ಏಮ್ಸ್ ಸಾಕು ವಿದೇಶಿ ಆಸ್ಪತ್ರೆ ಬೇಡವೆಂದಿದ್ದ ಸುಷ್ಮಾ | ಏಮ್ಸ್‌ನ ವೈದ್ಯರು ವಿಶ್ವದಲ್ಲಿಯೇ ನುರಿತ ವೈದ್ಯರಾಗಿದ್ದಾರೆ. ಚಿಕಿತ್ಸೆಗಾಗಿ ವಿದೇಶದ ಆಸ್ಪತ್ರೆಗೆ ತೆರಳಿದ್ದೇ ಆದಲ್ಲಿ, ದೇಶದ ಆರೋಗ್ಯ ವೈದ್ಯರು ಮತ್ತು ಆಸ್ಪತ್ರೆಗಳ ಕುರಿತು ಜನತೆ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದಿದ್ದರು ಸುಷ್ಮಾ
ನವದೆಹಲಿ (ನ. 06): ಸಣ್ಣ ಪುಟ್ಟಕಾಯಿಲೆಗಳಿಗೂ ಸಾರ್ವಜನಿಕರ ತೆರಿಗೆ ಹಣದಲ್ಲಿ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವ ರಾಜಕೀಯ ನಾಯಕರ ನಡುವೆ, ವಿದೇಶಾಂಗ ಖಾತೆ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ದೇಶಪ್ರೇಮ ಮೆರೆದಿದ್ದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ವಕೀಲರ ವಿರುದ್ಧ ಸಿಡಿದೆದ್ದ ದಿಲ್ಲಿ ಪೊಲೀಸರು; ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ
undefined
2016 ರಲ್ಲಿ ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದ ಸುಷ್ಮಾ ಸ್ವರಾಜ್‌ಗೆ ದೆಹಲಿಯ ಏಮ್ಸ್ ವೈದ್ಯರು, ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದರು. ಆದರೆ ವೈದ್ಯರ ಈ ಪ್ರಸ್ತಾಪ ತಿರಸ್ಕರಿಸಿದ ಸುಷ್ಮಾ, ‘ಏಮ್ಸ್‌ನ ವೈದ್ಯರು ವಿಶ್ವದಲ್ಲಿಯೇ ನುರಿತ ವೈದ್ಯರಾಗಿದ್ದಾರೆ. ಒಂದು ವೇಳೆ ಚಿಕಿತ್ಸೆಗಾಗಿ ವಿದೇಶದ ಆಸ್ಪತ್ರೆಗೆ ತೆರಳಿದ್ದೇ ಆದಲ್ಲಿ, ದೇಶದ ಆರೋಗ್ಯ ವೈದ್ಯರು ಮತ್ತು ಆಸ್ಪತ್ರೆಗಳ ಕುರಿತು ಜನತೆ ನಂಬಿಕೆ ಕಳೆದುಕೊಳ್ಳುತ್ತಾರೆ. ಹೀಗಾಗಿ ನೀವು ಕತ್ತರಿ ಹಿಡಿದುಕೊಳ್ಳಿ. ಉಳಿದಿದ್ದನ್ನು ಶ್ರೀಕೃಷ್ಣ ನೋಡಿಕೊಳ್ಳುತ್ತಾನೆ’ ಎಂದು ವೈದ್ಯರಿಗೆ ಹೇಳಿ, ತಾವೇ ಶಸ್ತ್ರಚಿಕಿತ್ಸೆಯ ದಿನಾಂಕವನ್ನೂ ನಿಗದಿ ಮಾಡಿದ್ದರು.
ಬಳಿಕ ಅವರಿಗೆ ಏಮ್ಸ್‌ನಲ್ಲೇ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದು, ಸುಷ್ಮಾ ಚೇತರಿಸಿಕೊಂಡರು. ಈ ಹಂತದಲ್ಲಿ ಪ್ರಧಾನಿ ನರೇಂದ್ರ ತಾವು ಮಾಡಬಹುದಾದ ಎಲ್ಲಾ ಸಹಾಯವನ್ನೂ ಮಾಡಿದರು. ಅವರ ನೆರವನ್ನಂತೂ ಮರೆಯುವಂತೇ ಇಲ್ಲ ಎಂದು ಸುಷ್ಮಾರ ಪತಿ ಸ್ವರಾಜ್ ಕೌಶಲ್ ಮಂಗಳವಾರ ಸರಣಿ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಸುಷ್ಮಾ ಅವರು 2019ರ ಆಗಸ್ಟ್ 6ರ ತಡರಾತ್ರಿ ಹೃದಯ ಸ್ತಂಭನಕ್ಕೊಳಗಾಗಿ ಕೊನೆಯುಸಿರೆಳೆದಿದ್ದರು.