ಮುಂಬೈ: ಗುರುವಾರವಷ್ಟೇ ತೀರ್ಪು ಪ್ರಕಟವಾದ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ, ಆರ್‌ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೂ ಬಂಧಿಸುವಂತೆ ಹಿರಿಯ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹೇರಿದ್ದರು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಅಧಿಕಾರಿ ಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ನಿವೃತ್ತ ಅಧಿಕಾರಿ ಮೆಹಬೂಬ್ ಮುಜಾವರ್, ಭಾರತದಲ್ಲಿ ಕೇಸರಿ ಭಯೋತ್ಪಾದನೆಯ ನಿರೂಪಣೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿತ್ತು. ಆಗ ನನ್ನ ಮೇಲಧಿಕಾರಿಯಾಗಿದ್ದ ಈ ಹಿಂದಿನ ಮುಂಬೈ ಪೊಲೀಸ್ ಆಯುಕ್ತ ಮತ್ತು ಅಂದಿನ ಮಾಲೇಗಾಂವ್ ಪ್ರಕರಣದ ತನಿಖಾಧಿಕಾರಿ ಪರಮ್ ಬೀರ್ ಸಿಂಗ್ ಅವರಿಂದ ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ನಿರ್ದೇಶನ ಬಂದಿತ್ತುಎಂದು ಆರೋಪಿಸಿದರು.ಆದರೆ ವಿನಾಕಾರಣ ಭಾಗವತ್ ಅವರಂಥ ಪ್ರಭಾವಿ ವ್ಯಕ್ತಿಯನ್ನು ಬಂಧಿಸುವುದು ನನ್ನ ಕೈ ಮೀರಿ ಆಗಿತ್ತು. ಇದಕ್ಕೆ ನಾನು ನಿರಾಕರಿಸಿದೆ. ಬಳಿಕ ನನ್ನನ್ನು ಸುಳ್ಳು ಆರೋಪ ಮಾಡಿ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಆದೆಲ್ಲ ಈಗ ಸುಳ್ಳೆಂದು ಸಾಬೀತಾಗಿದೆ ಎಂದರು.
11:12 PM (IST) Aug 02
ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಪಡುತ್ತಿದ್ದಾರೆ ಈ ಕುರಿತಂತೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
10:56 PM (IST) Aug 02
10:26 PM (IST) Aug 02
10:08 PM (IST) Aug 02
ಕರ್ನಾಟಕ ರಾಜ್ಯದ ಉದ್ದ ಅಗಲಕ್ಕೆ ಮತ್ತೊಮ್ಮೆ ಪ್ರವಾಸ ನಡೆಸಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿರುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
10:00 PM (IST) Aug 02
ಆಲಮಟ್ಟಿ ಅಣೆಕಟ್ಟು ಎತ್ತರಿಸುವುದರಿಂದ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ ಎನ್ನುವುದು ಅರ್ಥವಿಲ್ಲದ ವಾದವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
09:46 PM (IST) Aug 02
ಗಣಪತಿ ವಿಗ್ರಹ ಮಾರಾಟಗಾರರು ಪರಿಸರಸ್ನೇಹಿ ಮಣ್ಣಿನ ಗಣಪತಿಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
09:26 PM (IST) Aug 02
ರಾಜ್ಯದಲ್ಲಿ ಮಳೆಗಾಲ ಚೆನ್ನಾಗಿ ಆಗಿದೆ. ಆದರೆ, ರೈತರು ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರೇ ರೈತರ ಬಗ್ಗೆ ತಾತ್ಸಾರ ಯಾಕೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
09:07 PM (IST) Aug 02
ರಾಜ್ಯಾದ್ಯಂತ ಎರಡು ತಿಂಗಳ ಸಮಗ್ರ "ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನ"ವನ್ನು ಆರಂಭಿಸಲಾಗಿದೆ ಎಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಶ್ರೀವಿದ್ಯಾ ತಿಳಿಸಿದ್ದಾರೆ.
08:54 PM (IST) Aug 02
ಜವಹರಲಾಲ್ ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ಬಗ್ಗೆ ಮಾತನಾಡುತ್ತಾ, ಈ ತಾಂತ್ರಿಕ ಸಂಸ್ಥೆ ಸ್ವಾತಂತ್ರ್ಯ ಪೂರ್ವ1946 ರಲ್ಲಿ ಪ್ರಾರಂಭವಾಗಿದ್ದು,44 ವರ್ಷಗಳ ಇತಿಹಾಸವನ್ನು ಹೊಂದಿದೆ.
