ದೇಶಾದ್ಯಂತ ಸಾಲು ಸಾಲು ಹಬ್ಬಗಳ ಸಂಭ್ರಮ ಮನೆ ಮಾಡಿದೆ. ವರ ಮಹಾಲಕ್ಷ್ಮಿ, ಗಣೇಶ ಚತುರ್ಥಿ, ಕೃಷ್ಭಾಷ್ಟಮಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸಿದ್ದಾಯ್ತು. ಒಂಭತ್ತು ದಿನಗಳ ಕಾಲ ದೇವಿಯನ್ನು ಆರಾಧಿಸುವ ನವರಾತ್ರಿಯೂ ಮುಗಿಯಿತಿ. ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ. ಸಾಲು ಸಾಲು ಹಬ್ಬಗಳನ್ನು ಜನರು ಖುಷಿಯಿಂದ ಒಟ್ಟಿಗೆ ಸೇರಿ ಆಚರಿಸುತ್ತಿದ್ದಾರೆ. ಈ ಮಧ್ಯೆ ಮತ್ತೆ ಜನರು ಗುಂಪಾಗಿ ಸೇರುತ್ತಿರುವ ಕಾರಣ ಕೋವಿಡ್ ಸೋಂಕು ಹರಡುತ್ತಾ ಎಂಬ ಭೀತಿ ಎದುರಾಗಿದೆ.
ಭಾರತ ಅಂದ್ರೆ ಸಾಲು ಸಾಲು ಹಬ್ಬಗಳು ಬರುತ್ತಲೇ ಇರುತ್ತವೆ. ಜನರು ನೆರೆಮನೆಯವರು, ಸ್ನೇಹಿತರು, ಬಂಧು ಬಳಗದವರ ಜೊತೆ ಸೇರಿ ಹಬ್ಬವನ್ನು ಒಟ್ಟಾಗಿ ಆಚರಿಸಿ ಸಂಭ್ರಮಿಸುತ್ತಾರೆ. ಹಬ್ಬಗಳಲ್ಲಿ ಸ್ನೇಹಿತರು ಗುಂಪಾಗಿ ಸೇರುವುದು, ಜನರು ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು ಮತ್ತು ತಮ್ಮ ತಾಪಮಾನವನ್ನು ಪರೀಕ್ಷಿಸದೆ ಪರಸ್ಪರ ಹತ್ತಿರವಾಗಿ ನೃತ್ಯ ಮಾಡುವುದು ಸಾಮಾನ್ಯವಾಗಿದೆ. ಸಾಮಾಜಿಕ ಅಂತರವಂತೂ ಎಲ್ಲಿಯೂ ಇರುವುದಿರಲ್ಲ. ದಾಂಡಿಯಾ ನೈಟ್ಸ್‌ನಲ್ಲಿ ಅಥವಾ ದುರ್ಗಾ ಪೂಜೆಯ ಮಂಟಪಗಳು ಜನಸಂದಣಿಯಿಂದ ತುಂಬಿ ತುಳುಕುತ್ತಿರುತ್ತದೆ. ದೀಪಾವಳಿಯೂ ಸಮೀಪವಿರುವ ಕಾರಣ ಈ ಜನಸಂದಣಿ ಹೀಗೆ ಮುಂದುವರಿಯಲಿದೆ. ಹೀಗಾಗಿಯೇ ಹಬ್ಬಗಳ ನಂತರ ಕೋವಿಡ್-19 ಪ್ರಕರಣಗ ಉಲ್ಬಣವಾಗುತ್ತಾ ಅನ್ನೋ ಭೀತಿ ಎದುರಾಗಿದೆ. ಈ ಬಗ್ಗೆ ತಜ್ಞರು ಏನ್ ಹೇಳ್ತಾರೆ ತಿಳಿಯೋಣ,
ಮಾಸ್ಕ್, ಸಾಮಾಜಿಕ ಅಂತರ ಪಾಲಿಸದೆ ಹಬ್ಬಗಳ ಆಚರಣೆ
ಭಾರತದ ದೈನಂದಿನ ಕೋವಿಡ್ -19 ಪ್ರಕರಣಗಳು ಕ್ಷೀಣಿಸುತ್ತಿರಬಹುದು, ಆದರೆ ದಸರಾ ಮತ್ತು ದೀಪಾವಳಿ ಹಬ್ಬಗಳ Festival) ಮುಂದೆ ಹೊಸ ಉಲ್ಬಣವು ನಮಗೆ ಕಾಯುತ್ತಿದೆಯೇ ? ದೀಪಾವಳಿ ಮೇಳಗಳೊಂದಿಗೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯಿದೆ. ಭಾರತದ ಹೆಚ್ಚಿನ ರಾಜ್ಯಗಳು ಬಹುತೇಕ ಕೊರೋನಾ ವೈರಸ್ ಮುಕ್ತ ವಲಯವನ್ನು ಪ್ರವೇಶಿಸಿದ್ದರೂ, ನಿರ್ಲಕ್ಷ್ಯದಿಂದಾಗಿ ಮತ್ತೊಮ್ಮೆ ಸೋಂಕು (Virus) ಉಲ್ಬಣಗೊಳ್ಳುವ ಸಾಧ್ಯತೆಯನ್ನು ಕಡೆಗಣಿಸಲಾಗುವುದಿಲ್ಲ.
