ತಾರತಮ್ಯ ಖಂಡಿಸಿ ಪಾಕಿಸ್ತಾನ ಸರ್ಕಾರದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನ ದಂಗೆ ಎದ್ದಿದ್ದು, ಅನಿರ್ದಿಷ್ಟಾವಧಿ ಪ್ರತಿಭಟನೆ 4ನೇ ದಿನ ಪೂರೈಸಿದೆ. ಈ ನಡುವೆ ಪ್ರತಿಭಟನೆ ಹತ್ತಿಕ್ಕಲು ಪಾಕ್ ಸರ್ಕಾರ ಲಾಠಿಚಾರ್ಜ್, ಗೋಲಿಬಾರ್‌ನಂಥ ದಾಳಿಯಂಥ ದಮನಕಾರಿ ನೀತಿ ಪ್ರದರ್ಶಿಸುತ್ತಿದ್ದು, ಪೊಲೀಸರು ಮತ್ತು ಸೇನೆಯ ಗುಂಡಿನ ದಾಳಿಗೆ ಗುರುವಾರ ಒಂದೇ 12 ದಿನ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಇದರೊಂದಿಗೆ ಕಳೆದ 4 ದಿನಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿದೆ. 38 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಮ್ಮು ಕಾಶ್ಮೀರ ಜಂಟಿ ಆವಾಮಿ ಕಾರ್ಯಸಮಿತಿ ಈ ಪ್ರತಿಭಟನೆ ನಡೆಸುತ್ತಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು, ವ್ಯಾಪಾರ, ವಹಿವಾಟು ಬಂದ್ ಮಾಡಿ, ಸಾರಿಗೆ ಸಂಚಾರ ಸ್ಥಗಿತಗೊಳಿಸಿ ಕಂಡುಕೇಳರಿಯದ ಬೃಹತ್ ಹೋರಾಟ ಆರಂಭಿಸಿದ್ದಾರೆ.

11:18 PM (IST) Oct 03
ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ, ಇದು ನಿಜವೇ? ಇಬ್ಬರು ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಪೋಷಕರು, ಆಪ್ತರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮುಗಿಸಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ನಿಜಕ್ಕೂ ನಿಶ್ಚಿತಾರ್ಥ ನಡೆದೊಯ್ತಾ?
08:41 PM (IST) Oct 03
2 ವರ್ಷ ಮಕ್ಕಳಿಗೆ ಕಾಫ್ ಸಿರಪ್ ನೀಡಬೇಡಿ, ಸತತ ಸಾವಿನ ಬೆನ್ನಲ್ಲೇ ಕೇಂದ್ರದ ಮಾರ್ಗಸೂಚಿ ಪ್ರಕಟಿಸಲಾಗಿದೆ. ಇನ್ನು ಐದು ವರ್ಷದ ಮಕ್ಕಳಿಗೆ ಸಿರಪ್ ನೀಡುವಾಗ ಎಚ್ಚರವಹಿಸುವಂತೆ ಸೂಚಿಸಿದೆ. 11 ಕ್ಕೂ ಹೆಚ್ಚು ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ಕೇಂದ್ರ ಮಾರ್ಗಸೂಚಿ ಪ್ರಕಟಿಸಿದೆ.
06:55 PM (IST) Oct 03
ತಿರುಪತಿ ದೇಗುಲಕ್ಕೆ ಬಾಂಬ್ ಬೆದರಿಕೆ, ಪಾಕ್ ಐಎಸ್ಐ, ಎಲ್‌ಟಿಟಿಇ ಉಗ್ರ ಸಂಘಟೆನೆ ಷಡ್ಯಂತ್ರದ ಇಮೇಲ್ ಬಂದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ದೇಗುಲ ಸುತ್ತ ಭಾರಿ ಭದ್ರತೆ ನಿಯೋಜಿಸಲಾಗಿದ್ದು, ತಪಾಸಣೆಯೂ ನಡೆಯುತ್ತಿದೆ.
06:51 PM (IST) Oct 03
ಕ್ರಿಕೆಟಿಗ ಅಭಿಷೇಕ್ ಶರ್ಮಾ ಅವರ ಸಹೋದರಿ ಕೋಮಲ್ ಶರ್ಮಾ ಅವರ ವಿವಾಹ ಸಮಾರಂಭಕ್ಕೆ ಯುವರಾಜ್ ಸಿಂಗ್ ಹಾಜರಾಗಿ ಸಂಭ್ರಮಿಸಿದ್ದಾರೆ. ಆದರೆ, ರಾಷ್ಟ್ರೀಯ ಕರ್ತವ್ಯದ ಕಾರಣ ಅಭಿಷೇಕ್ ಶರ್ಮಾ, ಭಾರತ 'ಎ' ತಂಡದ ಪರ ಆಡಲು ತೆರಳಿದ್ದರಿಂದ ಸ್ವಂತ ಸಹೋದರಿಯ ಮದುವೆಗೆ ಗೈರಾಗಿದ್ದಾರೆ.