08:29 PM (IST) Aug 02
ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ದಕ್ಷಿಣದ ಇತರೇ ರಾಜ್ಯಗಳು ಈ ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
08:02 PM (IST) Aug 02
ಇನ್‌ಸ್ಟಾಗ್ರಾಂ ಸೋಶಿಯಲ್ ಮೀಡಿಯಾ ಬಹುತೇಕರು ಬಳಸುತ್ತಾರೆ. ಇದೀಗ ಇನ್‌ಸ್ಟಾ ತನ್ನ ನಿಯಮದಲ್ಲಿ ಕೆಲ ಬದಲಾವಣೆ ಮಾಡಿದೆ.ಎಲ್ಲರಿಗೂ ಲೈವ್ ಅವಕಾಶವಿಲ್ಲ. ಇದರ ಜೊತೆಗೆ ಬದಲಾವಣೆಯಾಗಿರುವ ನಿಯಮವೇನು?
07:21 PM (IST) Aug 02
ಅತ್ಯಾ*ರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಕರೆದೊಯ್ದಿದ್ದಾರೆ. ಕಣ್ಣೀರಿಡುತ್ತಾ ಪರಪ್ಪನ ಅಗ್ರಹಾರ ಜೈಲಿನತ್ತ ಪ್ರಜ್ವಲ್ ರೇವಣ್ಣ ಸಾಗಿದ್ದಾರೆ.
07:13 PM (IST) Aug 02
07:02 PM (IST) Aug 02
06:16 PM (IST) Aug 02
ಧರ್ಮಸ್ಥಳದಲ್ಲಿ ಎಸ್ಐಟಿ ನಡೆಸುತ್ತಿರುವ ಉತ್ಖನನ ಕಾರ್ಯಾಚರಣೆ 5 ದಿನ ಪೂರ್ಣಗೊಳಿಸಿದೆ. ಆದರೆ ನಾಳೆ (ಆ.02) ಉತ್ಖನನ ಕಾರ್ಯಾಚರಣೆ ಅನುಮಾನವಾಗಿದೆ.
06:01 PM (IST) Aug 02
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾ*ರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮೊಬೈಲ್ ಅನ್ನು ವಾಪಸ್ ಕೊಡಲು ನ್ಯಾಯಾಲಯ ನಿರಾಕರಿಸಿದೆ. ಆದರೆ, ಕೋರ್ಟ್‌ನಲ್ಲಿಯೇ ವಿಡಿಯೋ ಮತ್ತು ಫೋಟೋಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಪ್ರಜ್ವಲ್ ಎಫ್‌ಎಸ್‌ಎಲ್ ವರದಿ ಪ್ರಶ್ನಿಸಿದ್ದರು.
05:42 PM (IST) Aug 02
ಧರ್ಮಸ್ಥಳದಲ್ಲಿ ದೂರುದಾರ ಗುರುಸಿತಿದ 10ನೇ ಪಾಯಿಂಟ್ ಕಾರ್ಯಾಚರಣೆ ಅಂತ್ಯಗೊಂಡಿದೆ. ಅನಾಮಿಕ 10ನೇ ಪಾಯಿಂಟ್‌ನಲ್ಲಿ ಮೂರು ಶವ ಹೂತಿಟ್ಟಿರುವುದಾಗಿ ಹೇಳಿದ್ದಾನೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ
05:16 PM (IST) Aug 02
04:52 PM (IST) Aug 02
ಅಲ್ಲೊಂದು ಗುಂಪು. ನವಿಲಿನ ಮುಗ್ಧತೆ ಮತ್ತು ರೋಷ ಎರಡನ್ನೂ ಮೈಗೂಡಿಸಿಕೊಂಡಿರುವ ಆ ಗುಂಪಿನ ನಾಯಕ. ಆತನ ಹೆಸರು ಮುತ್ತಾ.
