LIVE NOW
Published : Feb 21, 2026, 06:41 AM ISTUpdated : Feb 21, 2026, 11:17 PM IST

India Latest News Live: ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ, ಅವಿಮುಕ್ತೇಶ್ವರಾನಂದ ಸ್ವಾಮಿ ವಿರುದ್ಧ ಕೇಸ್‌ಗೆ ಕೋರ್ಟ್ ಸೂಚನೆ

ಸಾರಾಂಶ

ಫರೀದಾಬಾದ್‌: ಸ್ಥಳೀಯ ಗುಜರಿ ವ್ಯಾಪಾರಿಯೊಬ್ಬರು ತಮಗೆ ಹಳೆಯ ವಸ್ತುಗಳೊಂದಿಗೆ ಬಂದಿದ್ದ 15 ಲಕ್ಷ ರು.ಮೌಲ್ಯದ ಚಿನ್ನಾಭರಣಗಳನ್ನು ಅದರ ಮಾಲೀಕರಿಗೆ ತಲುಪಿಸಿದ ಅಚ್ಚರಿಯ ಘಟನೆ ನಡೆದಿದೆ. ಅಶೋಕ್‌ ಶರ್ಮಾ ಕುಟುಂಬಸ್ಥರು 2025ರ ಪ್ರಯಾಗ್‌ರಾಜ್‌ನ ಕುಂಭಮೇಳಕ್ಕೆ ತೆರಳುವ ವೇಳೆ ಕಳ್ಳರ ಭಯದಿಂದ ಚಿನ್ನದ ಆಭರಣ ಕವರ್‌ನಲ್ಲಿ ಹಾಕಿ ಹಳೆಯ ಪೆಟ್ಟಿಗೆಯಲ್ಲಿ ಇಟ್ಟಿದ್ದರು. ಈ ನಡುವೆ ದೀಪಾವಳಿಗೆ ಮನೆ ಸ್ವಚ್ಛಗೊಳಿಸುವ ವೇಳೆ ಚಿನ್ನ ಇದ್ದ ಪೆಟ್ಟಿಗೆಯನ್ನು ಗುಜರಿಗೆ ಹಾಕಿದ್ದರು. ಅದಾದ 2 ತಿಂಗಳ ಬಳಿಕ ಚಿನ್ನ ನಾಪತ್ತೆ ವಿಷಯ ನೆನಪಾಗಿ, ಗುಜರಿ ಅಂಗಡಿ ಮಾಲೀಕರ ಅಖ್ತರ್‌ ಖಾನ್‌ ಬಳಿ ವಿಚಾರಿಸಿದ್ದಾರೆ. ನೀವು ತಕ್ಷಣವೇ ಬಂದಿದ್ದರೆ ಹುಡುಕಬಹುದಿತ್ತು. ಈಗ ಸಿಗುವುದು ಕಷ್ಟ. ಆದರೆ ಒಮ್ಮೆ ಗೋಡೌನ್‌ನಲ್ಲಿ ಹುಡುಕುವೆ ಎಂದು ಹೇಳಿದ್ದರು.

ಅದಾದ ಕೆಲ ದಿನಗಳ ಬಳಿಕ ಅಖ್ತರ್‌ ಖಾನ್‌ಗೆ ಅವರಿಗೆ ಹಳೆಯ ವಸ್ತುಗಳ ನಡುವೆ 15 ಲಕ್ಷ ರು.ಮೌಲ್ಯದ 100 ಗ್ರಾಂ ಚಿನ್ನ ಸಿಕ್ಕಿದೆ. ಅದನ್ನು ಅವರು ಪೊಲೀಸರು ಮೂಲಕ ಶರ್ಮಾ ಕುಟುಂಬಕ್ಕೆ ರವಾನಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

11:17 PM (IST) Feb 21

ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ, ಅವಿಮುಕ್ತೇಶ್ವರಾನಂದ ಸ್ವಾಮಿ ವಿರುದ್ಧ ಕೇಸ್‌ಗೆ ಕೋರ್ಟ್ ಸೂಚನೆ

ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ, ಅವಿಮುಕ್ತೇಶ್ವರಾನಂದ ಸ್ವಾಮಿ ವಿರುದ್ಧ ಕೇಸ್‌ಗೆ ಕೋರ್ಟ್ ಸೂಚನೆ ನೀಡಿದೆ. ಇಬ್ಬರು ಸ್ವಾಮಿಜಿಗಳ ವಿರುದ್ದ ಪೋಕ್ಸೋ ಕೇಸ್ ದಾಖಲಿಸುವಂತೆ ಉತ್ತರ ಪ್ರದೇಶ ಕೋರ್ಟ್ ಆದೇಶಿಸಿದೆ.