06:22 PM (IST) Oct 03
Wintrack Stops India Operations Alleges Harassment by Chennai Customs Officials ಚೆನ್ನೈ ಕಸ್ಟಮ್ಸ್ ಅಧಿಕಾರಿಗಳ ನಿರಂತರ ಕಿರುಕುಳ ಮತ್ತು ಲಂಚದ ಬೇಡಿಕೆಯಿಂದಾಗಿ ವಿನ್‌ಟ್ರಾಕ್ ಇಂಕ್ ಭಾರತದಲ್ಲಿ ತನ್ನ ಆಮದು-ರಫ್ತು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.
06:10 PM (IST) Oct 03
ನಾಳೆಯಿಂದ ಬ್ಯಾಕ್ ನೀತಿಯಲ್ಲಿ ಮಹತ್ವದ ಬದಲಾವಣೆ, ಇನ್ನು ಕಾಯಬೇಕಿಲ್ಲ ತಕ್ಷಣಕ್ಕೆ ಹಣ ಪಡೆಯಲು ಸಾಧ್ಯವಿದೆ. ಚೆಕ್ ಕ್ಲೀಯರ್ ಕುರಿತು ಆರ್‌ಬಿಐ ಮಹತ್ವದ ಆದೇಶ ನೀಡಿದ್ದು, ನಾಳೆಯಿಂದ ಜಾರಿಯಾಗುತ್ತಿದೆ.
05:51 PM (IST) Oct 03
ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಮಾಜಿ ಪತಿ, ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ಮೂರನೇ ಮದುವೆಯಲ್ಲೂ ಬಿರುಕು ಮೂಡಿದೆ ಎನ್ನಲಾಗಿದೆ. ಜನವರಿಯಲ್ಲಿ ವಿವಾಹವಾದ ನಟಿ ಸನಾ ಜಾವೇದ್ ಅವರಿಂದ ಶೋಯೆಬ್ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ .
05:37 PM (IST) Oct 03
ನೆಟ್ಟಗಿದ್ರೆ ಒಕೆ, ಇಲ್ಲಾ ಅಂದ್ರೆ ನಕ್ಷೆಯಿಂದ ಅಳಿಸಿ ಹಾಕ್ತೇವೆ, ಪಾಕ್‌ಗೆ ಭಾರತೀಯ ಸೇನಾ ಮುಖ್ಯಸ್ಥ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದನೆ ನಿಲ್ಲಿಸದಿದ್ದರೆ, ನಿಮ್ಮ ಅಸ್ತಿತ್ವವೇ ಇಲ್ಲವಾಗುತ್ತದೆ ಎಂದು ಉಪೇಂದ್ರ ದ್ವೇವೇದಿ ಎಚ್ಚರಿಕೆ ನೀಡಿದ್ದಾರೆ.
05:29 PM (IST) Oct 03
Sabri Becomes First Muslim Girl to Perform Kathakali 95 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, 16 ವರ್ಷದ ಮುಸ್ಲಿಂ ಬಾಲಕಿ ಸಬ್ರಿ, ಕೇರಳ ಕಲಾಮಂಡಲಂನಲ್ಲಿ ಕಥಕ್ಕಳಿ ಪ್ರದರ್ಶಿಸಲಿದ್ದಾರೆ.
05:00 PM (IST) Oct 03
Tirupati Brahmotsavam Hundi Collection ಅಕ್ಟೋಬರ್ 1 ರವರೆಗೆ ನಡೆದ ತಿರುಪತಿ ಬ್ರಹ್ಮೋತ್ಸವದಲ್ಲಿ ಸುಮಾರು ಆರು ಲಕ್ಷ ಭಕ್ತರು ಭಾಗವಹಿಸಿದ್ದು, ಹುಂಡಿಯಲ್ಲಿ 25 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ ಎಂದು ಟಿಟಿಡಿ ಅಧ್ಯಕ್ಷರು ತಿಳಿಸಿದ್ದಾರೆ.
04:58 PM (IST) Oct 03
ಬೆಚ್ಚಿ ಬೀಳಿಸಿದ ಸರ್ವೆ, ಡಿವೋರ್ಸ್ ಬಳಿಕ ಜೀವನಾಂಶ ಪಾವತಿಗೆ ಪುರುಷರು ಮೊದಲ ಆಯ್ಕೆ ಏನು? ಭಾರತದಲ್ಲಿ ವಿಚ್ಚೇದನ ಪ್ರಕರಣ ಹೆಚ್ಚಾಗುತ್ತಿದ್ದಂತೆ ಅದರ ಹಿಂದಿನ ಕರಾಳ ಅಧ್ಯಾಯ ಕೂಡ ತರೆದುಕೊಂಡಿದೆ. ಅಧ್ಯಯನ ವರದಿ ಸ್ಫೋಟಕ ಮಾಹಿತಿ ಇಲ್ಲಿದೆ.
