Asianet Suvarna News Asianet Suvarna News

ಬೇಡ ಬೇಡ ಅಂದ್ರೂ ಕಣ್ಣೆದುರೇ ನಾಯಿ ಮರಿಗಳನ್ನು ಕಚ್ಚಿ ಕೊಂದ ನಾಗರಹಾವು!

ಮರಿಗಳನ್ನು ನಾಗರ ಹಾವಿನಿಂದ ಕಾಪಾಡಲು ನಾಯಿಯ ಯತ್ನ| ದಯವಿಟ್ಟು ಮರಿಗಳನ್ನು ಕಚ್ಚಬೇಡ ಎಂದು ಬೇಡಿದ ನಾಯಿ| ನಾಯಿಯ ಮೊರೆ ಆಲಿಸಿಕೊಳ್ಳಲೇ ಇಲ್ಲ ನಾಗರ ಹಾವು| ಮರಿಗಳನ್ನು ಕಚ್ಚಿ ಕಚ್ಚಿ ಕೊಂದು ಓಡೇ ಬಿಡ್ತು!

Cobra bite puppies in Nagole RTA Office at hyderabad
Author
Bangalore, First Published Oct 14, 2019, 1:29 PM IST

ತೆಲಂಗಾಣ[ಅ.14]: ಹೈದರಾಬಾದ್‌ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ನೋಡುಗರನ್ನು ಭಾವುಕರನ್ನಾಗಿಸಿದೆ. ತಾಯಿ ಶ್ವಾನವೊಂದು, ನಾಗರ ಹಾವಿನ ಬಳಿ ತನ್ನ ಪುಟ್ಟ ಪುಟ್ಟ ಮರಿಗಳನ್ನು ಕಚ್ಚದಂತೆ ಪರಿ ಪರಿಯಾಗಿ ಬೇಡಿಕೊಂಡಿದೆ. ಆದರೆ ದನ್ನು ಕೇಳಿಸಿಕೊಳ್ಳದ ನಾಗರ ಹಾವು, ತಾಯಿ ಎದುರೇ ಮರಿಗಳನ್ನು ಕಚ್ಚಿ ಕಚ್ಚಿ ಕೊಂದಿದೆ.

ಮತ್ತೆ ಕಾಣಿಸಿಕೊಂಡಿತು 7 ಹೆಡೆಯ ಸರ್ಪದ ಪೊರೆ : ಏನಿದು ಅಚ್ಚರಿ!

ತೆಲಂಗಾಣದ ಹೈದರಾಬಾದ್​ ನಾಗೋಲ್​ನ ಆರ್‌ಟಿಎ ಕಾರ್ಯಾಲಯ ಬಳಿ ಈ ಘಟನೆ ನಡೆದಿದೆ. ಕಾರ್ಯಾಲಯದ ಸಮೀಪ  ಕಾರ್​ ಶೆಡ್​ನಲ್ಲಿ ಶ್ವಾನವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ತಾಯಿಯ ಈ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ಶೆಡ್ ಬಳಿ ಬಂದ ನಾಗರಹಾವು ಎರಡು ಮರಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ನಾಯಿ ಜೋರಾಗಿ ಬೊಗಳಿ ಹಾವನ್ನು ದೂರ ಓಡಿಸಲು ಯತ್ನಿಸಿದೆ. ಈ ಮೂಲಕ ತನ್ನ ಮರಿಗಳನ್ನು ಕಾಪಾಡುವ ಪ್ರಯತ್ನ ಮಾಡಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. 

ಕಮೋಡ್‌ನಲ್ಲಿ ಎರಡೆರಡು ಹೆಬ್ಬಾವು, ಕಂಡವಳ ಸ್ಥಿತಿ ಏನಾಗಿರ್ಬೇಡ!

ಹೌದು ತಾಯಿ ಶ್ವಾನ ಪರಿ ಪರಿಯಾಗಿ ಬೇಡಿಕೊಂಡರೂ ಆಲಿಸದ ನಾಗರ ಹಾವು ಅದರ ಕಣ್ಣೆದುರೆ ಮರಿಗಳನ್ನು ಕಚ್ಚಿ ಕೊಂದು ಅಲ್ಲಿಂದ ಓಡಿದೆ. ಇತ್ತ ಮರಿಗಳನ್ನು ಕಳೆದುಕೊಂಡ ನಾಯಿಯ ಆಕ್ರಂದನ ಅಲ್ಲಿ ನೆರೆದಿದ್ದವರಲ್ಲಿ ಕಣ್ಣೀರು ಹರಿಸುವಂತೆ ಮಾಡಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. 

Follow Us:
Download App:
  • android
  • ios