undefined
ಲಸಿಕೆ ಹಾಕಿಸಿಕೊಂಡ್ರೂ ವಾಯುಮಾಲಿನ್ಯದಿಂದ ಹೆಚ್ಚುತ್ತೆ ಕೋವಿಡ್ ಅಪಾಯ
ಕೋವಿಡ್ ಸೋಂಕು ಹರಡಬಾರದು ಎಂದಾದರೆ ಜನರು ಕೋವಿಡ್ ಗೈಡ್‌ಲೈನ್ಸ್ ಪಾಲಿಸಬೇಕು. ಆದರೆ ಜನರು ಹಬ್ಬದ ಹೆಸರಿನಲ್ಲಿ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಹಬ್ಬಗಳ ಮುನ್ನವೇ ಜನಸಂದಣಿ (Crowd)ಯಾಗದಂತೆ ಕಟ್ಟೆಚ್ಚರ ವಹಿಸುವಂತೆ ಕೆಲವು ರಾಜ್ಯ ಸರ್ಕಾರಗಳು ಅಧಿಕಾರಿಗಳಿಗೆ ಸೂಚಿಸಿದ್ದವು. ಹೀಗಿದ್ದೂ ಜನಸಂದಣಿಯ ಪ್ರಮಾಣ ಎಲ್ಲಿಯೂ ಕಡಿಮೆಯಾಗಿಲ್ಲ. ಹೀಗಿರುವಾಗ ನವದೆಹಲಿಯ ಶಾಲಿಮಾರ್ ಬಾಗ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಇಂಟರ್‌ನಲ್ ಮೆಡಿಸಿನ್ ನಿರ್ದೇಶಕ ಡಾ. ಸಂಜಯ್ ಧಾಲ್ ಮತ್ತು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ್ತಿ ಡಾ.ನಾನಾವತಿ ಕೋವಿಡ್ ಪ್ರಕರಣ ಹೆಚ್ಚಳದ ಸಾಧ್ಯತೆಯ ಬಗ್ಗೆ ತಿಳಿಸಿದ್ದಾರೆ.
ಕೋವಿಡ್ ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ ಎಂದ ತಜ್ಞರು
ತಜ್ಞರ ಪ್ರಕಾರ, ಕೋವಿಡ್ -19 ಪ್ರಕರಣಗಳು ಹೆಚ್ಚಾಗುವ ಎಲ್ಲಾ ಸಾಧ್ಯತೆಯೂ ಇದೆ. ಆದರೆ ಒಟ್ಟಾರೆ ಕೋವಿಡ್ ಸೋಂಕುಗಳು ತುಂಬಾ ಸೌಮ್ಯವಾಗಿದ್ದು, ಇದು ಬಹಳಷ್ಟು ಗಂಭೀರ ಕಾಯಿಲೆಗಳನ್ನು (Disease) ಉಂಟುಮಾಡುವ ಸಾಧ್ಯತೆಯಿಲ್ಲ. ಪ್ರಕರಣಗಳ ತೀವ್ರತೆ ಮತ್ತು ಒಟ್ಟಾರೆ ಸಕಾರಾತ್ಮಕತೆಯ ಪ್ರಮಾಣವು ಕಡಿಮೆಯಾದರೂ ಸಹ, ಕೋವಿಡ್ -19 ಅನ್ನು ಪಡೆಯುವ ದುರ್ಬಲ ಜನರು ಸಾಕಷ್ಟು ಇದ್ದಾರೆ. ಶ್ವಾಸಕೋಶದ ಸೋಂಕು, ಉರಿಯೂತ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಗಮನಾರ್ಹವಾಗಿ ಕಡಿಮೆಯಾದರೂ ಸಹ ದೀರ್ಘಕಾಲದ ಕಾಯಿಲೆಗಳು, ಕ್ಯಾನ್ಸರ್ ಚಿಕಿತ್ಸೆಗಳು, ಸ್ಟೀರಾಯ್ಡ್‌ಗಳು, ವೃದ್ಧರು ಮತ್ತು ಮಕ್ಕಳು ಕೋವಿಡ್ -19ರ ದುಷ್ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತಾರೆ.
