ಕೇಕ್ ಪ್ರಿಯರಿಗೆ ಬ್ಯಾಡ್‌ನ್ಯೂಸ್‌: ಬೆಂಗಳೂರಿನ ಬೇಕರಿಗಳ ಕೇಕ್‌ಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ

By Anusha KbFirst Published Oct 4, 2024, 4:39 PM IST
Highlights

ಬೆಂಗಳೂರಿನ ಬೇಕರಿಗಳಲ್ಲಿ ತಯರಾಗುವ  ಕೇಕ್‌ಗಳಲ್ಲಿ  ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಿವೆ ಎಂಬ ವರದಿಯೊಂದು ಬಂದಿದ್ದು, ಈ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರ ಈ ಬಗ್ಗೆ ಜನರಿಗೆ ಹಾಗೂ ಬೇಕರಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ಮುಂದಿನ ಕ್ರಮಕ್ಕೆ ಮುಂದಾಗಿದೆ.

ಈಗ ಯಾವುದೇ ಖುಷಿಯ ಕ್ಷಣವಿರಲಿ ಕೇಕ್ ಕಟ್ಟಿಂಗ್ ಮಾಡೋದು ಒಂದು ಟ್ರೆಂಡ್ ಅದು ಬರ್ತ್‌ಡೇ ಆಗಲಿ, ವಿವಾಹ ವಾರ್ಷಿಕೋತ್ಸವವೇ ಆಗಲಿ, ಎಂಗೇಜ್‌ಮೆಂಟ್, ಮದುವೆ ಎಲ್ಲದಕ್ಕೂ ಕೇಕ್ ಬೇಕೆ ಬೇಕು. ಮಕ್ಕಳು ದೊಡ್ಡವರು, ಮುದುಕರು ಎನ್ನದೇ ಎಲ್ಲರೂ ಇದನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಆದರೆ ಈಗ ಈ ಕೇಕ್‌ಗಳ ಬಗ್ಗೆ ಬೆಚ್ಚಿ ಬೀಳಿಸುವ ಅಂಶವೊಂದು ಬೆಳಕಿಗೆ ಬಂದಿದೆ. ಬೇಕರಿಗಳಲ್ಲಿ ತಯರಾಗುವ ಈ ಕೇಕ್‌ಗಳಲ್ಲಿ  ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಿವೆ ಎಂಬ ವರದಿಯೊಂದು ಬಂದಿದ್ದು, ಈ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರ ಈ ಬಗ್ಗೆ ಜನರಿಗೆ ಹಾಗೂ ಬೇಕರಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ಮುಂದಿನ ಕ್ರಮಕ್ಕೆ ಮುಂದಾಗಿದೆ.

ಇತ್ತಿಚೆಗಷ್ಟೇ ರಾಜ್ಯ ಸರ್ಕಾರ ಗೋಬಿ ಮಂಚೂರಿಗೆ ಹಾಕುವ ಬಣ್ಣ ಹಾಗೂ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ)ಯಲ್ಲಿ ಹಾನಿಕಾರ ಅಂಶಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳಿಗೆ ರಾಜ್ಯದಲ್ಲಿ ನಿಷೇಧ ಹೇರಿತ್ತು. ಆ ಘಟನೆ ಮಾಸುವ ಮೊದಲೇ ಈಗ ಬೇಕರಿಗಳಲ್ಲಿ ರೆಡಿ ಆಗುವ ಕೇಕ್‌ಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಿವೆ ಎಂಬ ವರದಿ ಈಗ ಬೆಂಗಳೂರು ಜನರನ್ನು ಬೆಚ್ಚಿ ಬೀಳಿಸಿದೆ. ಹಲವಾರು ಬೇಕರಿಗಳು ಮಾರಾಟ ಮಾಡುವ 12 ವಿವಿಧ ಕೇಕ್‌ಗಳ ಮಾದರಿಗಳಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ಹಾನಿಕಾರಕ ಬಣ್ಣಗಳು ಪತ್ತೆಯಾಗಿವೆ ಇದಾದ ನಂತರ ಕರ್ನಾಟಕ ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲಿ ಆಹಾರ ಸುರಕ್ಷತೆಯ ಕುರಿತು ತಿಂಗಳುಗಳ ಕಾಲ ನಡೆಯುತ್ತಿರುವ ಪರಿಶೀಲನೆಯ ನಂತರ ಈ ಆಘಾತಕಾರಿ ವಿಚಾರ ಬೆಳಕಿ ಬಂದಿದೆ. 

Latest Videos

ವಾರೆವ್ಹಾ..ಝೊಮೆಟೋದ 15ನೇ ವರ್ಷದ ಬರ್ತ್‌ಡೇಗೆ ಕೇಕ್‌ ಕಳುಹಿಸಿ ಶುಭಕೋರಿದ ಸ್ವಿಗ್ಗಿ

ಪರೀಕ್ಷೆ ಮಾಡಿದ ಕೆಲವು ಕೇಕ್ ಮಾದರಿಗಳಲ್ಲಿ ನಮಗೆ ಹಾನಿಕಾರಕ, ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳನ್ನು ಪತ್ತೆ ಹಚ್ಚಿದ್ದೇವೆ. ಈ ಅಂಶಗಳನ್ನು ನಾವು  '2006 ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಮತ್ತು 2011 ರಿಂದ ಸಂಬಂಧಿಸಿದ ಆಹಾರ ಸುರಕ್ಷತೆ ನಿಯಮಗಳು' ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗಾಗಿ ಬೇಕರಿಗಳು ತಕ್ಷಣವೇ ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. 

