ಕೊರೋನಾದಿಂದ ಇಷ್ಟೊಂದು ಯುವಜನತೆ ಸಾಯ್ತಿರೋದೇಕೆ?

Suvarna News   | Asianet News
Published : Apr 08, 2020, 07:58 PM ISTUpdated : Apr 08, 2020, 08:02 PM IST
ಕೊರೋನಾದಿಂದ ಇಷ್ಟೊಂದು ಯುವಜನತೆ ಸಾಯ್ತಿರೋದೇಕೆ?

ಸಾರಾಂಶ

ಈ ಸೋಂಕು ಬರೀ ವೃದ್ಧರನ್ನು ಹಾಗೂ ಕಾಯಿಲೆ ಇದ್ದವರನ್ನು ಮಾತ್ರ ಬಲಿ ಪಡೆಯುತ್ತಿಲ್ಲ. ಆರೋಗ್ಯಕಾರಿ ದೇಹ ಮನಸ್ಸು ಹೊಂದಿರುವ ಯುವಜನರನ್ನೂ ಬಲಿ ತೆಗೆದುಕೊಳ್ಳುತ್ತಿದೆ ಅನ್ನುವುದು. ಹಾಗಿದ್ದರೆ, ಅದಕ್ಕೆ ಕಾರಣ ಏನು?

ಕೊರೋನಾ ವೈರಸ್‌ನಿಂದ ಚೀನಾದಲ್ಲಿ ಜನ ಸಾಯತೊಡಗಿದಾಗ ಸಾಯುತ್ತಿರುವವರು ಯಾರೆಂದು ಅವಲೋಕಿಸಿದವರಿಗೆ ಅಚ್ಚರಿ ಕಾದಿತ್ತು- ಅಲ್ಲಿ ಹೆಚ್ಚು ಜನ ವೃದ್ಧರೇ ಸಾಯುತ್ತಿದ್ದರು. ಇಟಲಿಯಲ್ಲೂ ಹೀಗೇ ಆಯಿತು. ಸುಮಾರು ನೂರು ಜನ ಕೋವಿಡ್‌ ಸೋಂಕಿನಿಂದ ಸತ್ತರೆ, ಅದರಲ್ಲಿ ೮೦ ಮಂದಿ ವೃದ್ಧರೇ ಇರುತ್ತಿದ್ದರು. ಅಂದರೆ ಕೋವಿಡ್‌ನಿಂದ ಸತ್ತವರಲ್ಲಿ ಮುಕ್ಕಾಲು ಭಾಗ ವೃದ್ಧರೇ ಆಗಿದ್ದರು. ಇನ್ನೊಂದು ಕಂಡುಬಂದ ಅಂಶವೆಂದರೆ, ಸತ್ತ ಯುವಜನರಲ್ಲಿ ಹೃದಯ, ಶ್ವಾಸಕೋಶ ಸಮಸ್ಯೆಗಳು, ಡಯಾಬಿಟಿಸ್‌, ಮುಂತಾದ ಸಮಸ್ಯೆಗಳು ಇದ್ದವು. ಆದರೆ, ಯುರೋಪ್‌, ಅಮೆರಿಕದಲ್ಲಿ ಕೋವಿಡ್ ಕಾಡತೊಡಗಿದಾಗ ವಿಜ್ಞಾನಿಗಳಿಗೆ ಇನ್ನೊಂದು ಅಂಶ ಮನದಟ್ಟಾಯಿತು. ಅದೇನು ಅಂದರೆ ಈ ಸೋಂಕು ಬರೀ ವೃದ್ಧರನ್ನು ಹಾಗೂ ಕಾಯಿಲೆ ಇದ್ದವರನ್ನು ಮಾತ್ರ ಬಲಿ ಪಡೆಯುತ್ತಿಲ್ಲ. ಆರೋಗ್ಯಕಾರಿ ದೇಹ ಮನಸ್ಸು ಹೊಂದಿರುವ ಯುವಜನರನ್ನೂ ಬಲಿ ತೆಗೆದುಕೊಳ್ಳುತ್ತಿದೆ ಅನ್ನುವುದು. ಹಾಗಿದ್ದರೆ, ಅದಕ್ಕೆ ಕಾರಣ ಏನು?

