ರೈಲು ಪ್ರಯಾಣಕ್ಕೆ ಮುನ್ನ ರೈಲ್ವೆ ಇಲಾಖೆ ರೂಲ್ಸ್ ಗಳನ್ನು ತಿಳಿದಿರಬೇಕು. ಇಲ್ಲ ಅಂದ್ರೆ ದಂಡ ತೆರಬೇಕಾಗುತ್ತದೆ. ಇಲ್ಲೊಬ್ಬ ವ್ಯಕ್ತಿಗೂ ಅದೇ ಸ್ಥಿತಿ ಬಂದಿದೆ. ಕೈನಲ್ಲಿ ಟಿಕೆಟ್ ಇದ್ರೂ ಆತ ಮಾಡಿದ ತಪ್ಪಿನಿಂದಾಗಿ ಶಿಕ್ಷೆಯಾಗಿದೆ.
ಟಿಕೆಟ್ (ticket) ಇಲ್ದೆ ರೈಲಿ (train) ನಲ್ಲಿ ಸಂಚಾರ ಮಾಡೋದು ಅಪರಾಧ. ಟಿಕೆಟ್ ನನ್ನ ಕೈನಲ್ಲಿದೆ ಅಂತ ಎಲ್ಲೋ ಕುಳಿತು ಪ್ರಯಾಣ (Travel) ಮಾಡೋದು ಕೂಡ ಅಪರಾಧವಾಗುತ್ತೆ. ಇಲ್ಲೊಬ್ಬ ವ್ಯಕ್ತಿ, ಹಾಗೋ ಹೀಗೋ ಟಿಕೆಟ್ ಪಡೆದಿದ್ದಾನೆ. ಟಿಕೆಟ್ ಕೈಗೆ ಸೇರ್ತಿದ್ದಂತೆ ಉಸ್ಸಪ್ಪ ಅಂತ ಉಸಿರುಬಿಟ್ಟವನಿಗೆ ರಾತ್ರಿಯಾಗಿದ್ದು ಗೊತ್ತಾಗಿದೆ. ನಿದ್ರೆ ಮಾಡ್ಬೇಕಲ್ಲ, ಸೀಟ್ ಎಲ್ಲಿ ಖಾಲಿ ಇದೆ ಅಂತ ಹುಡುಕ್ತಾ ಬಂದಿದ್ದಾನೆ. ಒಂದ್ಕಡೆ ಅಂತೂ ಸೀಟ್ ಸಿಕ್ಕಿದೆ. ಖುಷಿಯಲ್ಲಿ ಸೀಟ್ ಮೇಲೆ ಮಲಗಿ ನಿದ್ರೆ ಹೋಗಿದ್ದಾನೆ.
ಇದು ಅವನ ಕಡೆಯಿಂದ ಸುಖಾಂತ್ಯವಾದ್ರೂ ಟಿಸಿ ಬಂದ್ಮೇಲೆ ಪ್ರಕರಣ ಬೇರೆ ತಿರುವು ಪಡೆದಿದೆ. ಗಾಢ ನಿದ್ರೆಯಲ್ಲಿದವನನ್ನು ಟಿಸಿ ಎಬ್ಬಿಸಿದಾಗ, ಟಿಕೆಟ್ ತೋರಿಸಿ ಮಲಗುವ ಪ್ರಯತ್ನ ಮಾಡಿದ್ದಾನೆ ವ್ಯಕ್ತಿ. ಆದ್ರೆ ಟಿಸಿ ಬಿಡಲಿಲ್ಲ. ದಂಡ ನೀಡುವಂತೆ ಸೂಚನೆ ನೀಡಿದ್ದಾರೆ. ಕೈನಲ್ಲಿ ಟಿಕೆಟ್ ಇದ್ರೂ ದಂಡ ಯಾಕೆ ನೀಡ್ಬೇಕು ಎಂಬುದು ಅವನ ವಾದ. ಸ್ವಲ್ಪ ನಿನ್ನ ಸುತ್ತಮುತ್ತ ನೋಡಪ್ಪ ಅಂತ ಟಿಟಿ (TT) ಹೇಳಿದಾಗ್ಲೇ ಆತನ ಮುಖದಲ್ಲಿ ಬೆವರು ಬಂದಿದ್ದು. ಕತ್ತಲೆಯಲ್ಲಿ ತಾನು ಬಂದ ಬೋಗಿ ಯಾವುದು ಅನ್ನೋದನ್ನೇ ಆತ ನೋಡಿರಲಿಲ್ಲ. ನಿದ್ರೆ ಗುಂಗಿನಲ್ಲಿ ಮಹಿಳಾ ಬೋಗಿ ಸೇರಿದ್ದ ವ್ಯಕ್ತಿ, ಸೀಟ್ ಕಾಣ್ತಿದ್ದಂತೆ ಅಲ್ಲಿಯೇ ನಿದ್ರೆ ಮಾಡಿದ್ದ.
undefined
ರೈಲುಗಳು ಗಂಟೆಗಟ್ಟಲೇ ನಿಂತರೂ ಇಂಜಿನ್ ಯಾಕೆ ಆಫ್ ಮಾಡಲ್ಲ?
