ನವದೆಹಲಿ: ಒಂದು ವೇಳೆ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರತವು ಭಾರೀ ತೆರಿಗೆ ಪಾವತಿಸುವುದು ಅನಿವಾರ್ಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಎಚ್ಚರಿಸಿದ್ದಾರೆ. ಇದೇ ವೇಳೆ ‘ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ’ ಎಂದು ಟ್ರಂಪ್ 3ನೇ ಬಾರಿ ಹೇಳಿದ್ದಾರೆ. ಈ ರೀತಿ ಮೋದಿ ಹೇಳಿಲ್ಲ ಎಂದು ಕಳೆದ ವಾರ ಭಾರತ ಸರ್ಕಾರ ಸ್ಪಷ್ಟಪಡಿಸಿದರೂ ಅದೇ ಮಾತನ್ನು ಟ್ರಂಪ್ ಪುನರುಚ್ಚರಿಸಿದ್ದಾರೆ.

09:47 PM (IST) Oct 21
ರಶ್ಮಿಕಾ ಮಂದಣ್ಣ ಜೊತೆ ದೀಪಾವಳಿ ಆಚರಿಸಿದ್ರಾ ದೇವರಕೊಂಡ? ವಾಯ್ಸ್ ಪತ್ತೆ ಹಚ್ಚಿದ ಫ್ಯಾನ್ಸ್, ವಿಜಯ್ ದೇವರಕೊಂಡ ಶೇರ್ ಮಾಡಿದ ಪೋಸ್ಟ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ದೇವರಕೊಂಡ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?
08:55 PM (IST) Oct 21
ದೀಪಾವಳಿಗೆ ಮನಸ್ಸು ಬೆಸೆದ ಎಂಜಿ ಮೋಟಾರ್ಸ್, ಕುಳಿತಲ್ಲೇ ಶಾಪಿಂಗ್ ಮಾಡುವವರ ಕಣ್ತೆರೆಸಿದ ಜಾಹೀರಾತು, ವಿಂಡ್ಸರ್ ಎಲೆಕ್ಟ್ರಿಕ್ ಕಾರಿನ ಜಾಹೀರಾತು ಇದೀಗ ಭಾರತದ ಅಸಲಿ ಕತೆಯನ್ನು ಹೇಳುತ್ತಿದೆ. ಈ ಜಾಹೀರಾತು ಹಬ್ಬದ ಜೊತೆಗೆ ಮಹತ್ವದ ಸಂದೇಶವನ್ನು ಸಾರಿದೆ.
08:13 PM (IST) Oct 21
ಮೂವತ್ ದಿನಕ್ಕೆ ಆಫೀಸ್ ಮುಂದಿರ್‌ಬೇಕ್, 7 BMW ಕಾರಿಗೆ ಬೇಡಿಕೆ ಇಟ್ಟ ಭ್ರಷ್ಟಾಚಾರ ವಿರೋಧಿ ಲೋಕಪಾಲ , ಈ ಟೆಂಡರ್ ಭಾರಿ ವಿವಾದ ಸೃಷ್ಟಿಯಾಗಿದೆ. 60 ರಿಂದ 70 ಲಕ್ಷ ರೂಪಾಯಿ ಬೆಲೆಯ ಕಾರುಗಳಿಗೆ ಆರ್ಡರ್ ನೀಡಿದ್ದಾರೆ. ಇದು ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
06:43 PM (IST) Oct 21
₹519 ಕೋಟಿಗೆ ಜಾಗ ಖರೀದಿಸಿದ ಲುಲು ಗ್ರೂಪ್, ದುಬಾರಿ ಸೇಲ್‌ನಿಂದ ಸರ್ಕಾರಕ್ಕೆ ₹31 ಕೋಟಿ ಆದಾಯ, 16 ಏಕರೆ ಜಾಗ ಖರೀದಿಗೆ ಲುಲು ಗ್ರೂಪ್ ಇಷ್ಟು ಖರ್ಚು ಮಾಡಿದೆ. ಇದು ಅಹಮ್ಮದಾಬಾದ್‌ನಲ್ಲಿ ನಡೆದ ಅತೀ ದುಬಾರಿ ಲ್ಯಾಂಡ್ ಸೇಲ್ ದಾಖಲೆ ಬರೆದಿದೆ.
06:05 PM (IST) Oct 21
ದೀಪಾವಳಿಯಿಂದ ಮಾಲಿನ್ಯ ಆರೋಪ, ವಿಧಾನಸಭೆಯಲ್ಲಿ ಟಿಪ್ಪು ಫೋಟೋ ಇಟ್ಟವ್ರು ಹೇಳ್ತಾರೆ ಎಂದ ಸಚಿವ, ಪರಿಸರ ಸಚಿವರ ಮಾತು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ದೀಪಾವಳಿ ಬಿಜೆಪಿ ಹಬ್ಬವಲ್ಲ, ಹಿಂದೂಗಳ ಹಬ್ಬ ಎಂದಿದ್ದಾರೆ.
05:35 PM (IST) Oct 21
ಹಿರಿಯ ಹಾಸ್ಯನಟ ಗೋವರ್ಧನ್ ಅಸ್ರಾನಿ (84) ಅವರು ನಿಧನರಾಗಿದ್ದು, ಹಿಂದಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕೊನೆಯ ಇಚ್ಛೆಯಂತೆ, ಯಾರಿಗೂ ತಿಳಿಸದೆ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆಯನ್ನು ಗೌಪ್ಯವಾಗಿ ನೆರವೇರಿಸಲಾಯಿತು.