ವಿರ್ಶವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿ ಕಾರಣವನ್ನು ಕಂಡುಕೊಂಡಿದ್ದಾರೆ. ಈ ಕೋವಿಡ್‌ ಸೋಂಕು ವಯೋಮಾನ ವ್ಯತ್ಯಾಸ ನೋಡದೆ ಎಲ್ಲರನ್ನೂ ಬಾಧಿಸುತ್ತದೆ. ಶೇಕಡಾ ಐದಕ್ಕಿಂತ ಕಡಿಮೆ ಮಂದಿ ೫೦ರ ಒಳಗಿನವರು ಆಸ್ಪತ್ರೆಗೆ ದಾಖಲಾಗಬೇಕಾಗಿ ಬರಬಹುದು. ಆದರೂ, ಅದರಿಂಧ ಸಾವು ಉಂಟಾದರೆ ಅದಕ್ಕೆ ಇನ್ನೊಂದೇ ಕಾರಣವಿದೆ. ಅದೇನು ಅಂದರೆ ಕೋವಿಡ್‌ ಸೋಂಕು ಇವರಲ್ಲಿ ಉಂಟುಮಾಡುವ ಸಿಎಸ್‌ಎಸ್‌ ಎಂಬ ಇನ್ನೊಂದು ವಿಚಿತ್ರ ಆರೋಗ್ಯ ಸಮಸ್ಯೆ. ಇದೇನು ಸಿಎಸ್‌ಎಸ್‌? ಇದರ ಪೂರ್ತಿ ಸ್ವರೂ ಸೈಟೋಕೈನ್‌ ಸ್ಟಾರ್ಮ್ ಸಿಂಡ್ರೋಮ್‌. ಅದನ್ನು ಸರಳವಾಗಿ ಹೀಗೆ ವಿವರಿಸಬಹುದು. 

ಕೊರೋನಾ ಹೇರ್‌ ಕಟ್ಟಿಂಗ್‌ ಹವಾ: ಹೊಸ ಸ್ಟೈಲ್‌ಗೆ ಯುವಕರು ಫಿದಾ 

ಕೋವಿಡ್‌ ಆಗಲೀ, ಅಥವಾ ಇನ್ಯಾವುದೇ ರೋಗಕಾರಕ ವೈರಸ್‌ ಅಥವಾ ಬ್ಯಾಕ್ಟೀರಿಯಾ ನಮ್ಮ ದೇಹವನ್ನು ಪ್ರವೇಶಿಸಿದರೆ, ನಮ್ಮ ದೇಹದಲ್ಲಿರುವ ರೋಗ ಪ್ರತಿರೋಧಕ ಅಂಶಗಳು ಸಕ್ರಿಯವಾಗುತ್ತವೆ. ಇವುಗಲಳಲ್ಲಿ ನಮ್ಮ ಜೀವಕೋಶಗಳು ಸೃಷ್ಟಿಸುವ ಸೈಟೋಕೈನ್‌ ಎಂಬ ಪ್ರೊಟೀನ್‌ ಮುಖ್ಯವಾದದ್ದು. ಈ ಸೈಟೋಕೈನ್‌ಗಳು ವೈರಸ್‌ ಬಾಧಿತ ಪ್ರದೇಶದ ಕಡೆಗೆ ದೊಡ್ಡ ಸಂಖ್ಯೆಯಲ್ಲಿ ಧಾವಿಸಿ ಯುದ್ಧ ಆರಂಭಿಸುತ್ತವೆ. ಆಗ ಅಲ್ಲಿ ಒಂದು ಬಗೆಯ ಉರಿಯೂತ ಕಂಡುಬರಬಹುದು. ಇದು ವೈರಸ್‌ ಅನ್ನು ಸೋಲಿಸಿದ ಬಳಿಕ ಕಡಿಮೆಯಾಗುತ್ತ ಹೋಗಿ ನಿಲ್ಲಬೇಕು. ಆದರೆ ಕೆಲವೊಮ್ಮೆ, ಆರೋಗ್ಯವಂತ ವ್ಯಕ್ತಿಗಳಲ್ಲಿ ಕೂಡ, ಈ ಸೈಟೋಕೈನ್‌ ಪ್ರವಾಹ ನಿಲ್ಲದೆ, ಮತ್ತಷ್ಟು ಉತ್ಪತ್ತಿಯಾಗುತ್ತ ಇರುತ್ತದೆ. ಅಂಥ ಸಂದರ್ಭದಲ್ಲಿ ಉರಿಯೂತ ಹೆಚ್ಚಾಗುತ್ತದೆ. ಹೀಗೆ ಉರಿಯೂತ ಹೆಚ್ಚಾದರೆ, ಲಿವರ್ ಮತ್ತು ಶ್ವಾಸಕೋಶಗಳಲ್ಲಿ ನೀರು ತುಂಬಿಕೊಳ್ಳಬಹುದು. ಇದರಿಂದ ನ್ಯುಮೋನಿಯಾ ಬಂದೀತು. ಅದು ಹೆಚ್ಚಾದರೆ, ವ್ಯಕ್ತಿಯನ್ನು ವೆಂಟಿಲೇಟರ್‌ಗೆ ಹಾಕಬೇಕಾಗುತ್ತದೆ. ಅಲ್ಲೂ ಚಿಕಿತ್ಸೆ ಫಲಿಸದೆ ಹೋದರೆ ವ್ಯಕ್ತಿ ಮೃತಪಡುವುದು ಖಚಿತ.
ಹೀಗಾಗಿ, ಆರೋಗ್ಯವಂತರು ಕೂಡ ಕೋವಿಡ್‌ ಬಲಿಯಾಗಬಹುದು.

