ರಶ್ಮಿಕಾ ಮಂದಣ್ಣ ಜೊತೆ ದೀಪಾವಳಿ ಆಚರಿಸಿದ್ರಾ ದೇವರಕೊಂಡ? ವಾಯ್ಸ್ ಪತ್ತೆ ಹಚ್ಚಿದ ಫ್ಯಾನ್ಸ್, ವಿಜಯ್ ದೇವರಕೊಂಡ ಶೇರ್ ಮಾಡಿದ ಪೋಸ್ಟ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ದೇವರಕೊಂಡ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?

ಹೈದರಾಬಾದ್ (ಅ.21) ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಎಲ್ಲೆಡೆ ಪ್ರಕಟಗೊಂಡಿತ್ತು. ಆದರೆ ತಮ್ಮ ರಿಲೇಶನ್‌ಶಿಪ್ ಕುರಿತು ಇಬ್ಬರು ಸೆಲೆಬ್ರೆಟಿಗಳು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಈ ಕುರಿತ ಪರೋಕ್ಷ ಪ್ರಶ್ನೆಗಳಿಗೆ ರಶ್ಮಿಕಾ ನಾಚಿಕೊಂಡಿದ್ದರೆ ಹೊರತು ಉತ್ತರ ನೀಡಿರಲಿಲ್ಲ. ಇದೀಗ ದೇಶದೆಲ್ಲೆಡೆ ದೀಪಾವಳಿ ಆಚರಣೆ ನಡೆಯುತ್ತಿದೆ. ವಿಜಯ್ ದೇವರಕೊಂಡ ಮನೆಯಲ್ಲೂ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಲಾಗಿದೆ. ಕುಟುಂಬಸ್ಥರು, ಆಪ್ತರ ಜೊತೆ ವಿಜಯ್ ದೇವರಕೊಂಡ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಈ ಕುರಿತು ವಿಡಿಯೋಗಳನ್ನು ವಿಜಯ್ ದೇವರಕೊಂಡ ಪೋಸ್ಟ್ ಮಾಡಿದ್ದಾರೆ. ಎಲ್ಲಾ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿಲ್ಲ.ಆದರೆ ಅಭಿಮಾನಿಗಳು ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಧ್ವನಿ ಕೇಳುತ್ತಿದೆ ಎಂದಿದ್ದಾರೆ.

ವಿಜಯ್ ದೇವರಕೊಂಡ ಪೋಸ್ಟ್

ವಿಜಯ್ ದೇವರಕೊಂಡ ಸೋಶಿಯಲ್ ಮೀಡಿಯಾ ಮೂಲಕ, ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ನನ್ನೆಲ್ಲಾ ಪ್ರೀತಿ ಪಾತ್ರರಿಗೆ ದೀಪಾವಳಿ ಹಬ್ಬದ ಶುಭಾಶಯ, ದೀಪಾವಳಿ ಹಬ್ಬ ಯಾವತ್ತೂ ನನ್ನ ಫೇವರಿಟ್ ಹಬ್ಬ. ಎಲ್ಲರಿಗೂ ಪ್ರೀತಿ ತುಂಬಿದ ಅಪ್ಪುಗೆ ಎಂದು ದೇವರಕೊಂಡ ಹೇಳಿದ್ದಾರೆ. ಜೊತೆಗೆ ಮೂರು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೈಕಿ ಮೊದಲ ವಿಡಿಯೋದಲ್ಲೇ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಕೂಡ ಜೊತೆಗಿದ್ದಾರೆ. ಅವರ ಧ್ವನಿ ಕೇಳುತ್ತಿದೆ ಎಂದಿದ್ದಾರೆ.

ಏನಿದು ಇವರ ಜುಗುಲ್‌ಬಂಧಿ

ವಿಜಯ್ ದೇವರಕೊಂಡ ಹಂಚಿಕೊಂಡ ವಿಡಿಯೋಗಳ ಪೈಕಿ ಮೊದಲ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಹಾಗೂ ಆಪ್ತರು ಇಬ್ಬರು ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸದತ್ತ ಕ್ಯಾಮೆರಾ ಮುಖಮಾಡಿ ಆಗಸದಲ್ಲಿನ ಪಟಾಕಿಗಳ ಚಿತ್ತಾರ ತೋರಿಸಿದ್ದಾರೆ. ಇದರ ಜೊತೆಗೆ ದೇವರಕೊಂಡ ಹಾಗೂ ಆಪ್ತರೊಬ್ಬರು ಕಾಣಿಸಿಕೊಂಡಿದ್ದಾರೆ. ಆದರೆ ಈ ವಿಡಿಯೋ ಮಾಡುವಾಗ ಇದೇನಿದು ಇವರ ಜುಗುಲ್ ಬಂದಿ ಅನ್ನೋ ಮಹಿಳಾ ಧ್ವನಿ ಕೇಳುತ್ತಿದೆ. ಇದು ರಶ್ಮಿಕಾ ಮಂದಣ್ಣ ಧ್ವನಿ ಎಂದು ಅಭಿಮಾನಿಗಳು ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ ಒಂದಷ್ಟು ಆಪ್ತರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕತ್ತಲಲ್ಲಿನ ವಿಡಿಯೋ ಹೀಗಾಗಿ ಹಲವರ ಮುಖಗಳು ಸ್ಪಷ್ಟವಿಲ್ಲ. ಮೂರನೇ ವಿಡಿಯೋದಲ್ಲಿ ದೂರದಲ್ಲಿ ಪಟಾಕಿ ಚಿತ್ತಾರ ಹಾಗೂ ದೇವರ ಕೊಂಡ ಮುದ್ದಿನ ನಾಯಿಯ ವಿಡಿಯೋ ಇದೆ.

ಹಬ್ಬ ಆಚರಿಸಿ ಸಪರೇಟ್ ಪೋಸ್ಟ್

ಈ ಹಿಂದೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರು ಜೊತೆಯಾಗಿ ಹಬ್ಬ ಆಚರಿಸಿ ಬಳಿಕ ಪ್ರತ್ಯೇಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೇಳೆಯೂ ಅಭಿಮಾನಿಗಳು ಇಬ್ಬರು ಜೊತೆಯಾಗಿ ಹಬ್ಬ ಆಚರಿಸಿದ್ದೀರಿ, ಫೋಟೋಗಳಲ್ಲಿ ಸಾಮ್ಯತೆಯನ್ನು ಗುರಿತಿಸಿದ್ದರು. ಇದೀಗ ರಶ್ಮಿಕಾ ಧ್ವನಿ ಗುರತಿಸಿ ಇಬ್ಬರು ಜೊತೆಯಾಗಿ ಹಬ್ಬ ಆಚರಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದರೆ.

ರಶ್ಮಿಕಾ-ದೇವರಕೊಂಡ ನಿಶ್ಚಿತಾರ್ಥ

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಎಂಗೇಜ್‌ಮೆಂಟ್ ಭಾರಿ ಸದ್ದು ಮಾಡಿತ್ತು. ಇವರಿಬ್ಬರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಮದುವೆ ಎಂದು ವರದಿಯಾಗಿದೆ.

View post on Instagram