04:49 PM (IST) Aug 02
Defamation Lawsuit in Mumbai: ವಿಚ್ಛೇದನ ಅರ್ಜಿಯಲ್ಲಿ ಗಂಡನನ್ನ 'ನಪುಂಸಕ' ಅಂತ ಕರೆಯೋದು ಮಾನಹಾನಿಯೇ ಎಂಬುದರ ಕುರಿತು ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
04:47 PM (IST) Aug 02
ಇದೇ ಮೊದಲ ಬಾರಿಗೆ ಅತೀ ದೊಡ್ಡ ಮಿಂಚು ಅಪ್ಪಳಿಸಿದೆ. ಬರೋಬ್ಬರಿ 829 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಿಂಚು ಕಾಣಿಸಿಕೊಂಡಿದೆ. ಇದು ಮತ್ತೊಂದು ಪ್ರಾಕೃತಿಕ ವಿಕೋಪದ ಮುನ್ಸೂಚನೆಯೇ?
04:46 PM (IST) Aug 02
04:34 PM (IST) Aug 02
04:32 PM (IST) Aug 02
04:25 PM (IST) Aug 02
ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲೂ, ಮಲೆ ಮಹದೇಶ್ವರ ಬೆಟ್ಟ ಪ್ರದೇಶದ 18 ಹಳ್ಳಿಗಳು ವಿದ್ಯುತ್ ಮತ್ತು ರಸ್ತೆಯಂತಹ ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿವೆ.
04:15 PM (IST) Aug 02
04:12 PM (IST) Aug 02
ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದರ ಬನ್ನಲ್ಲೇ ಆರ್‌ಬಿಐ ಬಂಪರ್ ಗಿಫ್ಟ್ ನೀಡಲು ಮುಂದಾಗಿದೆ. ಆರ್‌ಬಿಐ ಈ ಬಾರಿ 25 bps ರೆಪೊ ದರ ಕಡಿತ ಮಾಡುವ ಸಾಧ್ಯತೆ ಇದೆ. ಇದರಿಂದ ಜನಸಾಮಾನ್ಯರಿಗೆ ಪ್ರಯೋಜನವೇನು?
03:50 PM (IST) Aug 02
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ತೆರಿಗೆಗಳು ಅಮೆರಿಕನ್ ಕುಟುಂಬಗಳ ಮೇಲೆ ವರ್ಷಕ್ಕೆ ಸುಮಾರು 2,400 ಡಾಲರ್ ಹೆಚ್ಚುವರಿ ವೆಚ್ಚ ಉಂಟುಮಾಡಲಿದೆ ಎಂದು SBI ವರದಿ ಅಂದಾಜಿಸಿದೆ. ಬಡವರಿಗೆ ಹೆಚ್ಚು ಹೊರೆಯಾಗಲಿದ್ದು, ಶ್ರೀಮಂತರಿಗೆ ಕಡಿಮೆ ಆಗಲಿದೆ. ಭಾರತದ ಮೇಲೆಯೂ ಕಡಿಮೆ ಪರಿಣಾಮ ಬೀರಲಿದೆ.
03:39 PM (IST) Aug 02
03:39 PM (IST) Aug 02
ವಿದೇಶದಿಂದ ಪ್ರವಾಸಕ್ಕೆ ಬೆಂಗಳೂರಿಗೆ ಆಗಮಿಸಿದ ಮಹಿಳೆ, ಇದೀಗ ಸಿಲಿಕಾನ್ ಸಿಟಿಗೆ ಮಾರು ಹೋಗಿದ್ದಾರೆ. ನಗರ, ಇಲ್ಲಿನ ಜನ, ಸಂಸ್ಕೃತಿ, ದೇವಸ್ಥಾನ, ಆಹಾರ ಎಲ್ಲವೂ ವಿದೇಶಿ ಮಹಿಳೆಯನ್ನು ಆಕರ್ಷಿಸಿದ್ದು ಮಾತ್ರವಲ್ಲ, ಸ್ವದೇಶಕ್ಕೆ ತೆರಳುವಾಗ ಭಾವುಕರಾಗಿದ್ದಾರೆ.
03:33 PM (IST) Aug 02
ಮಂಡ್ಯದ ಪಾರಿವಾಳವೊಂದು ದೆಹಲಿಯಿಂದ 52 ದಿನಗಳ ಕಾಲ ಪ್ರಯಾಣ ಬೆಳೆಸಿ 1,790 ಕಿಲೋ ಮೀಟರ್ ಹಾರಿ ಬಂದು ದಾಖಲೆ ಬರೆದಿದೆ. ಏನಿದು ಪಾರಿವಾಳದ ಸ್ಟೋರಿ?
