Published : Jul 17, 2025, 06:59 AM ISTUpdated : Jul 17, 2025, 11:05 PM IST

India latest news live: ದೇಶೀಯ ಬಾಂಬರ್‌ ಏರ್‌ಕ್ರಾಫ್ಟ್‌ ತಯಾರಿಕೆಗೆ ಮುಂದಾದ ಭಾರತ, 12 ಸಾವಿರ ಕಿ.ಮೀ ರೇಂಜ್‌, 12 ಟನ್‌ ಶಸ್ತ್ರಾಸ್ತ್ರ ಸಾಮರ್ಥ್ಯ!

ಸಾರಾಂಶ

ಗುವಾಹಟಿ: 'ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದಲ್ಲಿ ತೊಡಗಿರುವ ಹಾಲಿ ಮುಖ್ಯಮಂತ್ರಿ ಬಿಸ್ವಾ ಶರ್ಮಾ ಅವರನ್ನು ಜೈಲಿಗೆ ಕಳುಹಿಸುತ್ತೇವೆ' ಎಂದು ವಿಪಕ್ಷನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು. ಕಾಂಗ್ರೆಸ್ ಸಭೆ ಯಲ್ಲಿ ಮಾತನಾಡಿದ ರಾಹುಲ್, 'ಅಸ್ಸಾಂ ಸಿಎಂ ತಮ್ಮನ್ನು ರಾಜ ಎಂದು ತಿಳಿದು ಕೊಂಡಿದ್ದಾರೆ. ಆದರೆ ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಜನರು ಅವರನ್ನು ಜೈಲಿಗೆ ಹಾಕಲು ಬಯಸುತ್ತಾರೆ' ಎಂದರು. ಇದೇ ವೇಳೆ ಖರ್ಗೆ, 'ಈಗಲೇ ಶರ್ಮಾ ಅವರು ಜೈಲು ದುರಸ್ತಿ ಮಾಡಿಸಬೇಕು. ಏಕೆಂದರೆ ಶೀಘ್ರ ಅವರು ಅಲ್ಲಿಯೇ ಇರುತ್ತಾರೆ' ಎಂದು ಹರಿಹಾಯ್ದರು.

 

11:05 PM (IST) Jul 17

ದೇಶೀಯ ಬಾಂಬರ್‌ ಏರ್‌ಕ್ರಾಫ್ಟ್‌ ತಯಾರಿಕೆಗೆ ಮುಂದಾದ ಭಾರತ, 12 ಸಾವಿರ ಕಿ.ಮೀ ರೇಂಜ್‌, 12 ಟನ್‌ ಶಸ್ತ್ರಾಸ್ತ್ರ ಸಾಮರ್ಥ್ಯ!

ಈ ವಿಮಾನವು ರಾಡಾರ್‌ನಿಂದ ತಪ್ಪಿಸುವ ರಹಸ್ಯ ಸಾಮರ್ಥ್ಯಗಳನ್ನು ಹೊಂದಿರುತ್ತದೆ ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

Read Full Story

10:31 PM (IST) Jul 17

ಹಿಂಗಿದ್ರು.. ಹಿಂಗಾದ್ರು... ಟ್ರೋಲ್‌ಗೆ ಗುರಿಯಾದ ಮುಖ್ಯಮಂತ್ರಿ ಪತ್ನಿ!

ಪ್ರಮುಖ ರಾಜ್ಯವೊಂದರ ಮುಖ್ಯಮಂತ್ರಿಯ ಪತ್ನಿಯ ರೂಪಾಂತರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ 2014 ರಿಂದ ಇಲ್ಲಿಯವರೆಗಿನ ಅವರ ಮುಖಚಹರೆಯಲ್ಲಿ ಆದ ಬದಲಾವಣೆಯನ್ನು ತೋರಿಸಲಾಗಿದ್ದು, ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಚರ್ಚೆಗೆ ಕಾರಣವಾಗಿದೆ.

