ ಸಾಲಿನಲ್ಲೇ ಈ ಘಟನೆ ನಡೆದಿದೆ.

Read Full Story

06:50 PM (IST) Mar 03

ಡ್ಯಾಡಿ ಡ್ಯೂಟಿ, ಲಂಡನ್‌ನಲ್ಲಿ ಪ್ರತಿ ದಿನ ಮಗನ ಶಾಲೆಗೆ ಕರೆದುಕೊಂಡು ಹೋಗ್ತಾರೆ ಕೊಹ್ಲಿ

ಡ್ಯಾಡಿ ಡ್ಯೂಟಿ, ಲಂಡನ್‌ನಲ್ಲಿ ಪ್ರತಿ ದಿನ ಮಗನ ಶಾಲೆಗೆ ಕರೆದುಕೊಂಡು ಹೋಗ್ತಾರೆ ಕೊಹ್ಲಿ, ಕೊಹ್ಲಿ ಆಕಾಯ್‌ನನ್ನ ಶಾಲೆಗೆ ಕರೆದುಕೊಂಡು ಬರುತ್ತಿರುವ ದೃಶ್ಯವೊಂದು ಸದ್ದು ಮಾಡುತ್ತಿದೆ. ಫ್ಯಾಮಿಲಿಗೆ ಸಂಪೂರ್ಣ ಸಮಯ ನೀಡಿದ್ದಾರೆ.

 

Read Full Story

06:48 PM (IST) Mar 03

ದೇಶಗಳ ನಡುವಿನ ದ್ವೇಷಕ್ಕೆ ಬಲಿಯಾದ ಹಸುಗೂಸು, ಖಮೇನಿಯ 14 ತಿಂಗಳ ಮೊಮ್ಮಗಳ ದಾರುಣ ಸಾವು!

Ayatollah Khamenei and Family Killed in US-Israel Airstrikes: Reports ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಬೃಹತ್ ವಾಯುದಾಳಿಯಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅವರ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

Read Full Story

06:37 PM (IST) Mar 03

Crude Oil - ಹೆದರಬೇಡಿ, ಭಾರತದ ಬಳಿ ಸಾಕಷ್ಟು ತೈಲವಿದೆ! ಆಮದು ನಿಂತರೂ ಎಷ್ಟು ದಿನ ನಿಭಾಯಿಸಬಹುದು ಗೊತ್ತಾ?

ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದ್ದು, ತೈಲ ಸಾಗಾಟಕ್ಕೆ ಅಡ್ಡಿಯಾಗಿದೆ. ಆದಾಗ್ಯೂ, ಭಾರತವು ಸಾಕಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಹೊಂದಿದ್ದು ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದಿದೆ.

Read Full Story

06:07 PM (IST) Mar 03

ಟಿ20 ವಿಶ್ವಕಪ್‌ನಲ್ಲಿ ಈ 2 ತಂಡಗಳೇ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ! ಅಚ್ಚರಿ ಭವಿಷ್ಯ ನುಡಿದ ಪಾಕ್ ದಿಗ್ಗಜ ಕ್ರಿಕೆಟಿಗ

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟದಲ್ಲಿದ್ದು, ಇದೀಗ ಸೆಮಿಫೈನಲ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಫೈನಲ್ ಪ್ರವೇಶಿಸುವುದು ಯಾರು ಎನ್ನುವ ಬಗ್ಗೆ ಇಬ್ಬರು ದಿಗ್ಗಜ ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ.

 

Read Full Story

05:31 PM (IST) Mar 03

'ಗಲ್ಫ್‌ನಲ್ಲಿರುವ 1 ಕೋಟಿ ಭಾರತೀಯರ ಸುರಕ್ಷತೆಯೇ ಆದ್ಯತೆ' - ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸಲು ಭಾರತ ಆಗ್ರಹ

