ಭಾರತದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಚರ್ಚೆ ಹುಟ್ಟುಹಾಕಿದ ವೃದ್ಧ ಜೋಡಿಯ ಫೋಟೋ

By Anusha KbFirst Published Oct 4, 2024, 6:09 PM IST
Highlights

ವೃದ್ಧ ದಂಪತಿಗಳು ತಮ್ಮ ಸುಧೀರ್ಘ ನ್ಯಾಯಾಂಗ ಹೋರಾಟದ ದೊಡ್ಡ ಕೇಸ್‌ ಫೈಲ್‌ಗಳನ್ನು ಕೈಯಲ್ಲಿ ಎತ್ತಿಕೊಂಡು ಹೋಗಲಾಗದೇ ಮರದ ಟ್ರೋಲಿಯಲ್ಲಿ ಇಟ್ಟು ಎಳೆದುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಭಾರತದ ನ್ಯಾಯ ವ್ಯವಸ್ಥೆಯ ನಿಧಾನಗತಿಯ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

ಭಾರತದ ನ್ಯಾಯ ವ್ಯವಸ್ಥೆಯ ನಿಧಾನಗತಿಯ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆಗಳಾಗಿವೆ. justice delayed is justice denied ಎಂಬ ಮಾತಿನಂತೆ ನ್ಯಾಯಾಂಗ ವ್ಯವಸ್ಥೆಯ ವಿಳಂಬದಿಂದಾಗಿ ಅನೇಕ ಭಾರಿ ಸಿಕ್ಕ ತೀರ್ಪುಗಳು ಕಾಲದ ವಿಳಂಬದಿಂದಾಗಿ ಅದು ನ್ಯಾಯ ಎನಿಸುವುದಿಲ್ಲ, ಹಣಕಾಸು ಭೂಮಿ ವ್ಯಾಜ್ಯ ಮುಂತಾದ ವಿಚಾರಗಳಲ್ಲಿ ಇದು ಅನೇಕರ ಅನುಭವಕ್ಕೂ ಬಂದಿರುತ್ತದೆ. ಹೀಗಾಗಿ ಬಹುತೇಕರು ದೊಡ್ಡ ಅನ್ಯಾಯವೇ ನಡೆದರು ನ್ಯಾಯಾಲಯದಲ್ಲಿ ಹೋರಾಡಿ ಹಣ ಸಮಯ ಎರಡನ್ನೂ ವ್ಯರ್ಥ ಮಾಡುವುದಕ್ಕಿಂತ ನ್ಯಾಯಾಲಯದ ಹೊರಗೆಯೇ ಸಂಧಾನ ಮಾಡಿಕೊಂಡು ಸುಮ್ಮನಾಗುತ್ತಾರೆ. ಹೀಗಿರುವಾಗ ವೃದ್ಧ ಜೋಡಿಯ ಈ ಫೋಟೋವೊಂದು ನ್ಯಾಯಾಂಗ ವ್ಯವಸ್ಥೆಯ ವಿಳಂಬ ಕಾರ್ಯನೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಭಾರತೀಯ ನ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡುವಂತೆ ಮಾಡಿದೆ. 

ಮಹೇಶ್ವರಿ ಪೆರಿ( @maheshperi) ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದೀರ್ಘವಾದ ಬರಹವೊಂದನ್ನು ಬರೆದುಕೊಂಡಿದ್ದು, ಈ ಪೋಸ್ಟ್ ಈಗ ಸಖತ್‌ ವೈರಲ್ ಆಗಿದೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಅನುಭವಗಳನ್ನು ಹಂಚಿಕೊಂಡಿದ್ದಾರೆ. ವೈರಲ್ ಆದ ಪೋಸ್ಟ್‌ನಲ್ಲಿ ವೃದ್ಧ ದಂಪತಿ ತಮ್ಮ ಸುಧೀರ್ಘ ನ್ಯಾಯಾಂಗ ಹೋರಾಟದ ದೊಡ್ಡ ಕೇಸ್‌ ಫೈಲ್‌ಗಳನ್ನು ಕೈಯಲ್ಲಿ ಎತ್ತಿಕೊಂಡು ಹೋಗಲಾಗದೇ ಮರದ ಟ್ರೋಲಿಯಲ್ಲಿ ಇಟ್ಟು ಎಳೆದುಕೊಂಡು ಹೋಗುತ್ತಿರುವ ದೃಶ್ಯವಿದೆ.

