ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಪ್ರತಿತೆರಿಗೆ ಶಾಕ್‌ನಿಂದ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ತತ್ತರಿಸುತ್ತಿದ್ದರೆ, ಟ್ರಂಪ್‌ಗೆ ನೇರ ಸವಾಲು ಹಾಕಿದ್ದ ಚೀನಾ, ಇದೀಗ ದೇಶದ ರಫ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಸವಾಲು ಹಾಕಿ ಸುಮ್ಮನೆ ಕೂರದ ಚೀನಾ, ಅಮೆರಿಕಕ್ಕೆ ರಫ್ತು ಕಡಿತ ಮಾಡಿ, ತನ್ನ ಉತ್ಪನ್ನಗಳಿಗೆ ಕಡಿಮೆ ತೆರಿಗೆ ಇರುವ ಯುರೋಪ್, ಆಗ್ನೇಯ ಏಷ್ಯಾ, ಭಾರತ ಮತ್ತು ಆಫ್ರಿಕಾ ದೇಶಗಳಿಗೆ ರಫ್ತು ಹೆಚ್ಚು ಮಾಡಿ ಜಾಣತನದಿಂದ ದಾಖಲೆ ಪ್ರಮಾಣ ಆದಾಯ ಸಂಗ್ರಹಿಸಿದೆ. ಈ ಅವಧಿಯಲ್ಲಿ ಅಮೆರಿಕ ಸೇರಿದಂತೆ ಎಲ್ಲಾ ದೇಶಗಳಿಂದ ಆಮದು ಮಾಡಿಕೊಂಡ ಚೀನಾ ರಫ್ತು ಹೆಚ್ಚಿಸಿಕೊಂಡು, ಅಮೆರಿಕದಿಂದ ತೆರಿಗೆ ದಾಳಿಗೆ ಒಳಗಾದ ದೇಶಗಳಿಗೆ ಮಾದರಿಯಾಗಿದೆ.
10:15 PM (IST) Dec 10
TTD Orders ACB Probe into ₹55 Crore Fake Silk Angavastram Scam; Suppliers Cheated Temple 10 ವರ್ಷಗಳಲ್ಲಿ 55 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಖರೀದಿಗಳನ್ನು ಒಳಗೊಂಡಿರುವ ಮೋಸದ ಒಪ್ಪಂದ ಇದಾಗಿದೆ ಎಂದು ಅಂದಾಜಿಸಲಾಗಿದೆ.
08:35 PM (IST) Dec 10
ತಮಿಳಿನ 'ಮಾಸ್ಕ್' ಚಿತ್ರದಲ್ಲಿ 'ನಗುವ ನಯನ' ಕನ್ನಡ ಹಾಡನ್ನು ಬಳಸಿದ್ದಕ್ಕಾಗಿ ಸರೆಗಮ ಇಂಡಿಯಾ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆ ಹೂಡಿದೆ. ಈ ಕುರಿತು ದೆಹಲಿ ಹೈಕೋರ್ಟ್, ಚಿತ್ರದ ಡಿಜಿಟಲ್ ಬಿಡುಗಡೆಗೂ ಮುನ್ನ ಹಾಡನ್ನು ತೆಗೆದುಹಾಕಲು ಅಥವಾ ₹30 ಲಕ್ಷ ಠೇವಣಿ ಇಡಲು ನಿರ್ಮಾಪಕರಿಗೆ ಆದೇಶಿಸಿದೆ.
06:53 PM (IST) Dec 10
ಮಾನಸಿಕ ಅಸ್ವಸ್ಥನೊಬ್ಬನನ್ನು ರಕ್ಷಿಸಲು ಹೋದ ಪುರಸಭೆ ನೌಕರನನ್ನೇ ಆತ ಕಟ್ಟಡದಿಂದ ಕೆಳಗೆ ತಳ್ಳಿದ್ದಾನೆ. ಗಂಭೀರವಾಗಿ ಗಾಯಗೊಂಡ ನೌಕರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ದಳದವರು ಮಾನಸಿಕ ಅಸ್ವಸ್ಥ ಯುವಕನನ್ನು ರಕ್ಷಿಸಿದ್ದಾರೆ.
06:40 PM (IST) Dec 10
Car Discount December:ಎಸ್‌ಯುವಿಗಳ ಮೇಲಿನ ಕ್ರೇಜ್ ಹೆಚ್ಚುತ್ತಿದೆ. ಕಂಪನಿಗಳು ಈ ವಿಭಾಗದಲ್ಲಿ ಹೊಸ ಕಾರುಗಳನ್ನು ಸಹ ಬಿಡುಗಡೆ ಮಾಡುತ್ತಿವೆ. ಡಿಸೆಂಬರ್ ತಿಂಗಳಲ್ಲಿ ಹೊಸ ಎಸ್‌ಯುವಿ ಖರೀದಿಸುವುದರಿಂದ ನೀವು 3 ಲಕ್ಷ 25 ಸಾವಿರ ರೂ.ಗಳ ಬಂಪರ್ ಮೊತ್ತವನ್ನು ಉಳಿಸಬಹುದು.
