ದ್ವಾರಕಾ ಹೆದ್ದಾರಿ ನಿರ್ಮಾಣಕ್ಕೆ 5,700 ಮರಗಳ ಸ್ಥಳಾಂತರ

By Web DeskFirst Published Oct 15, 2019, 9:09 AM IST
Highlights

ದ್ವಾರಕಾ ಹೆದ್ದಾರಿ ನಿರ್ಮಾಣಕ್ಕೆ 5,700 ಮರಗಳ ಸ್ಥಳಾಂತರ |  ಮರಗಳ ಕಡಿಯುವ ಬದಲು ಬೇರೆಡೆ ನೆಟ್ಟು ಆರೈಕೆ | ಪ್ರತಿ ಮರಕ್ಕೆ 30 ಸಾವಿರದಂತೆ 70 ಕೋಟಿ ರು. ವೆಚ್ಚ

ನವದೆಹಲಿ (ಅ.15): ಬಹುತೇಕ ಸಂದರ್ಭದಲ್ಲಿ ಜನರ ವಿರೋಧದ ಮಧ್ಯೆಯೂ ರಸ್ತೆ ನಿರ್ಮಾಣಕ್ಕೆಂದು ಮರಗಳನ್ನು ಕಡಿಯಲಾಗುತ್ತದೆ. ಆದರೆ, ಗುರುಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದ್ವಾರಕಾ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಬೆಳೆದ 5,700 ಮರಗಳನ್ನು ಬುಡ ಸಮೇತ ಕಿತ್ತು ಅದನ್ನು ಬೇರೆಡೆ ಸ್ಥಳಾಂತರಿಸುವ ಬೃಹತ್‌ ಕಾರ್ಯಾಚರಣೆಯೊಂದನ್ನು ಕೈಗೆತ್ತಿಕೊಳ್ಳಲಾಗಿದೆ.

ಹಲೋ ಕಾಶ್ಮೀರ್.. 72 ದಿನಗಳ ಬಳಿಕ ಕಣಿವೆಯಲ್ಲಿ ರಿಂಗಣಿಸಿದ ಮೊಬೈಲ್

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾವಿರಾರು ಮರಗಳನ್ನು ಬೇರೆಡೆ ಸಾಗಿಸುವ ಕಾರ್ಯಾಚರಣೆಯನ್ನು ನಾಲ್ಕು ತಿಂಗಳನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ. ಮರಗಳನ್ನು ಕಿತ್ತ ಬಳಿಕ ಅದನ್ನು ಬೇರೆಡೆ ನೆಟ್ಟು ಆರೈಕೆ ಮಾಡಬೇಕಾಗಿರುವುದರಿಂದ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದೂವರೆ ವರ್ಷಗಳಾದರೂ ಬೇಕಾದೀತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಡ ಬೇಡ ಅಂದ್ರೂ ಕಣ್ಣೆದುರೇ ನಾಯಿ ಮರಿಗಳನ್ನು ಕಚ್ಚಿ ಕೊಂದ ನಾಗರಹಾವು!

ಮರಗಳನ್ನು ವರ್ಗಾಯಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ಮರಕ್ಕೆ ಸುಮಾರು 30 ಸಾವಿರ ರು.ಗಳನ್ನು ವ್ಯಯಿಸುತ್ತಿದೆ. ಒಟ್ಟಾರೆ ಮರಗಳ ಸ್ಥಳಾಂತರ ಯೋಜನೆಗೆ ಸುಮಾರು 70 ಕೋಟಿ ರು.ವೆಚ್ಚವಾಗುವ ನಿರೀಕ್ಷೆ ಇದೆ. ಮರಗಳನ್ನು ಬೆಳೆಸಲು ದೆಹಲಿ ಅಭಿವೃದ್ಧಿ ಪ್ರಾಧಿಕಾರ 7 ಪಾರ್ಕ್ಗಳನ್ನು ಗುರುತಿಸಿದೆ.

ಮರಗಳ ಸ್ಥಳಾಂತರ ಹೇಗೆ?

- ಸ್ಥಳಾಂತರಿಸಬೇಕಾದ ಮರಗಳ ಗುರುತಿಸುವಿಕೆ

- ಗೆದ್ದಲು ಮತ್ತು ಕೀಟಗಳು ಬಾಧಿಸದಂತೆ ಕೀಟ ನಾಶಕ ಸಿಂಪಡನೆ

- ಬೇರುಗಳನ್ನು ಕತ್ತರಿಸಿ, ಎಲೆಗಳಿಗೆ ರಸಗೊಬ್ಬರಗಳ ಸಿಂಪಡನೆ

- ಮರಕ್ಕೆ ಬಾಹ್ಯ ಬೆಂಬಲ ಕೊಟ್ಟು 20- 25 ದಿನಗಳ ಕಾಲ ಆರೈಕೆ

- ಚೇತರಿಕೆ ಕಂಡು ಬಂದ ಬಳಿಕ ಮರಗಳ ಸ್ಥಳಾಂತರ

 

click me!