ರಾಜ್ಯಗಳಿಗೆ GST ಪರಿಹಾರ ಬದಲು 44,000 ಕೋಟಿ ರೂ ಸಮಾನಾಂತರ ಸಾಲದ ಬಾಕಿ ಮೊತ್ತ ಬಿಡುಗಡೆ!

By Suvarna NewsFirst Published Oct 28, 2021, 6:18 PM IST
Highlights
  • ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮಾನಾಂತರ ಸಾಲ ಸೌಲಭ್ಯ
  • 44,000 ಕೋಟಿ ರೂ. ಬಾಕಿ ಮೊತ್ತವನ್ನು ಬಿಡುಗಡೆ ಮಾಡಿದ ಕೇಂದ್ರ
  • ಕೇಂದ್ರದಿಂದ ಕರ್ನಾಟಕಕ್ಕೆ 5010.90 ಕೋಟಿ ರೂಪಾಯಿ 

ನವದೆಹಲಿ(ಅ.28):  GST ಪರಿಹಾರಕ್ಕೆ(GST Compensation) ಬದಲಾಗಿ ʻಸಮಾನಾಂತರ ಸಾಲʼ (back-to-back loan) ಸೌಲಭ್ಯದಅಡಿಯಲ್ಲಿ ಶಾಸಕಾಂಗ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು 44,000 ಕೋಟಿ ರೂ.ಗಳನ್ನು ಹಣಕಾಸು ಸಚಿವಾಲಯವು(Ministry of Finance) ಬಿಡುಗಡೆ ಮಾಡಿದೆ. ಇದರೊಂದಿಗೆ, ಈ ಹಿಂದೆ ಬಿಡುಗಡೆ ಮಾಡಲಾದ 1,15,000 ಕೋಟಿ ರೂ. ಒಳಗೊಂಡಂತೆ (2021ರ ಜುಲೈ 15ರಂದು ಬಿಡುಗಡೆಯಾದ ₹ 75,000 ಕೋಟಿ ಮತ್ತು 2021ರ ಅಕ್ಟೋಬರ್ 07ರಂದು ಬಿಡುಗಡೆಯಾದ ₹ 40,000 ಕೋಟಿ),  ಜಿಎಸ್‌ಟಿ(GST) ಪರಿಹಾರಕ್ಕೆ ಬದಲಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಮಾನಾಂತರ ಸಾಲ ಸೌಲಭ್ಯದ ಅಡಿಯಲ್ಲಿ ಒಟ್ಟು ಒಟ್ಟು 1,59,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ರಾಜ್ಯಗಳಿಗೆ 40 ಸಾವಿರ ಕೋಟಿ ವಿತರಿಸಿದ ಕೇಂದ್ರ: ಕರ್ನಾಟಕಕ್ಕೆ 4,555.84 ಕೋಟಿ ರೂ!

ಸಮಾನಾಂತರ ಸಾಲದಡಿ ಕರ್ನಾಟಕಕ್ಕೆ(Karnataka) 5010.90 ಕೋಟಿ ರೂಪಾಯಿ ಕೇಂದ್ರದಿಂದ ಬಂದಿದೆ. ಈ ಮೊತ್ತವು(GST cess) ಸೆಸ್ ಸಂಗ್ರಹದಿಂದ ಪ್ರತಿ 2 ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುವ ಸಾಮಾನ್ಯGST ಪರಿಹಾರದೊಂದಿಗೆ ಪಾವತಿಸಿದ ಹೆಚ್ಚುವರಿ ಮೊತ್ತವಾಗಿದೆ.  ಸಂಪನ್ಮೂಲದ ಅಂತರವನ್ನು ಸರಿದೂಗಿಸಲು ಕೇಂದ್ರ ಸರಕಾರವು ₹1.59 ಲಕ್ಷ ಕೋಟಿ ರೂ.ಸಾಲ ಪಡೆದು  ರಾಜ್ಯಗಳು(States) ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ(Union Teritory) ಸಮಾನಾಂತರ ಸಾಲ ಸೌಲಭ್ಯದ ಆಧಾರದ ಮೇಲೆ ಅದನ್ನು ಬಿಡುಗಡೆ ಮಾಡಿದೆ.  ಮೇ ತಿಂಗಳಲ್ಲಿ ನಡೆದ 43ನೇ ಜಿಎಸ್‌ಟಿ ಮಂಡಳಿ ಸಭೆಯ(GST council)  ಈ ಕುರಿತು ನಿರ್ಧಾರ ಕೈಗೊಳ್ಳಾಗಿದೆ.