Read Full Story

08:57 PM (IST) Jul 17

ಪಕ್ಕದ ಮನೆಯವರ ಜೊತೆ ಗಲಾಟೆ, ಮೊಹಮದ್‌ ಶಮಿ ಮಾಜಿ ಪತ್ನಿ, ಮಗಳ ವಿರುದ್ಧ ಕೊಲೆ ಯತ್ನದ ಕೇಸ್‌!

ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್, ನೆರೆಹೊರೆಯವರೊಂದಿಗೆ ಭೂ ವಿವಾದದಲ್ಲಿ ಭಾಗಿಯಾಗಿರುವ ವಿಡಿಯೋ ವೈರಲ್ ಆಗಿದೆ. ದೈಹಿಕ ಹಲ್ಲೆ ಮತ್ತು ಕೊಲೆಯತ್ನದ ಆರೋಪದ ಮೇರೆಗೆ ಹಸಿನ್ ಮತ್ತು ಅವರ ಮಗಳು ಅರ್ಷಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

08:29 PM (IST) Jul 17

Energy first - ರಷ್ಯಾ ತೈಲ ವ್ಯಾಪಾರದ ಮೇಲಿನ ನ್ಯಾಟೋ ನಿರ್ಬಂಧ ಬೆದರಿಕೆಗೆ 'ಡೋಂಟ್ ಕೇರ್' ಎಂದ ಭಾರತ!

ರಷ್ಯಾದಿಂದ ತೈಲ ಆಮದು ನಿಲ್ಲಿಸುವಂತೆ ನ್ಯಾಟೋ ಒತ್ತಡ ಹೇರಿದರೂ ಭಾರತ ಖಡಾಖಂಡಿತವಾಗಿ ನಿರಾಕರಿಸಿದೆ. ದೇಶದ ಇಂಧನ ಭದ್ರತೆಗೆ ಆದ್ಯತೆ ಎಂದು ಭಾರತ ಸ್ಪಷ್ಟಪಡಿಸಿದೆ. ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುತ್ತಿರುವುದಾಗಿಯೂ ಸರ್ಕಾರ ತಿಳಿಸಿದೆ.
Read Full Story

08:01 PM (IST) Jul 17

ಲವರ್‌ ಜೊತೆ ಅಮ್ಮನ ವಾಸ - ಅಪ್ಪನ ಜೊತೆ ಹೋಗ್ತಿನಿ ಎಂದ ಮಗಳ ಕೊಂದೇ ಬಿಟ್ಟ ತಾಯಿ

ಗಂಡನ ಬಿಟ್ಟು ತನ್ನ ಪ್ರೇಮಿಯ ಜೊತೆ ವಾಸ ಮಾಡುತ್ತಿದ್ದ ಮಹಿಳೆಯೊಬ್ಬಳು ತನ್ನ 5 ವರ್ಷದ ಮಗಳ ಹತ್ಯೆ ಮಾಡಿ ಗಂಡನ ವಿರುದ್ಧ ದೂರು ನೀಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

Read Full Story

07:59 PM (IST) Jul 17

ಭಾರತದ ಗುಲಾಮಗಿರಿಯ ಕಹಿ ವಾಸ್ತವ NCERTನ ಹೊಸ ಪುಸ್ತಕದಲ್ಲಿ ಬಹಿರಂಗ!

NCERT 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು ವಸಾಹತುಶಾಹಿ ಇತಿಹಾಸವನ್ನು ಪರಿಷ್ಕರಿಸಿದೆ. ಬ್ರಿಟಿಷರ ಆರ್ಥಿಕ ಶೋಷಣೆ, ಸಾಂಸ್ಕೃತಿಕ ಪ್ರಭಾವ ಮತ್ತು ಮತಾಂತರದ ಉದ್ದೇಶಗಳನ್ನು ಬಹಿರಂಗಪಡಿಸುತ್ತದೆ. ಮರಾಠಾ ಸಾಮ್ರಾಜ್ಯದ ಕೊಡುಗೆಗಳನ್ನೂ ಒಳಗೊಂಡಿದೆ.
Read Full Story

07:46 PM (IST) Jul 17

ತಲ್ಲಣ ಸೃಷ್ಟಿಸಿದ 9 ಬೌದ್ದ ಸಂನ್ಯಾಸಿಗಳ ಸೆ*ಕ್ಸ್‌ ಟೇಪ್‌, 100 ಕೋಟಿ ಸುಲಿಗೆ ಮಾಡಿದ ಮಹಿಳೆ!

