ಬೆಳಗ್ಗೆ ಬಿಜೆಪಿಗೆ ವೋಟು ಕೇಳಿ ಮಧ್ಯಾಹ್ನ ಕಾಂಗ್ರೆಸ್ ಸೇರಿದ ಮಾಜಿ ಸಂಸದ

By Anusha Kb  |  First Published Oct 4, 2024, 3:39 PM IST

ಮಾಜಿ ಸಂಸದ ಅಶೋಕ್ ತನ್ವರ್ ಬೆಳಗ್ಗೆ ಬಿಜೆಪಿಗೆ ಬೆಂಬಲ ಸೂಚಿಸಿ, ಮಧ್ಯಾಹ್ನ ಕಾಂಗ್ರೆಸ್ ಸೇರಿದ್ದಾರೆ. ಜನವರಿಯಲ್ಲಿ ಬಿಜೆಪಿ ಸೇರಿದ್ದ ಅವರು, ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ನಿನ್ನೆ ರಾಹುಲ್ ಗಾಂಧಿ ಸಮಾವೇಶದಲ್ಲಿ ಕಾಂಗ್ರೆಸ್‌ಗೆ ಮರಳಿದ್ದಾರೆ.


ಚಂಡೀಗಡ: ಬೆಳಗ್ಗೆ ಬಿಜೆಪಿಗೆ ಮತ ನೀಡುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮನವಿ ಮಾಡಿದ ಮಾಜಿ ಸಂಸದರೊಬ್ಬರು ಮಧ್ಯಾಹ್ನದ ವೇಳೆಗಾಗಲೇ ಕಾಂಗ್ರೆಸ್‌ಗೆ ಸೇರಿದ ವಿಚಿತ್ರ ಘಟನೆ  ಚಂಡೀಗಢದಲ್ಲಿ ನಡೆದಿದೆ. ಮಾಜಿ ಲೋಕಸಭಾ ಸಂಸದ ಅಶೋಕ್ ತನ್ವರ್ ಅವರೇ ಬಿಜೆಪಿಯಿಂದ ಮತ್ತೆ ಕಾಂಗ್ರೆಸ್ ಸೇರಿದ ಮಾಜಿ ಸಂಸದ ಇವರು ಜನವರಿಯಲ್ಲಿ ಬಿಜೆಪಿ ಸೇರಿದ್ದರು. ಅಲ್ಲದೇ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದಲೇ ಸ್ಪರ್ಧಿಸಿದರು. ಆದರೆ ಅವರಿಗೆ ಗೆಲ್ಲಲ್ಲು ಸಾಧ್ಯವಾಗಲಿಲ್ಲ. ಆದರೆ ನಿನ್ನೆ ಅವರು ಹರ್ಯಾಣದ ಮಹೇಂದ್ರಗರ್‌ನಲ್ಲಿ ನಡೆದ ರಾಹುಲ್ ಗಾಂಧಿಯವರ ಸಮಾವೇಶದಲ್ಲಿ ಮತ್ತೆ ಕಾಂಗ್ರೆಸ್ ಸೇರಿದ್ದಾರೆ.

ಸಿರ್ಸಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದ ಸಿರ್ಸಾ ಅವರು 2014ರಿಂದ 2019ರವರೆಗೆ ಹರ್ಯಾಣ ಕಾಂಗ್ರೆಸ್‌ ಮುಖ್ಯಸ್ಥರಾಗಿದ್ದರು. 2021ರಲ್ಲಿ ಅವರು ತೃಣಮೂಲ ಕಾಂಗ್ರೆಸ್‌ ಸೇರಿ ಮರು ವರ್ಷವೇ ಎಎಪಿ ಸೇರಿದ್ದರು. ಆದರೆ ಲೋಕಸಭಾ ಚುನಾವಣೆಗೂ ಮೊದಲು ಎಎಪಿ ತೊರೆದು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಎಎಪಿಯ ನಿರ್ಧಾರ ಖಂಡಿಸಿ ಅವರು ಎಎಪಿಯಿಂದ ಹೊರಗೆ ಬಂದಿದ್ದರು. ನಂತರ ಬಿಜೆಪಿಯಿಂದ ಲೋಕಸಭಾ ಚುನಾವಣೆಗೂ ಸಿರ್ಸಾದಿಂದ ಸ್ಪರ್ಧೆ ಮಾಡಿದ ಅಶೋಕ್ ತನ್ವರ್‌ ಕಾಂಗ್ರೆಸ್‌ನ ಕುಮಾರಿ ಸೆಲ್ಜಾ ಅವರ ವಿರುದ್ಧ ಸೋಲು ಕಂಡರು.

Tap to resize

Latest Videos

undefined

ಹರ್ಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದಲೂ ಉಚಿತ ಗ್ಯಾರಂಟಿ..!

