ಜಾರ್ಖಂಡ್‌ ಆಯ್ತು ಈಗ ಉತ್ತರ ಪ್ರದೇಶ ಜಡ್ಜ್‌ ಹತ್ಯೆ ಯತ್ನ

By Kannadaprabha NewsFirst Published Jul 31, 2021, 9:18 AM IST
Highlights
  •  ಜಾರ್ಖಂಡ್‌ನಲ್ಲಿ ನ್ಯಾಯಾಧೀಶರೊಬ್ಬರಿಗೆ ಆಟೋ ಡಿಕ್ಕಿ ಹೊಡೆಸಿ ಹತ್ಯೆ ನಡೆದ ಬೆನ್ನಲ್ಲೇ ಮತ್ತೊಂದು ಕೃತ್ಯ
  • ಉತ್ತರಪ್ರದೇಶದಲ್ಲೂ ನ್ಯಾಯಾಧೀಶರ ಕಾರಿಗೆ ಹಲವು ಭಾರಿ ಮತ್ತೊಂದು ಕಾರು ಡಿಕ್ಕಿ
  • ಅದೃಷ್ಟವಶಾತ್‌ ಈ ಪ್ರಕರಣದಲ್ಲಿ ನ್ಯಾಯಾಧೀಶರು ಪಾರು

ಕೌಶಾಂಬಿ (ಉತ್ತರ ಪ್ರದೇಶ): ಜಾರ್ಖಂಡ್‌ನಲ್ಲಿ ನ್ಯಾಯಾಧೀಶರೊಬ್ಬರಿಗೆ ಆಟೋ ಡಿಕ್ಕಿ ಹೊಡೆಸಿ ಹತ್ಯೆ ನಡೆದ ಬೆನ್ನಲ್ಲೇ ಉತ್ತರಪ್ರದೇಶದಲ್ಲೂ ಅಂಥದ್ದೇ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್‌ ಈ ಪ್ರಕರಣದಲ್ಲಿ ನ್ಯಾಯಾಧೀಶರು ಪಾರಾಗಿದ್ದಾರೆ. ಆದರೆ ಅವರ ಅಂಗರಕ್ಷಕನಿಗೆ ಪೆಟ್ಟಾಗಿದ್ದು, ಕಾರಿಗೂ ಭಾರೀ ಹಾನಿಯಾಗಿದೆ.

ಈ ಕೃತ್ಯದ ಹಿಂದೆ ಹತ್ಯೆ ಯತ್ನದ ಸಂಚಿರಬಹುದು ಎಂದು ಸ್ವತಃ ನ್ಯಾಯಾಧೀಶರೇ ಶಂಕೆ ವ್ಯಕ್ತಪಡಿಸಿದ್ದು, ದೂರನ್ನು ಕೂಡಾ ನೀಡಿದ್ದಾರೆ. ಘಟನೆ ಸಂಬಂಧ ಅಪಘಾತ ನಡೆಸಿದ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಚಾಲಕನನ್ನು ಬಂಧಿಸಲಾಗಿದೆ.

Latest Videos

ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸ್ತಿದ್ದ ಜಡ್ಜ್ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ತಮ್ಮ ಪಾಲಿಗೆ ಕಂಟಕವಾಗಿರುವ ನ್ಯಾಯಾಧೀಶರ ಮೇಲಿನ ಈ ಎರಡು ಹಲ್ಲೆ ಪ್ರಕರಣಗಳು ದೇಶವ್ಯಾಪಿ ಭಾರೀ ಆತಂಕದ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಏನಾಯ್ತು?: ಫತೇಪುರ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಶೆನ್ಸ್‌ ನ್ಯಾಯಾಧೀಶ ಅಹಮದ್‌ ಖಾನ್‌ ಗುರುವಾರ ಕೌಶಾಂಬಿಯ ಕೋಖ್ರಾಜ್‌ ಪ್ರದೇಶದ ಛಕ್ವಾನ್‌ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಪಕ್ಕದಿಂದ ಕಾರೊಂದು ಬಂದು ಗುದ್ದಿದೆ. ನಂತರ ಹಲವು ಬಾರಿ ಹೀಗೆ ಗುದ್ದಿದ ಇನ್ನೋವಾ ಕಾರಿನ ಚಾಲಕ ಬಳಿಕ ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ನ್ಯಾಯಾಧೀಶರ ಅಂಗರಕ್ಷಕನಿಗೆ ಗಾಯಗಳಾಗಿದೆ.

ಬಳಿಕ ಘಟನೆ ಕುರಿತು ನ್ಯಾ.ಅಹಮದ್‌ ಖಾನ್‌ ಅವರು ಕೋಖ್ರಾಜ್‌ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನದ ದೂರು ದಾಖಲಿಸಿದ್ದಾರೆ. ಆಕ್ಸಿಡೆಂಟ್‌ ಮಾಡಿಸಿ ತಮ್ಮನ್ನು ಕೊಲೆ ಮಾಡಲು ಯಾರೋ ಯತ್ನಿಸುತ್ತಿದ್ದಾರೆ. ಇನೋವಾ ಕಾರಿನಿಂದ ಹಲವುಬಾರಿ ತಮ್ಮ ಕಾರಿಗೆ ಗುದ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬರೇಲಿಯಲ್ಲಿ ಯುವಕನೊಬ್ಬನ ಜಾಮೀನು ಅರ್ಜಿಯನ್ನು ನಿರಾಕರಿಸಿದ್ದಕ್ಕೆ ತಮಗೆ ಕೊಲೆ ಬೆದರಿಕೆ ಒಡ್ಡಲಾಗಿತ್ತು ಎಂದು ಅವರು ಹೇಳಿದ್ದಾರೆ.

click me!