120ಕ್ಕೂ ಹೆಚ್ಚು ಮಹಿಳೆಯರ ರೇಪ್ ಮಾಡಿ ಸೀಡಿ ಮಾಡಿದ್ದ ಜಿಲೇಬಿ ಬಾಬಾಗೆ ಹೃದಯಾಘಾತ, ಜೈಲಲ್ಲೇ ಸಾವು

By Anusha KbFirst Published May 10, 2024, 9:59 AM IST
Highlights

ಹಲವು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಅದನ್ನು ವೀಡಿಯೋ ಮಾಡಿದ್ದ ಆರೋಪ ಹೊತ್ತಿದ್ದ ಸ್ವಯಂ ಘೋಷಿತ ದೇವ ಮಾನವ ಜಲೇಬಿ ಬಾಬಾ ಎಂದೇ ಫೇಮಸ್ ಆಗಿದ್ದ ಬಾಬಾ ಬಿಲ್ಲು ರಾಮ್ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ.  

ಹರ್ಯಾಣ: ಹಲವು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಅದನ್ನು ವೀಡಿಯೋ ಮಾಡಿದ್ದ ಆರೋಪ ಹೊತ್ತಿದ್ದ ಸ್ವಯಂ ಘೋಷಿತ ದೇವ ಮಾನವ ಜಲೇಬಿ ಬಾಬಾ ಎಂದೇ ಫೇಮಸ್ ಆಗಿದ್ದ ಬಾಬಾ ಬಿಲ್ಲು ರಾಮ್ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ.  ಓರ್ವ ಅಪ್ರಾಪ್ತೆಯೂ ಸೇರಿದಂತೆ ತನ್ನ ಮೂವರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ್ದ ಆರೋಪ ಈತನ ಮೇಲಿತ್ತು. ಈ ಪ್ರಕರಣದಲ್ಲಿ ಈತ ದೋಷಿ ಎಂದು ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಈತನಿಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ಹರ್ಯಾಣದ ಹಿಸ್ಸಾರ್ ಜೈಲಿನಲ್ಲಿರಿಸಲಾಗಿತ್ತು. ಆದರೆ ಈಗ ಆತ ಜೈಲಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. 

ಈತ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಅನಾರೋಗ್ಯದಿಂದ ಆತನಿಗೆ ಹೃದಯಾಘಾತವಾಗಿದೆ ಎಂದು ಆತನ ಪರ ವಕೀಲ ಗಜೇಂದ್ರ ಪಾಂಡೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಮಂಗಳವಾರ ರಾತ್ರಿಯೇ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. 

ಯುವತಿಯರ ಅಕ್ರಮ ವಶ ಪ್ರಕರಣ: ನಿತ್ಯಾನಂದಗೆ ಗುಜರಾತ್‌ ಹೈಕೋರ್ಟ್‌ ಕ್ಲೀನ್‌ಚಿಟ್‌

ಬಾಬಾ ಬಿಲ್ಲು ರಾಮ್ ಎಂಬ ಈತ ಸ್ವಯಂ ಘೋಷಿತ ದೇವ ಮಾನವನಾಗುವ ಮೊದಲು ಹರ್ಯಾಣದ ಫತೇಹಬಾದ್ ಜಿಲ್ಲೆಯಲ್ಲಿ ತಳ್ಳುಗಾಡಿಯಲ್ಲಿ ಜಿಲೇಬಿ ಮಾರಾಟ ಮಾಡುತ್ತಿದ್ದ, ಹೀಗಾಗಿ ಈತನಿಗೆ ಜಿಲೇಬಿ ಬಾಬಾ ಎಂಬ ಹೆಸರು ಬಂದಿದೆ. ಈತನ ವಿರುದ್ಧ 120 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದ ಆರೋಪವಿದೆ. ಅತ್ಯಾಚಾರವೆಸಗಿದ್ದ ಆತ ಆ ದೃಶ್ಯಗಳನ್ನು ವೀಡಿಯೋ ಮಾಡಿ ಮಹಿಳೆಯರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ. ಚಹಾದಲ್ಲಿ ಮತ್ತು ಬರುವ ಔಷಧಿ ನೀಡಿ ಮಹಿಳೆಯರನ್ನುಈತ ಅತ್ಯಾಚಾರ ಮಾಡುತ್ತಿದ್ದ, ಈತನ ಕೆಲ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಆತನ ಆಶ್ರಮದಲ್ಲಿ ಪೊಲೀಸರು ಅಶ್ಲೀಲ ಸೀಡಿಗಳನ್ನು ಕೂಡ ಪತ್ತೆ ಮಾಡಿದ್ದರು

ಕೆಲ ಮಾಧ್ಯಮಗಳ ವರದಿಗಳ ಪ್ರಕಾರ ಈತ ಪಂಜಾಭ್‌ನ ಮನ್ಸಾ ಮೂಲದವನಾಗಿದ್ದು, ತೊಹಾನಾದಲ್ಲಿ ವಾಸ ಮಾಡುತ್ತಿದ್ದ ತೊಹನಾದಲ್ಲಿ ಜಿಲೇಬಿ ಮಾರಾ ಮಾಡುತ್ತಿದ್ದ ಬಳಿಕ  ಬಾಬಾನಾಗಿ ಬದಲಾದ ಈತ ತೊಹನಾದಲ್ಲಿ ಆಶ್ರಮವನ್ನು ಕಟ್ಟಿದ್ದ. ಹಾಗೆಯೇ ತೊಹನಾದ ಬಾಬಾ ಬಾಲಕ ನಾಥ್ ಮಂದಿರದಲ್ಲಿ ಮಹಂತನಾಗಿದ್ದ. ಆದರೆ ನಂತರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಿಂದ ಈತ ಸಾಕಷ್ಟು ಅಪಖ್ಯಾತಿ ಗಳಿಸಿದ್ದ. 

ಅತ್ಯಾಚಾರ ಪ್ರಕರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ; ಗುಜರಾತ್ ಕೋರ್ಟ್‌ ತೀರ್ಪು

2018ರಲ್ಲಿ ಜಿಲೇಬಿ ಬಾಬಾನ ವೀಡಿಯೋಗಳು ವೈರಲ್ ಆಗಿದ್ದವಂತೆ.  ಮಹಿಳೆಯರೊಂದಿಗಿನ ಬಾಬಾ ಅಶ್ಲೀಲ ನಡವಳಿಕೆ ನೋಡಿದ್ದ ಜನ ಬಾಬಾ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಿ ಪ್ರಕರಣ ದಾಖಲಿಸಿದ್ದರು.  ಇದಾದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು, 2020ರಲ್ಲಿ ಆತನ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿತ್ತು. ಇದಾದ ನಂತರ ಫತೇಹಾಬಾದ್ ನ್ಯಾಯಾಲಯ ಈತನಿಗೆ 35 ಸಾವಿರ ರೂಪಾಯಿ ದಂಡ, 14 ಲಕ್ಷ ಜೈಲು ಶಿಕ್ಷೆ ವಿಧಿಸಿತ್ತು. 

click me!