ಮಧ್ಯಪ್ರಾಚ್ಯದಲ್ಲಿ ಹರಡುತ್ತಿರುವ ಯುದ್ಧದಿಂದಾಗಿ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಗಲ್ಫ್‌ನಲ್ಲಿರುವ ಕೋಟ್ಯಂತರ ಭಾರತೀಯರ ಸುರಕ್ಷತೆ, ದೇಶದ ವ್ಯಾಪಾರ ಮತ್ತು ಇಂಧನ ಮಾರ್ಗಗಳ ಮೇಲಾಗುವ ಪರಿಣಾಮಗಳ ಬಗ್ಗೆ ಸರ್ಕಾರ ಆತಂಕಗೊಂಡಿದ್ದು, ತಕ್ಷಣವೇ ಮಾತುಕತೆ ಮೂಲಕ ಸಂಘರ್ಷ ಕೊನೆಗೊಳಿಸಲು ಕರೆ ನೀಡಿದೆ.
Read Full Story

05:13 PM (IST) Mar 03

ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಿಂದ ಬ್ಯಾನ್ ಆಗ್ತಾರಾ ಸಂಜು ಸ್ಯಾಮ್ಸನ್? ಶುರುವಾಯ್ತು ಹೊಸ ಭೀತಿ!

ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ತಂದುಕೊಟ್ಟ ಸಂಭ್ರಮದಲ್ಲಿ ಹೆಲ್ಮೆಟ್ ಬಿಸಾಡಿದ ಸಂಜು ಸ್ಯಾಮ್ಸನ್ ಐಸಿಸಿ ಶಿಸ್ತು ಕ್ರಮ ಎದುರಿಸುವ ಸಾಧ್ಯತೆಯಿದೆ. ಇದು 'ಲೆವೆಲ್ 1' ಅಪರಾಧವಾದ್ದರಿಂದ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ನಿಷೇಧ ಹೇರುವ ಸಾಧ್ಯತೆ ಕಡಿಮೆ.

Read Full Story

04:59 PM (IST) Mar 03

ಮಧ್ಯಪ್ರಾಚ್ಯ ಸಂಘರ್ಷ - ಭಾರತ ಇನ್ನೂ ಕಾಯುವುದು ಸೂಕ್ತವಲ್ಲ, ತೈಲ, ಚಿನ್ನದ ಆಮದು ಅವಲಂಬನೆಗೆ ಅನಿಲ್ ಆರ್ಥಿಕ ಸಲಹೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವು ಭಾರತದ ಆರ್ಥಿಕತೆಗೆ ಅಪಾಯವನ್ನುಂಟುಮಾಡಿದೆ. ದೇಶದ ಆಮದು ಅವಲಂಬನೆಯನ್ನು ಎತ್ತಿ ತೋರಿಸಿರುವ ಉದ್ಯಮಿ ಅನಿಲ್ ಅಗರ್ವಾಲ್ಸ್ವಾ ವಲಂಬನೆ ಸಾಧಿಸಲು ದೇಶೀಯ ಸಂಪನ್ಮೂಲಗಳ ಉತ್ಪಾದನೆಯನ್ನು ತುರ್ತಾಗಿ ಹೆಚ್ಚಿಸಬೇಕೆಂದು ಸಲಹೆ ನೀಡಿದ್ದಾರೆ.

Read Full Story

04:58 PM (IST) Mar 03

ಖಮೇನಿ ಹತ್ಯೆ, ಭಾರತ ತೊರೆದು ಇರಾನ್‌ನಲ್ಲಿ ನೆಲೆಸಲು ಸಿದ್ಧ ಎಂದ ಬಿಗ್ ಬಾಸ್ ಮಾಜಿ ಸ್ಪರ್ಧಿ

ಖಮೇನಿ ಹತ್ಯೆ, ಭಾರತ ತೊರೆದು ಇರಾನ್‌ನಲ್ಲಿ ನೆಲೆಸಲು ಸಿದ್ಧ ಎಂದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಸರ್ವೋಚ್ಚ ನಾಯಕನ ಹತ್ಯೆ ಬೆನ್ನಲ್ಲೇ ತಾನು ಭಾರತ ತೊರೆದು ಇರಾನ್‌ಗೆ ಮರಳಲು ಸಿದ್ದ ಎಂದಿದ್ದಾರೆ.

Read Full Story

04:56 PM (IST) Mar 03

Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?