ಥಾಯ್ಲೆಂಡ್‌ನಲ್ಲಿ ಒಂಬತ್ತು ಸಂನ್ಯಾಸಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿ, ಫೋಟೋ ಮತ್ತು ವೀಡಿಯೊಗಳನ್ನು ಬಳಸಿ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

Read Full Story

06:46 PM (IST) Jul 17

ಕೇವಲ 7,500 ರೂ.ಗಳಿಗೆ ಜರ್ಮನಿಯಲ್ಲಿಒಂದು ವರ್ಷ ವಾಸ ಮಾಡಿ! ಫ್ರೀಲ್ಯಾನ್ಸ್ ವೀಸಾಗೆ ಈಗ್ಲೇ ಅರ್ಜಿ ಹಾಕಿ

ಕೇವಲ 7,500 ರೂ.ಗಳಿಂದ ಜರ್ಮನಿಯಲ್ಲಿ ಒಂದು ವರ್ಷ ಕೆಲಸ ಮಾಡಿ ಮತ್ತು ವಾಸಿಸಿ. ಜರ್ಮನಿಯ ಫ್ರೀಲ್ಯಾನ್ಸ್ ವೀಸಾ ಉದ್ಯೋಗದ ಪ್ರಸ್ತಾಪವಿಲ್ಲದೆ ಸ್ವತಂತ್ರವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಈ ವೀಸಾವನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು.
Read Full Story

06:33 PM (IST) Jul 17

56 ಬ್ರ್ಯಾಂಚ್ ಹೊಂದಿರೋ ಸಂಗೀತಾ ರೆಸ್ಟೋರೆಂಟ್‌ನಿಂದ 40 ರೂ.ಗೆ ವಿಶೇಷ ಊಟ - ಸೀಮಿತ ಅವಧಿಗೆ ಆಫರ್!

Rs 40 Meal Offer: ಸಂಗೀತಾ ರೆಸ್ಟೋರೆಂಟ್ ತನ್ನ 40ನೇ ವಾರ್ಷಿಕೋತ್ಸವದ ಅಂಗವಾಗಿ ಕೇವಲ ₹40ಕ್ಕೆ ವಿಶೇಷ ಥಾಲಿ ನೀಡುತ್ತಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಸೀಮಿತವಾಗಿರಲಿದೆ.

Read Full Story

06:31 PM (IST) Jul 17

ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಿ ಧರ್ಮ ಕೇಳಿ ಕೊಂದ ಆ ನಾಲ್ವರು ಭಯೋತ್ಪಾದಕರನ್ನ ಹಿಡಿಯುವವರಿಗೆ ನಾವು ಪ್ರಶ್ನಿಸುತ್ತೇವೆ - ಕೇಂದ್ರಕ್ಕೆ ಓವೈಸಿ ಆಗ್ರಹ

ಪಹಲ್ಗಾಮ್ ದಾಳಿಯನ್ನು ಭದ್ರತಾ ವೈಫಲ್ಯ ಎಂದು ಓವೈಸಿ ಟೀಕಿಸಿದ್ದಾರೆ. 'ಆಪರೇಷನ್ ಸಿಂದೂರ್' ಮುಂದುವರಿಸಿ, ದಾಳಿಕೋರರನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆ ಮತ್ತು ವಕ್ಫ್ ತಿದ್ದುಪಡಿ ಮಸೂದೆಯನ್ನು ಟೀಕಿಸಿದ್ದಾರೆ.

Read Full Story

06:24 PM (IST) Jul 17

ರಿಲಿವಿಂಗ್‌ ಲೆಟರ್‌ನಲ್ಲಿ ಮಾನಹಾನಿ ಅಂಶ - ವಿಪ್ರೋಗೆ ದೆಹಲಿ ಹೈಕೋರ್ಟ್‌ ಛೀಮಾರಿ, 2 ಲಕ್ಷ ಪರಿಹಾರ ನೀಡುವಂತೆ ಆದೇಶ!