Latest Videos

ಬ್ರಿಟಿಷ್ ಕಾಲದ 3 ಕ್ರಿಮಿನಲ್ ಕಾನೂನು ನೇಪಥ್ಯಕ್ಕೆ..! ಹೊಸ ಕಾನೂನು ವ್ಯವಸ್ಥೆಯಲ್ಲಿ ಏನೆಲ್ಲ ಬದಲಾಗಲಿದೆ..?

ಈ ಫೋಟೋ ಪೋಸ್ಟ್‌ ಮಾಡಿ ಅವರು ಹೀಗೆ ಬರೆದುಕೊಂಡಿದ್ದಾರೆ. ಅವರ ಬರಹದ ಸಾರಾಂಶ ಇಲ್ಲಿದೆ. ಕೆಲ ವರ್ಷಗಳ ಹಿಂದೆ ನಾನು ಒಂದು ಕೋರ್ಟ್‌ ವಿಚಾರಣೆಯಲ್ಲಿ ಒತ್ತಾಯಪೂರ್ವಕವಾಗಿ ಭಾಗಿಯಾಗಬೇಕಾಯ್ತು. ಈ ವೇಳೆ ಈ ವೃದ್ಧ ದಂಪತಿಗಳು ಹೈಕೋರ್ಟ್‌ನಲ್ಲಿ ಸುತ್ತಾಡುವುದನ್ನು ನಾನು ನೋಡಿದೆ. ಅವರು ಅನೇಕ ವರ್ಷಗಳ ತಮ್ಮ ಕಾನೂನು ಹೋರಾಟದ ಕಡತಗಳನ್ನು ಮತ್ತು ಕಾಗದ ಪತ್ರಗಳನ್ನು ಮರದ ಟ್ರಾಲಿಯಲ್ಲಿಟ್ಟು ಎಳೆದುಕೊಂಡು ಹೋಗುತ್ತಿದ್ದರು. ಆ ಫೈಲ್‌ಗಳ ಭಾರವೂ ಅವರ ಮನವಿ, ನ್ಯಾಯ ಭಿಕ್ಷೆ ಹಾಗೂ ನ್ಯಾಯಕ್ಕಾಗಿ ಅವರು ಕಳೆದ ವರ್ಷಗಳನ್ನು ಪ್ರತಿನಿಧಿಸುತ್ತದೆ.  ಅವರು ವರ್ಷದಿಂದ ವರ್ಷಕ್ಕೆ ಮತ್ತೊಂದು ಹೋರಾಟ, ಮತ್ತೊಂದು ದಿನಾಂಕ, ಮತ್ತೊಂದು ಮುಂದೂಡಿಕೆ ಎಂದು ಹೋರಾಡುತ್ತ ಬಂದಿರುವುದರಿಂದ ಅವರು ಒಬ್ಬರ ಕೈಯನ್ನು ಮತ್ತೊಬ್ಬರು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ನಮ್ಮ ನ್ಯಾಯ ವ್ಯವಸ್ಥೆಯ ಕಾರ್ಯವೈಖರಿಗೆ ಇದೊಂದು ಉತ್ತಮ ನಿದರ್ಶನವಾಗಿದೆ.

