ಕ್ರಿಕೆಟಿಗ ಅಭಿಷೇಕ್ ಶರ್ಮಾ ಅವರ ಸಹೋದರಿ ಕೋಮಲ್  ಶರ್ಮಾ ಅವರ ವಿವಾಹ ಸಮಾರಂಭಕ್ಕೆ ಯುವರಾಜ್ ಸಿಂಗ್ ಹಾಜರಾಗಿ ಸಂಭ್ರಮಿಸಿದ್ದಾರೆ. ಆದರೆ, ರಾಷ್ಟ್ರೀಯ ಕರ್ತವ್ಯದ ಕಾರಣ ಅಭಿಷೇಕ್ ಶರ್ಮಾ, ಭಾರತ 'ಎ' ತಂಡದ ಪರ ಆಡಲು ತೆರಳಿದ್ದರಿಂದ ಸ್ವಂತ ಸಹೋದರಿಯ ಮದುವೆಗೆ ಗೈರಾಗಿದ್ದಾರೆ.

ಚಂಡೀಘಡ: ಟೀಂ ಇಂಡಿಯಾ ಸ್ಪಾರ್ ಕ್ರಿಕೆಟಿಗ ಅಭಿಷೇಕ್ ವರ್ಮಾ ಅವರ ಸಹೋದರಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮವು ಲೂದಿಯಾನದಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಶುಭ ಕಾರ್ಯಕ್ರಮದಲ್ಲಿ ಅಭಿಷೇಕ್ ಶರ್ಮಾ ಮೆಂಟರ್ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಿಂದಾಸ್ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಸಹೋದರಿಯ ಮದುವೆಗೆ ಅಭಿಷೇಕ್ ಶರ್ಮಾ ಹಾಜರಾಗಿಲ್ಲ.

ಅಕ್ಟೋಬರ್ 03ರಂದು ಅಂದರೆ ಇಂದು ಅಭಿಷೇಕ್ ಶರ್ಮಾ ಸಹೋದರಿ ಕೋಮಲ್ ಶರ್ಮಾ ಖ್ಯಾತ ಉದ್ಯಮಿ ಲೊವಿಶ್ ಒಬೆರಾಯ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ವೇಳೆ ಯುವರಾಜ್ ಸಿಂಗ್ ಖ್ಯಾತ ಸಿಂಗರ್ ರಂಜತ್ ಭಾವಾ ಅವರೊಂದಿಗೆ ಭಾಂಗ್ರಾ ಟ್ಯೂನ್‌ಗೆ ಬಿಂದಾಸ್ ಸ್ಟೆಪ್ಸ್ ಹಾಕಿದರು. ದಾಂಪತ್ಯ ಜೀವನಕ್ಕೆ ಕಾಲಿರಿಸಿ ಮಾಧ್ಯಮದವರ ಜತೆ ಮಾತನಾಡಿದ ಕೋಮಲ್ ಶರ್ಮಾ, 'ಇದೊಂದು ಅದ್ಭುತ ಅನುಭವ. ಇದು ನನ್ನ ಪಾಲಿಗೆ ದೊಡ್ಡ ದಿನ. ನಾನಿಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ನಾನು ತುಂಬಾ ಸಂತೋಷವಾಗಿದ್ದೇನೆ, ಆದರೆ ನನ್ನ ಸಹೋದರನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

Scroll to load tweet…

Scroll to load tweet…

ಸಹೋದರಿಯ ಮದುವೆ ಮಿಸ್ ಮಾಡಿಕೊಂಡ ಅಭಿಷೇಕ್ ಶರ್ಮಾ

ಟೀಂ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಸತತ ಮೂರು ಅರ್ಧಶತಕ ಸಹಿತ 314 ರನ್ ಸಿಡಿಸಿದ್ದರು. ಹೀಗಾಗಿ ಅಭಿಷೇಕ್ ಶರ್ಮಾ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಅಭಿಷೇಕ್ ಶರ್ಮಾ, ಇದೀಗ ಭಾರತ 'ಎ' ತಂಡದಲ್ಲಿ ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾ 'ಎ' ಯತಂಡದ ಎದುರು ಏಕದಿನ ಸರಣಿಗೆ ಸ್ಥಾನ ಪಡೆದಿದ್ದಾರೆ.

ಭಾರತ 'ಎ' ಹಾಗೂ ಆಸ್ಟ್ರೇಲಿಯಾ 'ಎ' ನಡುವಿನ ಎರಡನೇ ಹಾಗೂ ಮೂರನೇ ಏಕದಿನ ಪಂದ್ಯವು ಕ್ರಮವಾಗಿ ಅಕ್ಟೋಬರ್ 03 ಹಾಗೂ 05ರಂದು ಕಾನ್ಫುರದಲ್ಲಿ ನಡೆಯಲಿದೆ. ಏಕೈಕ ಸಹೋದರಿಯ ಮದುವೆಗಿಂತ ನ್ಯಾಷನಲ್ ಡ್ಯೂಟಿ ಮುಖ್ಯ ಎಂದು ಭಾವಿಸಿ ಅಭಿಷೇಕ್ ಶರ್ಮಾ, ಭಾರತ 'ಎ' ತಂಡದ ಪರ ಕಣಕ್ಕಿಳಿದಿರುವುದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತ ಏಕದಿನ ತಂಡದ ಮೇಲೆ ಕಣ್ಣಿಟ್ಟ ಅಭಿಷೇಕ್ ಶರ್ಮಾ

ಭಾರತ ತಂಡವು ಈ ತಿಂಗಳಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಸೀಸ್ ಎದುರು ಅಕ್ಟೋಬರ್ 19, 23 ಹಾಗೂ 25ರಂದು ಕ್ರಮವಾಗಿ ಪರ್ತ್, ಅಡಿಲೇಡ್ ಹಾಗೂ ಸಿಡ್ನಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇದೀಗ ಭಾರತ 'ಎ' ಎದುರು ಅದ್ಭುತ ಪ್ರದರ್ಶನ ತೋರಿ, ಮೊದಲ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಅಭಿಷೇಕ್ ಶರ್ಮಾ ಎದುರು ನೋಡುತ್ತಿದ್ದಾರೆ.

25 ವರ್ಷದ ಅಭಿಷೇಕ್ ಶರ್ಮಾ, ಇದುವರೆಗೂ 61 ಲಿಸ್ಟ್‌ 'ಎ' ಪಂದ್ಯಗಳನ್ನಾಡಿ 35.33ರ ಬ್ಯಾಟಿಂಗ್ ಸರಾಸರಿಯಲ್ಲಿ 2014 ರನ್ ಬಾರಿಸಿದ್ದಾರೆ. ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ 8 ಫಿಫ್ಟಿ ಹಾಗೂ 4 ಸೆಂಚುರಿ ಸಿಡಿಸಿದ್ದಾರೆ. ಇನ್ನು ಈ ಮಾದರಿಯಲ್ಲಿ ಬೌಲಿಂಗ್‌ನಲ್ಲೂ ಕಮಾಲ್ ಮಾಡಿರುವ ಅಭಿಷೇಕ್ ಶರ್ಮಾ 38 ವಿಕೆಟ್ ಕಬಳಿಸಿ ಮಿಂಚಿದ್ದಾರೆ.