ಈ ಬಗ್ಗೆ ಮಾತನಾಡಿದ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಕೆ. ರಾಜ್ಯಾದ್ಯಂತ ಬೇಕರಿಗಳು ತಮ್ಮ ಉತ್ಪನ್ನಗಳಲ್ಲಿ ಅಸುರಕ್ಷಿತವಾದ ರಾಸಾಯನಿಕಗಳು ಮತ್ತು ಇತರ ಅಂಶಗಳನ್ನು ಸೇರ್ಪಡೆಗೊಳಿಸದಂತೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಬೇಕರಿಗಳಿಂದ ಸಂಗ್ರಹಿಸಲಾದ ಕೇಕ್‌ಗಳನ್ನು ಇತ್ತೀಚೆಗೆ ಪರೀಕ್ಷೆಗೊಳಪಡಿಸಿದಾಗ ಕೇಕ್‌ಗಳಲ್ಲಿ ಅಪಾಯಕಾರಿ ವಸ್ತುಗಳು ಇರುವುದು ದೃಢಪಟ್ಟಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

2,000 ರೂಪಾಯಿಗೆ ಚಿಲ್ಲರೆ ತನ್ನಿ ಎಂದು ಕೇಕ್‌ನಲ್ಲೇ ಬರೆದ ಸಿಬ್ಬಂದಿ, ಬರ್ತ್‌ಡೆ ಸಂಭ್ರಮಕ್ಕೆ ಬ್ರೇಕ್

ಈ ಬಗ್ಗೆ ಕರ್ನಾಟಕ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವೂ ಅಧಿಕೃತವಾಗಿ ಪ್ರಕಟಣೆಯೊಂದನ್ನು ಬಿಡುಗಡೆಗೊಳಿಸಿದ್ದು, ತಪಾಸಣೆ ಮಾಡಿದ 235 ಕೇಕ್‌ಗಳ ಮಾದರಿಗಳ್ಲಿ ಒಟ್ಟು 12 ಕೇಕ್‌ಗಳಲ್ಲಿ ಕೃತಕ ಬಣ್ಣಗಳಾದ ಅಲ್ಲುರ ರೆಡ್ (Allura Red), ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್‌ (Sunset Yellow FCF), ಪೊನ್ಸಿಯು 4 ಆರ್‌ (Ponceau 4R) ತರ್ತ್ರಜಿನ್ ( Tartrazine) ಹಾಗೂ ಕರ್ಮಿಯೊಸಿನ್ ( Carmoisine)ಇರುವುದು ಕಂಡು ಬಂದಿದೆ. ಇವೆಲ್ಲವೂ ನಿಗದಿತ ಸುರಕ್ಷತಾ ಮಿತಿಗಳನ್ನು ಮೀರಿದ ಪ್ರಮಾಣದಲ್ಲಿವೆ. ಕೆಂಪು ವೆಲ್ವೆಟ್ ಮತ್ತು ಬ್ಲಾಕ್ ಫಾರೆಸ್ಟ್‌ ಕೇಕ್‌ಗಳ ಆಕರ್ಷಣೆಯನ್ನು ಹೆಚ್ಚಿಸಲು ಈ ರಾಸಾಯನಿಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ, ಇದು ಕ್ಯಾನ್ಸರ್ ಮತ್ತು ಇತರ ಗಂಭೀರ ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು. ಈ ಸೇರ್ಪಡೆಗಳ ಅತಿಯಾದ ಬಳಕೆಯು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು ಎಂದು ಮಾಹಿತಿ ನೀಡಿದೆ. 

ಇತ್ತೀಚೆಗಷ್ಟೇ ರಾಜ್ಯದ ಆಹಾರ ಸುರಕ್ಷತೆ  ಹಾಗೂ ಗುಣಮಟ್ಟ ವಿಭಾಗವೂ  ಬೇಕರಿಯಲ್ಲಿ ರೆಡಿಯಾದ ಕೇಕ್‌ಗಳನ್ನು ತಪಾಸಣೆ ಮಾಡುವುದರ ಜತೆಗೆ ಇತರೆ ಆಹಾರ ಪದಾರ್ಥಗಳ ಪರೀಕ್ಷೆಯನ್ನೂ ನಡೆಸಿತ್ತು. ಆಗಸ್ಟ್‌ನಲ್ಲಿ 221 ಪನೀರ್ ಮಾದರಿಗಳು ಮತ್ತು 65 ಖೋಯಾ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿತ್ತು. ಪರತಿಯೊಂದು ಉತ್ಪನ್ನದಲ್ಲೂ ಕಳಪೆ ಮಟ್ಟ ಕಂಡು ಬಂದಿತ್ತು. ಹಾಗೆಯೇ ಸೆಪ್ಟೆಂಬರ್‌ನಲ್ಲಿ ರೈಲ್ವೆ ಆಹಾರ ಮಳಿಗೆಗಳು ಮತ್ತು ಪ್ರವಾಸಿ ಹಾಟ್ ಸ್ಪಾಟ್‌ಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸದ ಅನೇಕ ಪ್ರಕರಣಗಳು ಬಹಿರಂಗಗೊಂಡಿವೆ ಎಂದು ವರದಿಯಾಗಿದೆ. 

click me!