 2020-21ನೇ ಹಣಕಾಸು ವರ್ಷದಲ್ಲಿ ಇದೇ ರೀತಿಯ ಸೌಲಭ್ಯಕ್ಕಾಗಿ ಅಳವಡಿಸಿಕೊಳ್ಳಲಾದ ತತ್ವಗಳ ಅನುಸಾರವೇ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಆಗಲೂ ಇದೇ ರೀತಿಯ ವ್ಯವಸ್ಥೆಯ ಅಡಿಯಲ್ಲಿ ರಾಜ್ಯಗಳಿಗೆ 1.10 ಲಕ್ಷ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಈ 1.59 ಲಕ್ಷ ಕೋಟಿ ರೂ. ಮೊತ್ತವು, ಪ್ರಸಕ್ತ ಆರ್ಥಿಕ ವರ್ಷದಲ್ಲಿ(Finacial Year) ಶಾಸಕಾಂಗ ಹೊಂದಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಬಹುದೇಂದು ಅಂದಾಜಿಸಲಾದ 1 ಲಕ್ಷ ಕೋಟಿ ರೂ.ಗಿಂತಲೂ (ಸೆಸ್ ಸಂಗ್ರಹದ ಆಧಾರದ ಮೇಲೆ) ಅಧಿಕ ಪರಿಹಾರ ಮೊತ್ತಕ್ಕೆ ಹೆಚ್ಚುವರಿಯಾಗಿ ಮಾಡಿದ ಪಾವತಿಯಾಗಿದೆ. 2021-22ನೇ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಮೊತ್ತವು ಒಟ್ಟು ₹2.59 ಲಕ್ಷ ಕೋಟಿ ರೂ. ಮೀರುವ ನಿರೀಕ್ಷೆಯಿದೆ.

ಸೆಪ್ಟೆಂಬರ್‌ನಲ್ಲಿ 1.17 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ!

ಎಲ್ಲಾ ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು(ಶಾಸಕಾಂಗ ಹೊಂದಿರುವ) ಸಮಾನಾಂತರ ಸಾಲ ಸೌಲಭ್ಯದ ಅಡಿಯಲ್ಲಿ ಪರಿಹಾರ ಕೊರತೆಯ ಧನಸಹಾಯದ ವ್ಯವಸ್ಥೆಗಳಿಗೆ ಸಮ್ಮತಿಸಿವೆ. ಕೋವಿಡ್-19 ಸಾಂಕ್ರಾಮಿಕದ  ಪರಿಣಾಮಕಾರಿ ನಿರ್ವಹಣೆಗಾಗಿ ಹಾಗೂ ಬಂಡವಾಳ ವೆಚ್ಚದ ಏರಿಕೆಯನ್ನು ನಿರ್ವಹಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಹಳ ಪ್ರಮುಖ ಪಾತ್ರವಹಿಸಬೇಕಾಗಿದೆ. ಈ ಪ್ರಯತ್ನದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡಲು ಹಣಕಾಸು ಸಚಿವಾಲಯವು 2021-22ನೇ ಹಣಕಾಸು ವರ್ಷದಲ್ಲಿ ಸಮಾನಾಂತರ ಸಾಲ ಸೌಲಭ್ಯದಡಿ 1,59,000 ಕೋಟಿ ರೂ. ನೆರವು ಬಿಡುಗಡೆಯನ್ನು ಅನುಮೋದಿಸಿದೆ.