ವಿಪ್ರೋದ ಉದ್ಯೋಗಿಯ ವಜಾ ಮಾಡುವ ವೇಳೆ ನೀಡಿದ ರಿಲಿವಿಂಗ್‌ ನೆಟರ್‌ 'ದುರುದ್ದೇಶಪೂರಿತ ನಡವಳಿಕೆ' ನಂತಹ 'ಆಧಾರರಹಿತ, ಹಾನಿಕಾರಕ' ಪದಗಳನ್ನು ಬಳಸಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಪತ್ರವನ್ನು ಮರು ಬಿಡುಗಡೆ ಮಾಡಲು ಸಂಸ್ಥೆಗೆ ನಿರ್ದೇಶನ ನೀಡಿದೆ.

 

Read Full Story

06:14 PM (IST) Jul 17

ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾ ಮರಣದಂಡನೆ ಪ್ರಕರಣ - ಭಾರತದ ಸ್ಪಷ್ಟನೆ ಇದು

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಭಾರತ ಸರ್ಕಾರ ಈ ವಿಷಯವನ್ನು ಗಮನದಿಂದ ಅನುಸರಿಸುತ್ತಿದ್ದು, ಅಗತ್ಯ ಸಹಾಯವನ್ನು ನೀಡುತ್ತಿದೆ. ನಿಮಿಷಾ ಅವರ ಕುಟುಂಬವು ಸಂಧಾನದ ಮಾರ್ಗವನ್ನೇ ಆರಿಸಲು ಪ್ರಯತ್ನಿಸುತ್ತಿದೆ.
Read Full Story

05:56 PM (IST) Jul 17

Falcon Passport ಆಕಾಶದ ಬದ್ಲು ಇನ್ಮುಂದೆ ವಿಮಾನದಲ್ಲಿ ಪ್ರಯಾಣಿಸುತ್ತೆ ಈ ಗಿಡುಗ! ರೆಡಿ ಆಯ್ತು ಪಾಸ್​ಪೋರ್ಟ್​!

ಗಿಡುಗನಿಗೂ ಪಾಸ್​ಪೋರ್ಟ್​ ಸಿದ್ಧವಾಗಿದ್ದು, ಇನ್ಮುಂದೆ ಆಕಾಶದಲ್ಲಿ ತಾನಾಗಿಯೇ ಹಾರಾಡುವ ಬದಲು ವಿಮಾನದ ಒಳಗೆ ಇದು ಪ್ರಯಾಣಿಸಲಿದೆ. ಏನಿದು ಇಂಟರೆಸ್ಟಿಂಗ್​ ಸ್ಟೋರಿ?

 

Read Full Story

05:44 PM (IST) Jul 17

ಚಿನ್ನ ಬಿಟ್ಟಾಕಿ, ಈಗ ಬೆಳ್ಳಿ ಖರೀದಿಸಿ - ಬಂಗಾರ ಬೆಲೆ ಇಳಿಕೆಯ ರಹಸ್ಯ ಬಿಚ್ಚಿಟ್ಟ ವರದಿ

Citi ವರದಿಯ ಪ್ರಕಾರ, ಮುಂದಿನ ಕೆಲವೇ ತಿಂಗಳಲ್ಲಿ ಬೆಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಗಳಿವೆ. ಹಾಗೆ ಈ ವರದಿಯಲ್ಲಿ ಚಿನ್ನದ ಬೆಲೆ ಯಾವಾಗ ಇಳಿಕೆಯಾಗಲಿದೆ ಎಂಬ  ಅಚ್ಚರಿ ಮಾಹಿತಿಯನ್ನು ನೀಡಲಾಗಿದೆ.

Read Full Story

05:26 PM (IST) Jul 17

ಅತೀ ನಂಬಿಕೆಯೇ ಜೀವಕ್ಕೆ ಎರವಾಯ್ತು - ಹಾವನ್ನು ಕತ್ತಿಗೆ ಸುತ್ತಿಕೊಂಡು ಬೈಕ್ ರೈಡ್ ಮಾಡಿದ ಉರಗ ರಕ್ಷಕ ಸಾವು

Snake Rescuer Tragic End: ನೂರಾರು ಹಾವುಗಳನ್ನು ರಕ್ಷಿಸಿದ್ದ ವ್ಯಕ್ತಿ ಹಾವು ಕಚ್ಚಿ(Snake bite) ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ(Madhya Pradesh) ನಡೆದಿದೆ.