 

Read Full Story

11:09 PM (IST) Feb 21

ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​

ವಿಚಿತ್ರ ಉಡುಗೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್, ಇದೀಗ ತಮ್ಮ ಮಾಜಿ ಪ್ರಿಯಕರನಿಂದಾದ ಮೋಸದ ಬಗ್ಗೆ ಮಾತನಾಡಿದ್ದಾರೆ. ತನ್ನ ಜನ್ಮದಿನದ ಟ್ಯಾಟೂ ಹಾಕಿಸಿಕೊಂಡು ಪ್ರೀತಿಯ ನಾಟಕವಾಡಿದ ನಟ ಪಾರಸ್ ಕಲ್ನಾವತ್ ಅವರ ವಂಚನೆಯನ್ನು ಬಯಲು ಮಾಡಿದ್ದಾರೆ.  

Read Full Story

10:36 PM (IST) Feb 21

ಬಹುಕಾಲದ ಗೆಳತಿ ಸೋಫಿ ಜೊತೆ ಶಿಖರ್ ಧವನ್ ಅದ್ಧೂರಿ ಮದುವೆ, ಹಲವರು ಕ್ರಿಕೆಟಿಗರು ಭಾಗಿ

ಬಹುಕಾಲದ ಗೆಳತಿ ಸೋಫಿ ಜೊತೆ ಶಿಖರ್ ಧವನ್ ಅದ್ಧೂರಿ ಮದುವೆ, ಖಾಸಗಿ ಕಾರ್ಯಕ್ರಮದಲ್ಲಿ ಧವನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊದಲ ಮದುವೆ ಮುರಿದು ಬಿದ್ದ ಬಳಿಕ ತೀವ್ರವಾಗಿ ಕುಗಿದ್ದ ಧವನ್ ಇದೀಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ.

 

Read Full Story

08:42 PM (IST) Feb 21

CBSE Exam - ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ

CBSE Exam: ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟ್ಯಾಂಡರ್ಡ್' ಪೇಪರ್‌ಗಿಂತ 'ಬೇಸಿಕ್' ಪೇಪರೇ ಹೆಚ್ಚು ಟಫ್ ಇತ್ತು ಎಂದಿದ್ದಾರೆ.

 

Read Full Story

08:06 PM (IST) Feb 21

ಅಭಿಷೇಕ್ ಶರ್ಮಾ ಬದಲು ಟೀಂ ಇಂಡಿಯಾ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್? ಕ್ಯಾಪ್ಟನ್ ಉತ್ತರ

ಅಭಿಷೇಕ್ ಶರ್ಮಾ ಬದಲು ಟೀಂ ಇಂಡಿಯಾ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್? ಕ್ಯಾಪ್ಟನ್ ಉತ್ತರ, ಕ್ಯಾಪ್ಟನ್ ಕೊಟ್ಟ ಉತ್ತರ ಏನು, ಶರ್ಮಾ ಕಳಪೆ ಫಾರ್ಮ್‌ ಬೆನ್ನಲ್ಲೇ ನಾಯಕ ಸೂರ್ಯಕುಮಾರ್ ಖಡಕ್ ಉತ್ತರ ನೀಡಿದ್ದಾರೆ.

 

Read Full Story

06:30 PM (IST) Feb 21

ಓಡಿ ಹೋಗೋ ಜೋಡಿಗಳಿಗೆ ಹೊಸ ರೂಲ್ಸ್, ಪೋಷಕರಿಗೆ ತಿಳಿಸದೇ ಮದುವೆ ರಿಜಿಸ್ಟ್ರೇಶನ್‌ ಆಗಲ್ಲ

ಓಡಿ ಹೋಗೋ ಜೋಡಿಗಳಿಗೆ ಹೊಸ ರೂಲ್ಸ್, ಪ್ರೀತಿಸಿ ಮದುವೆಯಾಗುವ, ಓಡಿ ಹೋಗುವ ಜೋಡಿಗಳು ಪೋಷಕರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಪೋಷಕರಿಗೆ ಮಾಹಿತಿ ಇದ್ದರೆ ಮಾತ್ರ ಮದುವೆ ನೋಂದಣಿ ಆಗಲಿದೆ.