ಈಗ ಬಿಡುಗಡೆ ಮಾಡಲಾಗುತ್ತಿರುವ 44,000 ಕೋಟಿ ರೂ. ಮೊತ್ತವನ್ನು ಭಾರತ ಸರಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಪಡೆದ 5.69% ಬಡ್ಡಿ ದರದ 5 ವರ್ಷಗಳ ಭದ್ರತಾ ಪತ್ರ ಆಧರಿತ ಸಾಲದಿಂದ ಎತ್ತುವಳಿ ಮಾಡಲಾಗಿದೆ. ಈ ಬಿಡುಗಡೆಯ ಕಾರಣದಿಂದಾಗಿ ಕೇಂದ್ರ ಸರಕಾರವು ಯಾವುದೇ ಹೆಚ್ಚುವರಿ ಮಾರುಕಟ್ಟೆ ಸಾಲವನ್ನು ಪಡೆಯುವ ಅಗತ್ಯ ಇರುವುದಿಲ್ಲ.

ಈ ಹಣದ ಬಿಡುಗಡೆಯಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಸಾರ್ವಜನಿಕ ವೆಚ್ಚವನ್ನು ನಿಭಾಯಿಸಲು, ಆರೋಗ್ಯ ಮೂಲಸೌಕರ್ಯ ಸುಧಾರಿಸಲು ಹಾಗೂ ಇತರೆ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕರ್ನಾಟಕ
5010.90 ಕೋಟಿ

ಆಂಧ್ರಪ್ರದೇಶ
905.59 ಕೋಟಿ

ಅಸ್ಸಾಂ
490.76 ಕೋಟಿ

ಬಿಹಾರ
1885.69ಕೋಟಿ

ಛತ್ತೀಸ್‌ಗಢ
1374.02 ಕೋಟಿ

ಗೋವಾ
234.28 ಕೋಟಿ

ಗುಜರಾತ್
3608.53 ಕೋಟಿ

ಹರಿಯಾಣ
2045.79 ಕೋಟಿ

ಹಿಮಾಚಲ ಪ್ರದೇಶ
745.95 ಕೋಟಿ

ಜಾರ್ಖಂಡ್
687.76 ಕೋಟಿ

ಕೇರಳ
2418.49 ಕೋಟಿ

ಮಧ್ಯ ಪ್ರದೇಶ 
1940.20 ಕೋಟಿ

ಮಹಾರಾಷ್ಟ್ರ 
3814.00 ಕೋಟಿ

ಮೇಘಾಲಯ
39.18 ಕೋಟಿ

ಒಡಿಶಾ
1779.45 ಕೋಟಿ

ಪಂಜಾಬ್ 
3357.48 ಕೋಟಿ

ರಾಜಸ್ಥಾನ ಕೋಟಿ
2011.42

ತಮಿಳುನಾಡು
2240.22 ಕೋಟಿ

ತೆಲಂಗಾಣ 
1264.78 ಕೋಟಿ

ತ್ರಿಪುರಾ  
111.34 ಕೋಟಿ

ಉತ್ತರ ಪ್ರದೇಶ 
2252.37 ಕೋಟಿ

ಉತ್ತರಾಖಂಡ
922.30 ಕೋಟಿ

ಪಶ್ಚಿಮ ಬಂಗಾಳ 
1778.16 ಕೋಟಿ

ದೆಹಲಿ ಕೇಂದ್ರಾಡಳಿತ ಪ್ರದೇಶ
1713.34  ಕೋಟಿ

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ
1064.44 ಕೋಟಿ

ಪುದುಚೇರಿ ಕೇಂದ್ರಾಡಳಿತ ಪ್ರದೇಶ
303.56 ಕೋಟಿ

click me!