ತಮಿಳು ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ವಿಚ್ಛೇದನದ ಸುದ್ದಿಯ ನಡುವೆ ನಟಿ ತ್ರಿಷಾ ಹೆಸರು ಕೇಳಿಬರುತ್ತಿದೆ. ತ್ರಿಷಾ ಅವರದ್ದು ಎನ್ನಲಾದ ವೈರಲ್ ಪೋಸ್ಟ್ ಇದಕ್ಕೆ ಕಾರಣ ಎನ್ನಲಾಗಿದ್ದು, ಅದು ಎಡಿಟ್ ಮಾಡಲಾದ ಸುಳ್ಳು ಪೋಸ್ಟ್ ಎಂಬುದು ಬಹಿರಂಗವಾಗಿದೆ.

Read Full Story

04:24 PM (IST) Mar 03

UN role in Iran conflict - ಇರಾನ್ ಮೇಲಿನ ದಾಳಿಯನ್ನ ವಿಶ್ವಸಂಸ್ಥೆ ಏಕೆ ತಡೆಯುತ್ತಿಲ್ಲ ಗೊತ್ತಾ?

ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿಗೆ ವಿಶ್ವಸಂಸ್ಥೆ ಮೌನವಹಿಸಿದೆ. ಭದ್ರತಾ ಮಂಡಳಿಯ ಖಾಯಂ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಮತ್ತು ವೀಟೋ ಅಧಿಕಾರದ ಕಾರಣದಿಂದಾಗಿ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಈ ಲೇಖನವು ವಿಶ್ವಸಂಸ್ಥೆಯ ಈ ಅಸಹಾಯಕತೆಯ ಹಿಂದಿನ ಕಾರಣಗಳನ್ನು ವಿಶ್ಲೇಷಿಸುತ್ತದೆ.
Read Full Story

04:01 PM (IST) Mar 03

Blood Moon ಇಂದು ಏಕಕಾಲಕ್ಕೆ ಸೂರ್ಯ ಚಂದ್ರ ಗೋಚರ, ಖಗ್ರಾಸ ಗ್ರಹಣದ ಅಪರೂಪದ ವಿದ್ಯಮಾನ

Blood Moon ಇಂದು ಏಕಕಾಲಕ್ಕೆ ಸೂರ್ಯ ಚಂದ್ರ ಗೋಚರ, ಖಗ್ರಾಸ ಗ್ರಹಣದ ಅಪರೂಪದ ವಿದ್ಯಮಾನ, ಸಾಮಾನ್ಯವಾಗಿ 180 ಡಿಗ್ರಿ ವಿರುದ್ದ ದಿಕ್ಕಿನಲ್ಲಿರುವ ಸೂರ್ಯ ಹಾಗೂ ಚಂದ್ರ ಇಂದು ಏಕಕಾಲಕ್ಕೆ ಗೋಚರವಾಗುತ್ತಾರೆ.

 

Read Full Story

03:57 PM (IST) Mar 03

ರಿಂಕು ಸಿಂಗ್ ಇದ್ದರೂ ಸಂಜು ಸ್ಯಾಮ್ಸನ್‌ಗೆ ಚಾನ್ಸ್ ಕೊಟ್ಟಿದ್ದೇಕೆ? ಇಲ್ಲಿದೆ 4 ಇಂಟ್ರೆಸ್ಟಿಂಗ್ ಕಾರಣ

ತಂದೆಯ ನಿಧನದಿಂದಾಗಿ ರಿಂಕು ಸಿಂಗ್ ಜಿಂಬಾಬ್ವೆ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಆ ಜಾಗದಲ್ಲಿ ಬಂದ ಸಂಜು ಸ್ಯಾಮ್ಸನ್‌ಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಆದರೂ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ರಿಂಕು ಲಭ್ಯವಿದ್ದರೂ ಸಂಜು ಅವರನ್ನೇ ಯಾಕೆ ಆಡಿಸಲಾಯಿತು ಗೊತ್ತಾ?

Read Full Story

03:54 PM (IST) Mar 03

ಟಿಕೆಟ್‌ಗಾಗಿ 7 ಕೋಟಿ ವಸೂಲಿ? ಗಾಂಧಿ-ವಾದ್ರಾ ಕುಟುಂಬದ ವಿರುದ್ಧ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಗಂಭೀರ ಆರೋಪ!