 

Read Full Story

05:22 PM (IST) Feb 21

₹6 ಕೋಟಿ ಲಪಟಾಯಿಸಿದ ಪತ್ನಿಯಿಂದ ತನಿಖೆ ಟೆನ್ಶನ್, Asos ಸಂಸ್ಥಾಪಕ 17 ಮಹಡಿಯಿಂದ ಬಿದ್ದು ಸಾವು

₹6 ಕೋಟಿ ಲಪಟಾಯಿಸಿದ ಪತ್ನಿಯಿಂದ ತನಿಖೆ ಟೆನ್ಶನ್, ಕಾನೂನು ಹೋರಾಟಗಳ ನಡುವೆ ಪ್ರತಿಷ್ಠಿತ ಫ್ಯಾಶನ್ ಬ್ರ್ಯಾಂಡ್ ಸಹ ಸಂಸ್ಥಾಪಕ 17ನೇ ಮಹಡಿಯಿಂದ ಬಿದ್ದು ಅನುಮಾನಸ್ಪದವಾಗಿ ಸಾವು ಕಂಡಿದ್ದಾರೆ.

 

Read Full Story

04:41 PM (IST) Feb 21

ಹಾಗಲಕಾಯಿ ಸಾರಿಗೆ ಕೆರಳಿ ಕೆಂಡ, ಅಮ್ಮನ ಬಡಿದುಕೊಂಡು ಉಪ್ಪಿನಕಾಯಿ ನೆಕ್ಕಿ ಎರಡು ಪೆಗ್ ಏರಿಸಿದ ಮಗ

ಹಾಗಲಕಾಯಿ ಸಾರಿಗೆ ಕೆರಳಿ ಕೆಂಡ, ಅಮ್ಮನ ಬಡಿದುಕೊಂಡು ಉಪ್ಪಿನಕಾಯಿ ನೆಕ್ಕಿ ಎರಡು ಪೆಗ್ ಏರಿಸಿದ ಮಗ,  ಆಕ್ರೋಶ, ನಶೆಯಲ್ಲಿ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಮಗನ ಬಲವಾದ ಹೊಡೆತಕ್ಕೆ 65ರ ಹರೆಯದ ತಾಯಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

 

Read Full Story

04:39 PM (IST) Feb 21

ಟೀಂ ಇಂಡಿಯಾಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ; ಚಿಕನ್, ಮಟನ್ ಬಿಟ್ಟ ವೈಭವ್ ಸೂರ್ಯವಂಶಿ!

ಮುಂಬೈ: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲೇಬೇಕು ಅಂತ ಪಣ ತೊಟ್ಟಿರುವ ವೈಭವ್ ಸೂರ್ಯವಂಶಿ ತಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರೆ. ಸದ್ಯ ಐಪಿಎಲ್‌ಗೆ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಜೊತೆ ಟ್ರೈನಿಂಗ್‌ನಲ್ಲಿರುವ ವೈಭವ್, ಸಂಪೂರ್ಣವಾಗಿ ಮಾಂಸಾಹಾರ ತ್ಯಜಿಸಿದ್ದಾರೆ.

 

Read Full Story

03:50 PM (IST) Feb 21

ಕಾಸ್ಮೆಟಿಕ್ ಸರ್ಜರಿ ನಡೆಸಿದ ನಾಲ್ಕೇ ದಿನಕ್ಕೆ 20ರ ಹರೆಯದ ಇನ್‌ಫ್ಲುಯೆನ್ಸರ್ ಸಾವು, ವೈದ್ಯರ ಎಚ್ಚರಿಕೆ

ಕಾಸ್ಮೆಟಿಕ್ ಸರ್ಜರಿ ನಡೆಸಿದ ನಾಲ್ಕೇ ದಿನಕ್ಕೆ 20ರ ಹರೆಯದ ಇನ್‌ಫ್ಲುಯೆನ್ಸರ್ ಸಾವು, ಸೌಂಧರ್ಯ ವರ್ಧಕಕ್ಕಾಗಿ ಪಡೆದ ಚಿಕಿತ್ಸೆ ಈಕೆಗೆ ಮಳುವಾಗಿದೆ. ಇದರ ಬೆನ್ನಲ್ಲೇ ವೈದ್ಯರು ಮಹತ್ವದ ಎಚ್ಚರಿಕೆ ನೀಡಿದ್ದಾರೆ.