Read Full Story

05:17 PM (IST) Jul 17

ಮ್ಯಾನೇಜ್‌ಮೆಂಟ್‌ ಟ್ರೇನಿ ಅಗಿ ಕೆಲಸಕ್ಕೆ ಸೇರಿದ್ದ ವ್ಯಕ್ತಿ ಇಂದು ಎಚ್‌ಎಎಲ್‌ ಡೈರೆಕ್ಟರ್‌!

ಅಜಯ್ ಕುಮಾರ್ ಶ್ರೀವಾಸ್ತವ ಅವರು ಎಚ್‌ಎಎಲ್‌ನ ನಿರ್ದೇಶಕ (ಎಂಜಿನಿಯರಿಂಗ್ ಮತ್ತು ಆರ್ & ಡಿ) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ೩೭ ವರ್ಷಗಳಿಗೂ ಹೆಚ್ಚು ಕಾಲ ಎಚ್‌ಎಎಲ್‌ನಲ್ಲಿ ಸೇವೆ ಸಲ್ಲಿಸಿದ ಅವರು ಹಲವು ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Read Full Story

05:15 PM (IST) Jul 17

ದುಬೈ ಎಮಿರಾಟಿ ಸರ್ಕಾರಿ ನೌಕರರಿಗೆ 10 ದಿನಗಳ ವೇತನ ಸಹಿತ ವಿವಾಹ ರಜೆ, ಕಂಡೀಷನ್ ಅಪ್ಲೈ

ದುಬೈನ ಸರ್ಕಾರಿ ವಲಯದ ಉದ್ಯೋಗಿಗಳಿಗೆ 10 ದಿನಗಳ ಪೂರ್ಣ ವೇತನದ ವಿವಾಹ ರಜೆ ಘೋಷಿಸಲಾಗಿದೆ. ಈ ರಜೆ ಯುಎಇ ಪ್ರಜೆಗಳ ನಡುವಿನ ವಿವಾಹಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಜನವರಿ 1, 2025 ರಿಂದ ಜಾರಿಗೆ ಬರುತ್ತದೆ. ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ.
Read Full Story

04:08 PM (IST) Jul 17

ಭಾರಿ ಮಳೆಯಿಂದಾಗಿ ಅಮರನಾಥ ಯಾತ್ರೆ ಸ್ಥಗಿತ - ಬೆಟ್ಟದಿಂದ ಹಾರಿ ಬಂದ ಕಲ್ಲು ತಾಗಿ ಮಹಿಳೆ ಸಾವು

ಅಮರನಾಥ ಯಾತ್ರೆ(Amarnath Yatra) ಸಾಗುವ ಮಾರ್ಗದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ (Landslide) ಉಂಟಾಗಿದ್ದು, ಘಟನೆಯಲ್ಲಿ ಒಬ್ಬರು ಯಾತ್ರಿಕರು (Amarnath Pilgrim Dies)ಸಾವನ್ನಪ್ಪಿದ್ದು, ಅಮರನಾಥ(Amarnath Yatra Suspended) ಯಾತ್ರೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

Read Full Story

03:59 PM (IST) Jul 17

5 ವರ್ಷದೊಳಗೆ 8 ರಾಜ್ಯಗಳಲ್ಲಿ 75 ಸಾವಿರ ಕೋಟಿ ಹೂಡಿಕೆ ನಮ್ಮ ಗುರಿ - ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿಯವರು ಮುಂದಿನ ಐದು ವರ್ಷಗಳಲ್ಲಿ ದೇಶದ 8 ರಾಜ್ಯಗಳಲ್ಲಿ ₹75,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಹೂಡಿಕೆಯು 25 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಮತ್ತು ಈ ಪ್ರದೇಶದ ಜನರ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Read Full Story

03:48 PM (IST) Jul 17

ನಿನ್ನೆಯ ಆಯುಧ ಇಟ್ಕೊಂಡು, ಇಂದಿನ ಯುದ್ಧ ಗೆಲ್ಲೋಕೆ ಆಗಲ್ಲ ಎಂದ ಸಿಡಿಎಸ್‌ ಅನಿಲ್‌ ಚೌಹಾಣ್‌!