ಕಾಂಗ್ರೆಸ್ ಯಾವಾಗಲೂ ಸಮಾಜದ ತುಳಿತಕ್ಕೊಳಗಾದ ಮತ್ತು ವಂಚಿತ ವರ್ಗಗಳ ಪರವಾಗಿ ಧ್ವನಿ ಎತ್ತುತ್ತದೆ. ನಮ್ಮ ಹೋರಾಟ ಮತ್ತು ಸಮರ್ಪಣಾ ಮನೋಭಾವದಿಂದ ಪ್ರಭಾವಿತರಾಗಿ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಂಸದ, ಬಿಜೆಪಿಯ ಪ್ರಚಾರ ಸಮಿತಿಯ ಸದಸ್ಯ ಮತ್ತು ಸ್ಟಾರ್ ಪ್ರಚಾರಕ ಅಶೋಕ್ ತನ್ವಾರ್ ಅವರು ಕಾಂಗ್ರೆಸ್ ಸೇರಿದರು ಎಂದು ಕಾಂಗ್ರೆಸ್ ತನ್ನ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ.

ಈ ಅಶೋಕ್ ತನ್ವರ್ ಅವರು ಜವಾಹರ್‌ಲಾಲ್ ನೆಹರೂ ವಿವಿಯಿಂದ ಪಿಹೆಚ್‌ಡಿ ಡಿಗ್ರಿ ಹಾಗೂ ಎಂಫಿಲ್‌ ಕೂಡ ಮಾಡಿದ್ದಾರೆ. ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾದ ನ್ಯಾಷನಲ್ ಸ್ಟುಡೆಂಟ್ ಯೂನಿಯನ್ ಆಫ್ ಇಂಡಿಯಾದಿಂದ ಅವರು ತಮ್ಮ ರಾಜಕೀಯ ಜರ್ನಿಯನ್ನು ಆರಂಭಿಸಿದ್ದರು. ಹಾಗೆಯೇ ಸ್ಟುಡೆಂಟ್ ಆರ್ಗನೈಜೇಷನ್‌ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಯುವ ಕಾಂಗ್ರೆಸ್‌ನ ನೇತೃತ್ವವನ್ನು ವಹಿಸಿದ್ದರು. ಹೀಗೆ ಪ್ರಮುಖ ರಾಜಕೀಯ ಪ್ರಯಾಣದ ಆರಂಭಕ್ಕೂ ಮೊದಲು ಕಾಂಗ್ರೆಸ್‌ನಲ್ಲಿ ತಳಮಟ್ಟದಿಂದ ಕೆಲಸ ಮಾಡಿದ್ದರು. 

ವಿನೇಶ್ ಪೋಗಾಟ್, ಭಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ: ಹರ್ಯಾಣ ವಿಧಾನಸಭೆಗೆ ಸ್ಪರ್ಧೆ

ಆದರೆ ವಿಚಿತ್ರ ಏನೆಂದರೆ ನಿನ್ನೆ ಬೆಳಗ್ಗೆ ಹರ್ಯಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಅವರು ಟ್ವಿಟ್ ಮಾಡಿದ್ದರು.  ಆದರೆ ಇದಾಗಿ ಒಂದು ಗಂಟೆಯ ನಂತರ ಅವರು ಕಾಂಗ್ರೆಸ್‌ನ ಸಮಾವೇಶದಲ್ಲಿ ರಾಹುಲ್ ಗಾಂಧಿ ಜೊತೆ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ನಿರೂಪಕರು ಅವರು ಮರಳಿ ಮನೆಗೆ ಬಂದರು ಎಂದು ಘೋಷಣೆ ಮಾಡಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಅವರ ಈ ಬಿಜೆಪಿಯ ಬೆಂಬಲಿಸಿದ ಟ್ವಿಟ್‌ ಡಿಲೀಟ್ ಆಗಿದೆ. 

ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ಕಾವೇರಿದೆ. ನಾಳೆ ಹರ್ಯಾಣದಲ್ಲಿ 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಆದರೆ ಈ ಚುನಾವಣೆಯ ಪ್ರಚಾರ ಅಂತ್ಯಗೊಂಡ ದಿನವೇ ಮೊದಲು ಅಶೋಕ್ ತನ್ವರ್ ಕಾಂಗ್ರೆಸ್ ಸೇರಿದ್ದು, ಸಂಚಲನ ಸೃಷ್ಟಿಸಿದೆ. ಇಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಲು ಹರಸಾಹಸ ಮಾಡುತ್ತಿದ್ದರೆ, ಅತ್ತ ಬಿಜೆಪಿ ಮತ್ತೆ ಮೂರನೇ ಬಾರಿ ಅಧಿಕಾರಕ್ಕೇರಲು ಯತ್ನಿಸುತ್ತಿದೆ. 

कांग्रेस ने लगातार शोषितों, वंचितों के हक़ की आवाज़ उठाई है और संविधान की रक्षा के लिए पूरी ईमानदारी से लड़ाई लड़ी है।

हमारे इस संघर्ष और समर्पण से प्रभावित होकर आज BJP के वरिष्ठ नेता, पूर्व सांसद, हरियाणा में BJP की कैंपेन कमेटी के सदस्य और स्टार प्रचारक श्री अशोक तंवर… pic.twitter.com/DynuJEleSE

— Congress (@INCIndia)

न्याय और सम्मान के संगठन भारतीय राष्ट्रीय कांग्रेस में आपका स्वागत है जी। pic.twitter.com/969UoZK5nw

— Haryana Congress (@INCHaryana)

 

click me!