ರಾತ್ರಿಯಾಗಿತ್ತು, ಮಹಿಳಾ ಬೋಗಿಯ ಬೋರ್ಡ್ ಕಾಣಲಿಲ್ಲ. ನನ್ನನ್ನು ಬಿಟ್ಬಿಡಿ ಸರ್, ತಪ್ಪಾಯ್ತು ಅಂತ ಗೋಗರೆದಿದ್ದಾನೆ. ಆದ್ರೆ ಟಿಟಿ ದಂಡ ವಸೂಲಿ ಮಾಡಿ, ಆತನನ್ನು ಬಿಟ್ಟಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಉತ್ತರ ಮಧ್ಯ ರೈಲ್ವೆಯ ಝಾನ್ಸಿ ವಿಭಾಗದಲ್ಲಿ ಬರುವ ಗ್ವಾಲಿಯರ್ ನಿಲ್ದಾಣದ ಬಳಿ.
ಗ್ವಾಲಿಯರ್ ನಿಲ್ದಾಣದ ಮೂಲಕ ಹಾದು ಹೋಗುವ ರೈಲುಗಳಲ್ಲಿ, ಟಿಕೆಟ್ ಇಲ್ಲದೆ ಪ್ರಯಾಣಿಸುವವರ, ತಪ್ಪು ಬೋಗಿಯಲ್ಲಿ ಕುಳಿತು ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ರೈಲ್ವೆ ಇಲಾಖೆ ಕಠಿಣ ಕ್ರಮಕೈಗೊಂಡಿದೆ. ಪ್ರತಿಯೊಬ್ಬ ಪ್ರಯಾಣಿಕರ ಟಿಕೆಟ್ ಪರಿಶೀಲನೆಯನ್ನು ಕಡ್ಡಾಯ ಮಾಡಿದೆ. ಈ ಅಭಿಯಾನದಲ್ಲಿ, ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸುವವರು, ಒಪ್ಪಿಗೆ ಇಲ್ಲದೆ ಲಗೇಜ್ ಕೊಂಡೊಯ್ಯುವವರು, ರೈಲನ್ನು ಕೊಳಕು ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗ್ತಿದೆ. ಇಂಥ ಪ್ರಯಾಣಿಕರಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗ್ತಿದೆ.
ವಿಶೇಷ ಅಭಿಯಾನದಲ್ಲಿ ಒಟ್ಟು 127 ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು ಎಂಬುದು ಪತ್ತೆಯಾಗಿದೆ. ಈ ಪ್ರಯಾಣಿಕರಿಂದ ಒಟ್ಟೂ 72,345 ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಅಭಿಯಾನದ ವೇಳೆ ಮಹಿಳಾ ಕೋಚ್ ಕೂಡ ಪರಿಶೀಲಿಸಲಾಗಿದೆ. ಈ ವೇಳೆ ಮಹಿಳೆಯರಿಗೆ ಮೀಸಲಾಗಿದ್ದ ಸೀಟ್ ನಲ್ಲಿ ಈ ವ್ಯಕ್ತಿ ಮಲಗಿರೋದು ಪತ್ತೆಯಾಗಿದೆ. ರಾತ್ರಿಯಿಡಿ ಸರಿಯಾಗಿ ನಿದ್ರೆ ಇರಲಿಲ್ಲ. ಟಿಕೆಟ್ ಸಿಕ್ಕಿದ್ಮೇಲೆ ಸೀಟ್ ಖಾಲಿ ಇರ್ಲಿಲ್ಲ. ಈ ಬೋಗಿ ಖಾಲಿ ಕಂಡಿತು. ಹಾಗಾಗಿ ಬಂದು ಮಲಗಿದೆ ಎಂದು ಪ್ರಯಾಣಿಕ ಎಷ್ಟೇ ಮನವಿ ಮಾಡಿದ್ರೂ ಬಿಡದ ಟಿಟಿ ದಂಡವಿಧಿಸಿದ್ದಾರೆ.
ಭಾರತೀಯ ರೈಲ್ವೆ ಸೂಪರ್ ಆ್ಯಪ್, ಒಂದರಲ್ಲಿಯೇ ಪ್ರಯಾಣಿಕರಿಗೆ ಸಿಗುತ್ತೆ ಎಲ್ಲಾ ಸೇವೆ
ಮಹಿಳಾ ಕೋಚ್ ವಿಶೇಷತೆ : ಒಂಟಿಯಾಗಿ ಇಲ್ಲವೆ ಮಕ್ಕಳ ಜೊತೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ, ಮಹಿಳೆಯರಿಗಾಗಿ ಪ್ರತ್ಯೇಕ ಕೋಚ್ ವ್ಯವಸ್ಥೆ ನೀಡಿದೆ. ಈ ಕೋಚ್ ಗೆ ಪುರುಷರು ಪ್ರವೇಶ ಮಾಡುವಂತಿಲ್ಲ. ಯಾವುದೇ ವ್ಯಕ್ತಿ ಈ ಕೋಚ್ ನಲ್ಲಿ ಕಂಡು ಬಂದ್ರೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಪುರುಷ ಪ್ರಯಾಣಿಕರಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಅವರು ದಂಡ ಪಾವತಿಸದೆ ಹೋದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.