ಸ್ನಾನ ಮಾಡುವಾಗ ಅರಿಯದೆ ಆದ ತಪ್ಪಿನಿಂದ ಇಂಗ್ಲೆಂಡಿನ ಮೇರಿ ಮೇಸನ್ ಎಂಬಾಕೆ ಒಂದು ಕಣ್ಣನ್ನೇ ಕಳೆದುಕೊಳ್ಳುವ ಸಂದರ್ಭ ಎದುರಾಯಿತು. ಆಕೆಯ ಅನುಭವ ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರು ಬಹಳ ಎಚ್ಚರಿಕೆ ವಹಿಸಬೇಕು ಎನ್ನುವುದನ್ನು ಹೇಳುತ್ತದೆ.
ಅರಿಯದೇ ನಾವು ಮಾಡುವ ಎಡವಟ್ಟಿನಿಂದಾಗಿ ಏನೆಲ್ಲ ಸಮಸ್ಯೆ ಸೃಷ್ಟಿಯಾಗಬಹುದು ಎನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ. ಗೊತ್ತಿಲ್ಲದೆ ಆದ ಚಿಕ್ಕದೊಂದು ತಪ್ಪಿನಿಂದ ಈಕೆಯ ದೃಷ್ಟಿಯೇ ನಾಶವಾಗಿತ್ತು ಎಂದರೆ ಭಯವಾಗಬಹುದು. ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗ. ಇದರ ರಕ್ಷಣೆಗೆ ನಾವು ಸಾಕಷ್ಟು ಎಚ್ಚರಿಕೆ ವಹಿಸುತ್ತೇವೆ. ಆದರೂ ಚಿಕ್ಕದೊಂದು ತಪ್ಪಿನಿಂದ ಕಣ್ಣುಗಳ ದೃಷ್ಟಿಯೇ ಹೋಗಿಬಿಡಬಹುದು. ಮೇರಿ ಮೇಸನ್ ಎಂಬಾಕೆಯೂ ಅಂಥದ್ದೇ ಸನ್ನಿವೇಶ ಎದುರಾಗಿತ್ತು. ೫೪ ವರ್ಷದ ಮೇರಿ ಮೇಸನ್ ಎಂಬಾಕೆಗೆ ಯಾವುದೇ ತೊಂದರೆ ಇಲ್ಲದೆ ಇದ್ದಕ್ಕಿದ್ದ ಹಾಗೆ ಕಣ್ಣು ಕಾಣಿಸದಂತಾಯ್ತು. ವೈದ್ಯರ ಬಳಿ ತಪಾಸಣೆ ಮಾಡಿಸಿದರೆ ಸಾಮಾನ್ಯ ಅರಿವಿಗೆ ಬಾರದ ಕಾರಣವೊಂದು ತಿಳಿದುಬಂತು. ಇಂದಿನ ದಿನಗಳಲ್ಲಿ ಹಲವು ಕಾರಣಕ್ಕಾಗಿ ಸಾಕಷ್ಟು ಜನ ಕಣ್ಣುಗಳಿಗೆ ಲೆನ್ಸ್ ಬಳಕೆ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಒಂದು ದಿನದ ಲೆನ್ಸ್ ನಿಂದ ಹಿಡಿದು ಒಂದು ತಿಂಗಳು, ಒಂದು ವರ್ಷದವರೆಗಿನ ಅವಧಿ ಇರುವ ಲೆನ್ಸ್ ಗಳು ದೊರೆಯುತ್ತವೆ. ಮೇರಿ ಒಂದು ತಿಂಗಳ ಅವಧಿಯ ಲೆನ್ಸ್ ಅನ್ನೇ ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಳು. ಅದು ಹೇಳಿಕೇಳಿ ಇಂಗ್ಲೆಂಡ್, ಸ್ವಚ್ಛತೆಗೆ ಅತ್ಯಂತ ಪ್ರಾಧಾನ್ಯತೆ ಇರುವ ದೇಶ. ಆದರೂ ಆಕೆಯ ಅನುಭವ ಎಣಿಕೆಗೆ ನಿಲುಕದ್ದು.
