ಮೂವತ್ ದಿನಕ್ಕೆ ಆಫೀಸ್ ಮುಂದಿರ್‌ಬೇಕ್, 7 BMW ಕಾರಿಗೆ ಬೇಡಿಕೆ ಇಟ್ಟ ಭ್ರಷ್ಟಾಚಾರ ವಿರೋಧಿ ಲೋಕಪಾಲ , ಈ ಟೆಂಡರ್ ಭಾರಿ ವಿವಾದ ಸೃಷ್ಟಿಯಾಗಿದೆ. 60 ರಿಂದ 70 ಲಕ್ಷ ರೂಪಾಯಿ ಬೆಲೆಯ ಕಾರುಗಳಿಗೆ ಆರ್ಡರ್ ನೀಡಿದ್ದಾರೆ. ಇದು ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ನವದೆಹಲಿ (ಅ.21) ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟಲು, ಜನಸಾಮಾನ್ಯರಿಗೆ ಸೌಲಭ್ಯಗಳು, ಸರ್ಕಾರದ ಯೋಜನೆಗಳು ಸರಿಯಾಗಿ ತಲುಪುತ್ತಿದೆಯೇ? ಸೋರಿಕೆಯಾಗುತ್ತಿದೆಯಾ ಅನ್ನೋ ಕುರಿತು ಹದ್ದಿನ ಕಣ್ಣಿಡುವ ಲೋಕಪಾಲ ಸಂಸ್ಥೆ ಇದೀಗ ಭಾರಿ ವಿವಾದದಲ್ಲಿ ಸಿಲುಕಿಕೊಂಡಿದೆ. ಲೋಕಪಾಲ ಸಂಸ್ಥೆ ಇದೀಗ ತಮಗೆ ಏಳು BMW ಕಾರು ಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. 60 ರಿಂದ 70 ಲಕ್ಷ ರೂಪಾಯಿ ಮೌಲ್ಯದ ಈ ಕಾರಿನ ಒಟ್ಟು ಬೆಲೆ ಸರಿಸುಮಾರು 5 ಕೋಟಿ ರೂಪಾಯಿ. ಹೊಸ ಕಾರು ಖರೀದಿಸಲು ಟೆಂಡರ್ ನೀಡಿದ್ದಾರೆ. 30 ದಿನಗಳ ಒಳಗಡೆ ಕಾರು ತಮ್ಮ ಕಚೇರಿಯಲ್ಲಿರಬೇಕು ಎಂದು ಆರ್ಡರ್ ಕೊಟ್ಟಿದ್ದಾರೆ.
BMW3 ಸೀರಿಸ್ 330 LI ಸೆಡಾನ್ ಕಾರು
ದೆಹಲಿಯ ವಸಂತ್ ಕುಂಜ್‌ನಲ್ಲಿ ಲೋಕಪಾಲ ಕಚೇರಿ ಇದೆ. ಇದರಲ್ಲಿ 7 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ 7 BMW ಕಾರು ಬೇಕು ಎಂದು ಆರ್ಡರ್ ಕೊಟ್ಟಿದ್ದಾರೆ. BMW3 ಸೀರಿಸ್ 330 LI ಸೆಡಾನ್ ಕಾರು ಇದಾಗಿದೆ. ಅತ್ಯಂತ ಐಷಾರಾಮಿ ಕಾರನ್ನೇ ಲೋಕಪಾಲ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ.
ಲೋಕಪಾಲ ಟೆಂಡರ್‌ನಲ್ಲಿ ಏನಿದೆ?
ಲೋಕಪಾಲ ಅಧಿಕಾರಿಗಳು ಪ್ರತಿಷ್ಠಿತ ಎಜೆನ್ಸಿಗಳಿಂದ ಮುಕ್ತ ಟ್ರೆಂಡರ್ ಆಹ್ವಾನಿಸಿದೆ. ಅದಿಕಾರಿಗಳಿಗೆ 7 BMW3 ಸೀರಿಸ್ 330 LI ಕಾರಿಗೆ ಟೆಂಡರ್ ಆಹ್ವಾನಿಸಿದೆ. ಅಕ್ಟೋಬರ್ 17 ರಿಂದ ನವೆಂಬರ್ 6 ಮಧ್ಯಾಹ್ನ 3 ಗಂಟೆ ಒಳಗೆ ಟೆಂಡರ್ ಸಲ್ಲಿಕೆ ಮಾಡಬೇಕು. ಇನ್ನು ಟೆಂಡರ್ ಅಂತಿಮಗೊಳ್ಳುವ ಎಜೆನ್ಸಿ 30 ದಿನದಲ್ಲಿ ಕಾರನ್ನು ನಮ್ಮ ಕಚೇರಿ ಮುಂದೆ ತಂದು ನಿಲ್ಲಿಸಬೇಕು ಎಂದು ಸೂಚಿಸಿದೆ.
7 ದಿನದ ಟ್ರೈನಿಂಗ್
ಕಾರು ಡೆಲಿವರಿ ಮಾಡುವುದು ಮಾತ್ರವಲ್ಲ, ಇದರ ಡ್ರೈವರ್‌ಗಳಿಗೆ 7 ದಿನದ ಟ್ರೈನಿಂಗ ನೀಡಬೇಕು. ಎಲ್ಲಾ ಮಾಹಿತಿಗಳನ್ನು ಡ್ರೈವರ್ ಹಾಗೂ ಅಧಿಕಾರಿಗಳಿಗೆ ನೀಡಬೇಕು. ಅಧಿಕಾರಿಗಳು ಹಾಗೂ ಚಾಲಕರು ತರಬೇತಿ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಟೆಂಡರ್‌ನಲ್ಲಿ ಹೇಳಿದೆ.
ಭಾರಿ ವಿವಾದ ಸೃಷ್ಟಿಸಿದ ಲೋಕಪಾಲರ ಟೆಂಡರ್
ಲೋಕಪಾಲ ಸಂಸ್ಥೆ ಅಧಿಕಾರಿಗಳು BMW ಕಾರಿಗೆ ಬೇಡಿಕೆ ಇಟ್ಟಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಭ್ರಷ್ಟಚಾರಾ ವಿರೋಧಿ ಸಂಸ್ಥೆಯಾಗಿ ಕೆಲಸ ಮಾಡಬೇಕಿದ್ದ ಸಂಸ್ಥೆ ಸಪ್ಪೆಯಾಗಿದೆ. ಲೋಕಪಾಲ ಅಧಿಕಾರಿಗಳಿಗೆ ಓಡಾಡಲು ಸರ್ಕಾರದ ವಾಹನವಿದೆ. ಆದರೆ ಈ ವಾಹನ ಸಾಲದು ಎಂದು ಇದೀಗ ಐಷಾರಾಮಿ ಕಾರಿನ ಬೇಡಿಕೆ ಇಟ್ಟಿದೆ. ಇದು ಭ್ರಷ್ಟಾಚಾರ ವಿರುದ್ದ ಹೋರಾಡವು ಸಂಸ್ಥೆಯೇ ಅನ್ನೋದು ಅನುಮಾನ ಮೂಡುತ್ತಿದೆ ಎಂದು ಹಲವು ನಾಯಕರು ಟೀಕಿಸಿದ್ದಾರೆ.
