ತಿರುವನಂತಪುರ ಇತ್ತೀಚೆಗೆ ನಡೆದ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅತಿದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಿದೆ. ರಾಜ್ಯದ ಯಾವುದೇ ಮಹಾನಗರದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿರುವುದು ಇದೇ ಮೊದಲು. ಜತೆಗೆ ಎರ್ನಾಕುಲಂ ಜಿಲ್ಲೆಯ ತ್ರಿಪುನಿತುರ ನಗರಸಭೆಯಲ್ಲಿ ಮೊದಲ ಬಾರಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಪಾಲಕ್ಕಾಡ್ ನಗರಸಭೆಯಲ್ಲಿ ಸತತ 3ನೇ ಬಾರಿಗೆ ಗೆಲುವು ಸಾಧಿಸಿದೆ. 45 ವರ್ಷಗಳಲ್ಲಿ ತಿರುವನಂತಪುರದ ಅಭಿವೃದ್ಧಿಗೆ ಸಿಪಿಎಂ ಎನೂ ಮಾಡಿಲ್ಲ. ಹೀಗಾಗಿ ಜನ ನಮ್ಮನ್ನು ಸ್ವೀಕರಿಸಿದ್ದಾರೆ. ಶ್ರಮಕ್ಕೆ ಫಲ ಸಿಕ್ಕಿದೆ. ನಾನು ವೈಯಕ್ತಿಕವಾಗಿ ಪ್ರಚಾರದಲ್ಲಿ ತೊಡಗಿದ್ದ ಕಾರಣ ಚುನಾವಣಾ ಫಲಿತಾಂಶದ ಬಗ್ಗೆ ಸ್ಪಷ್ಟತೆ ಇತ್ತು ಎಂದು ಈ ಗೆಲುವಿನ ಬಗ್ಗೆ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

04:12 PM (IST) Dec 14
ಬೊಂಡಿ ಬೀಚ್ ಗುಂಡಿನ ದಾಳಿಗೆ 10 ಸಾವು,ಬರಿಗೈಯಲ್ಲೇ ಶೂಟರ್ ಹಿಡಿದು ಗನ್ ಕಸಿದ ಸಾಹಸಿ ವಿಡಿಯೋ, ಯಹೂದಿಗಳ ಹಬ್ಬಕ್ಕೆ ಇಬ್ಬರು ಗನ್‌ಮ್ಯಾನ್ ಎಂಟ್ರಿಕೊಟ್ಟು ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇಲ್ಲೇ ಇದ್ದ ಸಾಮಾನ್ಯನೊಬ್ಬ ಧೈರ್ಯದಿಂದ ಒರ್ವ ಶೂಟರ್ ಹಿಡಿದು ಕತೆ ಮುಗಿಸಿದ್ದಾನೆ.
04:10 PM (IST) Dec 14
ಕಾಲಕ್ಕೆ ತಕ್ಕಂತೆ ತನ್ನಲ್ಲಿ ಅಮೋಘ ಜೀವಕಳೆಯನ್ನು ತುಂಬುವ ಪ್ರಕೃತಿಯ ಸೌಂದರ್ಯ ವರ್ಣನಾತೀತ. ಹಾಗೆಯೇ ಪ್ರಕೃತಿಯ ಅಮೋಘ ಸೃಷ್ಟಿಗೆ ಉದಾಹರಣೆಯಾಗಿದೆ ಈಗ ರಾಜಸ್ಥಾನದ ಸಾಂಭಾರ್ ಸರೋವರ. ಹೌದು ಫ್ಲೇಮಿಂಗೋ ಹಕ್ಕಿಗಳ ವಲಸೆಯಿಂದಾಗಿ ಈ ಕೆರೆ ಗುಲಾಬಿ ಬಣ್ಣಕ್ಕೆ ತಿರುಗಿದೆ.
03:48 PM (IST) Dec 14
ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ತಮ್ಮ ಮೂರು ದಿನಗಳ ಭಾರತ ಪ್ರವಾಸದ ಭಾಗವಾಗಿ ಮುಂಬೈಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸಚಿನ್ ತೆಂಡೂಲ್ಕರ್, ಸುನಿಲ್ ಛೆಟ್ರಿ ಅವರಂತಹ ಕ್ರೀಡಾ ದಿಗ್ಗಜರನ್ನು ಭೇಟಿಯಾಗಲಿದ್ದು, ಚಾರಿಟಿ ಫ್ಯಾಷನ್ ಶೋ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
03:30 PM (IST) Dec 14
ಗೋವಾ ದುರಂತದಿಂದ ಎಚ್ಚೆತ್ತ ಪೊಲೀಸ್, ಹೊಸ ವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಕಾರಣ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಕಠಿಣ ಮಾರ್ಗಸೂಚಿ ಹೊರಡಿಸಲಾಗಿದೆ.