ಮೇ 10 ರಂದು ಆಪರೇಷನ್ ಸಿಂಧೂರ್ ಸಮಯದಲ್ಲಿ ನಡೆದ ಕಾರ್ಯಾಚರಣೆಯ ಬಗ್ಗೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮಾತನಾಡಿದ್ದು, ಪಾಕಿಸ್ತಾನದ ಹೆಚ್ಚಿನ ಡ್ರೋನ್‌ಗಳನ್ನು ಭಾರತೀಯ ಪಡೆಗಳು ತಟಸ್ಥಗೊಳಿಸಿವೆ ಎಂದು ಹೇಳಿದರು.

 

Read Full Story

01:23 PM (IST) Jul 17

ನಿಮಿಷಾ ಪ್ರಿಯಾ ಗಲ್ಲಿನಿಂದ ಪಾರಾಗಲು ಇನ್ನೊಂದು ಚಾನ್ಸ್; ಬ್ಲಡ್ ಮನಿ ತಿರಸ್ಕರಿಸಿದರೂ ಕೈ-ಬಿಡದ ಮೌಲ್ವಿ ಕಾಂತಪುರಂ!

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾಳ ಬಿಡುಗಡೆಗೆ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಮಧ್ಯಸ್ಥಿಕೆ ವಹಿಸಿದ್ದಾರೆ. ಶಶಿ ತರೂರ್ ಈ ಪ್ರಯತ್ನವನ್ನು ಶ್ಲಾಘಿಸಿದ್ದು, ಕೇರಳ ಜನತೆ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಆದರೆ, ತಲಾಲ್ ಕುಟುಂಬ ಕ್ಷಮೆ ನೀಡೊಲ್ಲವೆಂದು ಪಟ್ಟು ಹಿಡಿದಿದೆ.

Read Full Story

01:09 PM (IST) Jul 17

ಶಾಲೆಯಲ್ಲಿ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ 8ನೇ ಕ್ಲಾಸ್ ವಿದ್ಯಾರ್ಥಿ

ಕೊಲ್ಲಂನಲ್ಲಿ ಶಾಲಾ ಶೆಡ್ ಮೇಲೆ ಚಪ್ಪಲಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿಗೆ ವಿದ್ಯುತ್ ಶಾಕ್ ತಗುಲಿ ಸಾವು. ತ್ರೀ ಫೇಸ್ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ. ಶಿಕ್ಷಣ ಸಚಿವರಿಂದ ತನಿಖೆಗೆ ಆದೇಶ.
Read Full Story

12:59 PM (IST) Jul 17

ಯಾರಿಗೆ ಎಷ್ಟು ಋಣವೋ - ಊಟಕ್ಕೆಂದು ಕೂತು ಬುತ್ತಿ ಬಿಚ್ಚಿದ್ದಷ್ಟೇ - ಪ್ರಜ್ಞೆ ಕಳೆದುಕೊಂಡು ಬಾಲಕಿ ಸಾವು

ರಾಜಸ್ಥಾನದಲ್ಲಿ 9 ವರ್ಷದ ಬಾಲಕಿ ಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಊಟದ ವಿರಾಮದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದರು ಪ್ರಯೋಜನವಾಗಿಲ್ಲ.

Read Full Story

12:29 PM (IST) Jul 17

8ನೇ ಬಾರಿಗೆ ಸ್ವಚ್ಛ ನಗರಿ ಪ್ರಶಸ್ತಿ ತನ್ನದಾಗಿಸಿಕೊಂಡ ಇಂದೋರ್; ಮೈಸೂರಿಗೆ ಎಷ್ಟನೇ ಸ್ಥಾನ?