 

Read Full Story

03:43 PM (IST) Feb 21

ಶಾರುಖ್ ಸೇರಿ ಈ ನಟರ ಜೊತೆ ಸಂಬಂಧ - ಗುಟ್ಟು ರಟ್ಟು ಮಾಡಿದ ಪ್ರಿಯಾಂಕಾ ಚೋಪ್ರಾ! ಬಾಲಿವುಡ್​ಗೆ ಗುಡ್​ಬೈ?

ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಹ-ನಟರೊಂದಿಗೆ ಡೇಟಿಂಗ್ ಮಾಡಿದ್ದಾಗಿ ಒಪ್ಪಿಕೊಂಡಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಹಿದ್ ಕಪೂರ್, ಶಾರುಖ್ ಖಾನ್ ಅವರಂತಹ ನಟರ ಹೆಸರನ್ನು ಪ್ರಸ್ತಾಪಿಸಿದ್ದು, ಇದರ ಜೊತೆಗೆ, ಅವರು ಬಾಲಿವುಡ್ ತೊರೆವ ಬಗ್ಗೆ ಹೇಳಿದ್ದೇನು?

Read Full Story

03:28 PM (IST) Feb 21

'ಹೆಂಡ್ತಿಗೆ ಹೊಡೆಯಿರಿ.. ಆದ್ರೆ ಮೂಳೆ ಮುರೀಬೇಡಿ..' ಈ ದೇಶದ ಹೊಸ ಕಾನೂನಿಗೆ ಸ್ವರಾ ಭಾಸ್ಕರ್‌ ಕಿಡಿ!

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಪತ್ನಿಯ ಮೂಳೆ ಮುರಿಯದಂತೆ ಅಥವಾ ಗಾಯಗಳಾಗದಂತೆ ಹೊಡೆಯುವುದನ್ನು ಕಾನೂನುಬದ್ಧಗೊಳಿಸುವ ವಿಚಿತ್ರ ಕಾನೂನನ್ನು ಜಾರಿಗೆ ತಂದಿದೆ. ಈ ಹೊಸ ದಂಡ ಸಂಹಿತೆಯು ಮಹಿಳೆಯರಿಗೆ ಗುಲಾಮರ ಸ್ಥಾನಮಾನ ನೀಡಿದೆ ಎಂದು ವಿಶ್ವಾದ್ಯಂತ ಟೀಕೆ ವ್ಯಕ್ತವಾಗಿದೆ.

Read Full Story

03:07 PM (IST) Feb 21

ಪತಿಯಿಂದ ದೂರವಾಗಿದ್ದರೂ ರಾತ್ರಿ ಮನೆಗೆ ಬಂದ ಗಂಡ, ಮಕ್ಕಳ ಮುಂದೆ ನಡೆಯಿತು ದುರಂತ

ಪತಿಯಿಂದ ದೂರವಾಗಿದ್ದರೂ ರಾತ್ರಿ ಮನೆಗೆ ಬಂದ ಗಂಡ, ಕೋರ್ಟ್‌ನಲ್ಲಿ ಡಿವೋರ್ಸ್ ಕೇಸ್ ನಡೆಯುತ್ತಿದೆ. ಗಂಡನ ಬಿಟ್ಟು ಬೇರೆ ಮನೆಯಲ್ಲಿದ್ದ ಪತ್ನಿ ಮನೆಗೆ ರಾತ್ರಿ ಇದೇ ಅಸಾಮಿ ಎಂಟ್ರಿಕೊಟ್ಟಿದ್ದಾನೆ. ಬಳಿಕ ನಡೆದಿದ್ದೇ ದುರಂತ

Read Full Story

03:01 PM (IST) Feb 21

KGF ಮೀರಿಸೋ ಟಾಕ್ಸಿಕ್ - ಈ ಸಲ ಯುದ್ಧಾನೇ ಬೇರೆ! ಯಶ್ ಕೌಂಟರ್ ಕೊಟ್ಟಿದ್ದು ಯಾರಿಗೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದ್ದು, ಕೆಜಿಎಫ್ ಚಿತ್ರವನ್ನು ಮೀರಿಸುವಂತಹ ಹಿಂಸಾತ್ಮಕ ದೃಶ್ಯಗಳಿಂದ ಕೂಡಿದೆ. ಈ ಟೀಸರ್‌ನಲ್ಲಿ ಯಶ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಳಿವು ನೀಡಿದೆ.