02:57 PM (IST) Dec 14
ಪ್ರಾಣಿ ಪ್ರಿಯರಿಗೆ ಗುಡ್ ನ್ಯೂಸ್, ವಿಮಾನದಲ್ಲಿ ಮಾಲೀಕನ ಜೊತೆ 10ಕೆಜಿ ತೂಕದ ಪೆಟ್ಸ್ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಕ್ಯಾಬಿನ್‌ನಲ್ಲಿ ಮಾಲೀಕನ ಜೊತೆ ಸಾಕು ಪ್ರಾಣಿ ಪ್ರಯಾಣ ಮಾಡಬಹುದು. ಇನ್ನು 10 ಕೆಜಿಗಿಂತ ಮೇಲ್ಪಟ್ಟ ಸಾಕು ಪ್ರಾಣಿಗಳ ನಿಯಮದಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ.
01:53 PM (IST) Dec 14
01:07 PM (IST) Dec 14
ಕೇರಳದ ವರ್ಕಲಾ ಬೀಚ್‌ನಲ್ಲಿ ಮೀನುಗಾರರ ಬಲೆಗೆ ಸಿಲುಕಿ ದಡಕ್ಕೆ ಬಂದಿದ್ದ ಬೃಹತ್ ಶಾರ್ಕ್ ಮೀನನ್ನು ಸ್ಥಳೀಯರು ಮತ್ತು ಪ್ರವಾಸಿಗರು ಸೇರಿ ರಕ್ಷಿಸಿದ್ದಾರೆ. ಹಲವಾರು ಗಂಟೆಗಳ ಸತತ ಪ್ರಯತ್ನದ ನಂತರ, ಬೋಟ್‌ಗಳ ಸಹಾಯದಿಂದ ಮೀನನ್ನು ಯಶಸ್ವಿಯಾಗಿ ಮರಳಿ ಸಮುದ್ರಕ್ಕೆ ಬಿಡಲಾಗಿದೆ.
12:50 PM (IST) Dec 14
11:53 AM (IST) Dec 14
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕಳವಳಕಾರಿ ಮಟ್ಟಕ್ಕೆ ಕುಸಿದಿರುವ ಕಾರಣ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ (ಜಿಆರ್‌ಎಪಿ) 4ನೇ ಹಂತದ ಅಡಿಯಲ್ಲಿ ಮಾಲಿನ್ಯ ತಡೆ ನಿರ್ಬ೦ಧಗಳನ್ನು ಶನಿವಾರ ಜಾರಿಗೊಳಿಸಲಾಗಿದೆ.
11:37 AM (IST) Dec 14
11:13 AM (IST) Dec 14
10:42 AM (IST) Dec 14
ಫೋರ್ಬ್ಸ್ ಮ್ಯಾಗಜಿನ್ 2025ರ ಪ್ರಭಾವಿ ಸ್ತ್ರೀಯರ ಪಟ್ಟಿ ಬಿಡುಗಡೆ ಮಾಡಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
10:05 AM (IST) Dec 14
09:41 AM (IST) Dec 14
ಕಾಂಗ್ರೆಸ್‌ನಲ್ಲಿ ಆತ್ಮಾವಲೋಕನದ ಆವಶ್ಯಕತೆಯಿದೆ. ಸರ್ಕಾರ ಅಥವಾ ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನುವುದು ಸರಿಯಲ್ಲ. ಪಕ್ಷವು ಸಂಕುಚಿತ ಮನೋಭಾವ ಬಿಟ್ಟು ಉದಾರ ಮನಃ ಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಮಾಜಿ ಕಾಂಗ್ರೆಸ್ಸಿಗ ಅಶ್ವನಿ ಕುಮಾರ್ ಹೇಳಿದ್ದಾರೆ.
09:00 AM (IST) Dec 14
08:31 AM (IST) Dec 14
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ 85 ಲಕ್ಷ ಮತದಾರರ ಮಾಹಿತಿಗಳು ತಪ್ಪಾಗಿ ದಾಖಲಾಗಿರುವುದು ಬೆಳಕಿಗೆ ಬಂದಿದೆ.
08:09 AM (IST) Dec 14
'ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಿಂದ ತಪ್ಪಿಸಿಕೊಳ್ಳಲು ಸುರಂಗ ಕೊರೆದಿದ್ದೆವು. ಆದರೆ ಕೊನೆಯ ಕ್ಷಣದಲ್ಲಿ ಸಿಕ್ಕಿಹಾಕಿಕೊಂಡು ಚಿತ್ರಹಿಂಸೆ ಅನುಭವಿಸಿದೆ' ಎಂದು ಜೈಷ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೇಳಿದ್ದಾನೆ.
07:16 AM (IST) Dec 14
ವಿಚ್ಛೇದಿತ ಮಹಿಳೆಯು ದುಡಿಯುವ ಸಾಮರ್ಥ್ಯ ಹೊಂದಿದ್ದು, ಜೀವನ ನಡೆಸಲು ಶಕ್ತಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.