₹519 ಕೋಟಿಗೆ ಜಾಗ ಖರೀದಿಸಿದ ಲುಲು ಗ್ರೂಪ್, ದುಬಾರಿ ಸೇಲ್‌ನಿಂದ ಸರ್ಕಾರಕ್ಕೆ ₹31 ಕೋಟಿ ಆದಾಯ, 16 ಏಕರೆ ಜಾಗ ಖರೀದಿಗೆ ಲುಲು ಗ್ರೂಪ್ ಇಷ್ಟು ಖರ್ಚು ಮಾಡಿದೆ. ಇದು ಅಹಮ್ಮದಾಬಾದ್‌ನಲ್ಲಿ ನಡೆದ ಅತೀ ದುಬಾರಿ ಲ್ಯಾಂಡ್ ಸೇಲ್ ದಾಖಲೆ ಬರೆದಿದೆ.
ಅಹಮ್ಮದಾಬಾದ್ (ಆ.21) ಲುಲು ಗ್ರೂಪ್ ಒಂದೇ ಒಂದು ಚೆಕ್‌ನಿಂದ ಸರ್ಕಾರಕ್ಕೆ 31 ಕೋಟಿ ರೂಪಾಯಿ ಹರಿದು ಬಂದಿದ್ದರೆ, ಇತ್ತ 519 ಕೋಟಿ ರೂಪಾಯಿ ವ್ಯವಾಹರ ನಡೆದಿದೆ. ಹೌದು, ಅಹಮ್ಮದಾಬಾದ್‌ನಲ್ಲಿ ಲುಲು ಗ್ರೂಪ್ 16.35 ಎಕರೇ ಜಾಗವನ್ನು ಖರೀದಿಸಿದೆ. ಇದರ ಮೌಲ್ಯ 519.41 ಕೋಟಿ ರೂಪಾಯಿ. ಲುಲು ಗ್ರೂಪ್ ಒಂದೇ ಟ್ರಾನ್ಸಾಕ್ಷನ್ ಮೂಲಕ 519.41 ಕೋಟಿ ರೂಪಾಯಿ ಹಣವನ್ನು ಸರ್ಕಾರಕ್ಕೆ ಪಾವತಿಸಿದೆ. ವಿಶೇಷ ಅಂದರೆ ಈ ಲ್ಯಾಂಡ್ ಸೇಲ್‌ನಲ್ಲಿ ಲುಲು ಗ್ರೂಪ್ 31 ಕೋಟಿ ರೂಪಾಯಿ ಹಣವನ್ನು ಸ್ಟಾಂಪ್ ಡ್ಯೂಟಿಯಾಗಿ ಸರ್ಕಾರಕ್ಕೆ ಪಾವತಿಸಿದೆ. ಈ ಲ್ಯಾಂಡ್ ಸೇಲ್ ಅಹಮ್ಮದಾಬಾದ್‌ನಲ್ಲಿ ಇದುವರೆಗೆ ನಡೆದ ಅತೀ ದುಬಾರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಲೀಸ್ ಅಲ್ಲ, ನೇರ ಮಾರಾಟ
ಅಹಮ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಕೆಲ ಸ್ಥಗಳನ್ನು ಮಾರಾಟ ಮಾಡಲು ನಿರ್ಧರಿಸಿತ್ತು. ಸಾಮಾನ್ಯವಾಗಿ ಸರ್ಕಾರಗಳು ಜಾಗವನ್ನು ಲೀಸ್‌ಗೆ ನೀಡುತ್ತದೆ. 99 ವರ್ಷದ ಲೀಸ್ ಪ್ರಕ್ರಿಯೆ ದೇಶಾದ್ಯಂತ ಹೆಚ್ಚು. ಆದರೆ ಅಹಮ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಟೌನ್‌ಶಿಫ್ ಭಾಗವಾಗಿ ಭಾರಿ ಬದಲಾವಣೆ ಮಾಡುತ್ತಿದೆ. ಹೀಗಾಗಿ ಕೆಲ ಸ್ಥಳಗಳನ್ನು ಮಾರಾಟ ಮಾಡಲು ಮುಂದಾಗಿತ್ತು. ಇದಕ್ಕಾಗಿ ಹರಾಜು ಪ್ರಕ್ರಿಯೆ ನಡೆಸಿತ್ತು. ಗುಜರಾತ್ ಸರ್ಕಾರ ನಗರದಲ್ಲಿ ಅತೀ ದೊಡ್ಡ ಹೂಡಿಕೆಯನ್ನು ನಿರೀಕ್ಷಿಸುತ್ತಿದೆ. ಇದಕ್ಕೆ ತಕ್ಕಂತೆ ಕೆಲ ಮಾರ್ಪಟುಗಳನ್ನು ಮಾಡಿಕೊಂಡು ಕೆಲ ಸ್ಥಳಗಳ ಮಾರಾಟ ಮಾಡುತ್ತಿದೆ. ಹೀಗಾಗಿ ಲುಲು ಗ್ರೂಪ್ ಈ ಜಾಗ ಖರೀದಿಸಿದೆ.
ಹರಾಜಿನಲ್ಲಿ ಭಾರಿ ಪೈಪೋಟಿ
ಹರಾಜಿನಲ್ಲಿ ಹಲವು ಉದ್ಯಮಿಗಳು, ಸಂಸ್ಥೆಗಳು ಪಾಲ್ಗೊಂಡಿತ್ತು. ಗುಜರಾತ್‌ನಲ್ಲಿ ಉದ್ಯಮಿಗಳಿಗೇನು ಕಡಿಮೆ ಇಲ್ಲ. ದೇಶದ ಟಾಪ್ ಉದ್ಯಮಿಗಳು ಬಹುತೇಕರು ಗುಜರಾತ್ ಮೂಲದವರು. ಆದರೆ ಹರಾಜಿನಲ್ಲಿ ಲುಲು ಗ್ರೂಪ್ 519.41 ಕೋಟಿ ರೂಪಾಯಿಗೆ ಡೀಲ್ ಖುದುರಿಸಿತು.
ಲೂಲು ಮಾಲ್ ಕಟ್ಟಲು ಸಿದ್ದತೆ
ಲುಲು ಗ್ರೂಪ್ ಇದೀಗ ಅಹಮ್ಮಾಬಾದ್‌ನಲ್ಲಿ ಖರೀದಿಸಿದ ಜಾಗದಲ್ಲಿ ಲುಲು ಮಾಲ್, ಲೂಲು ಹೈಪರ್ ಮಾರ್ಕೆಟ್, ಲುಲು ಕಮರ್ಷಿಯಲ್ ಕಟ್ಟಡ ಸೇರಿದಂತೆ ಹಲವು ಪ್ಲಾನ್ ಹಾಕಿಕೊಂಡಿದೆ. ಈ ಸ್ಥಳ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭಾ ಕ್ಷೇತ್ರದಲ್ಲಿ ಇದೆ. ಲುಲು ಗ್ರೂಪ್ ಇದೀಗ ಗುಜರಾತ್‌ಗೆ ಉದ್ಯಮ ವಿಸ್ತರಿಸುತ್ತಿದೆ. ಇದಕ್ಕಾಗಿ ದುಬಾರಿ ಮೊತ್ತದ ಲ್ಯಾಂಡ್ ಖರೀದಿಸಿದೆ.
