ಭಾರತದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ, ಆದರೆ ಮಳೆಗಾಲ ದಿನದಲ್ಲಿ ಕುಸಿತ, IMD ವರದಿ!

By Suvarna NewsFirst Published Apr 15, 2024, 5:50 PM IST
Highlights

ಬಿಸಿಲಿನ ಬೇಗೆಯಲ್ಲಿ ಬಂದಿರುವ ಜನರಿಗೆ ಹವಾಮಾನ ಇಲಾಖೆ ಮುನ್ಸೂಚನೆ ಒಂದಿಷ್ಟು ತಂಪೆರಿದಿದೆ. ಈ ಬಾರಿ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಇದರ ಜೊತೆಗೆ ನೀಡಿರುವ ಕೆಲ ಮಹತ್ವದ ಸೂಚನೆ ಆತಂಕ ಹೆಚ್ಚಿಸಿದೆ.
 

ನವದೆಹಲಿ(ಏ.15) ಭಾರತದಲ್ಲಿ ಕಳೆದ ವರ್ಷ ಕಡಿಮೆ ಮಳೆಯಿಂದಾಗಿ ಇದೀಗ ನೀರಿಗೆ ಬರ ಎದುರಾಗಿದೆ. ಬಹುತೇಕ ಭಾಗದಲ್ಲಿ ಬಿರುಬಿಸಿಲು ಅವಾಂತರ ತಂದೊಡ್ಡಿದೆ. ಇದೀಗ ಮುಂಗಾರು ಮಳೆಗೆ ಭಾರತ ಕಾಯುತ್ತಿದೆ. ಕೆಲ ಭಾಗದಲ್ಲಿ ಮಳೆಯಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಹವಾಮಾನ ಇಲಾಖೆ ಈ ಮಳೆಗಾಲದ ಭವಿಷ್ಯ ನುಡಿದಿದೆ. ಈ ಮಳೆಗಾಲದಲ್ಲಿ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು  ಹವಾಮಾನ ಇಲಾಖೆ ಹೇಳಿದೆ. ಆದರೆ ಮಳೆಗಾಲದ ದಿನಗಳು ಕಡಿಮೆಯಾಗುತ್ತಿದೆ. ಜೊತೆಗೆ ಅಲ್ಪಾವಧಿ ಸಮಯದಲ್ಲಿ ಹೆಚ್ಚಿನ ಮಳೆಯಾಗುವ ಕಾರಣ ಪ್ರವಾಹ ಹಾಗೂ ಬರ ಪರಿಸ್ಥಿತಿಗೆ ಕಾರಣವಾಗಲಿದೆ ಎಂದಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಇದೀಗ ಭಾರಿ ಮಹತ್ವ ಪಡೆದುಕೊಂಡಿದೆ. ಕಾರಣ ಈ ವರ್ಷ ದೀರ್ಘಾವಧಿಯ ಸರಾಸರಿ 87 ಸೆಂಟಿಮೀಟರ್‌ನಲ್ಲಿ ಶೇಕಡಾ 106 ಪ್ರತಿಶಕತದಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.  ಆದರೆ ಈ ಸಂಚಿತ ಮಳೆ ದೇಶಾದ್ಯಂತ ಏಕರೂಪದಲ್ಲಿರುವುದಿಲ್ಲ. ಹವಾಮಾನ ಬದಲಾವಣೆಯಿಂದ ಕೆಲ ಭಾಗದಲ್ಲಿ ವ್ಯತ್ಯಾಸಗಳು ಸಹಜ ಎಂದಿದೆ.