03:14 PM (IST) Aug 02
Thimmappa's gold treasure: ತಿಮ್ಮಪ್ಪನ ಚಿನ್ನದ ಭಂಡಾರ ಈಗ 11,000 ಕೆಜಿ ದಾಟಿದೆ ಮತ್ತು ಫಿಕ್ಸೆಡ್ ಡೆಪಾಸಿಟ್ ₹18,000 ಕೋಟಿಗೂ ಹೆಚ್ಚಿದೆ. ತಿಮ್ಮಪ್ಪನ ಚಿನ್ನದ ಭಂಡಾರದ ಒಟ್ಟು ಮೌಲ್ಯ, ಫಿಕ್ಸೆಡ್ ಡೆಪಾಸಿಟ್ ನಿಂದ ಬರುವ ಬಡ್ಡಿ ಎಷ್ಟು?
03:02 PM (IST) Aug 02
02:53 PM (IST) Aug 02
BSNL New Offer: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಎಸ್‌ಎನ್‌ಎಲ್ ಕೇವಲ 1 ರೂಪಾಯಿಗೆ ಹೊಸ ಸಿಮ್ ಕಾರ್ಡ್‌ಗಳನ್ನು ನೀಡುತ್ತಿದೆ. ಈ ಆಫರ್‌ನಲ್ಲಿ ಗ್ರಾಹಕರಿಗೆ ತಿಂಗಳ ವ್ಯಾಲಿಡಿಟಿಯಲ್ಲಿ 62GB ಡೇಟಾ ಸಿಗಲಿದೆ. ಈ ಆಫರ್ ಆಗಸ್ಟ್ 1 ರಿಂದ 31 ರವರೆಗೆ ಮಾನ್ಯವಾಗಿರುತ್ತದೆ.
02:33 PM (IST) Aug 02
02:33 PM (IST) Aug 02
2023ರಲ್ಲಿ ಭಾರತಕ್ಕೆ ಬಂದ ಬಾಂಗ್ಲಾದೇಶಿ ಮಾಡೆಲ್ ಬಳಿಕ ಇಲ್ಲೇ ನೆಲೆಸಿದ್ದಾಳೆ. ನಕಲಿ ಆಧಾರ್ ಕಾರ್ಡ್, ನಕಲಿ ರೇಶನ್ ಕಾರ್ಡ್ ಕೂಡ ಪಡೆದುಕೊಂಡಿದ್ದಾಳೆ. ಮನೆ ಬಾಡಿಗೆ ಪಡೆದು ಭಾರತದಲ್ಲೇ ನೆಲೆಸಿದ್ದ ಮಾಡೆಲ್ ಇದೀಗ ಅರೆಸ್ಟ್ ಆಗಿದ್ದಾಳೆ.
02:23 PM (IST) Aug 02
ಸಾವಿನ ವೇಳೆ ಯಾರು ಡಾನ್ಸ್ ಮಾಡುವುದಿಲ್ಲ, ಆದ್ರೂ ಗೆಳೆಯನಿಗೆ ಕೊಟ್ಟ ಮಾತು ಮೀರಲಾಗದೆ ವ್ಯಕ್ತಿಯೊಬ್ಬರು ಆತನ ಅಂತಿಮಯಾತ್ರೆ ವೇಳೆ ಕಣ್ಣೀರಿಡುತ್ತಲೇ ಡಾನ್ಸ್ ಮಾಡಿದ ಮನಮಿಡಿಯುವ ಘಟನೆ ಮಧ್ಯಪ್ರದೇಶದ ಮಂಡ್ಸುರ್ ಜಿಲ್ಲೆಯ ಜವಸಿಯ ಗ್ರಾಮದಲ್ಲಿ ನಡೆದಿದೆ.
02:03 PM (IST) Aug 02
01:38 PM (IST) Aug 02
ಸೌದಿ ವ್ಯಕ್ತಿಯೊಬ್ಬರು ಒಂದೇ ಶಾಲೆಯಲ್ಲಿ ನಾಲ್ವರು ಮಹಿಳೆಯರನ್ನು ವಿವಾಹವಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸುದ್ದಿಯ ಹಿಂದಿನ ಸತ್ಯಾಸತ್ಯತೆ ಏನು ಎಂಬುದನ್ನು ತಿಳಿದುಕೊಳ್ಳೋಣ.
01:33 PM (IST) Aug 02
ನಟಿ ರಮ್ಯಾ ಅವರಿಗೆ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ರಮ್ಯಾ ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಈ ಘಟನೆ ನಡೆದಿದೆ. ಐಪಿ ಅಡ್ರೆಸ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.