ಇಂದೋರ್ ಎಂಟನೇ ಬಾರಿಗೆ ಭಾರತದ ಅತ್ಯಂತ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿದೆ. ಸೂರತ್ ಮತ್ತು ನವಿ ಮುಂಬೈ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಈ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನವದೆಹಲಿಯಲ್ಲಿ ಪ್ರದಾನ ಮಾಡಿದರು.
Read Full Story

11:51 AM (IST) Jul 17

ಚುನಾವಣೆಗೂ ಮುನ್ನವೇ ಸಿಎಂ ಸಿದ್ದರಾಮಯ್ಯರನ್ನ ಫಾಲೋ ಮಾಡಿದ ಬಿಜೆಪಿ ಮೈತ್ರಿ ನಾಯಕ

ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ಈ ಯೋಜನೆ ಜಾರಿ. 1.67 ಕೋಟಿ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂದು ಬಿಜೆಪಿ ಮೈತ್ರಿಕೂಟದ ನಾಯಕ  ಹೇಳಿದ್ದಾರೆ.

Read Full Story

11:44 AM (IST) Jul 17

ಹೆಂಡ್ತಿಯಿಂದ ದೂರು, ಲಂಚ ಕೇಳಿ ಥಳಿಸಿದ ಪೊಲೀಸರು - ಪ್ಯಾಂಟ್ ಮೇಲೆಯೇ ಡೆತ್‌ನೋಟ್ ಬರೆದು ಸಾವಿಗೆ ಶರಣಾದ ಗಂಡ

ಹೆಂಡತಿ ಮನೆಯವರ ಕಿರುಕುಳ ಹಾಗೂ ಪೊಲೀಸ್ ಲಂಚದ ಬೇಡಿಕೆಯಿಂದ ಬೇಸತ್ತ ಪತಿಯೊಬ್ಬ ಪ್ಯಾಂಟ್ ಮೇಲೆ ಡೆತ್‌ನೋಟ್ ಬರೆದು ಸಾವಿಗೆ ಶರಣಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Read Full Story

11:17 AM (IST) Jul 17

ತೃತೀಯ ಲಿಂಗಿಗಳೆಲ್ಲಾ ಇಸ್ಲಾಂಗೆ ಮತಾಂತರವಾಗಿ ಹಜ್ ಯಾತ್ರೆ ಮಾಡಿ; ಇಲ್ಲಾಂದ್ರೆ HIV ಇಂಜೆಕ್ಷನ್!

ಹಿಂದೂ ತೃತೀಯ ಲಿಂಗಿಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ, HIV ಸೋಂಕು ತಗುಲಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ತೃತೀಯ ಲಿಂಗಿಗಳ ನಡುವೆ ಘರ್ಷಣೆ ಉಂಟಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read Full Story

10:50 AM (IST) Jul 17

ಚಿನ್ನ ಕೊಳ್ಳುವಿರಾ? ಹೇಗಿದೆ ಇಂದು ನಿಮ್ಮ ನಗರಗಳಲ್ಲಿ ಬಂಗಾರ ದರ

ಆಷಾಢ ಮಾಸದಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ಏರಿಕೆಯಾಗಿದ್ದು, ಮದುವೆ ಮುಂತಾದ ಶುಭ ಕಾರ್ಯಗಳನ್ನು ಹತ್ತಿರದಲ್ಲಿಟ್ಟುಕೊಂಡವರಿಗೆ ಆತಂಕ ತಂದಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Read Full Story

10:13 AM (IST) Jul 17

ಇಂಧನ ನಿಯಂತ್ರಣ ಸ್ವಿಚ್‌ಗಳಲ್ಲಿ ಯಾವುದೇ ತೊಂದರೆ ಪತ್ತೆಯಾಗಿಲ್ಲ - ಏರ್‌ಇಂಡಿಯಾ

ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಡಿಜಿಸಿಎ ಬೋಯಿಂಗ್ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳ ತಪಾಸಣೆಗೆ ಆದೇಶಿಸಿದೆ. ಏರ್ ಇಂಡಿಯಾ ತನ್ನ ಬೋಯಿಂಗ್ 787 ಮತ್ತು 737 ಮ್ಯಾಕ್ಸ್ ವಿಮಾನಗಳಲ್ಲಿ ತಪಾಸಣೆ ನಡೆಸಿದ್ದು, ಯಾವುದೇ ತೊಂದರೆಗಳು ಪತ್ತೆಯಾಗಿಲ್ಲ. 