05:25 PM (IST) Oct 21
ಏಷ್ಯಾಕಪ್ ಟ್ರೋಫಿಯನ್ನು ಹಸ್ತಾಂತರಿಸುವಂತೆ ಬಿಸಿಸಿಐ ಮಾಡಿದ ಮನವಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರತಿಕ್ರಿಯಿಸಿದ್ದಾರೆ. ನವೆಂಬರ್‌ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ, ಆಟಗಾರನೊಬ್ಬನಿಗೆ ತಾವೇ ಟ್ರೋಫಿ ನೀಡುವುದಾಗಿ ಅವರು ತಿಳಿಸಿದ್ದಾರೆ.
04:23 PM (IST) Oct 21
03:48 PM (IST) Oct 21
ದೀಪಾವಳಿ ಬೋನಸ್ ಕೊಡದ ಕಾರಣ ಟೋಲ್ ಗೇಟ್ ತೆರೆದಿಟ್ಟ ಸಿಬ್ಬಂದಿ, ಒಂದೇ ದಿನ ಭಾರಿ ನಷ್ಟ, ಹಬ್ಬದ ದಿನ ಅತೀ ಹೆಚ್ಚು ವಾಹನ ಟೋಲ್ ಗೇಟ್ ಮೂಲಕ ಸಾಗುವ ಕಾರಣ ಇಡೀ ವರ್ಷದ ಆದಾಯವೇ ಒಂದೇ ದಿನ ನಷ್ಟವಾಗಿದೆ.
02:50 PM (IST) Oct 21
ದೀರ್ಘ ವಿರಾಮದ ನಂತರ ಪರ್ತ್‌ನ ಫಾಸ್ಟ್ ಮತ್ತು ಬೌನ್ಸಿ ಪಿಚ್‌ನಲ್ಲಿ ಮೊದಲ ಏಕದಿನ ಪಂದ್ಯವನ್ನು ಆಡುವುದು ಯಾವಾಗಲೂ ಕಷ್ಟ ಎಂದು ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಇದರ ಜತೆಗೆ ಕೊಹ್ಲಿ ಹಾಗೂ ರೋಹಿತ್‌ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
01:58 PM (IST) Oct 21
01:12 PM (IST) Oct 21
ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಈಗಾಗಲೇ ಅಧಿಕೃತ ಚಾಲನೆ ಸಿಕ್ಕಿದ್ದು, ಆತಿಥೇಯ ಆಸ್ಟ್ರೇಲಿಯಾ ಶುಭಾರಂಭ ಮಾಡಿದೆ. ಇದೀಗ ಎರಡನೇ ಏಕದಿನ ಪಂದ್ಯ ಯಾವಾಗ ಎನ್ನುವ ಕುತೂಹಲ ಜೋರಾಗಿದೆ.
12:27 PM (IST) Oct 21
ಪಾಕಿಸ್ತಾನ ಏಕದಿನ ತಂಡದ ನಾಯಕತ್ವದಿಂದ ಮೊಹಮ್ಮದ್ ರಿಜ್ವಾನ್‌ರನ್ನು ಕೆಳಗಿಳಿಸಲಾಗಿದ್ದು, ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರನ್ನು ಹೊಸ ನಾಯಕರನ್ನಾಗಿ ನೇಮಿಸಲಾಗಿದೆ. ಕೋಚ್ ಮೈಕ್ ಹೆಸ್ಸನ್ ಅವರ ಮನವಿಯ ಮೇರೆಗೆ ದಕ್ಷಿಣ ಆಫ್ರಿಕಾ ಸರಣಿಗೆ ಮುನ್ನ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
11:24 AM (IST) Oct 21
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಫಲರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ನಿವೃತ್ತಿಯ ಊಹಾಪೋಹಗಳ ನಡುವೆ, ಈ ಸರಣಿಯು ಇಬ್ಬರ ಏಕದಿನ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆಯಿದೆ.
10:00 AM (IST) Oct 21
ಎಎಫ್‌ಸಿ ಚಾಂಪಿಯನ್ಸ್ ಲೀಗ್-2ರಲ್ಲಿ ಎಫ್‌ಸಿ ಗೋವಾ ವಿರುದ್ಧ ಆಡಬೇಕಿದ್ದ ಅಲ್-ನಸ್ರ್ ತಂಡದ ಖ್ಯಾತ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೊನಾಲ್ಡ್ ಅವರ ಭಾರತ ಭೇಟಿ ರದ್ದಾಗಿದೆ. ಕಾರ್ಯದೊತ್ತಡ ತಗ್ಗಿಸುವ ಮತ್ತು ಫಿಟ್ನೆಸ್ ಕಡೆಗಿನ ಗಮನದಿಂದ ಅವರು ಈ ಪಂದ್ಯದಿಂದ ದೂರ ಉಳಿದಿದ್ದಾರೆ.
09:06 AM (IST) Oct 21
ಐಸಿಸಿ ಮಹಿಳಾ ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧ 7 ರನ್‌ಗಳ ಜಯ ಸಾಧಿಸಿದೆ. ಗೆಲುವಿನ ಸನಿಹದಲ್ಲಿದ್ದ ಬಾಂಗ್ಲಾ, ಕೊನೆಯ ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡು ವೀರೋಚಿತ ಸೋಲು ಅನುಭವಿಸಿತು.