Read Full Story

02:27 PM (IST) Feb 21

ಕೈಗೆಟುಕುವ ದರದಲ್ಲಿ ಅತ್ಯಂತ ಆಕರ್ಷಕ ಮಹೀಂದ್ರ ವಿಶನ್ ಎಸ್ ಕಾರು ರೆಡಿ, ಬೆಲೆ ಎಷ್ಟು?

ಕೈಗೆಟುಕುವ ದರದಲ್ಲಿ ಅತ್ಯಂತ ಆಕರ್ಷಕ ಮಹೀಂದ್ರ ವಿಶನ್ ಎಸ್ ಕಾರು ರೆಡಿ, ಮಹೀಂದ್ರ ಮತ್ತೊಂದು ಎಸ್‌ಯುವಿ ಕಾರು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟೆಸ್ಟಿಂಗ್ ಪೂರ್ಣಗೊಳಿಸಿ ಉತ್ಪಾದನೆ ಹಂತಕ್ಕೆ ತಲುಪಿದೆ. ಇದರ ಬೆಲೆ ಎಷ್ಟು?

 

Read Full Story

02:06 PM (IST) Feb 21

ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಸುರಿಮಳೆ - ಐಟಿಐ, 10ನೇ ತರಗತಿ ಆದವರಿಗೆ 3979 ಹುದ್ದೆಗಳು

ಯಂತ್ರ ಇಂಡಿಯಾ ಲಿಮಿಟೆಡ್ (ರಕ್ಷಣಾ ಇಲಾಖೆ) 3979 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ ಮತ್ತು ಐಟಿಐ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಹಾರಾಷ್ಟ್ರದಲ್ಲಿ ಉದ್ಯೋಗ ನೀಡಲಾಗುವುದು.
Read Full Story

01:57 PM (IST) Feb 21

ಟಿ20 ವಿಶ್ವಕಪ್‌ನಲ್ಲಿ ಸತತ 3 ಸೊನ್ನೆ ಸುತ್ತಿದ್ದು ಅಭಿಷೇಕ್‌ ಮಾತ್ರವಲ್ಲ ಇನ್ನೊಬ್ಬ ಭಾರತೀಯನೂ ಇದ್ದಾನೆ! ಆತ ಯಶಸ್ವಿ ಕೋಚ್!

ಒಂದು ಸೊನ್ನೆ, ಎರಡು ಸೊನ್ನೆ, ಮೂರು ಸೊನ್ನೆ! ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಡಕೌಟ್ ಆದ ಕೆಟ್ಟ ದಾಖಲೆ, ಅದೂ ಸತತವಾಗಿ. ಭಾರತದ ಸ್ಪೋಟಕ ಬ್ಯಾಟರ್ ಅತ್ಯಂತ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಹಾಗಂತ ಈ ದಾಖಲೆಗೆ ಪಾತ್ರವಾದ ಮೊದಲ ಕ್ರಿಕೆಟಿಗ ಅಭಿಷೇಕ್ ಶರ್ಮಾ ಅಲ್ಲ.

 

Read Full Story

01:15 PM (IST) Feb 21

ಅಭಿಷೇಕ್ ಶರ್ಮಾ ಸಿರೀಸ್‌ 'ಡಕ್ ಔಟ್' - ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ ಆದ ಸೋದರಿ ಕೋಮಲ್!

Abhishek Sharma's Sister Komal Trolled for Cricketer's Poor Form ಟಿ20 ವಿಶ್ವಕಪ್‌ನಲ್ಲಿ ಭಾರತದ ಆಟಗಾರ ಅಭಿಷೇಕ್ ಶರ್ಮ ಅವರ ಕಳಪೆ ಪ್ರದರ್ಶನಕ್ಕೆ ಅವರ ಸಹೋದರಿ ಕೋಮಲ್ ಶರ್ಮ ಅವರೇ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದಾರೆ. 

Read Full Story

01:04 PM (IST) Feb 21

US Trade Deal - ಅಮೆರಿಕಕ್ಕೆ ಶರಣಾಗಿದ್ದು ಏಕೆ? ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ!

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ್ದಾರೆ. ಅಮೆರಿಕದೊಂದಿಗಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು 'ಟ್ಯಾಪ್' ಎಂದು ಕರೆದಿರುವ ಅವರು, ಇದು ಅಮೆರಿಕಕ್ಕೆ 'ಏಕಪಕ್ಷೀಯ ಶರಣಾಗತಿ'ಯೇ ಎಂದು ಟೀಕಿಸಿದ್ದಾರೆ. 

