ಮಗುವನ್ನು ಬಿಟ್ಟುಹೋದ ತಂದೆ ಹೆಸರನ್ನು ಪಾಸ್‌ಪೋರ್ಟ್‌ನಿಂದ ತೆಗೆಯಲು ಹೈಕೋರ್ಟ್ ಸೂಚನೆ!

By Suvarna NewsFirst Published May 2, 2023, 1:02 PM IST
Highlights

ಏಕಾಂಗಿಯಾಗಿ ಮಗುವನ್ನು ಕಷ್ಟಪಟ್ಟು ಬೆಳೆಸಿದ್ದೇನೆ. ಮಗುವನ್ನು ಬಿಟ್ಟುಹೋದ ತಂದೆಯ ಹೆಸರು ಪಾಸ್‌ಪೋರ್ಟ್‌ನಲ್ಲಿ ಯಾಕೆ?ಎಂದು ಹೈಕೋರ್ಟ್ ಮೆಟ್ಟಿಲೇರಿದ ತಾಯಿ ಪರವಾಗಿ ತೀರ್ಪು ಬಂದಿದೆ. ಈ ಮೂಲಕ ದೆಹಲಿ ಹೈಕೋರ್ಟ್, ಇದೀಗ ಇದೇ ರೀತಿಯ ಹಲವು ಘಟನೆಗಳಿಗೆ ಸ್ಪಷ್ಟ ಉತ್ತರ ನೀಡಿದೆ.
 

ದೆಹಲಿ(ಮೇ.02): ಮಗು ಹುಟ್ಟುವ ಮೊದಲೇ ತಂದೆ ಕುಟುಂಬ ತೊರೆದಿದ್ದಾನೆ. ಏಕಾಂಗಿಯಾದ ತಾಯಿ ಕಷ್ಟಪಟ್ಟು ಮಗುವನ್ನು ಬೆಳೆಸಿದ್ದಾಳೆ. ಇದೀಗ ಮಗುವಿನ ಪಾಸ್‌ಪೋರ್ಟ್‌ನಲ್ಲಿ ಹುಟ್ಟಿಸಿದ ಕಾರಣ ಆತನ ಹೆಸರು ಇರಬೇಕೇ? ಮಗುವಿನ ತಂದೆಯ ಹೆಸರು ಪಾಸ್‌ಪೋರ್ಟ್‌ನಿಂದ ತೆಗೆಯಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ತಾಯಿಗೆ ಗೆಲುವು ಸಿಕ್ಕಿದೆ. ಇಷ್ಟೇ ಅಲ್ಲ ಮಗುವಿನ ಸರ್ನೇಮ್ ತೆಗೆದು ಹೊಸ ದಾಖಲಾತಿ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಈ ಮೂಲಕ ಹೈಕೋರ್ಟ್ ಈ ರೀತಿ ಮಗುುವನ್ನು ಆರೈಕೆ ಮಾಡದ, ನೋಡ ಪೋಷಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ಅಧಿಕಾರವಿಲ್ಲ ಅನ್ನೋ ಸ್ಪಷ್ಟ ಸೂಚನೆಯನ್ನು ಕೋರ್ಟ್ ನೀಡಿದೆ.

ದೆಹಲಿ ಮೂಲದ ಮಹಿಳೆ ಮದುವೆಯಾದ ಕೆಲ ತಿಂಗಳಲ್ಲೇ ಪತಿ ಬಿಟ್ಟು ಹೋಗಿದ್ದಾನೆ. ಗರ್ಭಿಣಿಯಾಗಿದ್ದ ಮಹಿಳೆ ಏಕಾಂಗಿಯಾಗಿ ಜೀವನ ಸಾಗಿಸಿದ್ದಾಳೆ. ಮಗು ಹುಟ್ಟಿದ ಬಳಿಕವೂ ಯಾರ ನೆರವಿಲ್ಲದೆ ಬೆಳೆಸಿದ್ದಾಳೆ. ಇತ್ತ ಮಗುವಿನ ಪಾಸ್‌ಪೋರ್ಟ್ ಮಾಡಿಸಿದ್ದಾಳೆ. ಈ ವೇಳೆ ಮಗುವಿನ ತಂದೆಯ ಹೆಸರನ್ನು ಪಾಸ್‌ಪೋರ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ತೆಗೆಯುವಂತೆ ಪಾಸ್‌ಪೋರ್ಟ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ನಿಯಮದ ಪ್ರಕಾರ ಇದು ಸಾಧ್ಯವಿಲ್ಲ ಅನ್ನೋ ಉತ್ತರ ಬಂದಿತ್ತು. ಹೀಗಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆ, ತಂದೆ ಇದುವರೆಗೂ ಮಗುವನ್ನು ನೋಡಿಲ್ಲ. ಆರೈಕೆ ಮಾಡಿಲ್ಲ. ನೆರವು ನೀಡಿಲ್ಲ. ಕಷ್ಟಪಟ್ಟು ಏಕಾಂಗಿಯಾಗಿ ಬೆಳೆಸಿದ್ದೇನೆ. ಹೀಗಾಗಿ ಮಗುವಿನ ಪಾಸ್‌ಪೋರ್ಟ್‌ನಲ್ಲಿ ತಂದೆಯ ಹೆಸರು ಯಾಕೆ? ಇದನ್ನು ತೆಗೆಯಬೇಕು ಎಂದು ಮಹಿಳೆ ಮನವಿ ಮಾಡಿದ್ದಳು.

