ಕಾಂಗ್ರೆಸ್-ಇಂಡಿಯಾ ಕೂಟ ಚೆನ್ನಾಗಿದೆ; ಉ.ಪ್ರದೇಶದಲ್ಲಿ 40 ಸೀಟು ಗೆಲ್ಲುತ್ತೇವೆ: ಡಿಕೆ ಶಿವಕುಮಾರ ವಿಶ್ವಾಸ

By Ravi Janekal  |  First Published May 17, 2024, 4:42 PM IST

ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಒಕ್ಕೂಟ ಬಹಳ ಚೆನ್ನಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದರು.


ಬೆಂಗಳೂರು (ಮೇ.17): ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಒಕ್ಕೂಟ ಬಹಳ ಚೆನ್ನಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೊಸದಾಗಿ ಹತ್ತು ಕೆಜಿ ಅಕ್ಕಿ ಘೊಷಣೆ ಮಾಡಿದ್ದಾರೆ. ನಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹತ್ತು ಕೆಜಿ ಉಚಿತ ನೀಡುವಂತೆ ದೇಶದ ಜನರಿಗೂ ನೀಡುವ ಭರವಸೆ ನೀಡಿದ್ದೇವೆ. ಇದೀಗ ನಮ್ಮ ರಾಜ್ಯದಂತೆ ದೆಹಲಿಯಲ್ಲೂ ಇಂಡಿಯಾ ಒಕ್ಕೂಟ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಜನರು ಕೂಡ ಒಪ್ಪಿ ನಮ್ಮನ್ನ ಬೆಂಬಲಿಸಿದ್ದಾರೆ ಎಂದರು.

Tap to resize

Latest Videos

ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ದಕ್ಷವಾಗಿದೆ: ಸಚಿವ ಡಿ ಸುಧಾಕರ್

ರಾಜ್ಯದಲ್ಲಿ ತೀವ್ರ ಬರಗಾಲ ಇದ್ದುದರಿಂದ ಕುಡಿಯುವ ನೀರು, ಆಹಾರ, ಜಾನುವಾರು ಮೇವಿನ ಕೊರತೆ ಸೇರಿದಂತೆ ಸಮಸ್ಯೆ ಏನೇನೋ ಸಮಸ್ಯೆ ಇತ್ತು. ಮುಂದೆ ಅಧಿಕಾರಿಗಳು ಹೋಗಿ ಪರಿಶೀಲನೆ ಮಾಡಬೇಕು. ಮಳೆ ಜಾಸ್ತಿ ಆಗಿ ಡ್ಯಾಮೇಜ್ ಆದರೂ ಗಮನಿಸಬೇಕು. ಕೆರೆ ಕಟ್ಟೆಗಳಲ್ಲಿ ನೀರು ತುಂಬಿಸಲು, ಕಾಲುವೆ ಹರಿಯಲು ಕ್ರಮವಹಿಸಬೇಕು. ಈ ವರ್ಷ ಬರಗಾಲದಿಂದಾಗಿ ಎಲ್ಲ ನದಿಗಳು, ಕೆರೆಗಳು ಬತ್ತಿ ಹೋಗಿದ್ದವು. ಇದರ ಜೊತೆಗೆ 7000 ಬೋರ್‌ವೆಲ್‌ಗಳು ಬತ್ತಿಹೋಗಿದ್ದವು. ಮುಂದಿನ ದಿನಗಳಲ್ಲಿ ಆ ಕೆರೆಗಳಲ್ಲಿ ಶುದ್ಧ ಕುಡಿಯುವ ನೀರು ತುಂಬಿಸಲು ಕಾರ್ಯಕ್ರಮ ರೂಪಿಸಲು ಸೂಚನೆ ಕೊಟ್ಟಿದ್ದಾರೆ. ಅದಕ್ಕಾಗಿ ಮುಂಜಾಗ್ರತವಾಗಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮವಹಿಸಿದ್ದೇವೆ. ಈ ವಿಚಾರವಾಗಿ ನಾನು ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ಮುಂದಿನ ದಿನಗಳಲ್ಲಿ ಬೆಂಗಳೂರು ಸಪರೇಟಾಗಿ ಪ್ಲಾನ್ ಆಫ್ ಆಕ್ಷನ್ ಮಾಡೋಕೆ ಹೇಳಿದ್ದೇನೆ ಎಂದರು.

click me!