ನಾಳೆಯಿಂದ ಬ್ಯಾಕ್ ನೀತಿಯಲ್ಲಿ ಮಹತ್ವದ ಬದಲಾವಣೆ, ಇನ್ನು ಕಾಯಬೇಕಿಲ್ಲ ತಕ್ಷಣಕ್ಕೆ ಹಣ
ನಾಳೆಯಿಂದ ಬ್ಯಾಕ್ ನೀತಿಯಲ್ಲಿ ಮಹತ್ವದ ಬದಲಾವಣೆ, ಇನ್ನು ಕಾಯಬೇಕಿಲ್ಲ ತಕ್ಷಣಕ್ಕೆ ಹಣ ಪಡೆಯಲು ಸಾಧ್ಯವಿದೆ. ಚೆಕ್ ಕ್ಲೀಯರ್ ಕುರಿತು ಆರ್‌ಬಿಐ ಮಹತ್ವದ ಆದೇಶ ನೀಡಿದ್ದು, ನಾಳೆಯಿಂದ ಜಾರಿಯಾಗುತ್ತಿದೆ.

ಬ್ಯಾಂಕಿಂಗ್ ನೀತಿಯಲ್ಲಿ ಮಹತ್ವದ ಬದಲಾವಣೆ
ಹೊಸ ನೀತಿ ಜಾರಿಗೆ ತಂದ ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೊಸ ನೀತಿ ನಾಳೆ (ಅ.04) ರಿಂದ ಜಾರಿಯಾಗುತ್ತಿದೆ. ನಾಳೆಯಿಂದ ಚೆಕ್ ಕ್ಲೀಯರ್ ಆಗಲು ಕಾಯಬೇಕಿಲ್ಲ. ಕೆಲವೇ ಗಂಟೆಗಳಲ್ಲಿ ಚೆಕ್ ಕ್ಲೀಯರ್ ಆಗಲಿದೆ. ಚೆಕ್ ಕ್ಲೀಯರ್ ಪ್ರಕ್ರಿಯೆಯನ್ನು ನಿರಂತರ ಮಾಡಲು ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಈ ಮೂಲಕ ಚೆಕ್ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲು ದಿನವಿಡಿ ತೆಗೆದುಕೊಳ್ಳುತ್ತಿದ್ದ ಪ್ರಕ್ರಿಯೆ ನಾಳೆಯಿಂದೆ ಕೆಲವೇ ಗಂಟೆಗಳಲ್ಲಿ ಆಗಲಿದೆ.
ಚೆಕ್ ಕ್ಲೀಯರ್ ನಿರಂತರ ಪ್ರಕ್ರಿಯೆ
ಚೆಕ್ ಕ್ಲಿಯರ್ ಆಗಲು ಕನಿಷ್ಠ ಒಂದು ವರ್ಕಿಂಗ್ ಡೇ ಅಗತ್ಯವಿಲ್ಲ
ಚೆಕ್ ಕ್ಲಿಯರ್ ಪ್ರಕ್ರಿಯೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಇಷ್ಟು ದಿನ ಬ್ಯಾಂಕ್‌ಗೆ ಚೆಕ್ ಹಾಕಿದ ಬಳಿಕ ಖಾತೆಗೆ ವರ್ಗಾವಣೆ ಆಗಲು ಕನಿಷ್ಠ ಒಂದು ವರ್ಕಿಂಗ್ ಡೇ ಬೇಕಿತ್ತು. ಬ್ಯಾಚ್ ವೈಸ್ ಮಾಡಲಾಗುತ್ತಿತ್ತು. ಆದರೆ ಅಕ್ಟೋಬರ್ ನಾಲ್ಕರಿಂದ ಚೆಕ್ ಕ್ಲೀಯರ್ ನಿರಂತರ ಪ್ರಕ್ರಿಯೆಯಾಗಿದೆ. ಹೀಗಾಗಿ ಕೆಲವೇ ಗಂಟೆಗಳಲ್ಲಿ ಚೆಕ್ ಕ್ಲೀಯರ್ ಆಗಲಿದೆ.
ಹೊಸ ಪದ್ಧತಿ ಹೇಗೆ ಕಾರ್ಯನಿರ್ವಹಿಸಲಿದೆ?
ಹೊಸ ಪದ್ಧತಿ ಹೇಗೆ ಕಾರ್ಯನಿರ್ವಹಿಸಲಿದೆ?