ಚೀನಾ ವೈರಸ್ ಬೇಡ, ಟಿಕ್ ಟಾಕ್ ಬೇಡ; ಶುರುವಾಗಿದೆ ಹೊಸ ಅಭಿಯಾನ 

ಆದರೆ ಭಾರತವೂ ಸೇರಿದಂತೆ ಜಗತ್ತಿನ ಎಲ್ಲೆಡೆ ಕಂಡುಬರುತ್ತಿರುವ ಇನ್ನೊಂದು ಪ್ರವೃತ್ತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಿಡಿ ಕಾರಿದೆ. ಅದೇನೆಂದರೆ, ಕೋವಿಡ್‌ನಿಂದ ಸಾಯುವವರಲ್ಲಿ ವೃದ್ಧರೇ ಅಧಿಕ ಎಂಬ ಅಂಶದಿಂದಾಗಿ, ಯುವಜನತೆ ಹೆಚ್ಚು ಹೆಚ್ಚು ಕೇರ್‌ಲೆಸ್‌ ಆಗಿ, ಉಡಾಫೆಯಿಂದ ವರ್ತಿಸುತ್ತಿದ್ದಾರೆ ಅನ್ನುವುದು. ಇವರು ಅರ್ಥ ಮಾಡಿಕೊಳ್ಳಬೇಕಾದ್ದು ಏನೆಂದರೆ, ಇಂತ ವರ್ತನೆಯಿಂದ ತಾವೂ ಸಮಸ್ಯೆ ಮಾಡಿಕೊಳ್ಳುವುದಲ್ಲದೆ, ತಮ್ಮ ಕುಟುಂಬದಲ್ಲಿ ಹಾಗೂ ಸುತ್ತಮುತ್ತ ಇರುವ ವಯಸ್ಕರಿಗೆ ತಾವು ತೊಂದರೆ ಉಂಟುಮಾಡುತ್ತಿದ್ದೇವೆ ಎಂಬುದು ಇವರು ತಿಳಿದಿರಬೇಕು. ತೀರ ಕ್ರಿಟಿಕಲ್‌ ಸನ್ನಿವೇಶಗಳಲ್ಲಿ ಯುವಜನ ಕೂಡ ಇದಕ್ಕೆ ಬಲಿಯಾಗಬಹುದು ಎಂಬುದು ಇವರಿಗೆ ಗೊತ್ತಿರಬೇಕು. ಇದರ ಅರಿವನ್ನು ಸರಕಾರಗಳು ಯುವಜನತೆಗೆ ಮೂಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

"

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?