ಬೂಸ್ಟರ್ ಡೋಸ್ ಲಸಿಕೆ ಫ್ರೀ ಕೊಟ್ರೂ ಶೇ.91 ಜನ ಪಡೆದಿಲ್ಲ..!
ಭಾರತದಲ್ಲಿ, ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳು ಕಡಿಮೆಯಾಗಿದ್ದರೂ, ದೈನಂದಿನ ಕೊರೋನಾ ವೈರಸ್ ಪ್ರಕರಣಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ತಜ್ಞರು (Experts) ಎಚ್ಚರಿಕೆ ನೀಡಿದ್ದಾರೆ. ಕೋವಿಡ್-19 ಇನ್ನೂ ಹೋಗಿಲ್ಲ. ಹಬ್ಬ ಹರಿದಿನಗಳಲ್ಲಿ ಜನರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಹೀಗಾಗಿ ಮಾಸ್ಕ್ ಹಾಕುವುದು ಮುಖ್ಯ. ವಿಶೇಷವಾಗಿ ದೀಪಾವಳಿ ಮತ್ತು ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಜಾಗರೂಕರಾಗಿರಿ. ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಕೋವಿಡ್ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ವೈದ್ಯರು ಸೂಚನೆ ನೀಡಿದ್ದಾರೆ.
ಕೋವಿಡ್-19 ಅಪಾಯವನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆಗಳು
* ಸ್ಯಾನಿಟೈಸರ್ ಅನ್ನು ಕೈಯಲ್ಲಿ ಇಟ್ಟುಕೊಳ್ಳಲು ಮರೆಯಬೇಡಿ
* ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿ, ಅಗತ್ಯವಿದ್ದಾಗ ಮಾತ್ರ ತೆಗೆಯಿರಿ
* ಸಾಮಾಜಿಕ ಅಂತರ ಕಾಯ್ದುಕೊಳ್ಳಿ
* ನೀವು ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿಯನ್ನು ಮುಚ್ಚಿಕೊಳ್ಳಿ
* ನಿಮ್ಮ ಕೈಗಳನ್ನು ಆಗಾಗ ತೊಳೆಯಿರಿ
* ಮುಚ್ಚಿದ ಮತ್ತು ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ
* ವಿಟಮಿನ್ ಸಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸಿ
* ಮುನ್ನೆಚ್ಚರಿಕೆಯ ಬೂಸ್ಟರ್ ಡೋಸ್ ಪಡೆಯಿರಿ
* ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ
ಹಬ್ಬದ ಸಂದರ್ಭದಲ್ಲಿ ಜಾಗೃತರಾಗಿರುವುದು ಎಂದ ತಕ್ಷಣ ಕೇವಲ ಪಟಾಕಿಗಳಿಂದ ರಕ್ಷಿಸಿಕೊಳ್ಳುವುದು ಮಾತ್ರವಲ್ಲ, ಕೊರೋನಾ ಸೋಂಕು ಹರಡದಂತೆಯೂ ಎಚ್ಚರಿಕೆ ವಹಿಸಿ ಎಂದಯ ವೈದ್ಯರು ಎಚ್ಚರಿಕೆ ನೀಡಿದ್ದಾರೆ.