06:01 PM (IST) Dec 10
ವಧುವೊಬ್ಬಳು ಗಂಡನ ಮನೆಗೆ ಬಂದ ಕೇವಲ 20 ನಿಮಿಷಗಳಲ್ಲಿ ಅತ್ತೆ ಮನೆಯವರ ಒರಟು ವರ್ತನೆಯಿಂದಾಗಿ ಮದುವೆಯನ್ನು ಮುರಿದುಕೊಂಡಿದ್ದಾಳೆ. ಎರಡೂ ಕುಟುಂಬಗಳು 5 ಗಂಟೆಗಳ ಕಾಲ ಸಂಧಾನ ನಡೆಸಿದರೂ, ಆಕೆಯ ನಿರ್ಧಾರ ಬದಲಾಗದ ಕಾರಣ, ಮದುವೆಯನ್ನು ರದ್ದುಗೊಳಿಸಲಾಯ್ತು.
05:54 PM (IST) Dec 10
Who is DSP Kalpana Verma?: ಛತ್ತೀಸ್‌ಗಢದ ಡಿಎಸ್‌ಪಿ ಕಲ್ಪನಾ ವರ್ಮಾ ಅವರ ಮೇಲೆ ರಾಯ್‌ಪುರದ ಉದ್ಯಮಿ ದೀಪಕ್ ಟಂಡನ್ ಲವ್ ಟ್ರ್ಯಾಪ್ ಮೂಲಕ 2.5 ಕೋಟಿ ರೂ. ಸುಲಿಗೆ ಮಾಡಿದ ಆರೋಪ ಹೊರಿಸಿದ್ದಾರೆ. ಈ ಆರೋಪಗಳನ್ನು ಕಲ್ಪನಾ ರಾಜಕೀಯ ಪಿತೂರಿ ಎಂದು ತಳ್ಳಿಹಾಕಿದ್ದಾರೆ.
05:50 PM (IST) Dec 10
ಸಂಜು ಸ್ಯಾಮ್ಸನ್ ಒಬ್ಬ ಶ್ರೇಷ್ಠ ಆಟಗಾರ ಮತ್ತು ತನಗೆ ಅಣ್ಣನಿದ್ದಂತೆ ಎಂದು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹೇಳಿದ್ದಾರೆ. ಪ್ಲೇಯಿಂಗ್ ಇಲೆವೆನ್‌ಗಾಗಿ ನಮ್ಮಿಬ್ಬರ ನಡುವೆ ಆರೋಗ್ಯಕರ ಸ್ಪರ್ಧೆಯಿದ್ದು, ಇದು ತಂಡಕ್ಕೆ ಲಾಭದಾಯಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
04:59 PM (IST) Dec 10
ತೂಕ ಇಳಿಕೆ ಮಾಡುವುದಕ್ಕಾಗಿ ಇಂಜೆಕ್ಷನ್ ಮೊರೆ ಹೋದ ಮಹಿಳೆಯೊಬ್ಬರು ತೂಕದ ಜೊತೆಗೆ ತಮ್ಮ ಆರೋಗ್ಯವನ್ನು ಕೂಡ ಕಳೆದುಕೊಂಡಿದ್ದು, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಘಟನೆ ನಡೆದಿದೆ.
04:38 PM (IST) Dec 10
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಆದರೆ, ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ತಂಡಕ್ಕೆ ಚಿಂತೆ ಮೂಡಿಸಿದೆ.
03:54 PM (IST) Dec 10
03:28 PM (IST) Dec 10
ಹೆದ್ದಾರಿಯಲ್ಲಿ ಸಣ್ಣ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ಮುಂದೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಈ ಭಯಾನಕ ದೃಶ್ಯವು ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
02:30 PM (IST) Dec 10
Siddeshwar Express train robbery: ಸಿದ್ದೇಶ್ವರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೊಲ್ಲಾಪುರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯೊಬ್ಬರು ನಿದ್ದೆಗೆ ಜಾರಿದಾಗ, ಕಳ್ಳರು ಅವರ 5.53 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್‌ಗಳನ್ನು ಕದ್ದೊಯ್ದಿದ್ದಾರೆ
02:03 PM (IST) Dec 10
ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಆಯ್ಕೆ ಮಾಡದ ಕಾರಣಕ್ಕೆ ಪುದುಚೇರಿ ಅಂಡರ್-19 ತಂಡದ ಕೋಚ್ ಎಸ್. ವೆಂಕಟರಮನ್ ಮೇಲೆ ಮೂವರು ಕ್ರಿಕೆಟಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ತಲೆಗೆ ಗಂಭೀರ ಗಾಯಗಳಾಗಿದ್ದು, ಕೋಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
01:12 PM (IST) Dec 10
what is STD test: 2024ರಲ್ಲಿ ನಡೆದ ಗೆಳತಿಯ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವಿದ್ಯಾರ್ಥಿ ದೋಷಿ ಎಂದು ಸಾಬೀತಾಗಿದೆ. ಎಸ್‌ಟಿಡಿ ಪರೀಕ್ಷೆ ಮಾಡಿಕೊಳ್ಳುವಂತೆ ಪದೇ ಪದೇ ಪೀಡಿಸುತ್ತಿದ್ದ ಗೆಳತಿಯ ಕಾಟ ತಾಳಲಾಗದೇ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
12:55 PM (IST) Dec 10
ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ತಮ್ಮ ಗೆಳತಿ ಮಾಹಿಕಾ ಶರ್ಮಾ ಅವರ ಫೋಟೋವನ್ನು ಕೆಟ್ಟದಾಗಿ ಕ್ಲಿಕ್ಕಿಸಿದ್ದಕ್ಕೆ ಪಾಪರಾಜಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಪ್ರತಿಯೊಬ್ಬ ಮಹಿಳೆಗೂ ಗೌರವ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
12:49 PM (IST) Dec 10
Serial Actress: ಧಾರಾವಾಹಿಗಳಿಂದ ದೂರವಾಗಿ ರಿಯಾಲಿಟಿ ಶೋ, ಸಿನಿಮಾ, ಶಾರ್ಟ್ ಫಿಲಂಸ್, ವೆಬ್ ಸಿರೀಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. 2025ರಲ್ಲಿ ಕಿರುತೆರೆಯಿಂದ ದೂರವಾದ ಸೀರಿಯಲ್ ನಟಿಯರ ಪಟ್ಟಿ ಇಲ್ಲಿದೆ.