ಕ್ರಿಮಿನಲ್‌ ನ್ಯಾಯ ವ್ಯವಸ್ಥೆಗೆ ಹೊಸ ದಿಕ್ಕು: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಯಶಸ್ವಿ ವೃತ್ತಿ ಜೀವನದ ಜೊತೆ ಸಾಮಾಜಿಕ ಬದಲಾವಣೆ ತರಬೇಕು ಎಂದು ಬಯಸುವ ವಿದ್ಯಾರ್ಥಿಗಳಿಗೆ ಕಾನೂನು ಕೋರ್ಸ್‌ ಅತ್ಯುತ್ತಮ ಆಯ್ಕೆಯಾಗಿದೆ. ಕಾನೂನನ್ನು ಆಯ್ಕೆ ಮಾಡುವ ಮೂಲಕ ನೀವು ಇಂತಹ ವೃದ್ಧ ಜೋಡಿಯ ಧ್ವನಿಯೂ ಆಗಬಹುದು. ಎಲ್ಲಿ ಅನ್ಯಾಯದ ಆಡಳಿತವಿರುವುದೋ ಅಲ್ಲಿ ನ್ಯಾಯಕ್ಕಾಗಿ ಹೋರಾಡಬಹುದು. ವಕೀಲರಾಗಿ, ನೀವು ಕೇವಲ ಕಾನೂನುಗಳನ್ನು ಬದಲಾಯಿಸುವುದಿಲ್ಲ, ನೀವು ಅನೇಕರ ಜೀವನವನ್ನು ಬದಲಾಯಿಸುತ್ತೀರಿ. ಸಮಾಜದ ಅಂಚಿನಲ್ಲಿರುವರ ನಡುವೆ ನಿಲ್ಲುತ್ತಿರಿ  ಹಾಗೆಯೇ ಸಮಾಜದ ದುರ್ಬಲರನ್ನು ರಕ್ಷಿಸುತ್ತೀರಿ  ಹಾಗೂ ಸಮಾಜದ ಯಥಾಸ್ಥಿತಿಗೆ ಸವಾಲು ಹಾಕುತ್ತೀರಿ. ಕಾನೂನು ಕೇವಲ ವೃತ್ತಿಯಲ್ಲ, ಇದು ನ್ಯಾಯೋಚಿತವಾದ ಜಗತ್ತನ್ನು ರೂಪಿಸುವ ಧ್ಯೇಯವಾಗಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ  ಅವರ ಹಿನ್ನೆಲೆಯ ಹೊರತಾಗಿ ನ್ಯಾಯದ ಅವಕಾಶವನ್ನು ಪಡೆಯಬಹುದಾಗಿದೆ. ಅಲ್ಲದೇ ನಿಮ್ಮ ಕೆಲಸಗಳು ಇಡೀ ಕುಟುಂಬ, ಸಮಾಜದ ಮೇಲೆ ಪರಿಣಾಮ ಬಿರುತ್ತದೆ. ಹಾಗೂ ಸಮಾನತೆಗಾಗಿ ಮಾನವೀಯತೆಯ ಹೋರಾಟದ ಮೇಲೆ ಅಳಿಸಲಾಗದ ಗುರುತು ಹಾಕಲು ಕಾನೂನು ನಿಮಗೆ ಶಕ್ತಿ ನೀಡುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. 

ಈ ಟ್ವಿಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ನ್ಯಾಯ ವಿಳಂಬವಾಗುವುದರಿಂದ ಅದು ಅತೀ ದುಬಾರಿಯಾಗುತ್ತಿದೆ ಎಂದು ಒಬ್ಬರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆಯೇ ಕಾನೂನು ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದ ಬಗ್ಗೆಯೂ ಕೆಲವರು ಧ್ವನಿ ಎತ್ತಿದ್ದು, ಇಂದು ನ್ಯಾಯಾಧೀಶರು ವಕೀಲರು ಕೂಡ ಭ್ರಷ್ಟರಾಗಿದ್ದಾರೆ. ಈ ವೃದ್ಧ ಜೋಡಿಯ ಬಳಿ ಹಣವಿರದ ಕಾರಣ ಬಹುಶಃ ಅವರು ನ್ಯಾಯಕ್ಕಾಗಿ ಇಷ್ಟು ದೂರ ಅಲೆದಾಡುವಂತಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

A few years back, In one of the court hearings that I was forced to attend, We saw this old couple doing the rounds at a high court. They carried files and papers of many years. The weight of the files represents the years they spent pleading, begging and seeking justice. Over… pic.twitter.com/QNGTVMR9D0

— Maheshwer Peri (@maheshperi)

 

click me!