ಮೈಸೂರು : ವಾರದಲ್ಲಿ ಮಳೆ ಬರುವ ಸಾಧ್ಯತೆ

ಪ್ರತಿ ವರ್ಷ ಇದೀಗ ಮಳೆಗಾಲದ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಮಳೆಗಾಲವೂ ಇದಕ್ಕೆ ಹೊರತಾಗಿಲ್ಲ. ಇದರ ಜೊತೆಗೆ ಅಲ್ಪಾವಧಿಯಲ್ಲಿ ಹೆಚ್ಚು ಮಳೆ ಬೀಳುವ ಕಾರಣ ಪ್ರವಾಹ ಹಾಗೂ ಬರ ಪರಿಸ್ಥಿತಿಗೆ ಕಾರಣವಾಗಲಿದೆ ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ. 

1951ರಿಂದ 2023ರ ವರೆಗೆ ಮಳೆಯ ಇತಿಹಾಸ ಪುಟ ತಿರುವಿದರೆ ಎಲ್ ನಿನೋ ಮಾರುತದ ಬೆನ್ನಲ್ಲೇ ಎನ್ ನಿನೋ ಅಪ್ಪಳಿಸುವ ಸಂದರ್ಭದಲ್ಲಿ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಮಳೆಯಾಗಿದೆ. ಈ ಬಾರಿಯೂ ಇದೇ ಸರದಿಯಲ್ಲಿ ಮಾರುತಗಳು ಕರಾವಳಿ ತೀರ್ ಪ್ರದೇಶಕ್ಕೆ ಅಪ್ಪಳಿಸಲಿದೆ. ಇದರಿಂದ  ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ನಾಲ್ಕು ತಿಂಗಳ ಮಳೆಗಾಲದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ.  

ಸದ್ಯ ಕೆಲ ಭಾಗದಲ್ಲಿ ಮಳೆಯಾಗುತ್ತಿದೆ. ಅಲ್ಲೊಂದು ಇಲ್ಲೊಂದು ಮಳೆಯಾಗಲು ಮಧ್ಯ ಎನ್‌ ನಿನೋ ಮಾರುತ ಪರಿಸ್ಥಿತಿ ಚಾಲ್ತಿಯಲ್ಲಿದೆ. ಆದರೆ ಮಾನ್ಸೂನ್ ಆರಂಭವಾಗುವ ಹೊತ್ತಿಗೆ ಇದು ತಟಸ್ಥವಾಗಲಿದೆ. ಇದೇ ವೇಳೆ ಲಾ ನಿನಾ ಮಾರುತುಗಳು ಆಗಸ್ಟ್‌ನಿಂದ ಸೆಪ್ಟೆಂಬರ್ ವೇಳೆಗೆ ರೂಪಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಮೃತ್ಯಂಜಯ ಮೊಹಪತ್ರ ಹೇಳಿದ್ದಾರೆ.  

Chikkamagaluru: ಮಲೆನಾಡಿನಲ್ಲಿ ಧಾರಾಕಾರ ಮಳೆ: ಕಾಫಿ ಬೆಳೆಗಾರರಲ್ಲಿ ಹರ್ಷ

2003ರಲ್ಲಿ ಭಾರತ ಸರಾಸರಿಗಿಂತ ಕಡಿಮೆ ಮಳೆ ಪಡೆದಿದೆ. ಇದರ ಪರಿಣಾಮ ಇದೀಗ ಬಿರು ಬಿಸಿಲು, ನೀರಿಗೆ ಬರ ಪರಿಸ್ಥಿತಿ ಎದುರಿಸುತ್ತಿದ್ದೇವೆ. 2023ಕ್ಕಿಂತ ಮೊದಲು ಎಲ್ ನಿನೋ ಉತ್ತಮವಾಗಿ ರೂಪುಗೊಂಡಿದ್ದ ಕಾರಣ ಭಾರತ ಸತತ ನಾಲ್ಕು ವರ್ಷ ಸಾಮಾನ್ಯ ಹಾಗೂ ಸಮಾನ್ಯಕ್ಕಿಂತ ಹೆಚ್ಚಿನ ಮಳೆ ಪಡೆದಿತ್ತು.  
 

click me!