ಹರಿಯಾಣ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ನಾಯಕಿಯ ಪತಿ ಬಿಡುಗಡೆ ಮಾಡಿದ ವಾಟ್ಸಾಪ್ ಚಾಟ್‌ಗಳನ್ನು ಆಧರಿಸಿ, ಗಾಂಧಿ ಕುಟುಂಬ ಮತ್ತು ಕೆ.ಸಿ. ವೇಣುಗೋಪಾಲ್ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Read Full Story

03:19 PM (IST) Mar 03

ಖಮೇನಿ ಹತ್ಯೆಗೆ ಇಸ್ರೇಲ್ ನಡೆಸಿತ್ತು 1 ವರ್ಷ ಕಾರ್ಯಾಚರಣೆ, ಟ್ರಾಫಿಕ್ ಕ್ಯಾಮೆರಾ ಸೇರಿ ಎಲ್ಲವೂ ಹ್ಯಾಕ್

ಖಮೇನಿ ಹತ್ಯೆಗೆ ಇಸ್ರೇಲ್ ನಡೆಸಿತ್ತು 1 ವರ್ಷ ಕಾರ್ಯಾಚರಣೆ, ಟ್ರಾಫಿಕ್ ಕ್ಯಾಮೆರಾ ಸೇರಿ ಎಲ್ಲವೂ ಹ್ಯಾಕ್ ಮಾಡಲಾಗಿದೆ. ವರ್ಷಗಳಿಂದ ಖಮೇನಿ ರಹಸ್ಯವಾಗಿ ಹಿಂಬಾಲಿಸಿದ್ದ ಇಸ್ರೇಲ್ ನಿಖರ ಗುರಿಯಿಟ್ಟಿದೆ. ರೋಚಕ ಕಾರ್ಯಾಚರಣೆ ಬಹಿರಂಗವಾಗಿದೆ.

 

Read Full Story

03:14 PM (IST) Mar 03

Sajid Tarar on Muslim world - ಇಸ್ರೇಲ್ ಜಗತ್ತಿನ ತಂದೆ, ಮುಸ್ಲಿಂ ರಾಷ್ಟ್ರಗಳು ಶರಣಾಗಬೇಕು! ಪಾಕ್ ತಜ್ಞ ಸಾಜಿದ್ ತರಾರ್ ಸ್ಫೋಟಕ ಹೇಳಿಕೆ

ಪಾಕಿಸ್ತಾನಿ ತಜ್ಞ ಸಾಜಿದ್ ತರಾರ್, ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಮುಸ್ಲಿಂ ಜಗತ್ತು ಇಸ್ರೇಲ್‌ಗೆ ಶರಣಾಗಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಯುದ್ಧವು ಜಾಗತಿಕ ಆರ್ಥಿಕತೆ ಮತ್ತು ತೈಲ ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆಯೇ ಮುಂದೆ ಓದಿ

Read Full Story

02:51 PM (IST) Mar 03

T20 World Cup 2026 - ಭಾರತ-ಇಂಗ್ಲೆಂಡ್ ಸೆಮಿಫೈನಲ್ ಮ್ಯಾಚ್ ರದ್ದಾದ್ರೆ ಯಾರಿಗೆ ಸಿಗುತ್ತೆ ಫೈನಲ್ ಟಿಕೆಟ್? ಐಸಿಸಿ ನಿಯಮವೇನು?

2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಒಂದು ವೇಳೆ ಮಳೆಯಿಂದಾಗಿ ಈ ಮಹತ್ವದ ಪಂದ್ಯ ರದ್ದಾದರೆ, ಸೂಪರ್-8 ಹಂತದಲ್ಲಿನ ಪ್ರದರ್ಶನವನ್ನು ಆಧರಿಸಿ ಇಂಗ್ಲೆಂಡ್ ಫೈನಲ್‌ಗೆ ಪ್ರವೇಶಿಸಲಿದ್ದು, ಭಾರತ ಟೂರ್ನಿಯಿಂದ ಹೊರಬೀಳುವ ಆತಂಕ ಎದುರಿಸಲಿದೆ.
Read Full Story

02:15 PM (IST) Mar 03

ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್‌ಗೆ 3 ಕೋಟಿಗೂ ಅಧಿಕ ಮೊತ್ತ ಪಾವತಿ ಮಾಡುತ್ತಿರುವ ಶ್ರೀಮಂತರು!