ನೀರಿನಲ್ಲಿ (Water) ಕಣ್ಣಿಗೆ ಕಾಣದ ಅದೆಷ್ಟೋ ಬ್ಯಾಕ್ಟೀರಿಯಾಗಳು (Bacteria) ನೆಲೆಯಾಗಿರುತ್ತವೆ. ಕುಡಿಯುವ ನೀರಿಗಾದರೆ ನಾವು ಸಾಕಷ್ಟು ಎಚ್ಚರಿಕೆ ವಹಿಸುತ್ತೇವೆ. ಆದರೆ, ಸ್ನಾನ (Bath) ಮಾಡುವ ನೀರಿನ ಬಗ್ಗೆ ಅಷ್ಟು ಗಮನ ಹರಿಸುವುದಿಲ್ಲ. ಮೇಲ್ನೋಟಕ್ಕೆ ಸ್ವಚ್ಛವಾಗಿದ್ದರೆ ಸಾಕು ಎಂಬಂತೆ ನಮ್ಮ ಧೋರಣೆ ಇರುತ್ತದೆ. ಅದೇ ಮೇರಿಗೆ (Mary) ಸಮಸ್ಯೆ ತಂದೊಡ್ಡಿತು ಎಂದರೆ ತಪ್ಪಿಲ್ಲ. ಮೇರಿ ಮೇಸನ್ ಸ್ನಾನ ಮಾಡುವಾಗ ಸೂಕ್ಷ್ಮವಾದ ಕಣ್ಣಿನೊಳಗೆ (Eye) ಒಂದು ಜಾರಿಯ ಅಮೀಬಾ (Amoeba) ಪ್ರವೇಶ ಮಾಡಿತ್ತು. ಕಣ್ಣುಗಳನ್ನು ತೊಳೆದರೂ ಅಲ್ಲಿ ಲೆನ್ಸ್ (Lens) ಇದ್ದ ಕಾರಣದಿಂದ ಸರಿಯಾಗಿ ತೊಳೆದುಹೋಗಲಿಲ್ಲವೋ ಏನೋ. ಒಟ್ಟಿನಲ್ಲಿ ಈ ಅಮೀಬಾ ಲೆನ್ಸ್ ಮತ್ತು ಕಾರ್ನಿಯಾ ನಡುವೆ ಸಿಲುಕಿಕೊಂಡಿತು. ಅಲ್ಲಿಂದ ನಿಧಾನವಾಗಿ ಮೇರಿ ಅವರ ಕಣ್ಣುಗಳಿಗೆ ಸೋಂಕು (Infection) ಹರಡಲು ಆರಂಭವಾಯಿತು. ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಕೆಗೆ ಮಧ್ಯೆ ಮಧ್ಯೆ ಕಣ್ಣುಗಳಿಗೆ ಔಷಧ (Medicine) ಬಿಟ್ಟುಕೊಳ್ಳಲು ಸಾಧ್ಯವಾಗದೆ ಕೆಲಸ ಬಿಡಬೇಕಾಯಿತು. ಈ ಔಷಧ ಹಾಕಿಕೊಂಡಾಗಲೂ ತೀವ್ರವಾಗಿ ನೋವಾಗುತ್ತಿತ್ತು. ಆದರೂ ನಿಧಾನವಾಗಿ ಆಕೆಯ ದೃಷ್ಟಿ ಮಂದವಾಗಲು ಶುರುವಾಯಿತು. ಸೋಂಕು ಅದೆಷ್ಟು ತೀವ್ರವಾಗಿತ್ತು ಎಂದರೆ ಕೇವಲ ಒಂದು ತಿಂಗಳೊಳಗೆ ದೃಷ್ಟಿ (Eyesight) ನಾಶವಾಗಿತ್ತು. ಈ ಸೋಂಕಿನ ಬಗ್ಗೆ ತಿಳಿದ ಬಳಿಕ ಮೇರಿ ಅವರು ಸಾಕಷ್ಟು ವೈದ್ಯರನ್ನು ಸಂಪರ್ಕಿಸಿದರು. ಸಾಕಷ್ಟು ಔಷಧ ಸೇವನೆ ಬಳಿಕ, ಶಸ್ತ್ರಚಿಕಿತ್ಸೆಯನ್ನೂ ಪಡೆಯಬೇಕಾಯಿತು.