Read Full Story

09:49 AM (IST) Jul 17

ಹಸೀನಾ ತವರಿನಲ್ಲಿ ಭಾರಿ ಹಿಂಸಾಚಾರಕ್ಕೆ 4 ಜನ ಬಲಿ - ಸತ್ಯಜಿತ್ ರೇ ನಿವಾಸ ಧ್ವಂಸ ನಿಲ್ಲಿಸಿದ ಬಾಂಗ್ಲಾದೇಶ

ಬಾಂಗ್ಲಾದೇಶದ ಗೋಪಾಲಗಂಜ್‌ನಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 

Read Full Story

08:28 AM (IST) Jul 17

100 ಜಿಲ್ಲೆಗೆ ಪಿಎಂ ಧನ-ಧಾನ್ಯ ಸ್ಕೀಂ - ರೈತರಿಗೆ ಈ ಯೋಜನೆಯ ಲಾಭ ಏನು?

ಕಡಿಮೆ ಉತ್ಪಾದಕತೆ ಇರುವ 100 ಜಿಲ್ಲೆಗಳಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸಲು ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ 6 ವರ್ಷಗಳಲ್ಲಿ ಯೋಜನೆಗೆ ₹24,000 ಕೋಟಿ ನೀಡಲಾಗುವುದು, ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿಗೆ ಉತ್ತೇಜನ ನೀಡಲಾಗುವುದು.
Read Full Story

07:59 AM (IST) Jul 17

ಪಹಲ್ಗಾಂ ದಾಳಿ ಬಳಿಕ ಸಂಭ್ರಮಿಸಿದ್ದ ಉಗ್ರರು - ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮ

ಪಹಲ್ಗಾಂನಲ್ಲಿ 26 ಪ್ರವಾಸಿಗರ ಹತ್ಯೆ ಬಳಿಕ ಉಗ್ರರು ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಎನ್ಐಎ ತನಿಖೆ ಬಹಿರಂಗಪಡಿಸಿದೆ. ಸ್ಥಳೀಯ ಸೇವಾ ಪೂರೈಕೆದಾರರೊಬ್ಬರು ಈ ಮಾಹಿತಿಯನ್ನು ಒದಗಿಸಿದ್ದಾರೆ. ಲಷ್ಕರ್-ಎ-ತೊಯ್ದಾ ಕಮಾಂಡರ್ ಸುಲೈಮಾನ್ ಸೇರಿದಂತೆ ಹಲವು ಉಗ್ರರನ್ನು ಹುಡುಕಲಾಗುತ್ತಿದೆ.
Read Full Story

07:27 AM (IST) Jul 17

ಅಕ್ಟರ್ ಕ್ರೂರಿ, ಬಾಬರ್ ನಿರ್ದಯಿ - 8ನೇ ತರಗತಿಗೆ ನೂತನ ಪಠ್ಯ ಪುಸ್ತಕ ಬಿಡುಗಡೆ

ಎನ್‌ಸಿಇರ್‌ಟಿ ಬಿಡುಗಡೆ ಮಾಡಿರುವ 8ನೇ ತರಗತಿ ಹೊಸ ಪಠ್ಯಪುಸ್ತಕದಲ್ಲಿ (ಕೇಂದ್ರೀಯ ಪಠ್ಯ) ದೆಹಲಿ ಸುಲ್ತಾನರು, ಮೊಘಲರು, ಮರಾಠರು, ವಿಜಯನಗರ ಸಾಮ್ರಾಜ್ಯ ಹಾಗೂ ವಸಾಹತುಶಾಹಿ ಆಡಳಿತದ ಕುರಿತು ಪಾಠಗಳನ್ನು ಸೇರ್ಪಡೆಗೊಳಿಸಲಾಗಿದೆ.

Read Full Story

More Trending News