Read Full Story

01:01 PM (IST) Feb 21

ಕೇವಲ ಇಷ್ಟು ಲಕ್ಷ ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಿದ್ರೆ 5 ವರ್ಷ ಪ್ರತಿ ತಿಂಗಳು ಸಿಗುತ್ತೇ ₹9,250!

ಈಗಿನ ಎಐ ಜಮಾನದಲ್ಲಿ ಯಾರಿಗೆ ಎಷ್ಟು ವರ್ಷ ಉದ್ಯೋಗವಿರುತ್ತೆ ಅನ್ನೋದನ್ನು ಹೇಳೋಕಾಗಲ್ಲ. ಹೀಗಾಗಿ ಪೋಸ್ಟ್ ಆಫೀಸ್‌ನಲ್ಲಿ ಕೆಲವೇ ಕೆಲವು ಲಕ್ಷ ರುಪಾಯಿಗಳನ್ನು ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು ತಲಾ 9.250 ರುಪಾಯಿ ಬಡ್ಡಿ ರೂಪದಲ್ಲಿ ಖಚಿತ ಆದಾಯ ಪಡೆಯಬಹುದು. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.

 

Read Full Story

12:46 PM (IST) Feb 21

33 ಮಕ್ಕಳ ಮೇಲೆ ದೌರ್ಜನ್ಯ, ಮಾಜಿ ಇಂಜಿನಿಯರ್ ದಂಪತಿಗೆ ಗಲ್ಲು ಶಿಕ್ಷೆ! 47 ದೇಶಕ್ಕೆ 2 ಲಕ್ಷಕ್ಕೂ ವಿಡಿಯೋ ರವಾನೆ

ಪೋಕ್ಸೋ ಪ್ರಕರಣದಲ್ಲಿ 33 ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಾಜಿ ಇಂಜಿನಿಯರ್ ಮತ್ತು ಆತನ ಪತ್ನಿಗೆ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಸಿಬಿಐ ತನಿಖೆಯಲ್ಲಿ, 47 ದೇಶಗಳಿಗೆ 2 ಲಕ್ಷಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳನ್ನು ಕಳುಹಿಸಿರುವುದು ಬಯಲಾಗಿದೆ. 

Read Full Story

11:48 AM (IST) Feb 21

ಭಾರತದ ಟಾಪ್ 10 ಜನಪ್ರಿಯ ನಟಿಯರ ಪೈಕಿ ಮೂವರು ಕನ್ನಡದ ಹೀರೋಯಿನ್ಸ್‌ಗೆ ಸ್ಥಾನ! ಇವರೇ ನೋಡಿ ನಂ.1 ನಟಿ

ಆರ್ಮಾಕ್ಸ್ ಮೀಡಿಯಾ ಸಂಸ್ಥೆಯು ಜನವರಿ ತಿಂಗಳಿನ 'ಭಾರತದ ಅತ್ಯಂತ ಜನಪ್ರಿಯ ಟಾಪ್ 10 ನಟಿಯರ' ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಕನ್ನಡತಿಯರಾದ ರಶ್ಮಿಕಾ ಮಂದಣ್ಣ & ದೀಪಿಕಾ ಪಡುಕೋಣೆ ಅವರ ರ‍್ಯಾಂಕಿಂಗ್ ಕುಸಿದಿರುವುದು ಅಚ್ಚರಿ ಮೂಡಿಸಿದರೆ, ನಯನತಾರಾ ಮತ್ತು ತ್ರಿಶಾ ಭರ್ಜರಿ ಏರಿಕೆ ಕಂಡಿದ್ದಾರೆ.

Read Full Story

10:51 AM (IST) Feb 21

3 ಬಾರಿ ಟಿ20 ವಿಶ್ವಕಪ್ ಫೈನಲ್ ಆಡಿದ ಏಕೈಕ ಟೀಂ ಇಂಡಿಯಾ ಕ್ರಿಕೆಟಿಗನೀತ!

ಬೆಂಗಳೂರು: 10ನೇ ಸೀಸನ್ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಇಂದಿನಿಂದ ಸೂಪರ್-8 ಪಂದ್ಯಗಳು ಆರಂಭವಾಗುತ್ತಿವೆ. ಈ ಸಂದರ್ಭದಲ್ಲಿ 3 ಟಿ20 ವಿಶ್ವಕಪ್ ಫೈನಲ್ ಆಡಿದ ಏಕೈಕ ಭಾರತೀಯ ಕ್ರಿಕೆಟಿಗ ಯಾರು ಎನ್ನುವುದನ್ನು ನೋಡೋಣ ಬನ್ನಿ.