11:32 AM (IST) Dec 10
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು 18ನೇ ಆವೃತ್ತಿ ಮುಗಿಸಿ, 19ನೇ ಸೀಸನ್ ಆಯೋಜನೆಗೆ ಸಜ್ಜಾಗುತ್ತಿದೆ. ಹೀಗಿರುವಾಗಲೇ ಐಪಿಎಲ್ ಖ್ಯಾತಿ ಮಸುಕಾಗುತ್ತಿದೆಯೇ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಯಾಕೆ ಹೀಗೆ? ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
11:15 AM (IST) Dec 10
ರಣ್‌ವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಥಿಯೇಟರ್‌ಗೆ ಅಪ್ಪಳಿಸುವುದಕ್ಕೂ ದಿನ ಮೊದಲು ಮೇಜರ್ ಮೋಹಿತ್ ಶರ್ಮಾ ಅವರ ಹೆಸರು ವ್ಯಾಪಕವಾಗಿ ಮುನ್ನೆಲೆಗೆ ಬಂತು. ಅವರ ಪೋಷಕರು ಇದು ತಮ್ಮ ಮಗನದ್ದೇ ಕತೆ ಎಂದರು. ಹಾಗಿದ್ದರೆ ಈ ಮೇಜರ್ ಮೋಹಿತ್ ಶರ್ಮಾ ಯಾರು ಇಲ್ಲಿದೆ ಡಿಟೇಲ್ ಸ್ಟೋರಿ..
10:10 AM (IST) Dec 10
ನವದೆಹಲಿ: ಭಾರತದ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ, ಕ್ರಿಕೆಟ್ ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದು, ಇದೀಗ ಹೂಡಿಕೆಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದೀಗ ಕೊಹ್ಲಿ ತನ್ನ ಆಪ್ತ ಗೆಳೆಯನ ಸಂಸ್ಥೆಯಲ್ಲಿ 40 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ.
09:28 AM (IST) Dec 10
ಭಾರತ್ ಜೋಡೋ ಯಾತ್ರೆ ಆರಂಭಿಸಿದಾಗಿನಿಂದ ರಾಹುಲ್ ಗಾಂಧಿ ವೈಟ್ ಟಿ ಶರ್ಟ್, ಕಾರ್ಗೊ ಪ್ಯಾಂಟ್ ಮತ್ತು ಸ್ಪೋರ್ಟ್ಸ್ ಶೂನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಹಿಂದೆ ಲೋಕಸಭೆಗೂ ಟೀ ಶರ್ಟ್ ಧರಿಸಿಯೇ ರಾಹುಲ್ ಗಾಂಧಿ ಆಗಮಿಸಿದ್ದರು.
09:16 AM (IST) Dec 10
ಬೆಂಗಳೂರು: ಬಹುನಿರೀಕ್ಷಿತ 2026ರ ಐಪಿಎಲ್ ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಮಿನಿ ಹರಾಜಿನಲ್ಲಿ 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ ಟಾಪ್ 5 ಆಟಗಾರರು ಯಾರು ಎನ್ನುವುನ್ನು ನೋಡೋಣ ಬನ್ನಿ.
08:35 AM (IST) Dec 10
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ 100 ವಿಕೆಟ್ ಗಡಿ ದಾಟಿದ ಜಸ್ಪ್ರೀತ್ ಬುಮ್ರಾ, ಟೆಸ್ಟ್, ಏಕದಿನ ಮತ್ತು ಟಿ20, ಹೀಗೆ ಮೂರೂ ಮಾದರಿಗಳಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.