ಅಮೆರಿಕ-ಇಸ್ರೇಲ್ ದಾಳಿಯ ನಂತರ ಇರಾನ್ ಪ್ರತೀಕಾರಕ್ಕೆ ಮುಂದಾಗಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ದುಬೈ, ಅಬುಧಾಬಿಯಂತಹ ನಗರಗಳಿಂದ ಪಾರಾಗಲು ಶ್ರೀಮಂತರು ಕೋಟಿಗಟ್ಟಲೆ ಹಣ ನೀಡಿ ಖಾಸಗಿ ಜೆಟ್‌ಗಳನ್ನು ಬುಕ್ ಮಾಡುತ್ತಿದ್ದು, ಸಾವಿರಾರು ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Read Full Story

02:03 PM (IST) Mar 03

ವಾಂಖೆಡೆಯಲ್ಲಿ ಭಾರತ-ಇಂಗ್ಲೆಂಡ್ ಬಿಗ್ ಫೈಟ್! ಹೆಡ್-ಟು-ಹೆಡ್ ರೆಕಾರ್ಡ್ಸ್ ಹೀಗಿದೆ ನೋಡಿ!

ಟಿ20 ವಿಶ್ವಕಪ್ 2026ರ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಎರಡೂ ತಂಡಗಳ ಬಲಾಬಲ, ರೆಕಾರ್ಡ್ಸ್ ಹೇಗಿದೆ? ಪಂದ್ಯದ ಗತಿ ಬದಲಿಸಬಲ್ಲ ಆಟಗಾರರು ಯಾರು? ಇಲ್ಲಿದೆ ಮಾಹಿತಿ.

Read Full Story

01:21 PM (IST) Mar 03

ಯುದ್ಧದ ನಡುವೆ ಅಣ್ವಸ್ತ್ರ ಪರೀಕ್ಷೆ ನಡೆಸಿತಾ ಇರಾನ್‌? ಗೆರಾಶ್‌ನಲ್ಲಿ 4.3 ತೀವ್ರತೆಯ ಭೂಕಂಪ!

ಇರಾನ್‌ನ ಗೆರಾಶ್‌ನಲ್ಲಿ ಸಂಭವಿಸಿದ ಭೂಕಂಪವು, ಇಸ್ರೇಲ್‌-ಅಮೆರಿಕ ದಾಳಿಗೆ ಪ್ರತಿಯಾಗಿ ನಡೆಸಿದ ರಹಸ್ಯ ಅಣ್ವಸ್ತ್ರ ಪರೀಕ್ಷೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಇದೇ ಸಮಯದಲ್ಲಿ, ಇರಾನ್‌ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ದಾಳಿ ಆಗಿರುವ ಉಪಗ್ರಹ ಚಿತ್ರಗಳು ಹೊರಬಂದಿವೆ.

Read Full Story

01:17 PM (IST) Mar 03

ಮದುವೆಯಾಗುತ್ತಿದ್ದಂತೆಯೇ ರಶ್ಮಿಕಾ ಜತೆ ಹುಟ್ಟೂರಿಗೆ ಭೇಟಿಕೊಟ್ಟ ವಿಜಯ್ ದೇವರಕೊಂಡ! ಭರ್ಜರಿ ಮಟನ್ ಊಟ ಹಾಕಿಸಿದ ಸೆಲಿಬ್ರಿಟಿ ಜೋಡಿ

ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ನಂತರ ತಮ್ಮ ಹುಟ್ಟೂರಾದ ತುಮ್ಮಪೇಟೆಗೆ ಭೇಟಿ ನೀಡಿ, ಸತ್ಯನಾರಾಯಣ ವ್ರತ ನೆರವೇರಿಸಿದರು. ಅವರು ಗ್ರಾಮಸ್ಥರಿಗಾಗಿ ಭರ್ಜರಿ ಔತಣಕೂಟ ಏರ್ಪಡಿಸಿ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದರು.
Read Full Story

12:47 PM (IST) Mar 03

Tamil Nadu - '5 ಸೀಟ್‌ ತಗೊಳ್ಳಿ, ಇಲ್ದಿದ್ರೆ ಹೊರಡಿ' - ಕಾಂಗ್ರೆಸ್‌ಗೆ ಮುಖಕ್ಕೆ ಹೊಡೆದಂತೆ ಡೆಡ್‌ಲೈನ್‌ ನೀಡಿದ ಸ್ಟ್ಯಾಲಿನ್‌!