Latest Videos

ವಿಶ್ವದ 10 ಅತ್ಯಂತ ಸುಂದರ ಪಾಸ್ಪೋರ್ಟ್ಸ್ ಯಾವುವು ನೋಡಿ

ಈ ಕುರಿತು ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಜಸ್ಟೀಸ್ ಪ್ರತಿಭಾ ಎಂ ಸಿಂಗ್ ಪೀಠ, ಮಹತ್ವದ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಮುಗವನ್ನು ತಂದೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಈ ರೀತಿಯ ವಿಶೇಷ ಸಂದರ್ಭದಲ್ಲಿ ಅಧ್ಯಾಯ 8ರ ಕ್ಲಾಸ್ 4.5.1  ಹಾಗೂ ಅಧ್ಯಾಯ 9ರ ಕ್ಲಾಸ್ 4.1 ಅನ್ವಯಿಸುತ್ತದೆ.  ಈ ಪ್ರಕರಣವನ್ನು ವಿಶೇಷ ಘಟನೆ ಎಂದು ಪರಿಗಣಿಸಲಾಗುತ್ತದೆ. ಮಗುವಿನ ಪಾಸ್‌ಪೋರ್ಟ್‌ನಲ್ಲಿರುವ ತಂದೆಯ ಹೆಸರನ್ನು ತೆಗೆಯಬೇಕು. ಪಾಸ್‌ಪೋರ್ಟ್ ಇಲಾಖೆ ಮಗುವಿಗೆ ಹೊಸ ಪಾಸ್‌ಪೋರ್ಟ್ ನೀಡಬೇಕು. ಇಷ್ಟೇ ಅಲ್ಲ ಮಗುವಿನ ಸರ್ನೇಮ್ ತೆಗೆದು ಹೊಸ ದಾಖಲಾತಿ ನೀಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಈ ರೀತಿಯ ವಿಶೇಷ ಪ್ರಕರಣಗಳಲ್ಲಿ ಪಾಸ್‌ಪೋರ್ಟ್ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಕೋರ್ಟ್ ಸೂಚಿಸಿದೆ. 

ಪಾಕ್‌ ಮಕ್ಕಳಿಗೆ ಭಾರತ ಪೌರತ್ವ ಸದ್ಯಕ್ಕಿಲ್ಲ
ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಪೌರತ್ವ ಕುರಿತು ಮಹತ್ವದ ತೀರ್ಪು ನೀಡಿತ್ತು. ಪಾಕಿಸ್ತಾನದ ತಂದೆ ಮತ್ತು ಭಾರತದ ತಾಯಿಗೆ ದುಬೈನಲ್ಲಿ ಜನಿಸಿರುವ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಭಾರತದ ಪೌರತ್ವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಹೈಕೋರ್ಚ್‌ ನಿರಾಕರಿಸಿತ್ತು. ತಮಗೆ ಭಾರತದ ಪೌರತ್ವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನಲ್ಲಿ ನೆಲೆಸಿರುವ 17 ಮತ್ತು 14 ವರ್ಷದ ಇಬ್ಬರು ಪಾಕಿಸ್ತಾನದ ಅಪ್ರಾಪ್ತ ಮಕ್ಕಳು ಜಂಟಿಯಾಗಿ ತಮ್ಮ ತಾಯಿ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಆದೇಶಿಸಿದೆ.

ಬ್ರಿಟಿಷರ ಕಾಲದ ಭಾರತೀಯ ಪಾಸ್‌ಪೋರ್ಟ್‌ ಶೇರ್‌ ಮಾಡಿದ ವ್ಯಕ್ತಿ: ನೆಟ್ಟಿಗರಿಂದ ಅಚ್ಚರಿ

ಪೌರತ್ವವನ್ನು ತ್ಯಜಿಸಲು 21 ವರ್ಷ ವಯಸ್ಸಾಗಬೇಕು ಎಂದು ಪಾಕಿಸ್ತಾನ ದೇಶದ ನಿಯಮವಿದೆ. ಹಾಗಾಗಿ, ಅರ್ಜಿದಾರರು ಭಾರತದ ಕಾನೂನುಗಳಿಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನದ ಪೌರತ್ವವನ್ನು ತ್ಯಜಿಸಿದ ಬಳಿಕವೇ ಅರ್ಜಿದಾರರು ಭಾರತದ ಪೌರತ್ವ ಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ನಿರ್ದೇಶಿಸಿದೆ.

click me!