Eye Health Care: ಕಣ್ಣಿಗೆ ಮೆಚ್ಚುವಂಥ ಆಹಾರ ತಿನ್ನಿ, ದೃಷ್ಟಿದೋಷಕ್ಕೆ ಬೈ ಹೇಳಿ
ಮೇರಿಗೆ ಅದೃಷ್ಟವೂ ಕೈಕೊಟ್ಟಿತ್ತೋ ಏನೋ, ಮೂರು ಬಾರಿ ಕಾರ್ನಿಯಾ ಟ್ರಾನ್ಸ್ ಪ್ಲಾಂಟ್ (Transplant) ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕೊನೆಗೆ, ಸೋಂಕಿಗೆ ಒಳಗಾಗಿದ್ದ ಕಣ್ಣುಗಳನ್ನೇ ತೆಗೆಯಬೇಕಾಯಿತು. ಬಳಿಕ ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭಿಸಿದಳು. ಈಗ ಕೆಲಸವನ್ನೂ ಮಾಡುತ್ತಾಳೆ. ಒಂದೇ ಕಣ್ಣಿನಿಂದ ಜಗತ್ತನ್ನು ನೋಡುತ್ತಾಳೆ, ತನ್ನ ಕೆಲಸ ನಿಭಾಯಿಸಿಕೊಳ್ಳುತ್ತಾಳೆ. ಒಂದೇ ಕಣ್ಣಾದ್ದರಿಂದ ಆರಂಭದಲ್ಲಿ ಸಮಸ್ಯೆ ಎನಿಸುತ್ತಿದ್ದರೂ ಈಗ ಸುಧಾರಿಸಿಕೊಂಡಿದ್ದಾಳೆ.
undefined
ಕಣ್ಣಿನ ದೃಷ್ಟಿ ಮಂದ ಆಗ್ತಿದ್ಯಾ ? ಡೈಲೀ ಮಾಡೋ ಇಂಥಾ ತಪ್ಪೇ ಕಾರಣವಾಗಿರ್ಬೋದು
ಮೂರು ಬಾರಿ ಕಾರ್ನಿಯಾ ಟ್ರಾನ್ಸ್ ಪ್ಲಾಂಟ್
ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಬಹಳ ಎಚ್ಚರಿಕೆಯಿಂದ ಬಳಕೆ (Use) ಮಾಡಬೇಕು. ಲೆನ್ಸ್ ಇಟ್ಟುಕೊಂಡೇ ಸ್ನಾನ ಮಾಡುವ ಅಭ್ಯಾಸದಿಂದ (Habit) ದೂರವಿರಬೇಕು, ಒಮ್ಮೆ ಲೆನ್ಸ್ ಧರಿಸಿದ ಬಳಿಕ ಕೈಬೆರಳುಗಳನ್ನು ಕಣ್ಣುಗಳಿಗೆ ಸೋಕಿಸಬಾರದು ಎನ್ನುವುದು ಆಕೆಯ ಸಲಹೆ. “ಈಗ ನನ್ನ ಬದುಕು ಸರಿಯಾಗಿದೆ. ಕಣ್ಣಿಗೆ ಉಂಟಾಗಿದ್ದ ಒಂದು ಸೋಂಕು ನನ್ನ ಬದುಕನ್ನೇ ಬದಲಿಸಿಬಿಟ್ಟಿತು. ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಉತ್ಪಾದಿಸುವ ಕಂಪೆನಿಗಳು ಅವುಗಳ ಬಳಕೆ ಕುರಿತು ಗ್ರಾಹಕರಿಗೆ (Consumers) ಇನ್ನಷ್ಟು ಸರಿಯಾಗಿ ತಿಳಿವಳಿಕೆ ನೀಡಬೇಕುʼ ಎಂದು ಮೇರಿ ಹೇಳುತ್ತಾಳೆ.