ತಮಿಳುನಾಡು ಚುನಾವಣೆಗೆ ಮುನ್ನ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆ ಸ್ಥಗಿತಗೊಂಡಿದೆ. ಡಿಎಂಕೆ 25 ಸ್ಥಾನಗಳ ಆಫರ್ ನೀಡಿದ್ದು, ಕಾಂಗ್ರೆಸ್ 41 ಸ್ಥಾನಗಳಿಗೆ ಬೇಡಿಕೆಯಿಟ್ಟಿದೆ. ಡಿಎಂಕೆ ತನ್ನ ಆಫರ್ ಒಪ್ಪಿಕೊಳ್ಳಲು ಡೆಡ್‌ಲೈನ್ ನೀಡಿದೆ.

Read Full Story

12:27 PM (IST) Mar 03

ಖಮೇನಿ ಸಾವಿನ ಬಗ್ಗೆ ಮೌನ - ಕೇಂದ್ರ ಸರ್ಕಾರದ ನಡೆ ವಿರುದ್ಧ ಸೋನಿಯಾ ಗಾಂಧಿ ಆಕ್ರೋಶ

ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಸಾವಿಗೆ ಭಾರತ ಸರ್ಕಾರ ಸಂತಾಪ ಸೂಚಿಸದಿರುವುದಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಟೀಕಿಸಿದ್ದು, ಭಾರತದ ಈ ನಿಲುವು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

12:20 PM (IST) Mar 03

ಭಾರತವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್ ಮೇಲೆಯೇ ಜನಾಂಗೀಯ ನಿಂದನೆ! ಛೇ ಇದೆಂಥಾ ಅವಮಾನ! ಕಾಂಗ್ರೆಸ್ ದೂರು

ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಸಿಡಿಸಿ ಭಾರತವನ್ನು ಸೆಮಿಫೈನಲ್‌ಗೆ ತಲುಪಿಸಿದ ಸಂಜು ಸ್ಯಾಮ್ಸನ್‌ಗೆ ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆ ಎದುರಾಗಿದೆ. ಈ ಕುರಿತು ಕೇರಳ ಕಾಂಗ್ರೆಸ್ ಘಟಕವು ಕೇಂದ್ರ ಸಚಿವರಿಗೆ ದೂರು ನೀಡಿದೆ.

Read Full Story

11:46 AM (IST) Mar 03

ಕಳಿಂಗ ಐಐಟಿಯಲ್ಲಿ ನಾಳೆಯಿಂದ ವಾಲಿಬಾಲ್ ವರ್ಲ್ಡ್‌ ಬೀಚ್ ಪ್ರೊ ಟೂರ್ನಿ!

ಕೆಐಐಟಿ ವಿಶ್ವವಿದ್ಯಾಲಯದಲ್ಲಿ ವಾಲಿಬಾಲ್ ವರ್ಲ್ಡ್ ಬೀಚ್ ಪ್ರೊ ಟೂರ್ನಿ ಮಾರ್ಚ್ 4ರಿಂದ 8 ರವರೆಗೆ ನಡೆಯಲಿದೆ. ಇದರೊಂದಿಗೆ ಟೂರ್ನಿಗೆ ಆತಿಥ್ಯ ವಹಿಸಿದ ಭಾರತದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಕೆಐಐಟಿ ಪಾತ್ರವಾಗಲಿದೆ.