 

Read Full Story

10:47 AM (IST) Feb 21

Delhi High Alert - ಕೆಂಪು ಕೋಟೆ ಬಳಿಯ ದೇವಸ್ಥಾನ ಗುರಿಯಾಗಿಸಿ ಉಗ್ರರ ದಾಳಿ ಸಾಧ್ಯತೆ, ದೆಹಲಿ ಪೊಲೀಸರು ಹೈಅಲರ್ಟ್!

Delhi High Alert ದೆಹಲಿಯಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯಿಂದ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್ ಸ್ಫೋಟಕ್ಕೆ ಪ್ರತೀಕಾರವಾಗಿ ಚಾಂದಿನಿ ಚೌಕ್‌ನ ದೇವಸ್ಥಾನದ ಮೇಲೆ ಐಇಡಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

Read Full Story

09:31 AM (IST) Feb 21

ಪ್ರಭಾಸ್‌ಗೆ ಇಷ್ಟವಾದ ಡೈರೆಕ್ಟರ್ ಹಾಗೂ ಸಿನಿಮಾ ಯಾವುದು ಗೊತ್ತಾ? ರಾಜಮೌಳಿ ಅಲ್ವೇ ಅಲ್ಲ!

ಪ್ರಭಾಸ್ ಹೆಚ್ಚಾಗಿ ಆ್ಯಕ್ಷನ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಅವರಿಗೆ ಇಷ್ಟವಾದ ಜಾನರ್ ಆ್ಯಕ್ಷನ್ ಅಲ್ವಂತೆ. ಹಾಗಾದ್ರೆ ಯಾವುದು? ಜೊತೆಗೆ, ತಾವು ನಟಿಸಿದ ಚಿತ್ರಗಳಲ್ಲಿ ಫೇವರಿಟ್ ಯಾವುದು ಎಂಬುದನ್ನೂ ಬಹಿರಂಗಪಡಿಸಿದ್ದಾರೆ.
Read Full Story

09:25 AM (IST) Feb 21

AI & Culture - ಪಾರ್ಕಿನ್ಸನ್, ಡಿಮೆನ್ಷಿಯಾಗೆ ಭಾರತೀಯ ನೃತ್ಯವೇ ಮದ್ದು! AI ಜೊತೆಗೂಡಿ ಹೊಸ ಚಿಕಿತ್ಸೆ

AI-ಇಂಡಿಯಾ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ AI ಮತ್ತು ಸಂಸ್ಕೃತಿಯನ್ನು ಒಗ್ಗೂಡಿಸುವ ಬಗ್ಗೆ ಚರ್ಚೆಯಾಗಿದೆ. ತಜ್ಞೆ ದೇವಿಕಾ ರಾವ್ ಅವರು, ಭಾರತೀಯ ಶಾಸ್ತ್ರೀಯ ನೃತ್ಯದ ತಾಳ ಮತ್ತು ಭಜನೆಗಳ ಮೂಲಕ ಪಾರ್ಕಿನ್ಸನ್, ಡಿಮೆನ್ಷಿಯಾದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹೇಗೆ ಸಾಧ್ಯ ಅಂತ ವಿವರಿಸಿದ್ದಾರೆ.
Read Full Story

09:04 AM (IST) Feb 21

ಹುಬ್ಬಳ್ಳಿಯಲ್ಲಿ ನಡೆಯಲಿರುವ ರಣಜಿ ಟ್ರೋಫಿ ಫೈನಲ್‌ಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ! ಹಲವು ಸ್ಟಾರ್ ಆಟಗಾರರಿಗೆ ಸ್ಥಾನ

ಫೆಬ್ರವರಿ 24 ರಿಂದ ಹುಬ್ಬಳ್ಳಿಯಲ್ಲಿ ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ದೇವದತ್ ಪಡಿಕ್ಕಲ್ ನಾಯಕತ್ವದ ತಂಡದಲ್ಲಿ ಹಲವು ತಾರಾ ಆಟಗಾರರು ಸ್ಥಾನ ಪಡೆದಿದ್ದು, ಸೆಮಿಫೈನಲ್‌ನಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.

