ದೀಪಾವಳಿಯಿಂದ ಮಾಲಿನ್ಯ ಆರೋಪ, ವಿಧಾನಸಭೆಯಲ್ಲಿ ಟಿಪ್ಪು ಫೋಟೋ ಇಟ್ಟವ್ರು ಹೇಳ್ತಾರೆ ಎಂದ ಸಚಿವ, ಪರಿಸರ ಸಚಿವರ ಮಾತು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ದೀಪಾವಳಿ ಬಿಜೆಪಿ ಹಬ್ಬವಲ್ಲ, ಹಿಂದೂಗಳ ಹಬ್ಬ ಎಂದಿದ್ದಾರೆ.

ನವದೆಹಲಿ (ಅ.21) ವಾಯು ಮಾಲಿನ್ಯಕ್ಕೂ ದೀಪಾವಳಿಗೂ ಸಂಬಂಧವಿಲ್ಲ, ವಾಯು ಮಾಲಿನ್ಯ ಆಗುತ್ತಿರುವ ಕಾರಣ ಬೇರೆ, ಇದಕ್ಕೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧಿಸುವುದು ಕ್ರಮವಲ್ಲ. ದೀಪಾವಳಿ ಬಿಜೆಪಿ ಪಕ್ಷದ ಹಬ್ಬವಲ್ಲ. ಸನಾತನ ಹಿಂದೂಗಳ ಹಬ್ಬ ಎಂದು ದೆಹಲಿ ಬಿಜೆಪಿ ಸರ್ಕಾರದ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ದೀಪಾವಳಿ ಪಟಾಕಿಯಿಂದ ದೆಹಲಿ ಮಾಲಿನ್ಯ ವಿಪರೀತವಾಗಿದೆ ಎಂಬ ಆಮ್ ಆದ್ಮಿ ಪಾರ್ಟಿ ಆರೋಪಕ್ಕೆ ಉತ್ತರಿಸಿದ ಸಚಿವ, ಇದು ಔರಂಗಜೇಬ್, ಅಕ್ಬರ್‌ನಿಂದ ಪ್ರೇರಿತರಾದವರು ಹೇಳುತ್ತಾರೆ ಎಂದಿದ್ದಾರೆ.

ಟಿಪ್ಪು ಫೋಟೋ ವಿಧಾನಸೌಧದಲ್ಲಿ ಇಟ್ಟವರು ಹೇಳುತ್ತಾರೆ

ದೀಪಾವಳಿ ಹಬ್ಬದಿಂದ ವಾಯು ಮಾಲಿನ್ಯ ವಾಗುತ್ತಿದೆ ಎಂದು ವಿಧಾನಸೌಧದಲ್ಲಿ ಟಿಪ್ಪು ಫೋಟೋ ಇಟ್ಟು ಪೂಜಿಸಿದವರು ಹೇಳುತ್ತಾರೆ. ಆಮ್ ಆದ್ಮಿ ಪಾರ್ಟಿ ವಿನಾಕಾರಣ ಹಿಂದೂಗಳನ್ನು, ಅವರ ಹಬ್ಬವನ್ನು ವಿವಾದಕ್ಕೆ ಎಳೆಯುತ್ತಿದ್ದಾರೆ. ಆಮ್ ಆದ್ಮಿ ಪಾರ್ಟಿ ಒಂದು ಸಮುದಾಯವನ್ನು ಒಲೈಕೆ ಮಾಡಲು, ಅವರ ಮತಕ್ಕಾಗಿ ಈ ಕಸರತ್ತು ಮಾಡುತ್ತಿದೆ. ಇದರಿಂದಲೇ ಆಮ್ ಆದ್ಮಿ ಪಾರ್ಟಿಯನ್ನು ಜನ ತಿರಸ್ಕರಿಸಿದ್ದಾರೆ ಎಂದು ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ಆಮ್ ಆದ್ಮಿ ಪಾರ್ಟಿ ವಿರುದ್ದ ಸಚಿವ ಗರಂ