04:11 PM (IST) Oct 03
Akshay Kumar Reveals Daughter Received Nude Photo Request ಕೆಲವು ತಿಂಗಳ ಹಿಂದೆ, ತಮ್ಮ ಮಗಳು ಆನ್‌ಲೈನ್ ವಿಡಿಯೋ ಗೇಮ್ ಆಡುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ತನ್ನ ಮಗಳ ಬೆತ್ತಲೆ ಚಿತ್ರವನ್ನು ಕೇಳಿದ್ದ ಎಂದು ಅಕ್ಷಯ್ ಕುಮಾರ್ ನೆನಪಿಸಿಕೊಂಡಿದ್ದಾರೆ.
03:53 PM (IST) Oct 03
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಚಿತ್ತ ಭಾರತದ ಸ್ಟೈಲೀಷ್ ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧನಾ ಮೇಲಿದೆ. ಮಂಧನಾ ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಮಂಧನಾ ಮನಗೆದ್ದ ಹುಡುಗ ಯಾರು? ಆತನ ಹಿನ್ನೆಲೆ ಏನು? ನೋಡೋಣ ಬನ್ನಿ.
01:34 PM (IST) Oct 03
ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮಹಿಳಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಗಿದೆ. ಬಾಂಗ್ಲಾದೇಶ ಎದುರು ಪಾಕಿಸ್ತಾನ ಮುಗ್ಗರಿಸಿದೆ. ಇನ್ನು ಪಂದ್ಯದಲ್ಲಿ ಪಾಕ್ ಆಟಗಾರ್ತಿಯರ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಾವಿಂದು ಪಾಕ್ ತಂಡದ 6 ಸುಂದರ ಮಹಿಳಾ ಕ್ರಿಕೆಟರ್ ಬಗ್ಗೆ ತಿಳಿಯೋಣ.
01:24 PM (IST) Oct 03
ಉತ್ತಮವಾಗಿ ಸ್ಥಿತಿವಂತರಾಗಿದ್ದ ಯುವಕನೊಬ್ಬ ಅರೇಂಜ್ಡ್ ಮ್ಯಾರೇಜ್‌ಗಾಗಿ ವರದಕ್ಷಿಣೆ ನಿರಾಕರಿಸಿದ್ದಕ್ಕೆ, ಹುಡುಗಿಯ ಆತನ ಮದುವೆ ಸಂಬಂಧವನ್ನೆ ರಿಜೆಕ್ಟ್ ಮಾಡಿದ್ದು, ಈ ವಿಚಾರವೀಗ ಭಾರಿ ವೈರಲ್ ಆಗಿದೆ.
12:09 PM (IST) Oct 03
ಏಷ್ಯಾಕಪ್‌ನಲ್ಲಿ ಪುರುಷರ ತಂಡ ಅನುಸರಿಸಿದ 'ನೋ ಹ್ಯಾಂಡ್ ಶೇಕ್' ನೀತಿಯನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡವೂ ಪಾಕಿಸ್ತಾನದ ವಿರುದ್ಧ ಮುಂದುವರಿಸುವ ಸಾಧ್ಯತೆಯಿದೆ. ಬಿಸಿಸಿಐ ಮೂಲಗಳ ಪ್ರಕಾರ, ಪಂದ್ಯದ ನಂತರ ಸಾಂಪ್ರದಾಯಿಕ ಹಸ್ತಲಾಘವ ಇರುವುದಿಲ್ಲ.
11:22 AM (IST) Oct 03
Gold Price Today: ನಿರಂತರ ಏರಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ತುಸು ಇಳಿಕೆಯಾಗಿದೆ. ಇಲ್ಲಿ 24, 22, ಮತ್ತು 18 ಕ್ಯಾರೆಟ್ ಚಿನ್ನದ ಇಂದಿನ ದರ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಬೆಲೆಗಳ ಬಗ್ಗೆ ಮಾಹಿತಿ ಇದೆ.
10:31 AM (IST) Oct 03
ಸಿರಾಜ್ ಮತ್ತು ಬುಮ್ರಾ ಅವರ ಮಾರಕ ಬೌಲಿಂಗ್ ದಾಳಿಗೆ ವೆಸ್ಟ್‌ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 162 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ, ಕೆ.ಎಲ್. ರಾಹುಲ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
08:12 AM (IST) Oct 03