LIVE NOW
Published : Jan 15, 2026, 07:00 AM ISTUpdated : Jan 15, 2026, 09:21 AM IST

India Latest News Live: ರಾಜ್ಯ ಸರ್ಕಾರ ಒಪ್ಪಿದ್ರೂ ಆರ್‌ಸಿಬಿ ಚಿನ್ನಸ್ವಾಮಿಯಲ್ಲಿ ಅಡೋದು ದೌಟ್! ಕಾರಣ ಏನಿರಬಹುದು?

ಸಾರಾಂಶ

ನವದೆಹಲಿ: ಇರಾನ್‌ನಲ್ಲಿ ಕಳೆದ 18 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಾಳಿಯ ಬೆದರಿಕೆ ಹಾಕುತ್ತಿರುವ ಕಾರಣ, ಇರಾನ್‌ನಲ್ಲಿರುವ ಭಾರತೀಯರಿಗೆ ಆದಷ್ಟು ಬೇಗ ದೇಶ ತೊರೆಯುವಂತೆ ಭಾರತ ಸರ್ಕಾರ ಸೂಚಿಸಿದೆ. ಬಗ್ಗೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ‘ಪ್ರಸ್ತುತ ಇರಾನ್‌ನಲ್ಲಿರುವ ಭಾರತೀಯರು (ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು, ಪ್ರವಾಸಿಗರು) ವಾಣಿಜ್ಯ ವಿಮಾನ ಸೇರಿದಂತೆ ಲಭ್ಯವಿರುವ ಸಾರಿಗೆ ಮೂಲಕ ದೇಶವನ್ನು ತೊರೆಯಿರಿ’ ಎಂದು ಒತ್ತಾಯಿಸಿದೆ.

ಜತೆಗೆ, ತುರ್ತು ಸಂದರ್ಭದಲ್ಲಿ 989128109115; 989128109109; 989128109102; 989932179359 ಅಥವಾ cons.tehran@mea.gov.in ಮೂಲಕ ತಮ್ಮನ್ನು ಸಂಪರ್ಕಿಸಲು ತಿಳಿಸಿದೆ. ದು ಕಡೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸರ್ಕಾರ ಬಲಪ್ರಯೋಗ, ಬಂಧನ, ಗಲ್ಲುಶಿಕ್ಷೆಯ ಬೆದರಿಕೆಯಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಇನ್ನೊಂದು ಕಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ ದಾಳಿಯ ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಭಾರತ ಈ ಎಚ್ಚರಿಕೆ ನೀಡಿದೆ.

09:21 AM (IST) Jan 15

ರಾಜ್ಯ ಸರ್ಕಾರ ಒಪ್ಪಿದ್ರೂ ಆರ್‌ಸಿಬಿ ಚಿನ್ನಸ್ವಾಮಿಯಲ್ಲಿ ಅಡೋದು ದೌಟ್! ಕಾರಣ ಏನಿರಬಹುದು?

2026ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ತನ್ನ ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರಿಸುವ ಸಾಧ್ಯತೆ ದಟ್ಟವಾಗಿದೆ. ಛತ್ತೀಸ್‌ಗಢದಲ್ಲಿ 2 ಪಂದ್ಯಗಳನ್ನು ಆಡಲು ನಿರ್ಧರಿಸಿದ್ದು, ಕಳೆದ ವರ್ಷದ ಕಾಲ್ತುಳಿತ ಈ ನಿರ್ಧಾರದ ಹಿಂದೆ ಇರಬಹುದೆಂದು ವಿಶ್ಲೇಷಿಸಲಾಗಿದೆ.

Read Full Story

More Trending News