ದೀಪಾವಳಿ ಆಚರಣೆಗೆ, ಪಟಾಕಿ ಸಿಡಿಸಲು ಅನುಮತಿ ಕೊಟ್ಟಿದ್ದೇವೆ. ಹಿಂದೂಗಳಿಗೆ ಅವರ ಹಬ್ಬವನ್ನು ಸಂಸ್ಕೃತಿ, ಸಂಪ್ರದಾಯದ ಪ್ರಕಾರ ಆಚರಣೆಗೆ ಬಿಜೆಪಿ ಪ್ರಯತ್ನಸಿದೆ. ದೀಪಾವಳಿ ಬಿಜೆಪಿಯ ಹಬ್ಬವಲ್ಲ, ಸನಾತನ ಹಿಂದೂಗಳ ಹಬ್ಬ. ಈ ಹಬ್ಬವನ್ನೂ ಬಿಜೆಪಿ ಕೂಡ ಆಚರಿಸುತ್ತದೆ. ಇದರಲ್ಲಿ ರಾಜಕೀಯ ಮಾಡಲು ಆಮ್ ಆದ್ಮಿ ಪಾರ್ಟಿ ಪ್ರಯತ್ನಿಸುತ್ತಿದೆ ಎಂದು ಮಂಜಿಂದರ್ ಸಿಂಗ್ ಸರ್ಸಾ ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ನೀತಿ ಏನಾಗಿತ್ತು?

ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ನಿಷೇಧ ಮಾಡಿದ್ದು ಮೊದಲ ಬಾರಿಗೆ ಅರವಿಂದ್ ಕೇಜ್ರಿವಾಲ್. ಆಮ್ ಆದ್ಮಿ ಪಾರ್ಟಿ ಸರ್ಕಾರ ಮೊದಲು ಈ ನಿರ್ಧಾರ ಕೈಗೊಂಡಿತ್ತು. ಆಮ್ ಆದ್ಮಿ ಪಾರ್ಟಿ ವಾಯು ಮಾಲಿನ್ಯಕ್ಕೆ ಪ್ರುಮಖ ಕಾರಣಕ್ಕೆ ಪರಿಹಾರ ಹುಡುಕುವ ಬದಲು, ಹಿಂದೂಗಳ ಹಬ್ಬದ ಮೇಲೆ ಕಣ್ಣ ಹಾಕಿತ್ತು. ಇಲ್ಲಿದಂ ಬಳಿಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಪ್ ನಾಯಕರು ಹಿಂದೂಗಳ ದೀಪಾವಳಿ ಸೇರಿಂತೆ ಹಲವು ಹಬ್ಬಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಆಪ್ ನಾಯಕ ಸಂಜಯ್ ಸಿಂಗ್ ಸೇರಿದತೆ ಕೆಲ ಆಪ್ ನಾಯಕರು ಕಳೆದ ರಾತ್ರಿ, ದೀಪಾವಳಿ ಹಬ್ಬ ಆಚರಿಸುವುದು ನಿಲ್ಲಿಸಿ, ಪಟಾಕಿಯಿಂದ ಮಾಲಿನ್ಯ ವಾಗುತ್ತಿದೆ. ದೆಹಲಿಯಲ್ಲಿ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ ಎಂದು ಸಿರ್ಸಾ ಹೇಳಿದ್ದಾರೆ.

Scroll to load tweet…

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ...!

ಕಳೆದ ವರ್ಷದ ದೀಪಾವಳಿ ಸಮಯಕ್ಕೆ ದೆಹಲಿ ವಾಯು ಮಾಲಿನ್ಯ ಹೋಲಿಕೆ ಮಾಡಿದರೆ ಈ ವರ್ಷ ಗಣನೀಯವಾಗಿ ಕಡಿಮೆಯಾಗಿದೆ. ದೀಪಾವಳಿಗೂ ಮೊದಲು ಹಾಗೂ ದೀಪಾವಳಿ ಸಮಯದಲ್ಲಿ ದೆಹಲಿ ವಾಯು ಮಾಲಿನ್ಯದಲ್ಲಿ ಕೇವಲ 11 ಅಂಕಗಳ ವ್ಯತ್ಯಾಸವಿದೆ ಎಂದು ಸಿರ್ಸಾ ಹೇಳಿದ್ದಾರೆ.