Read Full Story

08:31 AM (IST) Feb 21

ಸುಪ್ರೀಂ ಕೋರ್ಟ್ ಆದೇಶಕ್ಕೆ ಟ್ರಂಪ್ ತಿರುಗೇಟು - ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ. 10ರಷ್ಟು ಜಾಗತಿಕ ಸುಂಕ ಹೇರಿಕೆ!

ಸುಪ್ರೀಂ ಕೋರ್ಟ್ ತನ್ನ ಹಿಂದಿನ ಸುಂಕದ ಆದೇಶಗಳನ್ನು ಅಸಿಂಧುಗೊಳಿಸಿದ ನಂತರ, ಡೊನಾಲ್ಡ್ ಟ್ರಂಪ್ ಎಲ್ಲಾ ಆಮದುಗಳ ಮೇಲೆ ಶೇ. 10ರಷ್ಟು ಹೊಸ ಸುಂಕವನ್ನು ವಿಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. 1974ರ ವ್ಯಾಪಾರ ಕಾಯ್ದೆಯ 'ಸೆಕ್ಷನ್ 122' ಬಳಸಿ ಈ ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ.

Read Full Story

08:25 AM (IST) Feb 21

ಟಿ20 ವಿಶ್ವಕಪ್ - ಇಂದಿನಿಂದ ಸೂಪರ್‌-8, ಮೊದಲ ಪಂದ್ಯದಲ್ಲಿ ಪಾಕ್‌ vs ಕಿವೀಸ್‌ ಫೈಟ್

ಟಿ20 ವಿಶ್ವಕಪ್‌ನ ಗುಂಪು ಹಂತ ಮುಗಿದಿದ್ದು, ಶನಿವಾರದಿಂದ ಸೂಪರ್‌-8 ಪಂದ್ಯಗಳು ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಸೆಣಸಾಡಲಿದ್ದು, ಮತ್ತೊಂದೆಡೆ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಒಮಾನ್ ವಿರುದ್ಧ ಗೆದ್ದು ಟೂರ್ನಿಯಿಂದ ಹೊರಬಿದ್ದಿದೆ.
Read Full Story

07:37 AM (IST) Feb 21

Trade Deal - ಅಮೆರಿಕ ಜೊತೆ ಒಪ್ಪಂದಕ್ಕೆ ಮೋದಿ ಸರ್ಕಾರ ಆತುರ, ಇದು 'ಭಾರತ ವಿರೋಧಿ' ಡೀಲ್ ಎಂದ ಕಾಂಗ್ರೆಸ್

ಅಮೆರಿಕದ ಸುಪ್ರೀಂ ಕೋರ್ಟ್, ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯನ್ನು ರದ್ದುಗೊಳಿಸುವ ಕೇವಲ 18 ದಿನಗಳ ಮೊದಲು, ಮೋದಿ ಸರ್ಕಾರವು ಅಮೆರಿಕದೊಂದಿಗೆ 'ಏಕಪಕ್ಷೀಯ, ಭಾರತ ವಿರೋಧಿ ವ್ಯಾಪಾರ ಒಪ್ಪಂದ'ಕ್ಕೆ ಆತುರದಿಂದ ಸಹಿ ಹಾಕಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ. 

Read Full Story

07:08 AM (IST) Feb 21

ತನ್ನದೇ ಸೈನಿಕರ ನಡುನೀರಲ್ಲಿ ಕೈಬಿಟ್ಟ ದ್ರೋಹಿ ಪಾಕಿಸ್ತಾನ! ನಾನು ನಿಮ್ಮವರಲ್ಲ ಎಂದರೆ ಮತ್ಯಾರು?

ಪಾಕಿಸ್ತಾನದ 8 ಯೋಧರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಜಾಗತಿಕ ಅವಮಾನದಿಂದ ಪಾರಾಗಲು ಪಾಕಿಸ್ತಾನವು ಅವರು ನಮ್ಮ ಸೈನಿಕರಲ್ಲ ಎಂದು ಹೇಳಿದೆ. ಇದಕ್ಕೆ ಪ್ರತಿಯಾಗಿ, ಯೋಧರು ತಮ್ಮ ಗುರುತಿನ ಚೀಟಿ ತೋರಿಸಿ ತಮ್ಮದೇ ಸರ್ಕಾರವನ್ನು ಪ್ರಶ್ನಿಸುವ ವಿಡಿಯೋವನ್ನು ಬಲೂಚಿಗಳು ಬಿಡುಗಡೆ ಮಾಡಿದ್ದಾರೆ.

Read Full Story

More Trending News