Read Full Story

10:44 AM (IST) Mar 03

ನಿನ್ನೆ 30 ಸಾವಿರ ಇಳಿಕೆ; ಇವತ್ತು ಮತ್ತೆ ಕುಸಿತವಾದ ಚಿನ್ನದ ಬೆಲೆ, ಇಲ್ಲಿದೆ ನೋಡಿ ಇಂದಿನ ದರ

Gold And Silver Price Today 3rd March 2026: ಮಧ್ಯಪ್ರಾಚ್ಯದಲ್ಲಿ ಯುದ್ಧದ ಸನ್ನಿವೇಶದಿಂದ ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿದೆ. ಆದ್ರೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. 

Read Full Story

10:44 AM (IST) Mar 03

ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ! ಮತ್ತೆ ಮೈದಾನಕ್ಕಿಳಿಯಲು ರೋ-ಕೋ ಜೋಡಿ ರೆಡಿ

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಬಳಿಕ ಕ್ರಿಕೆಟಿಗರು 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಆಫ್ಘಾನ್ ಎದುರು ಭಾರತ ತಂಡವು ತವರಿನಲ್ಲಿ ಒಂದು ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಏಕದಿನ ಸರಣಿಯಲ್ಲಿ ಕೊಹ್ಲಿ-ರೋಹಿತ್ ಕಣಕ್ಕಿಳಿಯಲಿದ್ದಾರೆ

 

Read Full Story

10:00 AM (IST) Mar 03

ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಆಗಲೇ ತಾಯಿಯಾದ ಫೀಲಿಂಗ್! ಶೀಘ್ರದಲ್ಲೇ ನಟನೆಗೆ ಗುಡ್‌ಬೈ?

ರಶ್ಮಿಕಾ ಮಂದಣ್ಣ ಮದುವೆಯಾಗಿ ಒಂದು ವಾರವೂ ಕಳೆದಿಲ್ಲ. ಆಗಲೇ ಮಕ್ಕಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಈಗಾಗಲೇ ತಾಯಿಯಾದ ಅನುಭವವಾಗುತ್ತಿದೆ ಎಂದಿದ್ದಾರೆ. ಹಾಗಾದರೆ ಶೀಘ್ರದಲ್ಲೇ ಅವರು ಸಿನಿಮಾಗಳಿಗೆ ಗುಡ್‌ಬೈ ಹೇಳುತ್ತಾರಾ?
Read Full Story

08:58 AM (IST) Mar 03

2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ

ಬೆಂಗಳೂರು: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಟೂರ್ನಿಯನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೇ ಆಡುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ

 

Read Full Story

08:20 AM (IST) Mar 03

ಐಸಿಸಿ ಟಿ20 ವಿಶ್ವಕಪ್ 2026 - ಸೆಮಿಫೈನಲ್ ಕದನಕ್ಕೆ ಅಖಾಡ ಸಿದ್ದ! ಫೈನಲ್ ಯಾವಾಗ?

10ನೇ ಆವೃತ್ತಿಯ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅಖಾಡ ಸಿದ್ಧವಾಗಿದ್ದು, ಭಾರತವು ಇಂಗ್ಲೆಂಡ್‌ ತಂಡವನ್ನು ಮತ್ತು ದಕ್ಷಿಣ ಆಫ್ರಿಕಾವು ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮಾತ್ರ ಅಜೇಯವಾಗಿ ಉಳಿದಿದೆ.

Read Full Story

07:12 AM (IST) Mar 03

ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಈ ಮಿತಿ ಮೀರಿದರೆ ಗಂಡಾಂತರ!

ಕಾನೂನಿನ ಪ್ರಕಾರ ಚಿನ್ನವನ್ನು ಯಾವುದೇ ದಾಖಲೆಗಳಿಲ್ಲದೆ ಇಟ್ಟುಕೊಳ್ಳಬಹುದು. ಈ ಮಿತಿಯು ಕೇವಲ ಆಭರಣಗಳಿಗೆ ಅನ್ವಯಿಸುತ್ತದೆ ಮತ್ತು ನಾಣ್ಯಗಳು ಅಥವಾ ಬಾರ್‌ಗಳಿಗೆ ಅಲ್ಲ. ಬಳುವಳಿಯಾಗಿ ಬಂದ ಚಿನ್ನಕ್ಕೆ ವಿವರಗಳನ್ನು ದಾಖಲಿಸುವುದು ಅವಶ್ಯಕ.

Read Full Story

More Trending News