ಹೊಸ ನೀತಿ ಪ್ರಕಾರ, ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಡೆಪಾಸಿಟ್ ಮಾಡುವ ಚೆಕ್ ಪ್ರತಿ ಗಂಟೆಗೆ ಕ್ಲೀಯರ್ ಮಾಡಲಾಗುತ್ತದೆ. ಚೆಕ್ ಡೆಪಾಸಿಟ್ ಆಗುತ್ತಿದ್ದಂತೆ ಸ್ಕ್ಯಾನ್ ಮಾಡಿ ಕ್ಲೀಯರ್ ಸೆಕ್ಷನ್‌ಗೆ ಕಳುಹಿಸಲಾಗುತ್ತದೆ. ಬೆಳಗ್ಗೆ 11 ಗಂಟೆಯಿಂದ ಬ್ಯಾಂಕ್ ಚೆಕ್ ಕ್ಲೀಯರೆನ್ಸ್ ಆರಂಭಗೊಳ್ಳಲಿದೆ. ಪ್ರತಿ ಗಂಟೆಗೆ ಕ್ಲೀಯರ್ ಪ್ರಕ್ರಿಯೆ ನಡೆಯಲಿದೆ. ಸಂಜೆ 7 ಗಂಟೆ ಒಳಗೆ ಚೆಕ್ ಪಾವತಿ ಬ್ಯಾಂಕ್ ಖಚಿತಪಡಿಸಬೇಕು, ಒಂದು ವೇಳೆ ಖಚಿತಪಡಿಸದಿದ್ದರೆ, ಆಟೋಮ್ಯಾಟಿಕ್ ಆಗಿ ಅಪ್ರೋವಲ್ ಆಗಲಿದೆ.
ಇನ್ನು ಮುಂದೆ ಕೆಲವೇ ಗಂಟೆಗಳು ಸಾಕು
ಸದ್ಯ ಚೆಕ್ ಕ್ಲಿಯರ್‌ಗೆ ಎಷ್ಟು ಸಮಯ ಬೇಕು
ಸದ್ಯ ಬ್ಯಾಂಕ್‌ಗೆ ಚೆಕ್ ಡೆಪಾಸಿಟ್ ಮಾಡಿದ ಬಳಿಕ, ಸಿಬ್ಬಂದಿಗಳು ಈ ಚೆಕ್ ಪಾವತಿ ಬ್ಯಾಂಕ್‌ಗೆ ಅಪ್ರೋವಲ್‌ಗೆ ಕಳುಹಿಸುತ್ತಾರೆ. ಚೆಕ್ ಪಾವತಿ ಬ್ಯಾಂಕ್ ಅಪ್ರೋವಲ್ ಸಿಕ್ಕ ಬಳಿಕ ನಿಗಧಿತ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ 1 ರಿಂದ 2 ವರ್ಕಿಂಗ್ ಡೇ ಬೇಕಾಗಲಿದೆ. ಇನ್ನು ಮುಂದೆ ಕೆಲವೇ ಗಂಟೆಗಳು ಸಾಕು.
ಹಲವು ಘಟ್ಟ ದಾಟಿದ ಚೆಕ್
ಧೇಶದ ಚೆಕ್ ಕ್ಲಿಯರ್ ಪ್ರಕ್ರಿಯೆ
1980ರ ದಶಕ ಹಾಗೂ ಅದಕ್ಕಿಂತ ಮೊದಲು ಬ್ಯಾಂಕ್ ಚೆಕ್ ಕ್ಲಿಯರ್ ಮ್ಯಾನ್ಯುಯೆಲ್ ಆಗಿ ಮಾಡಬೇಕಾಗಿತ್ತು. ಇದು ಕನಿಷ್ಠ ಒಂದು ವಾರಗಳ ಸಮಯ ತೆಗೆದುಕೊಳ್ಳುತ್ತಿತ್ತು. 1980ರ ಬಳಿಕ ಎಂಐಸಿಆರ್ ವ್ಯವಸ್ಥೆ ಜಾರಿಗೆ ಬಂತು. ಇದರಿಂದ 1 ರಿಂದ 3 ದಿನಗಳ ಅವಶ್ಯಕತೆ ಇತ್ತು. 2008ರಲ್ಲಿ ಚೆಕ್ ಟ್ರಾನ್ಸಾಕ್ಷನ್ ಸಿಸ್ಟಮ್(ಸಿಟಿಎಸ್) ಜಾರಿಗೆ ತರಲಾಯಿತು. ಇದರಿಂದ ಕನಿಷ್ಠ 1 ದಿನಕ್ಕೆ ಇಳಿಕೆಯಾಗಿತ್ತು. 2021ರಲ್ಲಿ ಚೆಕ್ ಕ್ಲೀಯರೆನ್ಸ್ ಪದ್ದತಿಯಲ್ಲಿ ರಾಷ್ಟ್ರದಲ್ಲಿ ಒಂದೇ ನೀತಿ ತರಲಾಗಿತ್ತು. ಇದೀಗ ಒಂದು ದಿನದಿಂದ ಗಂಟೆಗಳಿಗೆ ಇಳಿಕೆಯಾಗುತ್ತಿದೆ.